Homeಮುಖಪುಟಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

- Advertisement -
- Advertisement -

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೋನಮ್ ಅವರಿಗೆ ಧನ್ಯವಾದ ಅರ್ಪಿಸಿ ‘X’ ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಆದರೆ, ಮೋದಿ ಸರ್ಕಾರ ಹಾಗೂ ವಾಂಗ್ಚುಕ್ ನಡುವೆ ಕುದುರಿರುವ ಈ ಒಪ್ಪಂದದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮುಖ್ಯ ಬೇಡಿಕೆಯಾದ “ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ” ಎಂಬ ಅಂಶವೇ ಇಲ್ಲ.

ಸರ್ಕಾರ ವಾಂಗ್ಚುಕ್‌ಗೆ ನೀಡಿದ ಮೂರು ಭರವಸೆಗಳು:

  1. ನ್ಯಾಯಾಂಗ ಕ್ರಮಕ್ಕೆ ತಡೆ: ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಹಾಗೂ ಜುಲೈ 20 ರ ‘ಸಂಸದ್ ಚಲೋ’ ಮೆರವಣಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪೋಲಿಸ್ ಕೇಸ್ ದಾಖಲಿಸುವುದಿಲ್ಲ.
  2. ಸಂಸತ್ತಿನಲ್ಲಿ ಚರ್ಚೆ: ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಕುರಿತು ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಸಲಾಗುವುದು.
  3. ಸಂತ್ರಸ್ತರಿಗೆ ಪರಿಹಾರ: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ನೀಡಲಾಗುವುದು.

ಇವೇ ಮೂರು ಬೇಡಿಕೆಗಳನ್ನು ಉಲ್ಲೇಖಿಸಿ ವಾಂಗ್ಚುಕ್ ಅವರು ಜುಲೈ 22 ರಂದು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಹಾಗಾಗಿ, ಶಿಕ್ಷಣ ಸಚಿವರ ರಾಜೀನಾಮೆ ವಿಚಾರ ಆ ಹಂತದಲ್ಲೇ ಕೈತಪ್ಪಿಹೋಗಿತ್ತು ಎನ್ನಬಹುದು. ಹಾಗಾದರೆ ಈ ಒಪ್ಪಂದಕ್ಕೆ ಕಾರಣವೇನು? ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆಯ ಮೇಲೆ ಇದು ಎಂತಹ ಪರಿಣಾಮ ಬೀರಲಿದೆ? ಎಂದು ನೋಡುವುದಾದರೆ,

ಜುಲೈ ಆರಂಭದಲ್ಲಿ ಸೋನಮ್ ವಾಂಗ್ಚುಕ್ ಅವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ, ಕೇಂದ್ರ ಸರ್ಕಾರದ ಎದುರು ನಾಲ್ಕು ಪ್ರಮುಖ ಶಕ್ತಿಗಳಿದ್ದವು. ಇವರೆಲ್ಲರಿಗೂ ಶಿಕ್ಷಣ ಸಚಿವರ ರಾಜೀನಾಮೆ ಬೇಕಿತ್ತಾದರೂ, ಪ್ರತಿಯೊಬ್ಬರ ದೀರ್ಘಕಾಲದ ರಾಜಕೀಯ ಉದ್ದೇಶಗಳು ಭಿನ್ನವಾಗಿದ್ದವು.

  • ಕಾಕ್ರೋಚ್ ಜನತಾ ಪಾರ್ಟಿ (CJP)
  • ಸೋನಮ್ ವಾಂಗ್ಚುಕ್
  • ಕಾಂಗ್ರೆಸ್
  • ಕಾಂಗ್ರೆಸ್ಸೇತರ ವಿರೋಧ ಪಕ್ಷಗಳು

ಇಲ್ಲಿ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವ ವಿದ್ಯಾರ್ಥಿ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿದರೂ, ಅವರು ವಿಶಾಲವಾಗಿ ಕಾಂಗ್ರೆಸ್ಸೇತರ ವಿಪಕ್ಷಗಳ ಜೊತೆಯಲ್ಲೇ ಗುರುತಿಸಿಕೊಂಡಿದ್ದಾರೆ. ಸರ್ಕಾರದ ದೃಷ್ಟಿಕೋನದಿಂದ, ಈ ನಾಲ್ಕೂ ಶಕ್ತಿಗಳ ಪೈಕಿ ಸೋನಮ್ ವಾಂಗ್ಚುಕ್ ಅವರೇ ಅತ್ಯಂತ ಪ್ರಬಲ ಹಾಗೂ ಅತ್ಯಂತ ದುರ್ಬಲ ಕೊಂಡಿಯಾಗಿದ್ದರು.

ಪ್ರಬಲ ಏಕೆಂದರೆ: ರಾಜಕೀಯೇತರ ವ್ಯಕ್ತಿಯಾಗಿದ್ದ ವಾಂಗ್ಚುಕ್ ಈ ಹೋರಾಟಕ್ಕೆ ಸಂವಿಧಾನಾತ್ಮಕ ತೂಕ ಮತ್ತು ಸಾರ್ವಜನಿಕ ಬೆಂಬಲ ತಂದಿತ್ತರು. ಅವರ ಉಪವಾಸ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಗಣ್ಯರು ಹಾಗೂ ದೇಶದ ಪ್ರಜೆಗಳು ಬೆಂಬಲವಾಗಿ ನಿಂತರು. ಅವರ ಉಪವಾಸವೇ ಜೀವಂತವಿಲ್ಲದಿದ್ದ ಪ್ರತಿಭಟನೆಗೆ ಜೀವ ತುಂಬಿದ್ದು.

ದುರ್ಬಲ ಏಕೆಂದರೆ: ಸರ್ಕಾರವನ್ನು ಸಾರ್ವಜನಿಕವಾಗಿ ತೀವ್ರವಾಗಿ ಸಂಶಯಿಸದ ಏಕೈಕ ವ್ಯಕ್ತಿ ಅವರಾಗಿದ್ದರು. ಜೊತೆಗೆ, ವಾಂಗ್ಚುಕ್‌ಗೆ ‘ನೀಟ್’ ಒಂದೇ ಹೋರಾಟದ ವಿಷಯವಾಗಿರಲಿಲ್ಲ; ಅವರು ಲಡಾಖ್‌ಗೆ ರಾಜ್ಯದ ಸ್ಥಾನಮಾನಕ್ಕಾಗಿ ನಡೆಸುತ್ತಿರುವ ಹೋರಾಟವೂ ಬಾಕಿ ಇತ್ತು. ಅದಕ್ಕಾಗಿ ಸರ್ಕಾರ ಒಂದೆಡೆ ಮಾತುಕತೆ ನಡೆಸಬೇಕಿತ್ತು. ಅವರು ಉಪವಾಸ ಅಂತ್ಯಗೊಳಿಸುವಾಗ ಲಡಾಖ್‌ನ ‘ಅಪೆಕ್ಸ್ ಬಾಡಿ’ ನಾಯಕರು ಸಚಿವರ ಜೊತೆಗಿದ್ದರು ಎನ್ನುವುದು ಗಮನಾರ್ಹ. ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ಸೇರಿಕೊಂಡಿವೆ ಎಂಬ ಸರ್ಕಾರದ ವಾದವನ್ನು ವಾಂಗ್ಚುಕ್ ಒಪ್ಪಿಕೊಂಡರು ಮತ್ತು ಉಪವಾಸ ಅಂತ್ಯಗೊಳಿಸುವಾಗಲೂ ಇದನ್ನೇ ಪ್ರಸ್ತಾಪಿಸಿದರು.

ಹಿಂದೆ 2021 ರ ರೈತ ಹೋರಾಟದ ವೇಳೆಯೂ (ಕೆಂಪು ಕೋಟೆ ಘಟನೆಯ ನಂತರ) ಕೇಂದ್ರ ಸರ್ಕಾರ ಇದೇ ತಂತ್ರ ಬಳಸಿತ್ತು. ಆದರೆ ರೈತ ಸಂಘಟನೆಗಳು ಮಣಿಯಲಿಲ್ಲ. ಆಗ ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ದುರ್ಬಲ ಕೊಂಡಿ ಎಂದು ಭಾವಿಸಿ ಅವರ ಮೇಲೆ ಒತ್ತಡ ಹೇರಲು ಯತ್ನಿಸಿತು. ಆದರೆ ಟಿಕಾಯತ್ ಅವರ ಭಾವನಾತ್ಮಕ ಕಣ್ಣೀರು ಇಡೀ ಚಳವಳಿಗೆ ಮರುಜೀವ ನೀಡಿತು.

ಆದರೆ, ‘ನೀಟ್’ ಹೋರಾಟದಲ್ಲಿ ವಾಂಗ್ಚುಕ್ ಸೌಮ್ಯ ಶಕ್ತಿಯಾಗಿದ್ದರು. ಹಾಗಾಗಿಯೇ ಜುಲೈ 18 ರಂದು ಪೋಲೀಸರು ಅವರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದ್ದರು. ಆದರೆ ಈ ನಡೆಯು ಉಲ್ಟಾ ಹೊಡೆದು, ಹೋರಾಟಕ್ಕೆ ‘Gen-Z’ (ಇಂದಿನ ಯುವಪಡೆ) ವಿದ್ಯಾರ್ಥಿಗಳ ಭಾರಿ ಪಡೆ ಧುಮುಕುವಂತೆ ಮಾಡಿತು.

ಮುಂದೆ?

ಸರ್ಕಾರ ತನ್ನ ವಿರೋಧಿಗಳನ್ನು ಚದುರಿಸಲು ಯತ್ನಿಸುತ್ತಿದೆ. ವಾಂಗ್ಚುಕ್ ಅವರನ್ನೀಗ ಹೋರಾಟದಿಂದ ಪಕ್ಕಕ್ಕೆ ಸರಿಸಲಾಗಿದೆ. ಸರ್ಕಾರದ ಮುಂದಿನ ಪ್ಲಾನ್ ಏನೆಂದರೆ: ವಿಪಕ್ಷಗಳ ಹೋರಾಟವನ್ನು ಸಂಸತ್ತಿನ ಚರ್ಚೆಗೆ ಮಾತ್ರ ಸೀಮಿತಗೊಳಿಸುವುದು, CJP ಯನ್ನು ಮಾತುಕತೆಗೆ ಕರೆಯುವುದು ಮತ್ತು ರಸ್ತೆಯಲ್ಲಿರುವ ಸಾಮಾನ್ಯ ವಿದ್ಯಾರ್ಥಿ-ಯುವಜನತೆಯನ್ನು ಹೈರಾಣಾಗಿಸಿ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡುವುದು.

ಇನ್ನೊಂದೆಡೆ, ಪ್ರತಿಭಟನಾಕಾರರ ಬಂಧನದ ವಿಚಾರದಲ್ಲಿ ಸರ್ಕಾರ ತನ್ನ ಆದೇಶವನ್ನು ಗೊಂದಲಮಯವಾಗಿಯೇ ಇಟ್ಟಿದೆ. ಜಂತರ್ ಮಂತರ್‌ನಲ್ಲಿ ‘ಶಾಂತಿಯುತವಾಗಿ’ ಇದ್ದವರನ್ನು ಬಂಧಿಸುವುದಿಲ್ಲ ಎಂದಿದೆ. ಹಾಗಾದರೆ ಕಾನ್‌ಪೇಟ್ ಅಥವಾ ಇತರ ನಗರಗಳಲ್ಲಿ ಬಂಧಿತರಾದವರ ಗತಿಯೇನು? ಅವರ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ.

ಕೇಂದ್ರ ಸರ್ಕಾರಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕುವುದನ್ನು ಬಿಟ್ಟು ಉಳಿದ ಯಾವುದೇ ವಿನಾಯಿತಿ ನೀಡಲು ಅಭ್ಯಂತರವಿಲ್ಲ. ಏಕೆಂದರೆ, ಪರಿಹಾರ ನೀಡುವುದು ಅಥವಾ ಚರ್ಚೆಗೆ ಒಪ್ಪುವುದನ್ನು ಪ್ರಧಾನಿ ಮೋದಿಯವರ ಔದಾರ್ಯ ಎಂದು ಬಿಂಬಿಸಬಹುದು. ಆದರೆ ಸಚಿವರ ರಾಜೀನಾಮೆ ಪಡೆದರೆ, ಅದು ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡಂತೆ ಆಗುತ್ತದೆ.

ಹಾಗಾಗಿ, ಸಚಿವರ ರಾಜೀನಾಮೆಯ ಮೂಲ ಬೇಡಿಕೆಗೆ ಧಕ್ಕೆ ಬಾರದಂತೆ ಸರ್ಕಾರವನ್ನು ಎದುರಿಸಲು ಕಾಂಗ್ರೆಸ್, ವಿಪಕ್ಷಗಳು ಮತ್ತು ವಿದ್ಯಾರ್ಥಿ ಒಕ್ಕೂಟಗಳು ಇನ್ನು ಮುಂದೆ ಅತ್ಯಂತ ಸಂಘಟಿತವಾಗಿ ಹೆಜ್ಜೆ ಇಡಬೇಕಿದೆ.

Inputs : The Quint

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...

ಪ್ರತಿಭಟನಾನಿರತ ಮಹಿಳೆಯ ಕೆನ್ನೆಗೆ ಹೊಡೆದ ದೆಹಲಿ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ: ವಿಡಿಯೋ ವೈರಲ್ ನಂತರ ವ್ಯಾಪಕ ಟೀಕೆ

ದೆಹಲಿ: ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೂರ ದಮನ ಕಾರ್ಯಾಚರಣೆಯ ಭೀಕರ ಮುಖವಾಡವೊಂದು ಮತ್ತೆ ಜಗಜ್ಜಾಹೀರಾಗಿದೆ. ಸೋಮವಾರ ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ,...

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...