Homeಕರ್ನಾಟಕಕಾಗೇರಿ ಸ್ಪೀಕರಿಕೆ ಸುತ್ತ ಛೂಮಂತ್ರಿ ಗಾಳಿ!!

ಕಾಗೇರಿ ಸ್ಪೀಕರಿಕೆ ಸುತ್ತ ಛೂಮಂತ್ರಿ ಗಾಳಿ!!

ಉತ್ತರಕನ್ನಡದ ಇನ್ನುಳಿದ ಮೂವರು ಬಿಜೆಪಿ ಶಾಸಕರು ಶಿವರಾಮ ಹೆಬ್ಬಾರ್ ವನವಾಸ ಮುಗಿಸಿ ಬರುವವರೆಗೆ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಮಾತಾಡುತ್ತಿದ್ದಾರೆ.

- Advertisement -
- Advertisement -

ಕಾಗೇರಿ ತನಗೇ ಅರಿವಿಲ್ಲದೆ ಸ್ಪೀಕರ್ ಪೀಠ ಏರಿಬಿಟ್ಟಿದ್ದಾರೆ. ಹೊಸ ಸ್ಪೀಕರ್ ಅಭಿನಂದಿಸುತ್ತಾ ನಿರ್ಗಮಿತ ಸ್ಪೀಕರ್ ರಮೇಶ್‍ಕುಮಾರ್ ಆಡಿದ ಅರ್ಥಪೂರ್ಣ ಮಾತುಗಳು ಕಾಗೇರಿಯ ಕಂಗೆಟ್ಟ ಸ್ಥಿತಿಗತಿಗೆ ಹಿಡಿದ ಕನ್ನಡಿಯಂತಿತ್ತು!

“ಸ್ಪೀಕರ್ ಸ್ಥಾನ ತುಂಬ ದೊಡ್ಡದು… ಒದ್ದು ಮೇಲಕ್ಕೆ ಕಳಿಸ್ತಾರೆ… ಕೇಳಿದ್ರೆ ನೀನು ತುಂಬಾ ಎತ್ತರದಲ್ಲಿದ್ದೀಯಾ ಅಂತಾರೆ… ಸಾಮಾನ್ಯವಾಗಿ ಸ್ಪೀಕರ್ ಮಾಡೋದು, ಯಾರನ್ನು ಮಂತ್ರಿ ಮಾಡಲಿಕ್ಕೆ ಆಗೋದಿಲ್ಲವೋ ಅಥವಾ ಯಾರು ನಿವೃತ್ತಿ ಅಂಚಿನಲ್ಲಿರ್ತಾರೋ ಅಂಥೋರಿಗೆ” ಎಂದು ರಮೇಶ್‍ಕುಮಾರ್ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತ್ತು.

ಮೇಲುನೋಟಕ್ಕೆ ರಮೇಶ್ ಕುಮಾರ್ ಮಾತುಗಾರಿಕೆ ತಮಾಷೆಯಾಗಿ ಕಂಡರೂ ವಾಸ್ತವಿಕವಾಗಿ ಕಾಗೇರಿ ಸ್ಪೀಕರ್ ಹುದ್ದೆ ಒಪ್ಪಿಕೊಳ್ಳಬೇಕಾಗಿ ಬಂದ ಸಂದರ್ಭಕ್ಕೆ ಅಕ್ಷರಶಃ ಅನ್ವಯವಾಗುತ್ತದೆ. ಕಾಗೇರಿ ಸಭಾಧ್ಯಕ್ಷತೆ ಬಯಸಿ ಪಡೆದದ್ದಲ್ಲ, ಆ ಉಸಾಬರಿ ತನಗೆ ಬೇಡವೆಂದು ಕೊನೆಕ್ಷಣದವರೆಗೂ ಕಾಗೇರಿ ಕ್ಯಾತೆ ತೆಗೆಯುತ್ತಲೇ ಇದ್ದರು. ತನಗೆ ಸ್ಪೀಕರ್ ಪೀಠ ಅನಿವಾರ್ಯವಾಗಬಹುದೆಂದು ಕನಸುಮನಸಿನಲ್ಲಿಯೂ ಕಾಗೇರಿ ಎಣಿಸಿರಲಿಲ್ಲ. ತನಗೆಂದೂ ನಿಷ್ಠನಲ್ಲದ, ವಿರೋಧಿ ಬ್ರಾಹ್ಮಣ ಲಾಬಿಯ ಕಾಗೇರಿಯನ್ನು ಸ್ಪೀಕರ್ ಪೀಠದಲ್ಲಿ ಪ್ರತಿಷ್ಠಾಪಿಸುವ ಮನಸ್ಸು ಯಡ್ಡಿಗೂ ಒಂಚೂರು ಇರಲಿಲ್ಲ. ಯಡ್ಡಿಯ ಶತ್ರುವೂ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ತಂಡದ ತಂತ್ರಗಾರಿಕೆಯಿಂದಾಗಿ ಕಾಗೇರಿ ಸ್ಪೀಕರ್ ಆಗಬೇಕಾಗಿ ಬಂತು.

ಕಾಗೇರಿಗೆ ಮತ್ತೊಂದು ಸಂದಿಗ್ಧವೂ ಎದುರಾಗಿತ್ತು. ಆತನ ಶಿರಸಿ ಕ್ಷೇತ್ರದ ಪಕ್ಕದ ಯಲ್ಲಾಪುರದ ಶಾಸಕನಾಗಿದ್ದ ಶಿವರಾಮ ಹೆಬ್ಬಾರ್ ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಪಾಲಾಗಿದ್ದು ಕಾಗೇರಿಗೆ ದುಬಾರಿಯಾಗಿ ಪರಿಣಮಿಸಿತ್ತು. ಬಿಜೆಪಿ ಸರ್ಕಾರ ಹಿಂಬಾಗಿಲ ಮೂಲಕ ಸ್ಥಾಪನೆ ಆಗಿರುವುದೇ ಶಿವರಾಮ ಹೆಬ್ಬಾರ್ ಮತ್ತಿತರ 16 ಶಾಸಕರ ಬುರ್ನಾಸ್ ನಿಷ್ಠಾವಂತರಿಂದಲ್ಲವಾ? ಇವರನ್ನೆಲ್ಲಾ ಮಂತ್ರಿ ಮಾಡಬೇಕಾದ ದರ್ದು ಬಿಜೆಪಿಗಿದೆ. ಹೆಬ್ಬಾರ್‍ಗೆ ಮಂತ್ರಿ ಮಾಡಿದರೆ ಅದೇ ಹವ್ಯಕ ಜಾತಿಯ ಕಾಗೇರಿಗೆ ಸಚಿವ ಸ್ಥಾನ ಕೊಡಲಾಗದು. ಈ ಜಾತಿ-ಪ್ರಾದೇಶಿಕತೆ ಲೆಕ್ಕಾಚಾರ ಕಾಗೇರಿಯ ಆಸೆಗೆ ಕಲ್ಲು ಹಾಕಿತ್ತು. ಸ್ಪೀಕರಿಕೆ ಒಪ್ಪದಿದ್ದರೆ ಬರೀ ಶಾಸಕನಾಗಿ ಮಂತ್ರಿ ಹೆಬ್ಬಾರ್ ಎದುರು ಹೆತ್ಲಾಂಡಿಯಂತಾಗುವ ಆತಂಕ ಶುರುವಾಯಿತು. ಇದೇ ಹೊತ್ತಿಗೆ ಎಬಿವಿಪಿ ಕೇಡರಿನ ಕಾಗೇರಿಗೆ ಸಂಘಿ ಪರಿವಾರದ ಆದೇಶ ಧಿಕ್ಕರಿಸುವ ಧೈರ್ಯವೂ ಬರಲಿಲ್ಲ. ಆರ್‍ಎಸ್‍ಎಸ್ ಆಣತಿಯಂತೆ ಮತ್ತು ಅಸ್ತಿತ್ವದ ಅಂಜಿಕೆಯಿಂದ ಕಾಗೇರಿ ಸ್ಪೀಕರಿಕೆಗೆ ಸಿದ್ಧವಾಗಬೇಕಾಗಿ ಬಂತು, ಪಾಪ!!

ಈ ನೈಚ್ಚಾನುಸಂಧಾನದ ಹೊತ್ತಲ್ಲಿ ಕಾಗೇರಿ ಮಂತ್ರಿಗಿರಿ ತ್ಯಾಗಕ್ಕೆ ಒಂದು ಷರತ್ತು ವಿಧಿಸಿದ್ದಾರೆ. ಹೆಬ್ಬಾರ್ ಬಿಟ್ಟು ಉತ್ತರ ಕನ್ನಡದ ಬೇರ್ಯಾವ ಬಿಜೆಪಿ ಶಾಸಕನಿಗೂ ಮಂತ್ರಿ ಭಾಗ್ಯ ಕೊಡಬಾರದು, ಇದಕ್ಕೆ ಸಮ್ಮತಿಸಿದರಷ್ಟೇ ಸ್ಪೀಕರ್ ಆಫರ್ ಒಪ್ಪುತ್ತೇನೆಂದು ಕಾಗೇರಿ ಕಡ್ಡಿ ಮುರಿದಂತೆ ಯಡ್ಡಿಗೆ ಹೇಳಿದ್ದಾರೆ.

ಇದಕ್ಕೆ ಸಂಘ ಪರಿವಾರದ ಪ್ರಚೋದನೆ, ಅನುಮೋದನೆ ಎರಡೂ ಇತ್ತು. ಆದರೆ ಹೆಬ್ಬಾರ್‍ಗೆ ಬಿಜೆಪಿ ಸರ್ಕಾರದಲ್ಲಿ ಸಚಿವನಾಗುವ ಕಾಲ ಯಾವಾಗ ಕೂಡಿಬರುತ್ತದೋ ಹೇಳಲಾಗದು. ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋಗಿರುವ ಅತೃಪ್ತರು ವಿಚಾರಣೆ ಮುಗಿದು ತೀರ್ಪು ಬರುವತನಕ ಮಂತ್ರಿ ಆಗಲಾರರು. ಈ ವಿಚಾರಣೆ ಎಷ್ಟು ದೂರ ಎಳೆದುಕೊಂಡು ಹೋಗುತ್ತದೋ ಹೇಳಲಾಗದು. ಹಿಂದೆ ಯಡ್ಡಿ ಪರ್ವದಲ್ಲಿ ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ಶಿವನಗೌಡ ನಾಯಕ್,,,, ವಗೈರೆಗಳು ಬರೋಬ್ಬರಿ ಒಂಬತ್ತು ತಿಂಗಳು ಅಂತರ್‍ಪಿಶಾಚಿಗಳಾಗಿದ್ದರು.

ಹೆಬ್ಬಾರ್ ಅತಂತ್ರತೆ ಅನಿರ್ದಿಷ್ಟಾವಧಿ ಎಂಬುದಂತೂ ಗ್ಯಾರಂಟಿ. ಹೀಗಾಗಿ ಉತ್ತರಕನ್ನಡದ ಇನ್ನುಳಿದ ಮೂವರು ಬಿಜೆಪಿ ಶಾಸಕರಲ್ಲಿ ನಿಧಾನಕ್ಕೆ ಮಂತ್ರಿ ಆಗುವ ಆಸೆ ಮೊಳೆಯುತ್ತಿದೆ. ಕಾರವಾರದ ರೂಪಾಲಿ ನಾಯಕ್, ಕುಮುಟದ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನೀಲ್ ನಾಯ್ಕ ಒಬ್ಬರಿಗೊಬ್ಬರು ಗೊತ್ತಾಗದಂತೆ ಹೆಬ್ಬಾರ್ ಭೇಟಿ ಮಾಡುತ್ತಿದ್ದಾರೆ. ಎಲ್ಲರದೂ ಒಂದೇ ಬೇಡಿಕೆ!! “ಹೆಬ್ಬಾರಣ್ಣ ನಿಮಗೆ ಮಂತ್ರಿ ಮಾಡುವತನಕ ನನಗೊಂದು ಚಾನ್ಸ್ ಕೊಡ್ಸಿ… ಸುಪ್ರೀಂನಲ್ಲಿ ನೀವು ಗೆದ್ದು ಬಂದತಕ್ಷಣ ಅಥವಾ ಉಪಚುನಾವಣೇಲಿ ನೀವು ಗೆದ್ದ ಕ್ಷಣವೇ ಮಂತ್ರಿಗಿರಿ ಬಿಟ್ಟುಕೊಡ್ತೀನಿ…. ನೀವೇ ಮಂತ್ರಿ ಆಗ್ರಿ….” ಎಂದು ಮಸ್ಕ ಹೊಡೆಯುತ್ತಿದ್ದಾರೆ. ಹೆಬ್ಬಾರ್ ವನವಾಸ ಮುಗಿಸಿ ಬರುವವರೆಗೆ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಮಾತಾಡುತ್ತಿದ್ದಾರೆ.

ಕುಮಟೆಯ ದಿನಕರ ಶೆಟ್ಟಿಯಂತೂ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರೆ. “ಹೆಬ್ಬಾರ್ ನನ್ನ ಎಲ್‍ಎಚ್ ರೂಮಿಗೆ ಬಂದು ನೀನೆ ಮಂತ್ರಿಯಾಗು… ನಿನ್ನ ಹೆಸರು ಸಿಎಂ ಮತ್ತು ಬಿಜೆಪಿ ಹೈಕಮಾಂಡ್‍ಗೆ ರೆಕಮೆಂಡ್ ಮಾಡ್ತೇನೆ… ನನ್ನ ಚಾನ್ಸ್ ಕುದುರಿದಾಗ ತಕರಾರು ಮಾಡದೆ ಸ್ಥಾನ ಬಿಟ್ಟುಕೊಡುವುದು ಎಂದು ಹೇಳಿದ್ದಾರೆ.” ಹಾಗಾಗಿ ನನಗೇ ಮಂತ್ರಿಖಾತೆ ಎಂದು ಪೊಕಳೆ ಬಿಡುತ್ತಿದ್ದಾನೆ ಪಾಪದ ಕಾರ್ಯಕರ್ತರೆದುರು.

ಮಹಿಳಾ ಕೋಟಾದಲ್ಲಿ “ಯಡ್ಡಿಫಾದರ್” ತನಗೆ ಅವಕಾಶ ಕೊಡೋದು ಖಂಡಿತ ಎಂಬ ಭ್ರಮೆಯಲ್ಲಿ ತೇಲಾಡುತ್ತಿರುವ ರೂಪಾಲಿ ನಾಯಕ್‍ಗೆ ಈಗಾಗಲೇ ಮಂತ್ರಿ ಭೂತ ಆವಾಹನೆ ಆಗಿಹೋಗಿದೆ. ಭಂಡ ಬಂಡುಕೋರ ಶಾಸಕರು ಸ್ವಾರ್ಥಸಾಧನೆಗಾಗಿ ಮುಂಬೈ ಹೊಟೇಲು ಸೇರಿಕೊಂಡು ಸಮ್ಮಿಶ್ರ ಸರ್ಕಾರ ಉರುಳಿಸುವ ಹಿಕಮತ್ತು ಮಾಡುತ್ತಿದ್ದಾಗ ಬಿಜೆಪಿ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‍ನಲ್ಲಿ ಜಮೆ ಮಾಡಲಾಗಿತ್ತಲ್ಲವಾ? ಅದರಲ್ಲಿ ಕಾರವಾರದ ರೂಪಾಲಿಯೂ ಇದ್ದರು. ಆ ಹೊತ್ತಲ್ಲಿ ಕಾರವಾರ-ಆಂಕೋಲಾ ಮಳೆ ಆರ್ಭಟದಿಂದ ತತ್ತರಿಸುತ್ತಿತ್ತು. ಶಾಸಕಿ ನೊಂದವರ ಕೈಗೆಟುಕಲಿಲ್ಲ. ಜನರು ಕೆರಳಿದ್ದರು. ಇದರಿಂದ ಫಜೀತಿಗೆ ಬಿದ್ದ ರೂಪಾಲಿ ಸ್ಥಳೀಯ ಪತ್ರಿಕೆಯಲ್ಲಿ “ತಪೋಪ್ಪಿಗೆ” (ತಪ್ಪೊಪ್ಪಿಗೆ) ಜಾಹೀರಾತು ಕೊಟ್ಟು ನಗೆಪಾಟಲಿಗೀಡಾಗಿದ್ದಾರೆ. ಇಂಥ ರೂಪಾಲಿ ಮಂತ್ರಿಯಾಗುತ್ತಾಳೆಂದರೆ ಅದು ಕಾರವಾರ ಕ್ಷೇತ್ರದ ದುರಂತವೆಂದೇ ಜನರಾಡಿಕೊಳ್ಳುತ್ತಾರೆ.

ಮಂತ್ರಿಯಾಗಿ ಜೀವನದ ಕೊನೆಯ ಆಸೆ ಈಡೇರಿಸಿಕೊಳ್ಳಬೇಕು ಮತ್ತು ಅದಿರು ಅವ್ಯವಹಾರದ ಕೇಸ್ ಕುಣಿಕೆಯಿಂದ ಬಚಾವಾಗಬೇಕೆಂಬ ಎರಡು ಉದ್ದೇಶವಿಟ್ಟುಕೊಂಡು ಅನೈತಿಕ ರಾಜಕಾರಣ ಹೆಬ್ಬಾರ್ ಶುರುವಿಟ್ಟುಕೊಂಡಿರುವುದು ಕಾಂಗ್ರೆಸ್‍ನಲ್ಲೂ ಕಂಪನಗಳನ್ನೆಬ್ಬಿಸುತ್ತಿದೆ. ಸುಪ್ರೀಂ ತೀರ್ಪು ಹೇಗೆ ಬರಲಿ, ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದಂತು ಪಕ್ಕ. ಹೀಗಾಗಿ ಕಾಂಗ್ರೆಸ್ ಕ್ಯಾಂಡಿಡೇಟ್ ತಲಾಷೆಗಿಳಿದಿದೆ.

ಒಂದುಮೂಲದ ಪ್ರಕಾರ ಮಾಜಿ ಮಂತ್ರಿ ದೇಶಪಾಂಡೆ ಈ ಸಮರ ಸೀರಿಯಸ್ಸಾಗಿ ಪರಿಗಣಿಸಿದ್ದರಂತೆ. ಏಕೆಂದರೆ ತಾನು ಕಾಂಗ್ರೆಸ್ ಬಿಡಲು ಬಲಾಢ್ಯ ದೇಶಪಾಂಡೆಯ ಕಿರುಕುಳವೇ ಕಾರಣ ಎಂಬಂತೆ ಸೀನ್ ಸೃಷ್ಟಿಸಿರುವ ಹೆಬ್ಬಾರ್‍ಗೆ ಪಾಠ ಕಲಿಸುವ ಹಟಕ್ಕೆ ದೇಶಪಾಂಡೆ ಬಿದ್ದಿದ್ಧರಂತೆ. ಹಾಗಾಗಿ ಆತ ತನ್ನ ಮಗ ಪ್ರಶಾಂತ ದೇಶಪಾಂಡೆಯನ್ನೇ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಲು ಸ್ಕೆಚ್ ಹಾಕಿದ್ದರಂತೆ. ಇನ್ನೊಂದು ಬಾತ್ಮಿ ಪ್ರಕಾರ ದೇಶಪಾಂಡೆ ಮುದಿ ವಯಸ್ಸಿನಲ್ಲಿ ಮಗನನ್ನು ಪಣಕ್ಕಿಟ್ಟು ರಾಜಕಾರಣ ಮಾಡುವ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲವೆಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಇದೇ ಕ್ಷೇತ್ರದವರು. ಆತ ಕಳೆದ ಬಾರಿ ಶಿರಸಿಯಲ್ಲಿ ನಿಂತು ಎಡವಿದ್ದರು. ಈಗ ಯಲ್ಲಾಪುರದಲ್ಲಿ ಗೆಲ್ಲುತ್ತೇನೆಂದು ಹೇಳುತ್ತಿದ್ದಾರೆ. ಆದರೆ ಆತನಿಗೆ ಗೆಲ್ಲುವ ತಾಕತ್ತು ಇಲ್ಲ. ಜನಸಾಮಾನ್ಯರ ವಿಶ್ವಾಸ ಗಳಿಸಿದ ವ್ಯಕ್ತಿತ್ವವೇ ಭೀಮಣ್ಣನದಲ್ಲ. ಆತ ಬರೀ ಡಮ್ಮಿ! ಇದು ಕೆಪಿಸಿಸಿ ಕಿಂಗ್‍ಗಳಿಗೂ ಗೊತ್ತಿದೆ. ಹಾಗಾಗಿ ಬೆಂಗಳೂರು ಮಟ್ಟದಲ್ಲಿ ಸದ್ಯಕ್ಕೆ ಜೆಡಿಎಸ್‍ನಲ್ಲಿರುವ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ರೆ ಹೇಗೆಂಬ ಚರ್ಚೆ ನಡೆದಿದೆ.

ಹಾಗೊಮ್ಮೆ ಶಶಿಭೂಷಣ ಹೆಗಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೆ ಹೆಬ್ಬಾರ್‍ಗೆ ದೊಡ್ಡ ಸವಾಲಾಗೋದು ನಿಸ್ಸಂಶಯ. ಯಲ್ಲಾಪುರ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹವ್ಯಕ ಬ್ರಾಹ್ಮಣರು ಇರುವುದರಿಂದ ಶಶಿಗೆ ಈ ಸಮುದಾಯದ ಒಂದು ಭಾಗದ ಮತ ಖಂಡಿತ ಸಿಗುತ್ತದೆ. ಜೊತೆಗೆ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳು ಮತ್ತು ಹೆಬ್ಬಾರ್‍ನ ವಿರೋಧಿಸುವ ಬಿಜೆಪಿ ಮೂಲನಿವಾಸಿಗಳ ತಂತ್ರ ಶಶಿಗೆ ನೆರವಾಗುತ್ತದೆ.
ಆರ್ಥಿಕವಾಗಿಯೂ ತೊಂದರೆಯಲ್ಲಿರುವ ಹೆಬ್ಬಾರ್‍ಗೆ ಪಕ್ಷದ್ರೋಹ ಆಟ ದುಬಾರಿಯಾಗಿ ಪರಿಣಮಿಸುತ್ತಿದೆ. ಕಂಗಾಲಾಗಿರುವ ಹಬ್ಬಾರ್ ಅಸ್ತಿತ್ವ ಉಳಿಸಿಕೊಳ್ಳಲು ನಿದ್ದೆಗೆಡುವಂತಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...