Homeಮುಖಪುಟಅಸ್ಸಾಂ: ಮಿಯಾ ಮುಸ್ಲಿಂ ಸಂಸ್ಕೃತಿ ಬಿಂಬಿಸುವ ಮ್ಯೂಸಿಯಂಗೆ ಬೀಗ ಜಡಿದು ಯುಎಪಿಎ ಪ್ರಕರಣ ದಾಖಲಿಸಿದ ಪೊಲೀಸರು

ಅಸ್ಸಾಂ: ಮಿಯಾ ಮುಸ್ಲಿಂ ಸಂಸ್ಕೃತಿ ಬಿಂಬಿಸುವ ಮ್ಯೂಸಿಯಂಗೆ ಬೀಗ ಜಡಿದು ಯುಎಪಿಎ ಪ್ರಕರಣ ದಾಖಲಿಸಿದ ಪೊಲೀಸರು

- Advertisement -
- Advertisement -

ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಅಧಿಕಾರಿಗಳು ಮಂಗಳವಾರ ಮಿಯಾ ಮುಸ್ಲಿಂ (ಬಂಗಾಳಿ ಮೂಲದ ಮುಸ್ಲಿಂ) ಸಮುದಾಯಕ್ಕೆ ಸೇರಿದ ವಸ್ತುಸಂಗ್ರಹಾಲಯವನ್ನು ಸೀಲ್ ಮಾಡಿದ್ದು, ಆವರಣವನ್ನು ತಪ್ಪಾಗಿ ಬಳಸಿದ ಆರೋಪದ ಮೇಲೆ ಸಮುದಾಯದ ಇಬ್ಬರು ನಾಯಕರನ್ನು ಬಂಧಿಸಿದ್ದಾರೆ.

ಮ್ಯೂಸಿಯಂ ಸ್ಥಾಪಿಸಿದ ವ್ಯಕ್ತಿ ಸೇರಿದಂತೆ ಸಮುದಾಯದ ಇಬ್ಬರು ನಾಯಕರನ್ನು ಮಂಗಳವಾರ ಸಂಜೆ ಬಂಧಿಸಲಾಯಿತು. ಕಾನೂನುಬಾಹಿರ ಚಟುವಟಿಕೆಗಳು-ತಡೆಗಟ್ಟುವಿಕೆ-ಕಾಯ್ದೆ(ಯುಎಪಿಎ) ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳು ಮತ್ತು ಒಕ್ಕೂಟ ಸರ್ಕಾರದ ವಿರುದ್ಧ ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಯೋತ್ಪಾದಕ ಸಂಘಟನೆಗಳಾದ ಅನ್ಸರುಲ್ಲಾ ಬಾಂಗ್ಲಾ ಟೀಂ ಮತ್ತು ಅಲ್-ಖೈದಾದ ಚಟುವಟಿಕೆಗಳೊಂದಿಗೆ ಅವರ ಸಂಪರ್ಕದ ಬಗ್ಗೆ ಇಬ್ಬರು ನಾಯಕರನ್ನು ಪ್ರಶ್ನಿಸಲಾಗುವುದು ಎಂದು ಅಸ್ಸಾಂ ಪೊಲೀಸರ ವಿಶೇಷ ಮಹಾನಿರ್ದೇಶಕ ಜಿಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಇಂಗ್ಲೆಡ್‌ನಲ್ಲಿ ಹಿಂದೂ ಪ್ರಧಾನಿ: ಭಾರತದಲ್ಲಿ ‘ಮುಸ್ಲಿಂPM’, ‘ದಲಿತPM’ ಚರ್ಚೆ ಮುನ್ನೆಲೆಗೆ

ಅಸ್ಸಾಂ ಪೊಲೀಸರು ಎರಡು ಭಯೋತ್ಪಾದಕ ಗುಂಪುಗಳ ಬಗ್ಗೆ ತನಿಖೆಯ ಭಾಗವಾಗಿ ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಮತ್ತು ಮೂರು ಮದರಸಾಗಳನ್ನು ನೆಲಸಮಗೊಳಿಸಿದ್ದಾರೆ.

ಗೋಲ್ಪರಾದ ಲಖಿಪೂರ್ ಪ್ರದೇಶದ ಡಪ್ಕರ್ಭಿತಾದಲ್ಲಿರುವ ಮಿಯಾ ವಸ್ತುಸಂಗ್ರಹಾಲಯವನ್ನು ಸ್ಥಗಿತಗೊಳಿಸಬೇಕೆಂದು ಅಸ್ಸಾಂನ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ ಎಂದು ಹಿಂದೂ ವರದಿ ಮಾಡಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳ ಮೇಲೆ ಗುಂಪು ಹಲ್ಲೆ: ದುಷ್ಕರ್ಮಿಗಳನ್ನು ಕೊಲೆಯತ್ನ ಪ್ರಕರಣದಡಿ ಬಂಧಿಸಲು DYFI ಒತ್ತಾಯ

ಮ್ಯೂಸಿಯಂ ಅನ್ನು ಮಿಯಾ ಅಸ್ಸಾಂ ಮಿಯಾ ಪರಿಷತ್‌ನ ಅಧ್ಯಕ್ಷರಾದ ಮಹರ್ ಅಲಿ ಅವರು ಸ್ಥಾಪಿಸಿದ್ದರು. ಇದನ್ನು ಅಕ್ಟೋಬರ್ 23 ರಂದು ಉದ್ಘಾಟಿಸಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ. ಮ್ಯೂಸಿಯಂ ಮಿಯಾ ಸಮುದಾಯದ ಪ್ರಾಚೀನ ವಸ್ತುಗಳನ್ನು ಒಳಗೊಂಡಿತ್ತು. ಬಂಗಾಳ ಪ್ರಾಂತ್ಯದ ಈ ಸಮುದಾಯವು 1890 ರ ದಶಕದ ಉತ್ತರಾರ್ಧದಲ್ಲಿ ಅಸ್ಸಾಂಗೆ ವಲಸೆ ಬಂದಿತ್ತು.

ಅಕ್ಟೋಬರ್ 24 ರ ದಿನಾಂಕದ ನೋಟಿಸ್‌ನಲ್ಲಿ, ಗೋಲ್‌ಪಾರಾದ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕೇಂದ್ರ ಸರ್ಕಾರದ ವಸತಿ ಯೋಜನೆಯಾದ ಪ್ರಧಾನ ಮಂತ್ರಿ ಅವಾಸ್ ಯೋಜನೆ ಭಾಗವಾಗಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದ ಮನೆಯನ್ನು ಹಸ್ತಾಂತರಿಸಲಾಯಿತು ಎಂದು ಹೇಳಿದೆ.

ಆದರೆ, ವಸ್ತುಸಂಗ್ರಹಾಲಯ ಸ್ಥಾಪಿಸುವುದು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಉದ್ದೇಶ ಮತ್ತು ಮಾರ್ಗಸೂಚಿಗಳ ಅಡಿಯಲ್ಲಿ ಬರುವುದಿಲ್ಲ ಎಂದು ಜಿಲ್ಲಾ ಆಡಳಿತ ಹೇಳಿದೆ. ಜಿಲ್ಲಾಡಳಿತದ ನೋಟಿಸ್‌ಗೆ ತನ್ನ ಪ್ರತಿಕ್ರಿಯೆಯನ್ನು ಸ್ಥಳೀಯ ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ತಕ್ಷಣ ಸಲ್ಲಿಸುವಂತೆ ಮ್ಯೂಸಿಯಂ ನಿರ್ವಹಣೆ ಮಾಡುವವರನ್ನು ಕೇಳಿದೆ.

ಇದನ್ನೂ ಓದಿ: ಯುಪಿ: ಮುಸ್ಲಿಮರಲ್ಲಿ ಭಯ ಹರಡಿಸಲೆಂದೇ ದುಷ್ಕರ್ಮಿಗಳ ಗುಂಪು ಮುಸ್ಲಿಂ ವ್ಯಕ್ತಿಯನ್ನು ಕೊಂದಿತ್ತು: ‘ದಿ ವೈರ್‌’ ವರದಿ

ಇದರ ನಂತರ ಮಂಗಳವಾರ, ನಲ್ಬಾರಿ ಜಿಲ್ಲೆಯ ಘೋಗ್ರಾಪರ್ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಪ್ರಕರಣ ದಾಖಲಾಗಿದ್ದು, ಇದರ ಪ್ರಕಾರ ಮಹರ್‌‌‌ ಅಲಿ ಮತ್ತು ಅಬ್ದುಲ್ ಬ್ಯಾಟೆನ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳೆದ ವಾರ ದಾಖಲಾದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಸ್ಕ್ರಾಲ್.ಇನ್‌ ವರದಿ ಮಾಡಿದೆ.

ಈ ಮಧ್ಯೆ, ಮಹರ್‌‌ ಅಲಿ ತನ್ನ ಇಬ್ಬರು ಸಣ್ಣ ಗಂಡುಮಕ್ಕಳೊಂದಿಗೆ, ವಸ್ತುಸಂಗ್ರಹಾಲಯದ ಹೊರಗೆ ಧರಣಿ ಪ್ರತಿಭಟನೆ ನಡೆಸಿ, ಮ್ಯೂಸಿಯಂ ಅನ್ನು ಮತ್ತೆ ತೆರೆಯಬೇಕೆಂದು ಒತ್ತಾಯಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಮಧ್ಯಪ್ರದೇಶ | ಧಾರ್ಮಿಕ ಗುರುತಿನ ಆಧಾರದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಗುಂಪು ಹಲ್ಲೆ: ಆರೋಪ

“ಸಮುದಾಯವು ತನ್ನನ್ನು ತಾನು ಗುರುತಿಸಿಕೊಳ್ಳುವ ಸಲುವಾಗಿ ನಾವು ವಸ್ತುಗಳನ್ನು ಪ್ರದರ್ಶಿಸುತ್ತಿದ್ದೇವೆ. ಈ ಮೂಲಕ ಇತರ ಸಮುದಾಯಗಳ ಜನರು ಮಿಯಾ ಸಮುದಾಯವು ಅವರಿಗಿಂತ ಭಿನ್ನವಾಗಿಲ್ಲ ಎಂದು ಅರಿತುಕೊಳ್ಳಬಹುದು” ಎಂದು ಮಹರ್‌‌ ಅಲಿ ಹೇಳಿದರು.

ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ, ಮ್ಯೂಸಿಯಂ ಸ್ಥಾಪಿಸುವ ಉದ್ದೇಶವನ್ನು ಪ್ರಶ್ನಿಸಿದ್ದಾರೆ. “ಮ್ಯೂಸಿಯಂ ಅಲ್ಲಿನ ಕಲಾಕೃತಿಗಳು ಸಾಮಾನ್ಯವಾಗಿ ಅಸ್ಸಾಮೀ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಅದರಲ್ಲಿ ಮಿಯಾ ಸಮುದಾಯಕ್ಕೆ ಸೇರಿದರುವ ನಿರ್ದಿಷ್ಟವಾದ ವಸ್ತುಗಳು ಏನೂ ಇಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್‌‌ನ ಲೀಸೆಸ್ಟರ್ ಹಿಂಸಾಚಾರ: ಶಾಂತಿ ಕಾಪಾಡುವಂತೆ ಹಿಂದೂ-ಮುಸ್ಲಿಂ ಮುಖಂಡರ ಐಕ್ಯತೆಯ ಮಂತ್ರ

“ನಂಗೋಲ್ [ನೇಗಿಲು] ಅನ್ನು ಮಿಯಾ ಸಮುದಾಯದ ಜನರು ಮಾತ್ರ ಬಳಸುತ್ತಾರೆ ಎಂಬುದನ್ನು ಮತ್ತು ಇತರರು ಬಳಸುವುದಿಲ್ಲ ಎಂಬುವುದು ಅವರು ಸರ್ಕಾರಕ್ಕೆ ಸಾಬೀತುಪಡಿಸಬೇಕು … ಇಲ್ಲದಿದ್ದರೆ ಪ್ರಕರಣವನ್ನು ನೋಂದಾಯಿಸಲಾಗುವುದು” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪೂರ್ವ ಅಸ್ಸಾಂನ ಡಿಬ್ರುಗರ ಕ್ಷೇತ್ರದ ಬಿಜೆಪಿ ಶಾಸಕ ಪ್ರಸಾಂ ಫುಕಾನ್, “ವಸ್ತುಸಂಗ್ರಹಾಲಯವನ್ನು ನೆಲಸಮಗೊಳಿಸಬೇಕು” ಎಂದು ಈ ಹಿಂದೆ ಹೇಳಿದ್ದಾರೆ ಎಂದು ದಿ ಹಿಂದೂ ಮಂಗಳವಾರ ವರದಿ ಮಾಡಿದೆ.

ಮಾಜಿ ಬಿಜೆಪಿ ಶಾಸಕ ಶಿಲಾದಿತ್ಯ ದೇವ್ ವಸ್ತುಸಂಗ್ರಹಾಲಯವನ್ನು ತಕ್ಷಣವೇ ಮುಚ್ಚಬೇಕೆಂದು ಒತ್ತಾಯಿಸಿದ್ದು, ಈ ಮೂಲಕ ಅಸ್ಸಾಂ ಅನ್ನು “ಬಾಂಗ್ಲಾದೇಶದ ಮುಸ್ಲಿಮರಿಂದ” ಉಳಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: BJP ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆಯ ನಡುವೆ ದಲಿತ-ಮುಸ್ಲಿಂ ಜೋಡಿ ಮದುವೆ

ವಸ್ತುಸಂಗ್ರಹಾಲಯದ ಬಗ್ಗೆ ಕಾಂಗ್ರೆಸ್ ಶಾಸಕ ಶೆರ್ಮನ್ ಅಲಿ ಅಹ್ಮದ್ ಅವರು 2020 ರಲ್ಲಿ ಪ್ರಸ್ತಾಪಿಸಿದ್ದರು. ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಗುವಾಹತಿಯ ಕೇಂದ್ರವಾದ ಶ್ರೀಮಂತಾ ಶಂಕರ್‌ದೇವಾ ಕಲಾಕ್ಷತ್ರದಲ್ಲಿ ಇದನ್ನು ಸ್ಥಾಪಿಸುವಂತೆ ಅವರು ರಾಜ್ಯ ಸರ್ಕಾರವನ್ನು ಕೋರಿದ್ದರು.

ವಸ್ತುಸಂಗ್ರಹಾಲಯವು ಅಸ್ಸಾಂನ ಚಾರ್-ಚಾಪೊರಿಸ್ (ನದಿ ದ್ವೀಪಗಳು) ನಲ್ಲಿ ವಾಸಿಸುವ ಸಮುದಾಯಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆ ಸಮಯದಲ್ಲಿ ರಾಜ್ಯದ ಆರೋಗ್ಯ ಮತ್ತು ಶಿಕ್ಷಣ ಸಚಿವರಾಗಿದ್ದ ಹಿಮಾಂತ ಶರ್ಮಾ ಅವರು, “ಸಂಸ್ಕೃತಿಯನ್ನು ‘ವಿರೂಪ’ಗೊಳಿಸುವ ಇಂತಹ ಪ್ರಯತ್ನಗಳಿಗೆ ಅನುಮತಿ ನೀಡುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ಹಿಜಾಬ್‌ಗೆ ಅವಕಾಶವಿಲ್ಲದೆ ಮಂಗಳೂರು ವಿವಿಯ ಶೇ.16ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಡ್ರಾಪ್‌ಔಟ್

“ನನ್ನ ತಿಳುವಳಿಕೆಯಲ್ಲಿ, ಹೆಚ್ಚಿನ ಜನರು ಬಾಂಗ್ಲಾದೇಶದಿಂದ ವಲಸೆ ಬಂದಿದ್ದರಿಂದ ಅಸ್ಸಾಂನ ಚಾರ್ ಆಂಕಲ್‌ನಲ್ಲಿ ಪ್ರತ್ಯೇಕ ಗುರುತಿನ ಸಂಸ್ಕೃತಿ ಇಲ್ಲ. ನಿಸ್ಸಂಶಯವಾಗಿ ಶ್ರಿಮಂತಾ ಶಂಕರ್‌ದೇವ ಕಲಾಕ್ಷೇತ್ರ ಅಸ್ಸಾಮಿ ಸಂಸ್ಕೃತಿಯ ಆಗರವಾಗಿದೆ, ಅಲ್ಲಿ ನಾವು ಯಾವುದೇ ಅಸ್ಪಷ್ಟತೆಯನ್ನು ಅನುಮತಿಸುವುದಿಲ್ಲ” ಎಂದು ಹಿಮಂತ ಶರ್ಮಾ 2020 ರಲ್ಲಿ ಟ್ವೀಟ್ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...