Homeಕರ್ನಾಟಕಬುಧವಾರದಿಂದ ‘ಪ್ರಜಾಧ್ವನಿ ಯಾತ್ರೆ’ ಪ್ರಾರಂಭಿಸಲಿರುವ ರಾಜ್ಯ ಕಾಂಗ್ರೆಸ್‌‌‌

ಬುಧವಾರದಿಂದ ‘ಪ್ರಜಾಧ್ವನಿ ಯಾತ್ರೆ’ ಪ್ರಾರಂಭಿಸಲಿರುವ ರಾಜ್ಯ ಕಾಂಗ್ರೆಸ್‌‌‌

- Advertisement -
- Advertisement -

ರಾಜ್ಯ ಕಾಂಗ್ರೆಸ್‌ ತನ್ನ ಮಹತ್ವಾಕಾಂಕ್ಷೆಯ ಬಸ್‌ ಯಾತ್ರೆ ಅಭಿಯಾನವನ್ನು ಬೆಳಗಾವಿಯಲ್ಲಿ ಬುಧವಾರದಿಂದ ಪ್ರಾರಂಭಿಸುವುದಾಗಿ ಘೋಷಿಸಿದೆ. ‘ಪ್ರಜಾಧ್ವನಿ ಯಾತ್ರೆ’ ಅಭಿಯಾನದ ಲೋಗೋವನ್ನು ರಾಜ್ಯ ಕಾಂಗ್ರೆಸ್‌‌ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನಾವರಣಗೊಳಿಸಿದರು.

ಆಡಳಿತಾರೂಢ ಬಿಜೆಪಿ ಸರ್ಕಾರದ ಆಪರೇಷನ್ ಕಮಲದ ಬಗ್ಗೆ ವಾಗ್ದಾಳಿ ನಡೆಸಿದ ಡಿ.ಕೆ. ಶಿವಕುಮಾರ್‌, ಇದು ಅನೈತಿಕ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದಾಗಿ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಬಿಜೆಪಿ ಆದ್ಯತೆ 40% ಕಮಿಷನ್ ಲೂಟಿ ಹೊಡೆಯುವುದು ಮಾತ್ರವೆ ಹೊರತು, ಕರ್ನಾಟಕದ ಪ್ರಗತಿ ಎಂದಿಗೂ ಬಿಜೆಪಿಯ ಆದ್ಯತೆಯಲ್ಲ. ಬಿಜೆಪಿ 2018ರ ಚುನಾವಣೆಯಲ್ಲಿ ನೀಡಿದ್ದ 90% ದಷ್ಟು ಭರವಸೆಗಳನ್ನು ಮರೆತು ಕೋಮುವಾದಿ ರಾಜಕೀಯ ಮತ್ತು ಪಾರ್ಶ್ವವಾಯು ನೀತಿಯತ್ತ ಗಮನ ಹರಿಸುವುದರಲ್ಲಿ ನಿರತವಾಗಿದೆ” ಎಂದು ಶಿವಕುಮಾರ್ ಆರೋಪಿಸಿದರು.

ರಾಜ್ಯದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, “ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಹಾಗೂ ಸುಳ್ಳುಗಳನ್ನು ಬಯಲಿಗೆಳೆಯಲು ಬಸ್ ಯಾತ್ರೆ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ. ‘ಡಬಲ್ ಇಂಜಿನ್ ಸರ್ಕಾರದ ವಿಫಲ ನೀತಿ’ಗಳನ್ನು ಯಾತ್ರೆಗಳಲ್ಲಿ ಎತ್ತಿ ತೋರಿಸುವುದಾಗಿ ಅವರು ಹೇಳಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲಿ ಯಾತ್ರೆಗಳು ನಡೆಯಲಿದ್ದು, ಸಮಯದ ಅಭಾವದಿಂದಾಗಿ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದ ಎರಡು ವಿಭಿನ್ನ ಗುಂಪುಗಳು ಮತ್ತು ಬಹು ಹಂತಗಳಲ್ಲಿ ಯಾತ್ರೆಗಳು ನಡೆಸಲಿವೆ ಎಂದು ಪಕ್ಷವೂ ಹೇಳಿದೆ.

ಮೊದಲ ಹಂತದ ಪ್ರಚಾರದಲ್ಲಿ ಸಿದ್ದರಾಮಯ್ಯ ಉತ್ತರಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಹಾಗೂ ಶಿವಕುಮಾರ್ ಹಳೆ ಮೈಸೂರು ಭಾಗದಲ್ಲಿ ಯಾತ್ರೆ ಮಾಡಲಿದ್ದಾರೆ. ಎರಡನೇ ಹಂತದಲ್ಲಿ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಮತ್ತು ಉತ್ತರಕರ್ನಾಟಕದಲ್ಲಿ ಕೆಲಸ ಮಾಡಲಿದ್ದಾರೆ.

“ಪ್ರಸ್ತುತ ಬಿಜೆಪಿ ಸರ್ಕಾರದ ದ್ವೇಷ ಮತ್ತು ಸೇಡಿನ ರಾಜಕಾರಣದಿಂದ ಕನ್ನಡಿಗರು ಬೇಸತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಳಿತಪ್ಪಿದ್ದು, ಜನರು ಮುಕ್ತವಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ” ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ಎರಡನೇ ಸ್ಥಾನಕ್ಕೆ ಬಂದಿರುವುದು ಬಿಜೆಪಿಯಿಂದಾಗಿ ಎಂದು ಅವರು ಕಿಡಿಕಾರಿದ್ದಾರೆ. 40% ಕಮಿಷನ್‌ ಮೇಲೆ ಬಿಜೆಪಿಯ ಕಣ್ಣು ಇದ್ದು, ಇದು ಸಾಂಕ್ರಾಮಿಕ ಸಮಯದಲ್ಲಿ 3.5 ಲಕ್ಷಕ್ಕೂ ಹೆಚ್ಚು ಕನ್ನಡಿಗರ ಸಾವಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

“40% ಕಮೀಷನ್‌ ಅಮಾಯಕ ಗುತ್ತಿಗೆದಾರರನ್ನು ಆತ್ಮಹತ್ಯೆಗೆ ತಳ್ಳಿತು. ಬಿಜೆಪಿ ಹೈಕಮಾಂಡ್ ಕೈಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಂಬೆಯಾಗಿದ್ದಾರೆ. ರಾಜ್ಯದ ಆಕಾಂಕ್ಷೆಗಳು ಮತ್ತು ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ” ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...