Homeಮುಖಪುಟ4 ವರ್ಷದ ಮಗನನ್ನು ಕೊಂದು ಮೃತದೇಹವನ್ನು ಬೆಂಗಳೂರಿಗೆ ಸಾಗಿಸುತ್ತಿದ್ದ ಸ್ಟಾರ್ಟ್‌ ಅಪ್‌ ಸಿಇಒ ಬಂಧನ

4 ವರ್ಷದ ಮಗನನ್ನು ಕೊಂದು ಮೃತದೇಹವನ್ನು ಬೆಂಗಳೂರಿಗೆ ಸಾಗಿಸುತ್ತಿದ್ದ ಸ್ಟಾರ್ಟ್‌ ಅಪ್‌ ಸಿಇಒ ಬಂಧನ

- Advertisement -
- Advertisement -

ಗೋವಾದ ಖಾಸಗಿ ಹೋಟೆಲ್‌ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದು, ಮೃತದೇಹವನ್ನು ಕಾರಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಸ್ಟಾರ್ಟ್‌ ಅಪ್‌ ಸಿಇಒ ಅನ್ನು ಪೊಲೀಸರು ಬಂಧಿಸಿದ್ದಾರೆ.

ಸುಚನಾ ಸೇಠ್ (39) ಬಂಧಿತ ಮಹಿಳೆ. ಈಕೆ ತನ್ನ ಮಗನ ಮೃತದೇಹದೊಂದಿಗೆ ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಸುಚನಾ ಸೇಠ್ ತನ್ನ ಮಗನೊಂದಿಗೆ ಜನವರಿ 6ರಂದು ಉತ್ತರ ಗೋವಾದ ಸಿಂಕ್ವೆರಿಮ್‌ನಲ್ಲಿರುವ ಹೋಟೆಲ್‌ಗೆ ತೆರಳಿದ್ದರು (ಚೆಕ್‌ ಇನ್ ಮಾಡಿದ್ದರು). ಆದರೆ, ಆಕೆ ವಾಪಸ್‌ ಬರುವಾಗ (ಚೆಕ್‌ ಔಟ್ ಮಾಡುವಾಗ) ಒಬ್ಬರೇ ಬಂದಿದ್ದರು. ಇದರಿಂದ ಹೋಟೆಲ್‌ ಸಿಬ್ಬಂದಿಗೆ ಅನುಮಾನ ಕಾಡಿತ್ತು.

ಸುಚನಾ ಹೋಟೆಲ್ ತೊರೆದ ಬಳಿಕ, ಅಲ್ಲಿನ ನೌಕರರು ಕೊಠಡಿ ಸ್ವಚ್ಚಗೊಳಿಸಲು ತೆರಳಿದ್ದರು. ಈ ವೇಳೆ ಕೊಠಡಿಯಲ್ಲಿ ರಕ್ತದ ಕಲೆಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ಬಳಿಕ ಪೊಲೀಸರು ಸುಚನಾರನ್ನು ಕರೆದುಕೊಂಡು ಬಂದಿದ್ದ ಕಾರು ಚಾಲಕನನ್ನು ಸಂಪರ್ಕಿಸಿ ಮಗನ ಕುರಿತು ವಿಚಾರಿಸುವಂತೆ ಸೂಚಿಸಿದ್ದರು. ಚಾಲಕ ವಿಚಾರಿಸಿದಾಗ, ಮಗ ಗೆಳತಿಯೊಂದಿಗೆ ತೆರಳಿದ್ದಾಗಿ ಆಕೆ ಸುಳ್ಳು ಹೇಳಿದ್ದರು.

ಪೊಲೀಸರು ಮತ್ತೆ ಕಾರು ಚಾಲಕನಿಗೆ ಕರೆ ಮಾಡಿ ಸುಚನಾ ಅವರಿಗೆ ಕೊಂಕಣಿ ತಿಳಿದಿಲ್ಲದೇ ಇರುವುದರಿಂದ ಕೊಂಕಣಿಯಲ್ಲಿ ಮಾತನಾಡಿ ಕಾರನ್ನು ಅನ್ನು ಹತ್ತಿರದ ಚಿತ್ರದುರ್ಗದ ಐಮಂಗಲ ಠಾಣೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಕಾರು ಚಾಲಕ ಹಾಗೆಯೇ ಮಾಡಿದ್ದ. ನಂತರ ಪೊಲೀಸರು ಆಕೆಯನ್ನು ಬಂಧಿಸಿದಾಗ ಆಕೆಯ ಜೊತೆಗಿನ ಬ್ಯಾಗಿನಲ್ಲಿ ಮಗನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರು ಆಕೆಯ ಪತಿ ಬೆಂಗಳೂರಿನಲ್ಲಿ ಎಐ ಡೆವಲಪರ್‌ ಆಗಿರವ ವೆಂಕಟ್‌ ರಾಮನ್‌ ಅವರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ ಧಾವಿಸಿ ಬಂದಿದ್ದಾರೆ. ಪ್ರಸ್ತುತ ಚಿತ್ರದುರ್ಗ ಪೊಲೀಸರು ಆರೋಪಿಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ಆರೋಪಿ ಸುಚನಾ ಸೇಠ್ ತನ್ನ ಮಗನನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದರು. ಕೃತ್ಯದ ಬಳಿಕ ತಾನು ಬೆಂಗಳೂರಿಗೆ ತೆರಳಲು ಟ್ಯಾಕ್ಸಿ ವ್ಯವಸ್ಥೆ ಮಾಡುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದರು. ಹೋಟೆಲ್ ಸಿಬ್ಬಂದಿ ವಿಮಾನದ ಮೂಲಕ ತೆರಳುವಂತೆ ಸಲಹೆ ನೀಡಿದರೂ, ಇಲ್ಲ ತಾನು ರಸ್ತೆ ಮಾರ್ಗವಾಗಿಯೇ ಹೋಗಬೇಕು ಟ್ಯಾಕ್ಸಿ ಬುಕ್ ಮಾಡುವಂತೆ ಆಕೆ ಹೇಳಿದ್ದರು. ಹಾಗಾಗಿ, ಹೋಟೆಲ್ ಸಿಬ್ಬಂದಿ ಟ್ಯಾಕ್ಸಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಸುಚನಾ ಹೋಟೆಲ್ ತೊರೆದ ಬಳಿಕ ಅನುಮಾನ ಬಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸುಚನಾ ತನ್ನ ಮಗನನ್ನು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಖಚಿತವಾಗಿ ತಿಳಿದು ಬಂದಿಲ್ಲ. ಕೆಲ ಮಾಧ್ಯಮಗಳ ವರದಿಗಳ ಪ್ರಕಾರ, ಸುಚನಾ ಪತಿ ವೆಂಕಟ ರಾಮನ್ ಅವರಿಂದ ವಿಚ್ಚೇದನ ಪಡೆದಿದ್ದರು. ಆದರೂ, ಕೋರ್ಟ್‌ನಿಂದ ಅನುಮತಿ ಪಡೆದು ವೆಂಕಟ ರಾಮನ್‌ ತನ್ನ ಮಗನನ್ನು ನೋಡಲು ಪ್ರತೀ ವಾರ ತೆರಳುತ್ತಿದ್ದರು. ಇದರಿಂದ ಕೋಪಗೊಂಡ ಆಕೆ, ಪತಿ ಮಗನನ್ನು ನೋಡಬಾರದು ಎಂದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ ಪ್ರಕರಣಗಳಲ್ಲಿ ಒಂದೇ ಒಂದು ಶಿಕ್ಷೆ ಯಾಕೆ ಆಗುತ್ತಿಲ್ಲ? ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...