Homeಕರ್ನಾಟಕಇಡಬ್ಲ್ಯೂಎಸ್‌ ಜಾರಿಗೆ ಯಾವ ಉಪಸಮಿತಿ ಮಾಡಿದ್ರಿ?: ಒಳಮೀಸಲಾತಿ ಹೋರಾಟದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ವಾಗ್ದಾಳಿ

ಇಡಬ್ಲ್ಯೂಎಸ್‌ ಜಾರಿಗೆ ಯಾವ ಉಪಸಮಿತಿ ಮಾಡಿದ್ರಿ?: ಒಳಮೀಸಲಾತಿ ಹೋರಾಟದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ವಾಗ್ದಾಳಿ

- Advertisement -
- Advertisement -

“ಮೂರು ಪರ್ಸೆಂಟ್ ಇರುವ ಮೇಲ್ಜಾತಿಯವರಿಗೆ ಹತ್ತು ಪರ್ಸೆಂಟ್ (ಇಡಬ್ಲ್ಯೂಎಸ್) ಮೀಸಲಾತಿ ನೀಡಲು ಯಾವ ಉಪಸಮಿತಿ ಮಾಡಿದ್ರಿ, ಯಾವ ಆಯೋಗ ವರದಿ ನೀಡಿತ್ತು?” ಎಂದು ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.

ಪುನಾರಂಭಗೊಂಡಿರುವ ಒಳಮೀಸಲಾತಿ ಹೋರಾಟ 30ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಆಗಮಿಸಿ, ಹೋರಾಟವನ್ನು ಉದ್ದೇಶಿಸಿ ಅವರು ಮಾತನಾಡಿದರು.

“ನಮ್ಮ ಸಮುದಾಯಗಳನ್ನು ಒಡೆದು ಆಳುವ ಷಡ್ಯಂತ್ರ ನಡೆಯುತ್ತಿರುವುದು ನಮಗೆ ತಿಳಿದಿದೆ. ಮತಕ್ಕಾಗಿ ನಮ್ಮನ್ನು ಛಿದ್ರ ಛಿದ್ರ ಮಾಡಿದ್ದಾರೆ. ನಾವು ಯಾರ ತಟ್ಟೆಗೂ ಕೈ ಹಾಕುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎಂಬುದು ಸಂವಿಧಾನ ಹಾಗೂ ಬಾಬಾ ಸಾಹೇಬ್‌ ಅಂಬೇಡ್ಕರರ ಆಶಯ. ಉಪಸಮಿತಿ ರಚಿಸಿರುವುದಾಗಿ ಹೇಳುತ್ತಾರೆ. ಆದರೆ ಹತ್ತು ಪರ್ಸೆಂಟ್ ಮೀಸಲಾತಿ ಜಾರಿಗೆ ಯಾವ ಉಪಸಮಿತಿ ಮಾಡಿದ್ದರು? ಯಾವ ಆಯೋಗ ಮಾಡಿದ್ದರು? ಯಾವ ವರದಿ ಪಡೆದಿದ್ದರು? ಹೇಗೆ ಇಡಬ್ಲ್ಯೂಎಸ್‌ ಜಾರಿಯಾಯಿತು?” ಎಂದು ಕೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಸಂವಿಧಾನ ಜಾರಿಗೊಳಿಸುವ ಜಾಗದಲ್ಲಿ ನಾವಿಲ್ಲ. ನಮ್ಮ ಪ್ರತಿನಿಧಿಗಳಾಗಿ ಹೋದವರು ಬಾಯಿ ಕಟ್ಟಿದ ನಾಯಿಗಳಾಗಿ ಕೂತಿದ್ದಾರೆ. ನಾವಿಲ್ಲಿ ಟೆಂಟ್ ಹಾಕಿಕೊಂಡು ಧಿಕ್ಕಾರ ಕೂಗುತ್ತಿದ್ದೇವೆ. ನಮ್ಮನ್ನು ಒಡೆದು ಆಳುತ್ತಿದ್ದಾರೆ. ಜಲ್ಲಿ, ಸಿಮೆಂಟ್, ಕಬ್ಬಿಣ, ನೀರು- ಎಲ್ಲವನ್ನು ಬೇರ್ಪಡಿಸಿ ಕಾಂಕ್ರೀಟ್ ಮಾಡಲು ಸಾಧ್ಯವೇ? ಜೇನು ನೊಣಗಳಂತೆ ಒಂದಾಗಿ” ಎಂದು ಸಂದೇಶ ನೀಡಿದರು.

“ಗ್ರಾಮ ಪಂಚಾಯಿತಿ ಮೆಂಬರ್‌ ಕೂಡ ಆಗಲು ಸಾಧ್ಯವಿಲ್ಲದಂತಹ ಬುಡುಬುಡಕೆ, ದೊಂಬಿದಾಸ, ಶಿಳ್ಳೆಕ್ಯಾತರಿದ್ದಾರೆ. ಅವರಿಗೆಲ್ಲರಿಗೂ ಪ್ರಾತಿನಿಧ್ಯ ಕೊಡಬೇಕು. ಆದರೆ ಮೆಜಾರಿಟಿ ಇಲ್ಲದ ಬ್ರಾಹ್ಮಣರು 127 ಮಂದಿ ಎಂಪಿಗಳನ್ನು ಹೊಂದಿದ್ದಾರೆ. ಅವರನ್ನು ಗೆದ್ದು ಕಳಿಸಿದ್ದು ಯಾರು? ನಿಮ್ಮ ಹೆಗಲ ಮೇಲೆ ಕಾಲುಗಳನ್ನು ಇಟ್ಟುಕೊಂಡು ನಿಂತಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವೆಲ್ಲ ಅವರ ಹಿಡಿತದಲ್ಲಿವೆ. ಹೀಗಾಗಿ ಹತ್ತು ಪರ್ಸೆಂಟ್ ಮೀಸಲಾತಿ ಒಂದೇ ದಿನದಲ್ಲಿ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಅವರ ಬಳಿ ಅಧಿಕಾರವಿದೆ. ಅಂಬೇಡ್ಕರ್‌ರವರು ಹೇಳಿದಂತೆ ಅಧಿಕಾರ ಹೀನತೆಯೇ ಅಸ್ಪೃಶ್ಯತೆ” ಎಂದು ಅಭಿಪ್ರಾಯಪಟ್ಟರು.

“ಒಂದೇ ದಿನದಲ್ಲಿ ಹತ್ತು ಪರ್ಸೆಂಟ್ ಮೀಸಲಾತಿ ಜಾರಿಗೊಳಿಸಿದಂತೆ ಒಳಮೀಸಲಾತಿ ಜಾರಿಗೊಳಿಸಿ. ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿರಿ. ಆಜಾದಿ ಕಾ ಅಮೃತ ಮಹೋತ್ಸವ ಎನ್ನುತ್ತಿದ್ದಾರೆ. ಯಾರಿಗೆ ಅಮೃತ? ಆರು ನಿಮಿಷಕ್ಕೊಮ್ಮೆ ದಲಿತ ಹೆಣ್ಣುಮಕ್ಕಳ ರೇಪ್ ಆಗುತ್ತಿದೆ. ಎಂಟು ನಿಮಿಷಕ್ಕೊಂದು ಗುಡಿಸಲಿಗೆ ಬೆಂಕಿ ಬೀಳುತ್ತಿದೆ, ಅರವತ್ತು ಸಾವಿರ ವಿದ್ಯಾರ್ಥಿಗಳ ಸ್ಕಾಲರ್‌ ಶಿಪ್ ಬಂದ್‌ ಆಗಿದೆ, ಏಳು ಸಾವಿರ ವಿದ್ಯಾರ್ಥಿಗಳ ಪಿಎಚ್‌.ಡಿ ಬಂದ್ ಆಗಿದೆ, ಬೈಕ್‌ ರೈಡ್ ಮಾಡಿದ್ದಕ್ಕೆ ದಲಿತ ವಿದ್ಯಾರ್ಥಿಗೆ ಕೋಲಾರದಲ್ಲಿ ಥಳಿಸಿದ್ದಾರೆ, ಇದಕ್ಕೆಲ್ಲ ಯಾರು ಉತ್ತರ ಕೊಡಬೇಕು” ಎಂದು ಮಾರ್ಮಿಕವಾಗಿ ನುಡಿದರು.

“ಜಾತಿ ಜಾತಿಗಳ ನಡುವೆ ಒಡಕುಗಳು ಬೇಡ. ಎಸ್.ಸಿ., ಎಸ್‌.ಟಿ. ಸ್ವಾಮೀಜಿಗಳು ಏಕೆ ಒಂದಾಗಬೇಕು ಎಂಬ ವಿಷಯವನ್ನಿಟ್ಟುಕೊಂಡು 31 ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತಿದ್ದೇವೆ. ಪರಿಶಿಷ್ಟ ಜನಾಂಗದ ಸ್ವಾಮೀಜಿಗಳನ್ನೇ ಒಡೆಯಬೇಕೆಂದು ಹೊರಟಿದ್ದಾರೆ. ಒಂದಿಷ್ಟು ಸಮುದಾಯದ ಸ್ವಾಮೀಜಿಗಳನ್ನು ಎತ್ತಿಕಟ್ಟಿ ನಮ್ಮ ವಿರುದ್ಧ ಬಿಟ್ಟಿದ್ದಾರೆ. ನಾವು ಯಾರೂ ವಿಚಲಿತರಾಗಿಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ. ನಾಲ್ಕು ವಿಭಾಗೀಯ ಸಮಾವೇಶ ಮಾಡುತ್ತೇವೆ, ದಲಿತ ಮುಖಂಡರೆಲ್ಲ ಅದರಲ್ಲಿ ಪಾಲ್ಗೊಳ್ಳಿದ್ದಾರೆ” ಎಂದು ಗುಡುಗಿದರು.

ನಮ್ಮ ಪಾಲು ಕೇಳಲು ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ: ಮಾವಳ್ಳಿ ಶಂಕರ್‌

ಹಿರಿಯ ದಲಿತ ಮುಖಂಡರಾದ ಮಾವಳ್ಳಿ ಶಂಕರ್‌ ಮಾತನಾಡಿ, “ಯಾರ ಪಾಲನ್ನು ನಾವು ಕಿತ್ತುಕೊಳ್ಳುತ್ತಿಲ್ಲ, ಯಾರ ಆಸ್ತಿಗೂ, ತಟ್ಟೆಗೂ ಕೈಹಾಕಿಲ್ಲ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ವರ್ಗೀಕರಣ ಮಾಡಲು ಸಾಧ್ಯವಾದರೆ ಪರಿಶಿಷ್ಟ ಜಾತಿಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ನಮ್ಮ ಪಾಲನ್ನು ನಾವು ಕೇಳೋದಕ್ಕೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎ.ಜೆ.ಸದಾಶಿವ ಆಯೋಗದ ಜಾರಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡು ಮಾವಳ್ಳಿ ಶಂಕರ್‌ ಮಾತನಾಡಿದರು.

“ಒಳಮೀಸಲಾತಿ ಕುರಿತು ಚರ್ಚೆ ಮಾಡುತ್ತಿರುವಾಗ ಖಾಸಗೀಕರಣ ಹೆಚ್ಚಾಗಿರುವುದನ್ನು ಪ್ರಸ್ತಾಪಿಸುತ್ತಾರೆ. ಅದರ ವಿರುದ್ಧ ಹೋರಾಟ ಮಾಡುವುದು ಹೇಗೆಂದು ಬಾಬಾ ಸಾಹೇಬರ ಅನುಯಾಯಿಗಳಿಗೆ ಗೊತ್ತಿದೆ. ಆದರೆ ಖಾಸಗೀಕರಣವನ್ನು ತೋರಿಸಿ, ಈ ಹೋರಾಟವನ್ನು ತಡೆಯಬಾರದು” ಎಂದು ಎಚ್ಚರಿಕೆ ನೀಡಿದರು.

“ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಹೇಡಿಗಳು ಗೆದ್ದು ಬರುತ್ತಿದ್ದಾರೆ. ಅವರೆಲ್ಲ ಈ ಸಮುದಾಯವನ್ನು ಪ್ರತಿನಿಧಿಸಿ ಮೇಲ್ಜಾತಿಯ ಗುಲಾಮಗಿರಿ ಮಾಡದಿದ್ದರೆ ಒಳಮೀಸಲಾತಿ ದೊಡ್ಡ ಪ್ರಶ್ನೆಯೇ ಆಗುತ್ತಿರಲಿಲ್ಲ. ರಾಜಕೀಯ ಅಧಿಕಾರಕ್ಕಾಗಿ ಬೇರೆಯವರ ಜೀತ ಮಾಡಿದರೆ ಸಮುದಾಯ ಹಿಂದುಳಿಯುತ್ತದೆ. ಬಾಬಾ ಸಾಹೇಬರ ಆಶಯದಂತೆ ಪ್ರತ್ಯೇಕ ಮತದಾನದ ಹಕ್ಕು ನಮಗೆ ಸಿಕ್ಕಿದ್ದರೆ ನಮ್ಮ ಕಾಲ ಬುಡಕ್ಕೆ ಮೇಲ್ಜಾತಿಗಳು ಬರುತ್ತಿದ್ದವು. ಪರಿಶಿಷ್ಟ ರಾಜಕಾರಣಗಳು ಒಳಮೀಸಲಾತಿ ಪರ ಮಾತನಾಡಲು ಸಾಧ್ಯವಾಗುತ್ತಿಲ್ಲ. ದಲಿತ ರಾಜಕಾರಣಿಗಳು ಮೇಲ್ಜಾತಿಗಳ ಮರ್ಜಿಗೆ ಬಿದ್ದಿದ್ದಾರೆ” ಎಂದು ವಿಷಾದಿಸಿದರು.

ಒಳಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ದಲಿತ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, “ಈ ಮೂವತ್ತು ವರ್ಷದ ಹೋರಾಟದಲ್ಲಿ ಹಲವಾರು ನಾಯಕರು ಸತ್ತಿದ್ದಾರೆ, ಜೈಲಿಗೆ ಹೋಗಿದ್ದಾರೆ, ನೌಕರಿ ಬಿಟ್ಟಿದ್ದಾರೆ, ಲಾಠಿ ಏಟು ತಿಂದಿದ್ದಾರೆ- ಯಾವುದೇ ಕಾರಣಕ್ಕೂ ಒಂದು ದಿನಕ್ಕೆ ಮಾತ್ರ ಹೋರಾಟ ಸೀಮಿತಗೊಳಿಸಬಾರದು ಎಂದು ಭೀಮ ಸೈನಿಕರು ಎಚ್ಚರಿಕೆ ಕೊಟ್ಟು ನಮ್ಮನ್ನು ಕಳಿಸಿದ್ದಾರೆ. ಹೀಗಾಗಿ ಹೋರಾಟ ಮುಂದುವರಿಸಿದೆ. ನವೆಂಬರ್‌ ತಿಂಗಳಿನಿಂದ ನಿರಂತರ ಹೋರಾಟ ನಡೆಯುತ್ತಿದೆ. ಡಿಸೆಂಬರ್‌ 11ರಿಂದ ಬೆಂಗಳೂರಿನಲ್ಲಿ ಹೋರಾಟ ಜರುಗಿದೆ” ಎಂದರು.

“ಒಂದು ಸಂಘಟನೆ, ಒಂದು ಸಮುದಾಯ ಈ ಹೋರಾಟದ ಮುಂದಾಳತ್ವ ವಹಿಸಿತ್ತು. ಆದರೆ ಎಲ್ಲ ಜಾತಿಗಳು ಈ ಚಳವಳಿಯ ಭಾಗವಾಗಬೇಕೆಂದು ನಿರಂತರ ಚರ್ಚೆಗಳು ನಡೆಸಿದ್ದೇವೆ. ಎಲ್ಲ ಸಮುದಾಯಗಳು ಒಳಗೊಂಡಿದ್ದರಿಂದ ನಮ್ಮ ಟೈಟಲ್‌ ಬದಲಾಗಿದೆ, ನಡೆ, ನುಡಿ, ವರ್ತನೆ ಬದಲಾಗಿದೆ. ಎಲ್ಲ ರೀತಿಯಲ್ಲೂ ನಮ್ಮ ಹೋರಾಟ ವಿಸ್ತರಣೆಯಾಗಿದೆ. ಮೂರು ಪಕ್ಷಗಳು ಮಾತನಾಡುವಂತಾಗಿದೆ. ಇದು ರಾಜಕೀಯೇತರ ಚಳವಳಿ” ಎಂದು ಸ್ಪಷ್ಟಪಡಿಸಿದರು.

ದಲಿತ ಹೋರಾಟಗಾರರಾದ ಬಿ.ಗೋಪಾಲ್ ಮಾತನಾಡಿ, “ಯಾರದೇ ಮೀಸಲಾತಿಯನ್ನು ಕಿತ್ತುಹಾಕುವ ಪ್ರಸ್ತಾವನ್ನು ಯಾರೂ ಮಾಡಿಲ್ಲ. ಮಾಡಲೂಬಾರದು” ಎಂದು ಆಶಿಸಿದರು.

ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಹೋರಾಟ 30ನೇ ದಿನಕ್ಕೆ ಕಾಲಿಟ್ಟಿದೆ.

ಹೋರಾಟದಲ್ಲಿ ದಲಿತ ಮುಖಂಡರಾದ ಎನ್.ವೆಂಕಟೇಶ್, ಹೆಣ್ಣೂರು ಶ್ರೀನಿವಾಸ್, ಬಸವರಾಜ ಕೌತಾಳ್, ಮೋಹನ್ ರಾಜ್, ಹೆಣ್ಣೂರು ಲಕ್ಷ್ಮೀನಾರಾಯಣ್, ಡಿ.ಶಿವಶಂಕರ್, ಕನಕಪುರ ಬಿ.ಶಿವಣ್ಣ, ಶಿವರಾಜ ಯಕ್ಕರಕಿ, ಗುರುಮೂರ್ತಿ, ಶಿವಸುಂದರ್, ಗೌರಿ ಜನಶಕ್ತಿ, ನಾಗಮಣಿ, ಸವಿತಾ, ಹ.ರಾ.ಮಹೇಶ್, ಸೂಲಿಕುಂಟೆ ರಮೇಶ್, ಗಣೇಶ್ ಮೇತ್ರಿ, ಕಮಲಾನಗರ ಚಿಕ್ಕಣ್ಣ, ರಾಜಗೋಪಾಲ್, ಹನುಮೇಗೌಡ, ಕರಿಯಪ್ಪ ಗುಡಿಮನಿ, ವೇಣುಗೋಪಾಲ್ ಮೌರ್ಯ, ಹನುಮೇಶ್ ಗುಂಡೂರು, ಡಿಬಿಎಂ ವೆಂಕಟೇಶ್, ಕೋದಂಡರಾಮ್, ಹೆಗ್ಗನಹಳ್ಳಿ ಮೂರ್ತಿ, ಕನಕೇನಹಳ್ಳಿ ಕೃಷ್ಣ, ಡಾ.ರವಿಕುಮಾರ್ ಬಾಗಿ, ಹಾಡುಗಾರರಾದ ಕೆ.ಎನ್.ನಾಗೇಶ್, ಸಬ್ಬನಹಳ್ಳಿ ರಾಜು, ಪ್ರಶಾಂತ್ ದಾನಪ್ಪ, ಸುಧಾಕರ್, ಸಿದ್ದಯ್ಯ, ಎಲ್.ವಿ.ಸುರೇಶ್, ಮೌನೇಶ್ ದೇವತೆಗಲ್, ಮೌಲಪ್ಪ ಐಹೊಳೆ, ಹನುಮೇಶ್ ಬೇರಿ, ಎಂ.ಡೇವಿಡ್ ಸಿರವಾರ, ಎಸ್.ಎಚ್.ನಾಗೇಶ್ ಮೊದಲಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿರಿ: ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ: ಮಠಾಧೀಶರ ಸಲಹೆಗಳಿಗೆ ತೀವ್ರ ವಿರೋಧ

ಲಂಬಾಣಿ, ಭೋವಿ ಸಮುದಾಯ ಬೃಹತ್‌ ಪ್ರತಿಭಟನೆ

ಭೋವಿ, ಲಂಬಾಣಿ ಮುಖಂಡರು ಮುಂಚೂಣಿಯಲ್ಲಿರುವ ‘ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟದ ನೇತೃತ್ವ’ದಲ್ಲಿ ಅದೇ ಫ್ರೀಡಂ ಪಾರ್ಕ್‌‌ನಲ್ಲಿ ಬೃಹತ್ ಹೋರಾಟ ಜರುಗಿತು.

ಎ.ಜೆ.ಸದಾಶಿವ ಆಯೋಗದ ವರದಿಯನ್ನು ತರಾತುರಿಯಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು ಎಂಬುದು ಒಕ್ಕೂಟದ ಆಗ್ರಹವಾಗಿತ್ತು. ಎರಡು ಭಿನ್ನ ನಿಲುವಿನ ಹೋರಾಟಗಳು ಒಂದೇ ಸ್ಥಳದಲ್ಲಿ ಜರುಗಿದ್ದರಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಒಂದು ಸಾವಿರ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು. ಎ.ಜೆ.ಸದಾಶಿವ ಆಯೋಗದ ಪರ ನಡೆಯುತ್ತಿರುವ 30ನೇ ದಿನದ ಹೋರಾಟದ ಸ್ಥಳಕ್ಕೆ ಹೋಗುವವರನ್ನು ಪರಿಶೀಲಿಸಿ ಬಿಡಲಾಗುತ್ತಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈಗಾಲಾದರೂ ಸನಾತನಿ ಬ್ರಾಹ್ಮಣ್ಯದ ಎದುರು ಗಟ್ಟಿಯಾಗಿ ಮಾತಾಡುತ್ತದ್ದಾರಲ್ಲಾ?,🙏

LEAVE A REPLY

Please enter your comment!
Please enter your name here

- Advertisment -

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...