Homeಮುಖಪುಟಆಪತ್ತಿನ ಕತೆಗಳು-ಕತ್ತಿಯವರಿಗೇಕೆ ಬೈತೀರಿ…ಪಾಪ | ರಾಜಾರಾಮ್ ತಲ್ಲೂರು ಬರಹ

ಆಪತ್ತಿನ ಕತೆಗಳು-ಕತ್ತಿಯವರಿಗೇಕೆ ಬೈತೀರಿ…ಪಾಪ | ರಾಜಾರಾಮ್ ತಲ್ಲೂರು ಬರಹ

ಸನ್ಮಾನ್ಯ ಪ್ರಧಾನಮಂತ್ರಿಗಳು ಮೊನ್ನೆ ಎಂಎಸ್‌ಪಿ ಥಾ; ಎಂಎಸ್‌ಪಿ ಹೈ; ಎಂಎಸ್‌ಪಿ ರಹೇಗಾ ಅಂದಿದ್ದರಲ್ವಾ? ಅವರು ಸತ್ಯ ಹೇಳಿದ್ದಾರೆ. ಆದರೆ, ಈ ಕ್ರೊನಾಲಜಿ ಸ್ವಲ್ಪ … ಸಮಝೀಯೆ…!

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ನೀತಿಯ ಅಂತಿಮ ಪರಿಣಾಮಗಳಲ್ಲಿ ಸಚಿವ ಕತ್ತಿಯವರ ಪ್ರಕಟಣೆಯೂ ಒಂದು. ಕೃಷಿ-ಆಹಾರ ಸಬ್ಸಿಡಿಗಳಿಂದ ಕೈತೊಳೆದುಕೊಳ್ಳುವ ಪ್ರಯತ್ನದ ಭಾಗ ಇದು. ಅಷ್ಟೇ.

ಸನ್ಮಾನ್ಯ ಪ್ರಧಾನಮಂತ್ರಿಗಳು ಮೊನ್ನೆ ‘ಎಂಎಸ್‌ಪಿ ಥಾ; ಎಂಎಸ್‌ಪಿ ಹೈ; ಎಂಎಸ್‌ಪಿ ರಹೇಗಾ’ ಅಂದಿದ್ದರಲ್ವಾ? ಅವರು ಸತ್ಯ ಹೇಳಿದ್ದಾರೆ. ಆದರೆ, ಈ ಕ್ರೊನಾಲಜಿ ಸ್ವಲ್ಪ … ಸಮಝೀಯೆ…!

  • ಎಪಿಎಂಸಿಗಳಿಂದ ಹೊರಗೆ ಖರೀದಿಗೆ ಅವಕಾಶ ಕೊಟ್ಟಾಗ, ಎಪಿಎಂಸಿಗಳು ನಿಧಾನಕ್ಕೆ ಅಪ್ರಸ್ತುತಗೊಳ್ಳುತ್ತವೆ. ಅಲ್ಲಿ ಎಂಎಸ್‌ಪಿ ಕೊಟ್ಟು ಅತಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವವರು ಯಾರು ಗೊತ್ತೆ? ಕೇಂದ್ರ ಸರ್ಕಾರದ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಯಾನೆ ಎಫ್‌ಸಿಐ.
  • ಎಫ್‌ಸಿಐ ತಾನು ಸಂಗ್ರಹಿಸಿ ಉಗ್ರಾಣಗಳಲ್ಲಿರಿಸಿದ ಆಹಾರಧಾನ್ಯಗಳನ್ನು ಪಡಿತರ ವಿತರಣೆಯ ಮೂಲಕ ವಿತರಿಸಲು ರಾಜ್ಯಸರ್ಕಾರಗಳ ಪಡಿತರ ವ್ಯವಸ್ಥೆಗೆ ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ: ಹೊಸ ಕೃಷಿ ಕಾನೂನುಗಳ ಹಿನ್ನೆಲೆ ಏನು? ಯಾಕಾಗಿ ಇವು ಈಗ ತಲೆ ಎತ್ತಿವೆ?

  • ಕೇಂದ್ರ ಸರ್ಕಾರ ತನ್ನ ಆಹಾರ ಸಬ್ಸಿಡಿ ಕಡಿತ ಕಾರ್ಯಕ್ರಮದ ಭಾಗವಾಗಿ ಎಫ್‌ಸಿಐಗೆ ನೀಡುವ ಸಬ್ಸಿಡಿ ಕಡಿಮೆ ಮಾಡಿದಾಗ, ಸಹಜವಾಗಿಯೇ ಅದು ಪಡಿತರಕ್ಕೆಂದು ಖರೀದಿಸುವ ಆಹಾರಧಾನ್ಯಗಳ ಪ್ರಮಾಣ ಕಡಿಮೆ ಆಗುತ್ತಾ ಬರುತ್ತದೆ. (ಚಿತ್ರದಲ್ಲಿ ಸಬ್ಸಿಡಿ ಶೇಕಡಾವಾರು ಈ ಸರ್ಕಾರದ ಅವಧಿಯಲ್ಲಿ ಕುಸಿಯುತ್ತಾ ಬಂದಿರುವ ಪ್ರಮಾಣವನ್ನು ಗಮನಿಸಿ)

  • ಆಗ ಸಹಜವಾಗಿಯೇ ರಾಜ್ಯ ಸರ್ಕಾರಗಳು ತಮ್ಮ ಆಹಾರ ಪಡಿತರ ವಿತರಣಾ ವ್ಯವಸ್ಥೆಯ ಗಾತ್ರವನ್ನು ಸಂಕುಚಿಸಬೇಕಾಗುತ್ತದೆ. ಅದನ್ನೇ ಕತ್ತಿಯವರು ಹೇಳಿದ್ದು. ಟಿವಿ-ಫ್ರಿಡ್ಜು ಇತ್ಯಾದಿ ಇರುವವರಿಗೆಲ್ಲ ಬಿಪಿಎಲ್ ಕಾರ್ಡು ಯಾಕೆ ಎಂದು. ಅವರೀಗ ಜನಕ್ಕೆ ಸಿಟ್ಟು ಬಂದಿದೆ ಎಂದು ತೀರ್ಮಾನವನ್ನು ಹಿಂತೆಗೆದುಕೊಂಡರೂ ಕೂಡ ಅದು ಗವಾಕ್ಷೀಲಿ ಹಿಂದಿರುಗೋದು ಖಂಡಿತಾ!
  • ಈ ಬಾರಿ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಎಫ್‌ಸಿಐನ ಸಾಲದ ಹೊಂಡ ಭರ್ತಿ ಮಾಡಲು ಈ ಬಾರಿಯ ಫುಡ್ ಸಬ್ಸಿಡಿಯನ್ನು ವ್ಯಯಿಸಲಾಗುವುದು ಎಂದು ಹೇಳಿದ್ದಾರೆ. ಅಂದರೆ, ಎಫ್‌ಸಿಐ ಹೆಚ್ಚಿನಂಶ ತನ್ನ ಹೊಂಡಗಳನ್ನು ಮುಚ್ಚಿಕೊಂಡು ದುಂಡಗಾಗಿ, ಖಾಸಗೀಕರಣಕ್ಕೆ ಸಿದ್ಧವಾಗುತ್ತಿದೆ. ಯಾವುದೋ ಒಂದು ಆನಿ ಕಂಪನಿಯ ಖಾಸಗಿ ಸಿಲೊ ಆಗಲು ತಯಾರಾಗುತ್ತಿದೆ.
  • ಹೀಗೆ, ಒಟ್ಟಿನಲ್ಲಿ ಎಪಿಎಂಸಿ ಅಪ್ರಸ್ತುತವಾದರೆ, ಎಂಎಸ್‌ಪಿ ಇದ್ದೂ ಸತ್ತಂತೆ; ಎಂಎಸ್‌ಪಿ ಸತ್ತರೆ ಎಫ್‌ಸಿಐ ಸತ್ತಂತೆ; ಎಫ್‌ಸಿಐ ಸತ್ತರೆ ಆಹಾರ ಪಡಿತರ ವಿತರಣಾ ವ್ಯವಸ್ಥೆ ಸತ್ತಂತೆ. ನಾನು ಅರ್ಥ ಮಾಡಿಕೊಂಡಂತೆ, ಇದು ಸಂಪೂರ್ಣ ಚಿತ್ರ.

ಒಟ್ಟಿನಲ್ಲಿಸರ್ಕಾರದ್ದು ಬಡವರ ನಿರ್ಮೂಲನಾ ಕಾರ್ಯಕ್ರಮ!

ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...