Homeಮುಖಪುಟಕ್ಷಮಿಸಿ, ಕೊರೊನಾ ಲಸಿಕೆ ಎಂದು ತಿಳಿದಿರಲಿಲ್ಲ- ಪತ್ರ ಬರೆದು ಕದ್ದಿದ್ದ ಲಸಿಕೆ ತಂದಿಟ್ಟ ಕಳ್ಳ

ಕ್ಷಮಿಸಿ, ಕೊರೊನಾ ಲಸಿಕೆ ಎಂದು ತಿಳಿದಿರಲಿಲ್ಲ- ಪತ್ರ ಬರೆದು ಕದ್ದಿದ್ದ ಲಸಿಕೆ ತಂದಿಟ್ಟ ಕಳ್ಳ

- Advertisement -
- Advertisement -

ಗುರುವಾರ (ಏಪ್ರಿಲ್ 22) ಹರಿಯಾಣದ ಜಿಂದ್‌ನಲ್ಲಿ 1,700 ಡೋಸ್‌ಗಳಷ್ಟು ಕೊರೊನಾ ಲಸಿಕೆಗಳು ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದ ಕಳ್ಳ, ವಾಪಸ್ ತಂದು ಇಟ್ಟು ಕ್ಷಮೆ ಕೇಳಿರುವ ಘಟನೆ ನಡೆದಿದೆ. ಅಪರಿಚಿತ ಕಳ್ಳ ತನಗೆ ಇದರಲ್ಲಿ ಕೊರೊನಾ ಲಸಿಕೆ ಇರುವುದು ಗೊತ್ತಿರಲಿಲ್ಲ ಎಂದು ಪತ್ರ ಬರೆದಿಟ್ಟಿದ್ದಾನೆ.

“ಕ್ಷಮಿಸಿ, ಇದು ಕೊರೊನಾಗೆ ಇರುವ ಔಷಧಿಗಳೆಂದು ನನಗೆ ತಿಳಿದಿರಲಿಲ್ಲ” ಎಂದು ಹಿಂದಿ ಭಾಷೆಯಲ್ಲಿ ಪತ್ರ ಬರೆದು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳಿಂದ ತುಂಬಿದ ಬ್ಯಾಗ್‌ನಲ್ಲಿ ಇಟ್ಟು ಪೊಲೀಸ್ ಠಾಣೆ ಬಳಿ ಕೊಟ್ಟು ಹೋಗಿದ್ದಾರೆ.

ಜಿಂದ್ ಜನರಲ್ ಆಸ್ಪತ್ರೆಯ ಸ್ಟೋರ್ ರೂಂನಿಂದ ಲಸಿಕೆ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಪೊಲೀಸರು, ಲಸಿಕೆ ಕದ್ದಿದ್ದ ಕಳ್ಳನ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಆಕ್ಸಿಜನ್‌ಗೆ ಹಾಹಾಕಾರ; ನೇಪಾಳಕ್ಕೆ ವೆಂಟಿಲೇಟರ್‌‌‌ ಹೊಂದಿರುವ 39 ಆಂಬುಲೆನ್ಸ್‌ ಗಿಫ್ಟ್‌‌‌!

ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಹೊರಗಿನ ಚಹಾ ಅಂಗಡಿಯಲ್ಲಿ ಕಳ್ಳ, ವ್ಯಕ್ತಿಯೊಬ್ಬನಿಗೆ ಚೀಲವೊಂದನ್ನು ನೀಡಿ, ತಾನು ಪೊಲೀಸರಿಗೆ ಆಹಾರವನ್ನು ತಲುಪಿಸುತ್ತಿದ್ದೇನೆ. ಈಗ ಮತ್ತೊಂದು ಕೆಲಸ ಇದೆ ಎಂದು ಹೇಳಿ ಲಸಿಕೆ ತುಂಬಿದ ಬ್ಯಾಗ್ ಕೊಟ್ಟು ಹೋಗಿದ್ದರು.

'Sorry, Did Not Know': Thief In Haryana Returns Covid Vaccine With Note
PC: NDTV

ಲಸಿಕೆಗಳನ್ನು ಆಂಟಿ-ವೈರಲ್ ಔಷಧಿ ರೆಮ್‌ಡೆಸಿವಿರ್ ಎಂದು ತಪ್ಪಾಗಿ ತಿಳಿದು ಕಳ್ಳ ಕದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಲಸಿಕೆ ಬ್ಯಾಗ್ ಕಳುವು ಮಾಡಿದ ಕೊಠಡಿಯಲ್ಲಿಯೇ ಇದ್ದ ಇತರ ಔಷದ, 50 ಸಾವಿರ ಹಣ, ಬೇರೆ ಲಸಿಯನ್ನು ಕಳ್ಳ ಮುಟ್ಟಿರಲಿಲ್ಲ ಎಂದು ವರದಿಯಾಗಿತ್ತು.

ಮೇ 1 ರಿಂದ ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ ಅನ್ನು ವಿಸ್ತರಿಸುತ್ತಿದೆ. ಈ ವರ್ಗದವರು ಲಸಿಕೆ ಪಡೆದುಕೊಳ್ಳಲು ಏಪ್ರಿಲ್ 28 ರಿಂದ ನೋಂದಣಿ ನಡೆಯಲಿದೆ.


ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಜಮೀನಿನಲ್ಲೇ ಮೃತರ ಅಂತ್ಯ ಸಂಸ್ಕಾರಕ್ಕೆ ಅನುಮತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...