Homeಮುಖಪುಟಇಸ್ಲಾಮೋಫೋಬಿಯ ಹರಡುವ ಪೋಸ್ಟ್ ಹಂಚಿಕೆ; ಕ್ಷಮೆ ಕೇಳಿದ ಕ್ರಿಕೆಟಿಗ ಯಶ್ ದಯಾಳ್

ಇಸ್ಲಾಮೋಫೋಬಿಯ ಹರಡುವ ಪೋಸ್ಟ್ ಹಂಚಿಕೆ; ಕ್ಷಮೆ ಕೇಳಿದ ಕ್ರಿಕೆಟಿಗ ಯಶ್ ದಯಾಳ್

- Advertisement -
- Advertisement -

ಇಸ್ಲಾಮೋಫೋಬಿಯ ಹರಡುವ ಪೋಸ್ಟ್ ಒಂದನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ಕ್ರಿಕೆಟಿಗ ಯಶ್ ದಯಾಳ್ ವ್ಯಾಪಕ ಟೀಕೆ ವ್ಯಕ್ತವಾಗುತ್ತಲೇ ತಮ್ಮ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ.

ಲವ್ ಜಿಹಾದ್ ಎಂಬ ಕಲ್ಪಿತ ಮುಸ್ಲಿಂ ಸಮುದಾಯ ದ್ವೇಷಿ ಕಾರ್ಟೂನ್ ಒಂದನ್ನು ಇತ್ತೀಚೆಗೆ ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಯಶ್ ದಯಾಳ್ ಹಂಚಿಕೊಂಡಿದ್ದರು. ಅದರಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ಗೆಳತಿಯನ್ನು ಕೊಂದು ಮತ್ತೊಬ್ಬ ಹುಡುಗಿಗೆ ಲವ್ ಜಿಹಾದ್ ಇಲ್ಲ, ನನ್ನದು ಪರಿಶುದ್ಧ ಪ್ರೇಮ ಎಂದು ನಿವೇದಿಸಿಕೊಳ್ಳುವಂತೆ ಮತ್ತು ಆ ಹಿಂದೂ ಹುಡುಗಿ ಅದನ್ನು ಒಪ್ಪಿಕೊಳ್ಳುವಂತೆ ಚಿತ್ರಿಸಲಾಗಿತ್ತು. ಆ ಮೂಲಕ ಮುಸ್ಲಿಂ ಯುವಕರೆಲ್ಲ ಹಿಂದೂ ಹುಡುಗಿಯನ್ನು ಪ್ರೀತಿಸಿ ಕೊಲೆ ಮಾಡುತ್ತಾರೆ ಎಂಬ ಕೆಟ್ಟ ಅರ್ಥ ಕೊಡುತ್ತಿತ್ತು.

ಯಶ್​ ದಯಾಳ್​ ಶೇರ್ ಮಾಡಿದ್ದ ಪೋಸ್ಟರ್​​​ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಟ್ವಿಟರ್‌ ನಲ್ಲಿ ಹಲವರು, ಬಿಸಿಸಿಐ ಮತ್ತು ಗುಜರಾತ್​ ಟೈಟನ್ಸ್​ ಖಾತೆಗೆ ಟ್ಯಾಗ್​ ಮಾಡಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇನ್ನು ಹಲವು ನೆಟ್ಟಿಗರು ಯಶ್ ದಯಾಳ್ ಅವರ ಮನಸ್ಥಿತಿಯನ್ನು ಟೀಕಿಸಿದ್ದರು.

ಮುಸ್ಲಿಮರ ಕುರಿತು ಅಪನಂಬಿಕೆ ಹೊಂದಿರುವ ನೀನು, ಸಹ ಆಟಗಾರರಾದ ಮುಹಮ್ಮದ್‌ ಶಮಿ, ರಶೀದ್‌ ಖಾನ್‌, ನೂರ್‌ ಅಹ್ಮದ್‌ ಜೊತೆ ಎರಡು ತಿಂಗಳು ಜೊತೆಯಾಗಿ ಇದ್ದುದ್ದಾದರೂ ಹೇಗೆ? ಅವರನ್ನು ನೋಡಿ ಏನೂ ಕಲಿಯಲಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ. ಇದು ವಿವಾದವಾಗುತ್ತಲೇ ಯಶ್ ದಯಾಳ್ ಆ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿ, ಕ್ಷಮೆ ಯಾಚಿಸಿದ್ದಾರೆ.

ಬಳಿಕ ಮತ್ತೊಂದು ಪೋಸ್ಟ್ ಮೂಲಕ ಹಿಂದೆ ಪೋಸ್ಟ್​ ಮಾಡಿದ್ದ ಸ್ಟೇಟಸ್​ಗಾಗಿ ಕ್ಷಮೆ ಯಾಚಿಸಿದ್ದಾರೆ ʻಸ್ನೇಹಿತರೇ, ನಾನು ತಪ್ಪಾಗಿ ಈ ಹಿಂದಿನ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದೆ. ಇದ್ಕಕಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತಿದ್ದೇನೆ. ದಯವಿಟ್ಟು ದ್ವೇಷವನ್ನು ಹರಡಬೇಡಿ. ಧನ್ಯವಾದಗಳು. ನಾನು ಎಲ್ಲಾ ಸಮುದಾಯಗಳ ಭಾವನೆಗಳನ್ನು ಗೌರವಿಸುತ್ತೇನೆʼ ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.

ಇತ್ತೀಚಿಗೆ ಪ್ರೇಮಿಗಳು, ಮದುವೆಗಳಲ್ಲಿ ಕಲಹಗಳು ಹೆಚ್ಚಾಗಿ ಕಂಡುಬರುತ್ತಿವೆ. ಅವು ಕೊಲೆ ಮಾಡುವ ಮಟ್ಟಕ್ಕೂ ಬಂದು ನಿಂತಿವೆ. ಆದರೆ ಆ ಗಲಾಟೆ, ಮನಸ್ತಾಪ, ದ್ವೇಷ ಮತ್ತು ಕೊಲೆಗಳಿಗೆ ಧರ್ಮವಾಗಲೀ, ಜಾತಿಯಾಗಲೀ ಕಾರಣವಾಗಿಲ್ಲ. ಬದಲಿಗೆ ಅಹಂಕಾರ, ಹೊಂದಾಣಿಕೆ ಕೊರತೆ, ಸ್ವಾರ್ಥ, ಕೋಪ ಮತ್ತು ಹತಾಶೆಗಳು ಅವರನ್ನು ಆ ಕೃತ್ಯಗಳೆಸಲು ಪ್ರೇರೇಪಿಸತ್ತಿವೆ. ಇದುವರೆಗೆ ಈ ರೀತಿಯ ಕೊಲೆಗೈದವರಲ್ಲಿ ಎಲ್ಲಾ ಜಾತಿ-ಧರ್ಮದವರು ಇದ್ದಾರೆ. ಹಾಗಾಗಿ ಕೇವಲ ಮುಸ್ಲಿಂ ಯುವಕರು ಮತ್ರ ಹುಡುಗಿಯನ್ನು ಪ್ರೀತಿಸಿ ಕೊಲೆ ಮಾಡುತ್ತಾರೆ ಎಂಬುದು ಸುಳ್ಳು. ಆದರೂ ಮುಸ್ಲಿಂ ಸಮುದಾಯದ ವಿರುದ್ಧ ಕೆಟ್ಟ ಹೆಸರು ತರಲು ಕೆಲ ಮತಾಂಧರು ಈ ರೀತಿಯ ಫೇಕ್ ನ್ಯೂಸ್‌ಗಳನ್ನು ಹರಡುತ್ತಿದ್ದಾರೆ. ಅಂತಹುದ್ದೇ ಫೇಕ್ ನ್ಯೂಸ್ ಹರಡಿ ಕ್ರಿಕೆಟಿಗ ಯಶ್ ದಯಾಳ್ ತಮ್ಮ ವರ್ಚಸ್ಸನ್ನು ಹಾಳು ಮಾಡಿಕೊಂಡಿದ್ದಾರೆ. ಹಾಗಾಗಿ ಯಾರೂ ಸಹ ದ್ವೇಷ ಪೂರಿತ ಪೋಸ್ಟ್‌ಗಳನ್ನು ಹಾಕಿ ಸಂಕಷ್ಟಕ್ಕೆ ಸಿಲುಕಬೇಡಿ. ಯಾವುದೇ ಅನ್ಯಾಯ ನಡೆಯುತ್ತಿರುವುದು ಕಂಡುಬಂದಲ್ಲಿ ಪೊಲೀಸರಿಗೆ ದೂರು ನೀಡಿ. ಕಾನೂನನನ್ನು ಗೌರವಿಸಿ.

ಇದನ್ನೂ ಓದಿ; ಗುಜರಾತ್‌: ದಲಿತ ಬಾಲಕ ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ್ರು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...