Homeಮುಖಪುಟಸೂರ್ಯಗ್ರಹಣ: ರಾಜ್ಯದ ಹಲವು ಜಿಲ್ಲೆ ಸೇರಿದಂತೆ ಭಾರತದಾದ್ಯಂತ ಹೀಗಿತ್ತು ನೋಡಿ!

ಸೂರ್ಯಗ್ರಹಣ: ರಾಜ್ಯದ ಹಲವು ಜಿಲ್ಲೆ ಸೇರಿದಂತೆ ಭಾರತದಾದ್ಯಂತ ಹೀಗಿತ್ತು ನೋಡಿ!

- Advertisement -
- Advertisement -

ಸೂರ್ಯಗ್ರಹಣವು ಭಾರತ ಸೇರಿದಂತೆ ವಿಶ್ವದ ಇತರ ಕೆಲವು ಭಾಗಗಳಲ್ಲಿ ಮಂಗಳವಾರ ಸಂಭವಿಸಿದೆ. ಈಶಾನ್ಯ ಪ್ರದೇಶದ ಕೆಲವು ಭಾಗಗಳನ್ನು ಹೊರತುಪಡಿಸಿ, ಭಾರತದ ಹೆಚ್ಚಿನ ಭಾಗಗಳು ಗ್ರಹಣಕ್ಕೆ ಸಾಕ್ಷಿಯಾದವು. ಈ ಬಾರಿಯ ಸೂರ್ಯಗ್ರಹಣವು ಭಾರತದ ಬಹುತೇಕ ಎಲ್ಲ ಭಾಗಗಳಲ್ಲೂ ಗೋಚರಿಸಿದ್ದು ವಿಶೇಷವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10% ದಷ್ಟು ಮಾತ್ರ ಸೂರ್ಯಗ್ರಹಣ ಗೋಚರಿಸಲಿದೆ ಎಂದು ತಜ್ಞರು ತಿಳಿಸಿದ್ದರು. ಅದೇ ರೀತಿ ಸಂಜೆ 5:12 ರಿಂದ ಪ್ರಾರಂಭವಾದ ಗ್ರಹಣ 5:55 ರವರೆಗೆ, ಸುಮಾರು 45 ನಿಮಿಷಗಳ ಕಾಲ ಗೋಚರಿಸಿದೆ. ಬೆಂಗಳೂರಿನಲ್ಲಿ ಸಂಜೆ 5:56 ಕ್ಕೆ ಸೂರ್ಯ ಅಸ್ತಮಿಸುವುದರಿಂದ ಗ್ರಹಣ ವೀಕ್ಷಣೆಗೆ ಸ್ವಲ್ಪ ಸಮಯವಷ್ಟೆ ಸಿಕ್ಕಿದ್ದು ಆಸಕ್ತರಿಗೆ ನಿರಾಸೆ ಕೂಡಾ ಮೂಡಿಸಿದೆ. 1995 ರಲ್ಲಿ ಸಂಭವಿಸಿದ ಸೂರ್ಯಗ್ರಹಣ ಕೂಡಾ ದೀಪಾವಳಿಯ ದಿನದಂದೆ ಗೋಚರಿಸಿತ್ತು ದಿ ಹಿಂದೂ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದೇ ವೇಳೆ, ಸೂರ್ಯಗ್ರಹಣದ ಹೆಸರಿನಲ್ಲಿ ಮೂಡನಂಬಿಕೆ ಬಿತ್ತುವುದನ್ನು ವಿರೋಧಿಸಿ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ‘ವಿಜ್ಞಾನದ ಕಡೆಗೆ ನಮ್ಮ ನಡಿಗೆ’ ಕಾರ್ಯಕ್ರಮ ಕೂಡಾ ಜನಪರ ಸಂಘಟನೆಗಳು ಆಯೋಜಿಸಿದ್ದವು. ಈ ವೇಳೆ ಅಲ್ಲಿ ಸೇರಿದ್ದ ಜನರು ಆಹಾರವನ್ನು ಸೇವಿಸಿ ಮೂಡನಂಬಿಕೆ ವಿರುದ್ಧ ಜಾಗೃತಿ ಮೂಡಿಸಿದರು.

ಕೆಲವು ಖಗೋಳ ಭೌತಶಾಸ್ತ್ರಜ್ಞರ ಪ್ರಕಾರ, ಸುಮಾರು 55% ರಷ್ಟು ಸೂರ್ಯಗ್ರಹಣವು ಲಡಾಖ್‌ನಲ್ಲಿ ಸಂಜೆ 4.30 ರಿಂದ ಗೋಚರಿಸಿದೆ. ಲೇಹ್‌ನಲ್ಲಿ 55%, ದೆಹಲಿಯಲ್ಲಿ 44%, ಮುಂಬೈನಲ್ಲಿ 25%, ಹೈದರಾಬಾದ್‌ನಲ್ಲಿ 19% ಮತ್ತು ಕಲ್ಕತ್ತಾದಲ್ಲಿ 4% ರಷ್ಟು ಗೋಚರಿಸಿದೆ. ಗುಜರಾತ್‌ನ ದ್ವಾರಕಾದಲ್ಲಿ ದೀರ್ಘ‌ಕಾಲ ಅಂದರೆ 1 ಗಂಟೆ 45 ನಿಮಿಷಗಳ ಕಾಲ ಗ್ರಹಣ ಗೋಚರಿಸಿದೆ.

ಇದನ್ನೂ ಓದಿ: ಬೆಳ್ಳಿಚುಕ್ಕಿ; ಭೂಮಿಯು ವೇಗವಾಗಿ ತಿರುಗಿದ್ದು ನಿಮಗೇನಾದರೂ ಭಾಸವಾಯಿತೇ?

ರಷ್ಯಾ ಮತ್ತು ಕಜಕಿಸ್ತಾನ್‌ನಲ್ಲಿ 80% ದಷ್ಟು ಗ್ರಹಣ ಗೋಚರಿಸಲಿದ್ದು, ಇದು ಗರಿಷ್ಠ ಪ್ರಮಾಣವಾಗಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ಸ್ಕೋಪ್ (ಔಟ್ರೀಚ್) ವಿಭಾಗದ ಮುಖ್ಯಸ್ಥ ನಿರುಜ್ ಮೋಹನ್ ರಾಮಾನುಜಮ್ ಹೇಳಿದ್ದರು.

ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಗೋಚರಿಸಿದ ಭಾಗಶಃ ಸೂರ್ಯ ಗ್ರಹಣದ ಕೆಲವು ಝಲಕ್‌ಗಳು ಇಲ್ಲಿವೆ.

ಖ್ಯಾತ ಫೋಟೋಗ್ರಾಫರ್‌ ಮನೋಜ್ ಬೂಕನಕೆರೆ ಅವರು ಕ್ಲಿಕ್ ಮಾಡಿರುವ ಮೈಸೂರಿನಲ್ಲಿ ಗೋಚರಿಸಿದ ಸೂರ್ಯಗ್ರಹಣ.

ಶಿಕ್ಷಕರಾದ ಉದಯ್ ಅವರು ಕ್ಲಿಕ್ ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಗೋಚರಿಸಿದ ಸೂರ್ಯಗ್ರಹಣ.

ಪತ್ರಕರ್ತ ಎಸ್‌. ಶ್ಯಾಮ್ ಪ್ರಸಾದ್ ಅವರು ಬೆಂಗಳೂರಿನಲ್ಲಿ ರೆಕಾರ್ಡ್ ಮಾಡಿರುವ ಸೂರ್ಯಗ್ರಹಣದ ದೃಶ್ಯ.

ಮಂಗಳೂರಿನಲ್ಲಿ ಗೋಚರಿಸಿದ ಸೂರ್ಯಗ್ರಹಣ ಹೀಗಿತ್ತು.

ತಮಿಳುನಾಡಿನ ಚೆನ್ನೈನಲ್ಲಿ ಕಂಡ ಸೂರ್ಯಗ್ರಹಣ

ಆಂಧ್ರಪ್ರದೇಶದ ವಿಶಾಕಪಟ್ಟಣಂ

ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಕಂಡುಬಂದ ಸೂರ್ಯಗ್ರಹಣ

ಜಮ್ಮುಕಾಶ್ಮೀರದ ಲಡಾಖ್‌ನಲ್ಲಿ ಗೋಚರಿಸಿದ ಸೂರ್ಯಗ್ರಹಣ

ಬೆಂಗಳೂರು

ಚೆನ್ನೈನಲ್ಲಿ ಕಂಡ ಸೂರ್ಯಗ್ರಹಣ

ಬಿಹಾರದಲ್ಲಿ ಕಂಡ ಸೂರ್ಯಗ್ರಹಣ

ಮುಂಬೈನಲ್ಲಿ ಗೋಚರಿಸಿದ ಗ್ರಹಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...