Homeಚಳವಳಿಪೊಂಗಲ್ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ತಮಿಳುನಾಡು ಸರ್ಕಾರ

ಪೊಂಗಲ್ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ ತಮಿಳುನಾಡು ಸರ್ಕಾರ

ಜನವರಿ 4 ರಿಂದ ಉಡುಗೊರೆಯ ವಿತರಣೆ ಆರಂಭವಾಗಲಿದ್ದು, 2,500 ರೂಪಾಯಿ ನಗದು ಜೊತೆಗೆ ಧೋತಿ ಮತ್ತು ಸೀರೆಗಳನ್ನು ವಿತರಿಸಲಾಗುವುದು

- Advertisement -
- Advertisement -

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಆರಂಭಿಸಿದ್ದು, ರಾಜ್ಯದ ಜನತೆಗೆ ಪೊಂಗಲ್ ಹಬ್ಬಕ್ಕೆ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಸೇಲಂ ಜಿಲ್ಲೆಯಲ್ಲಿ ಪ್ರಚಾರ ಅಭಿಯಾನ ಶುರು ಮಾಡಿದ ಪಳನಿಸ್ವಾಮಿ, 2,500 ರೂ.ಗಳ ಪೊಂಗಲ್ ನಗದು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ.

ಅಭಿಯಾನವನ್ನು ಪ್ರಾರಂಭಿಸಿದ ಕೂಡಲೇ ಕಾರ್ಯಕ್ರಮವೊಂದರಲ್ಲಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ಸಿಎಂ, ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ 2.06 ಕೋಟಿಗೂ ಹೆಚ್ಚು ಜನರಿಗೆ ಪೊಂಗಲ್ ಉಡುಗೊರೆಯಾಗಿ 2,500 ರೂಪಾಯಿ ನಗದು ನೀಡುವುದಾಗಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು: ರೈತ ಹೊರಾಟವನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ಕೈಗೊಂಡ ಡಿಎಂಕೆ

“ಕೊರೊನಾ ನಿಯಮಗಳನ್ನು ಅನುಸರಿಸಿಕೊಂಡು ಜನವರಿ 4 ರಿಂದ ಉಡುಗೊರೆಯ ವಿತರಣೆ ಆರಂಭವಾಗಲಿದೆ. 2,500 ರೂಪಾಯಿ ನಗದು ಜೊತೆಗೆ ಧೋತಿ ಮತ್ತು ಸೀರೆಗಳನ್ನು ವಿತರಿಸಲಾಗುವುದು” ಎಂದು ಹೇಳಿದ್ದಾರೆ.

“ಪಿಡಿಎಸ್ ಸಿಬ್ಬಂದಿ ಪಡಿತರ ಚೀಟಿ ಹೊಂದಿರುವವರ ಮನೆ ಬಾಗಿಲಿಗೆ ಟೋಕನ್ ವಿತರಿಸುತ್ತಾರೆ.  ಫಲಾನುಭವಿಗಳು ಪಿಡಿಎಸ್ ಮಳಿಗೆಗಳಿಂದ ಉಡುಗೊರೆ ಮತ್ತು ಹಣವನ್ನು ನಿಗದಿತ ದಿನಾಂಕಗಳಲ್ಲಿ ಸಂಗ್ರಹಿಸಬಹುದು” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರತಿ ಉಡುಗೊರೆ ಕಿಟ್ ಜೊತೆಗೆ ಒಂದು ಕೆಜಿ ಅಕ್ಕಿ, ಒಂದು ಕೆಜಿ ಸಕ್ಕರೆ, ಕಬ್ಬಿನ ಜಲ್ಲೆ, 20 ಗ್ರಾಂ ಗೋಡಂಬಿ, 20 ಗ್ರಾಂ ಒಣ ದ್ರಾಕ್ಷಿ ಮತ್ತು 5 ಗ್ರಾಂ ಏಲಕ್ಕಿ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಕೂಡ 1,000 ರೂಗಳನ್ನು ಪೊಂಗಲ್ ಉಡುಗೊರೆಯಾಗಿ ನೀಡಲಾಗಿತ್ತು.


ಇದನ್ನೂ ಓದಿ: ಬಿಗ್‌ಬಾಸ್ ನಡೆಸುವವರಿ‌ಗೆ ರಾಜಕೀಯದ ಬಗ್ಗೆ ಏನು ಗೊತ್ತು – ತಮಿಳುನಾಡು ಸಿಎಂ: ತಿರುಗೇಟು ನೀಡಿದ ಕಮಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...