Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-6; "ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ"

ಹಿಂಗಿದ್ದ ನಮ್ಮ ರಾಮಣ್ಣ-6; “ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ”

- Advertisement -
- Advertisement -

ನಮ್ಮ ಕಡೆ ಅಡ್ಳುದಮ್ಮ ಅಂತರೆ ನೋಡು, ಅಂಗೆ ಆ ಕಡೆ ಮಾಡ್ಳುದಮ್ಮಗಳಿರತವೆ. ಅವು ಗಂಡಿನ ಸರ್ವೆಂಟ್ ತರ ಇರತವೆ. ತಮಾಸಿ ಮಾಡಿ ಹೆಣ್ಣು ಗಂಡಿನ ನಡುವೆ ಸಲಿಗೆ ಬ್ಯೆಳಿಯಂಗೆ ಮಾಡ್ತಿರತವೆ. ಪಾಪ ಹೆಣ್ಣು ಕೊಟ್ಟೋರು ಈ ಅಡ್ಳುದಮ್ಮಗಳಿಗೂ ನೋವಾಗದಂಗೆ ನ್ಯಡಕಬೇಕು. ಮದುವಿಗೆ ಮಾಡಿದ್ದ ತಿಂಡಿ ತೀರ್ಥನ್ಯಲ್ಲ ಈ ಅಡ್ಳುದಮ್ಮಗಳು ಸವಿರಿ ಬಿಸಾಕ್ತವೆ. ಅಂತದೊಂದು ತಾತ್ಕಾಲಿಕ ಸವಲತ್ತು. ನಮಿಗ್ಯಲ್ಲ ಸಿಕ್ತು. ಹೆಣ್ಣಿನ ಕಡೆಲೂ ಅಡ್ಳುದಂಗಿರು ಇರತಿದ್ವು. ಅವುರ್‍ಯಲ್ಲ ಹೆಣ್ಣಿನ ಗೆಳತಿರು. ಅವುರನ್ಯಲ್ಲ ರೇಗಿಸಿಗಂಡು ಚುಡಾಯಿಸಿಗಂಡಿರದು ಚಂದ, ಆದ್ರೆ ಹಳ್ಳಿ ಹುಡುಗಿರು. ನಾವು ಪಟ್ಟಣದಲ್ಲಿ ಓದಿದೋರು, ನಮ್ಮ ಜೊತೆ ಹಳ್ಳಿ ಮಾತು ಹಾಡು ಹೇಳಕ್ಕೆ ಅಂಜಿಕಂಡು ಸುಮ್ಮನಿದ್ರು. ಅದೇ ಅವುರ ತರನೆ ಹಳ್ಳಿ ಹುಡುಗರಾದ್ರೆ ಆ ಮಜನೆ ಬ್ಯಾರೆ.

ರಾಮಣ್ಣನ ಮದುವೆಲಿ ಇಡೀ ದೇಶಿಹಳ್ಳಿನೆ ಭಾಗವಯಿಸಿದಂಗಿತ್ತು. ಪುಟ್ಟಲಿಂಗೇಗೌಡ್ರ ಮನೆ ಮುಂದೆನೆ ಚಪ್ಪರ ಹಾಕಿ ಹಳ್ಳಿ ಸಂಪ್ರದಾಯದಂಗೆ ಮದುವೆ ಮಾಡಿದ್ದು. ಶಾಸ್ತ್ರಗಳು ಚಾಚೂ ತಪ್ಪದಂಗೆ ನ್ಯಡದೊ. ಆ ಶಾಸ್ತ್ರಗಳನ್ನ ನೋಡಿದ್ರೆ ಇನ್ನೋಸೆಂಟ್ ಹೆಣ್ಣುಗಂಡನ್ನ ಒಂದು ಮಾಡಕ್ಕೆ ಅಂತ ಮಾಡಿರವು ಕಣಯ್ಯ. ಹೆಣ್ಣುಗಂಡಿನ ಕೈ ಹಿಡಿಸದು ಒಟ್ಟಿಗಂಟಾಕದು, ಶಾಸ್ತ್ರದ ನೀರು ತರದು, ಹೂವಿನ ಚೆಂಡಾಟ ಆಡದು, ಮಗ ತೂಗದು, ನೀನು ಯಾವ ಶಾಸ್ತ್ರನೆ ನೋಡು, ಹೆಣ್ಣು ಗಂಡಿನ ಮನಸ್ಸನ್ನು ಒಂದು ಮಾಡೊ ಹುನ್ನಾರನೆ ಇರದು. ಮುಂದೆ ಜೊತೆಯಾಗಿ ಬದುಕಕ್ಕೆ ಏನೇನು ಬೇಕೊ ಅದರ ಟ್ರೇನಿಂಗು ಮದುವೆಲೆ ನ್ಯಡದೋಗದು. ಇವು ನಮ್ಮ ರಾಮಣ್ಣನ ಮದುವೆ ಕಾಲದಲ್ಲೂ ಒಸಿ ಇದ್ದೊ. ರಾಮಣ್ಣ ಕೋಲೆ ಬಸವನಂಗೆ ಆರಾಮಾಗಿ ಯಲ್ಲಾ ಶಾಸ್ತ್ರಕ್ಕೂ ತೆಲೆಯೊಡ್ಡಿದ್ದ. ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ. ಅವರ ಮಾವನ ಕಡೆ ಕರಿಗೆ ಎಸ್.ಎಮ್ ಕೃಷ್ಣ ಬಂದಿದ್ರು. ರಾಮಣ್ಣನಿಗೆ ಅದೇನು ವಿಶೇಷ ಅನ್ನಿಸಲಿಲ್ಲ. ಮದುವೆ ಎಂಜಾಯ್ ಮಾಡದ್ರಲ್ಲಿ ಮುಳುಗಿದ್ದ.

ನಿಜವಾಗ್ಲು ಚಂದ್ರೇಗೌಡ, ಮದುವೆನ ಅಂತದೊಂದು ಸಂಭ್ರಮದ ಏಜಲ್ಲೆ ಆಗಿಬುಡಬೇಕು. ಮದುವೆ ವಯಸ್ಸು ಮೀರಿದಾಗ ಅಂತ ಯಾವ ಸಂಭ್ರಮನೂ ಇರದಿಲ್ಲ ಕಣಯ್ಯ. ನಾವ್ಯಲ್ಲ ಅಂತ ಏಜಲ್ಲೆ ಮದಿವಾಗಿದ್ದು. ಆಗಿನ ಮದುವೆ ಬ್ಯಾಸಗೆಲೆ ನ್ಯಡದ್ರು, ಸೋಬನ ಮಾಡಿಕೊಡತಿದ್ದುದ್ದು ಕಾರಬ್ಬಕ್ಕೆ ಇಲ್ಲ ಗೌರಿಹಬ್ಬಕೆ. ಅಲ್ಲಿವರಿಗೂ ಹುಡುಗಿಯ ಕರಕಂಡು ಬಂದು ಕರಕಂಡೋಗರು. ಒಂದು ದಿನ ಗಂಡನ ಜೊತೆ ಕಳಿಸಿಬುಡೋರು. ಆ ಗಂಡನಿಂದೆ ಬರುವ ಒಂದು ಹುಡುಗಿ ಮನಸ ಅಧ್ಯಯನ ಮಾಡಿ ಬರದಿರೋನು ಲಂಕೇಶ ಒಬ್ಬನೆ ಕಣಯ್ಯ. ಅವುನ ಲೇಖನ ನೋಡಿ ನಾನು ದಂಗುಬಡದೋದೆ. ಅತ್ತೆ ಮಾವ ನಾದಿನಿ ಮೈದುನ ಇವುರಾರು ಸರಿಯಾಗಿ ಪರಿಚಯವಿಲ್ಲದ ಅಪರಿಚಿತ ಜಾಗಕ್ಕೆ ಒಂದು ಮುಗ್ದ ಹೆಣ್ಣು ಬಂದು ಸೇರಿಕೊಂಡ ನಂತರ ಹೊಂದಿಕಳಕ್ಕೆ ಹೋರಾಡದಿದಿಯಲ್ಲ ಆ ಮನಸ್ಸಿನ ಒತ್ತಡ ಬರದಿರೋನು ಲಂಕೇಶ್. ಆಗ ಯಳೆ ಹುಡುಗಿ ಮಾಡಿಬುಡೋರು. ಅವುರು ಒಬ್ಬರಿಗೊಬ್ಬರು ಅರತುಗೊಂಡು ಬಾಳಕ್ಕೆ ತಯಾರಾಗೋರು. ಈ ನಡುವಿನ ಚಟುವಟಿಕೆ ಬಾಳ ಚನ್ನಾಗಿರವು. ನಮ್ಮಣ್ಣನೂ ಓದುವಾಗ್ಲೆ ಮದಿವಾದೋರು. ಅವುರು ಬ್ಯಾರೆ ಕಾಲೇಜು. ಇವುರ ಬ್ಯಾರೆ ಕಾಲೇಜು. ಆದ್ರು ಭೇಟಿಯಾಗಿ ಮಾತಾಡಿದೋರಲ್ಲ. ಯಾರಿಗಾರ ಗೊತ್ತಾದ್ರೇನು ಗತಿ ಅನ್ನೋ ಕಾಲ ಅದು. ಆ ಟೈಮಲ್ಲಿ ನಮ್ಮಣ್ಣನ ಫ್ರೆಂಡು ಹೆಡತಿ ನೋಡಿಕೊಂಡು ಬತ್ತಿನಿ ಅಂತ ಊರಿಗೋಗ್ತಿದ್ನಂತೆ. ಅಲ್ಲಿಂದ ಬಂದು ಭಾಳ ಖುಷಿಯಾಗಿದ್ನಂತೆ. ಏನೋ ನ್ಯಡದಿರಬೇಕು ಅಂತ ನಮ್ಮಣಾರು ’ಏನಪ್ಪ ವಿಶೇಷ ಅಂದ್ರಂತೆ. ಅದಕವುನು ಒಂದು ದೊಡ್ಡ ಪ್ರಕರಣ ಹೇಳೋನಂಗೆ ತಯಾರಾಗಿ ’ಅವುಳು ನೀರು ಕೊಡಕ್ಕೆ ಅಂತ ಬಂದ್ಲು. ಅತ್ತಗಿತ್ತಗೆ ನೋಡಿ ಅವುಳ ಕೈನೆ ಮುಟ್ಟಿಬುಟ್ಟಿ’ ಅಂತ ನಗಾಡಿದನಂತೆ. ಅಂತಕಾಲ ಅದು. ಅಂತದೊಂದು ಕಾಲದಲ್ಲಿ ಮದಿವಾಗಿದ್ದ ರಾಮಣ್ಣ. ಇವತ್ತೆ ಸೋಬನ ಮಾಡಿಕೊಡಿ ಅನ್ನೊ ಮಾತ ಹೆಣ್ಣಿನ ಕಡಿಯೋರಿಗೆ ತಲುಪಿಸಿದ್ದ. ಹೆಣ್ಣಿನ ತಂದೆ ಪುಟ್ಟಲಿಂಗಯ್ಯನಿಗೆ ಗಾಬರಿಯಾಗಿತ್ತು. ಇದವುರು ನ್ಯಡಿಸಿಕೊಡಕ್ಕಾಗದ ಮಾತಾಗಿತ್ತು. ಯಾಕಂದ್ರೆ ನಾನಾಗ್ಲೆ ಹೇಳಿದಂಗೆ, ಮದುವೆಯಾದ ಯರಡು ಮೂರು ತಿಂಗಳಿಗೆ ಸೋಬನ ಮಾಡಿಕೊಡತಿದ್ದ ಕಾಲ ಅದು. ಯಳೆ ಹುಡುಗಿರು ಊಟ ಉಣ್ಣಬೇಕು, ಬಲ್ತಗಬೇಕು ಅಂತ ನಂಬಿಕಂಡಿದ್ದ ಕಾಲದಲ್ಲಿ ರಾಮಣ್ಣ ಇವತ್ತೇ ಸೋಬನ ಮಾಡಿಕೊಡಿ ಅಂದಿದ್ದ. ಅವುನು ಹಳ್ಳಿಲಿ ವಲ ಉಳೊ ಒರಟುಡುಗಲ್ಲ. ಮೈಸೂರಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ ಡಾಕ್ಟರಾಗಿ ಒದ್ತಾಯಿರೋರು. ಇಂಥೊನಿಗೆ ವಾಪಸ್ಸು ಉತ್ತರ ಹೇಳಕ್ಕಾಗದ ಪುಟ್ಟಲಿಂಗೇಗೌಡ್ರು ಯಲ್ಲೇಗೌಡ್ರತ್ರಕ್ಕೋಗಿ ಗಂಡಿಗೆ ಸಮಾಧಾನ ಮಾಡಕ್ಕೇಳಿದ್ರು. ಇಂತ ವಿಷಯನ ಯಲ್ಲೇಗೌಡ್ರು ರಾಮಣ್ಣನಿಗೇಳಕ್ಕೂ ಅಂಜಿಕಂಡ್ರು. ಕಡಿಗೆ ರಾಮಣ್ಣ ತುಂಬ ಗೌರವ ಕೊಡತಿದ್ದ ಹಲಗೂರು ಪುಟ್ಟಸ್ವಾಮಿಗೌಡ್ರಿಗೇಳಿ “ಅವುರ ಸಂಪ್ರದಾಯದಲ್ಲಿ ಮದುವೆ ದಿನವೇ ಸೋಬನ ಮಾಡಿಕೊಡದಿಲ್ಲವಂತೆ, ಅದಕೆ ಆದ ಒಂದು ದಿನ ಶಾಸ್ತ್ರ ಇಟ್ಟಗತ್ತರಂತೆ. ಅಂತ ಹೇಳಪ್ಪ” ಅಂದು ಕಳಿಸಿದ್ರು.

ಪುಡಸಾಮಿಗೌಡ್ರು ರಾಮಣ್ಣತ್ರಕೋಗಿ ಪಿಸುಮಾತಲ್ಲಿ “ರಾಮಣ್ಣ ನಿಮ್ಮಪ್ಪ ಗೌರಿಹಬ್ಬಕೆ ಸೋಬನ ಮಾಡಿಕಳನ ಅಂತ ಹೇಳ್ತರೆ. ಅಂಗೆ ಆಗ್ಲಿ ತಗೂ” ಅಂದ್ರು. ಪುಟ್ಟಸ್ವಾಮಿಗೌಡನ ಮಾತಿಗೆ ಎದುರುತ್ತರ ಕೊಡದಂಗಿದ್ದ ರಾಮಣ್ಣ, ಅ ಕಡೆ ತಿರುಗಿ ನೋಡದಂಗೆ “ನನ್ನ ಕಷ್ಟ ನಮ್ಮಪನಿಗೇನು ಗೊತ್ತಾದದೂ” ಅಂದ. ಇದು ತಮಾಸಿಯಾಗಿ ಕಂಡ್ರೂ ರಾಮಣ್ಣನಂತ ತರುಣರ ಲೈಂಗಿಕ ಸಮಸ್ಯೆಯ ಒತ್ತಡದ ಅರಿವಾಯ್ತು. ಇದು ಪುಟ್ಟಸ್ವಾಮಿಗೌಡನಿಗೂ ಗೊತ್ತಾಗಿ, ಆತ ಮುಂದುವರದು ಮಾತಾಡಕ್ಕೆ ಹೆದರಿದ. ಕಡಿಗೆ “ನೋಡಿ ಇದು ಅವುರವುರ ಸ್ವಂತ ವಿಚಾರ. ಇದನ್ನ ತೀರ್ಮಾನ ಮಾಡಿಕಳರು ಹುಡುಗ ಹುಡುಗಿ ಕಡಿಯೋರು. ಇದರೊಳಗೆ ನಮಿಗ್ಯಾವ ಕ್ಯಲಸನೂ ಇಲ್ಲ ಅಂದ. ಪುಟ್ಟಸ್ವಾಮಿಗೌಡನ ಮಾತು ನಮಗೆಲ್ಲಾ ಸಮಂಜಸವಾಗಿ ಕಂಡಿದ್ರಿಂದ ಹ್ವರಡಕ್ಕೆ ತಯಾರಾದೊ. ರಾಮಣ್ಣ ಹಟ ಸಾಧಿಸಿ ಗೆದ್ದ ಖುಷಿಲಿ ಎಲ್ಲರ ಕೈ ಕುಲುಕುತ್ತ “ಇರಿ ಹೊಗುವುರಿ” ಅಂದ.

“ಇದ್ಯಾಕಿಂಗೆ ಮಾಡಿದೆ ನೀನೂ” ಅಂದೆ.

“ನಾನೇನು ಮಾಡಿದುನ್ಲ” ಅಂದ.

“ಮದುವೆ ದಿನವೇ ಸೋಬನ ಮಾಡಿಕೊಡಿ ಅಂದ್ಯಲ್ಲ ಸರಿನೆ?”

“ಪೂಜೆ ಮಾಡಕ್ಲ ಮದುವಾಗದು. ದೇವಾನು ದೇವತೆಗಳ್ಯಲ್ಲ ಮದುವೆ ಒಂದಿನ ಸೋಬನ ಒಂದಿನ ಅಂತ ಕಾಯ್ತಿದ್ರೇನ್ಲ” ಅಂದ.

“ನೀನ್ಯಾವು ದೇವತೆನಪ್ಪ” ಅಂದೆ.

“ಸುಮ್ಮನೆ ನಡಿಲ ಕಂಡಿವ್ನಿ” ಅಂದ. ಎಲ್ಲರೂ ನಗಾಡಿದ್ರು. ನನ್ನ ಜೀವನದಲ್ಲಿ ರಾಮಣ್ಣನ ಮದುವೆ ಒಳ್ಳೆ ನೆನೆಪಾಗ್ಯದೆ.

ರಾಮಣ್ಣ ಮದುವೆ ಮುಗಿಸಿಗಂಡು ಮೈಸೂರಿಗೆ ಬಂದ. ಆಗಿನ ಮದುವೆ ಗಂಡುಗಳು ವಸಿ ದಿನ ಕಾಲಿನ ನಡು ಬೆರಳಿಗೆ ಬೆಳ್ಳಿ ರಿಂಗ್ ಹಾಕಿರೋರು. ಕತ್ತಲಿ ಚೈನು ಕಿವಿಲಿ ಅತ್ತಕಡಕುಯಲ್ಲಿ ಇರವು. ನಮ್ಮ ರಾಮಣ್ಣನಿಗೆ ಅವೇನು ಇರಲಿಲ್ಲ. ಮದುವೆಯಾದ ಮ್ಯಾಲೆ ರಾಮಣ್ಣನಲ್ಲಿ ಒಂದು ಉತ್ಸಾಹದ ಚಟುವಟಿಕೆ ಗಮನಿಸಿದೆ. ತುಂಬ ಖುಷಿಯಾಗಿ ಊರಿಗೋಗನು. ಹಾಸ್ಟಲಲ್ಲೇ ಇರತಿರಲಿಲ್ಲ. ಒಂದು ಸತಿ ಊರಿಂದ ಬಂದಾಗ ಯಂತದೊ ಟಾನಿಕ್ ಬಾಟ್ಳಿ ತಂದಿದ್ದ.

“ಇದೇನು ಬಾಟ್ಲಿನೊ” ಅಂತ ಕೇಳಿದೆ.

“ಪಾಸ್ ಪೊರ್ಮಿನ್ ಕಲ” ಅಂದ.

“ಅದ್ಯಂತದೊ” ಅಂದೆ.

“ಸೇಬಿನ ರಸದಲ್ಲಿ ಮಾಡಿರೊ ಟಾನಿಕ್ಕು ಕಲ” ಅಂದ.

“ಅದ್ಯಾಕ್ ತಗತಿಯೋ ಮೆಡಿಕಲಿ ಅಪ್ರುವಲ್ಲಾಗಿಲ್ಲ” ಅಂದೆ.

“ತಾಕತ್ತಿಗೆ ಕಲಾ” ಅಂದ.

“ಯಾವ ಡಾಕ್ಟರೇಳೀದ್ರು ನಿಂಗೇ, ಒಹೊಹೊ. ಪತ್ರಿಕೆಲಿ ಅಡವಿಟೀಜ್ ಬಂದಿತ್ತಲ್ಲಾ ಅದನೋಡಿ ತಗಂಡೆ ಅನ್ನು. ಅಂತವುನ್ಯಲ್ಲ ಕುಡಿಬ್ಯಾಡ. ಅದರ ಬದ್ಲು ಬಾಡು ಒಳ್ಳೆ ಹಣ್ಣು ಹಂಪಲು ತಿನ್ನ” ಅಂದೆ.

“ನಿನಿಗೇನು ಗೊತ್ತು ಸುಮ್ಮನೆ ಕೂತಗಲ. ಇನ್ನ ಡಾಕ್ಟರೋತ್ತ ಅವುನೆ, ಆಗಲೆ ಡಾಕ್ಟರಾಡಿದಂಗಾಡ್ತನೆ. ಸುಮ್ಮಸುಮ್ಮನೆ ಅಡವಿಟೇಜ್ ಕೊಟ್ಟಾರ್ಲ. ಸೇಬಿನ ರಸಕಲ ಅದು. ಯಾವತ್ತಾರ ಕುಡದಿದ್ದಿಯಾ. ನಿನಿಗ್ಯಾಕ್ ಬೇಕು ಅವ್ಯಲ್ಲ ಸುಮ್‌ಕಿರು” ಅಂದ. ನಾನು ನಗಾಡಿಕಂಡು ಸುಮ್ಮನಾದೆ. ಹಾಸ್ಟಲಲ್ಲಿ ಅವುನ್ಯಾವತ್ತೂ ಲೀಡ್ರ ತರ ಇರಲಿಲ್ಲ. ಒಂಥರ ಯಲೆಮರೆ ಕಾಯಂಗಿರತಿದ್ದ. ಜನಗಳ ಜೊತೆ ಇರದು ಬುಟ್ರೆ ಮಂಚೂಣಿಲಿ ಕಾಣಿಸಿಗಳ್ತಿರಲಿಲ್ಲ. ಇದು ಬರಹಗಾರನಾದವನ ನಡವಳಿಕೆ ಇರಬಹುದು. ಅವುನ ಪ್ರಿಯವಾದ ಕೆಲಸದಲ್ಲಿ ವಾಕ್ ಮಾಡದು ಒಂದು. ಒಂದಿನ ವಾಕ್ ಬತ್ತಿದೋನು ಇದ್ದಕಿದ್ದಗೆ ಕಾಣದಂಗಾದ. ಇವುನ್ಯತ್ತಗೋದ ಅಂತ ಹುಡುಕದ್ರಲ್ಲಿ ಪ್ರತ್ಯಕ್ಷಾದ. ಆಗ ನಮ್ಮ ಜೊತೆ ಪುಟ್ಟಸ್ವಾಮಿಗೌಡನೂ ಇದ್ದ. “ಇದೆಲ್ಲಿಗೋಗಿದ್ದೊ” ಅಂದೆ. ನನ್ನ ಫ್ರೆಂಡಿಗೆ ಉಷಾರಿರಲಿಲ್ಲ ಕಲ. ಒಂದಿಷ್ಟು ದುಡ್ಡುಕೊಟ್ಟು ಬಂದೆ” ಅಂದ.

“ಅದ್ನ ಹೇಳಿಬುಟ್ಟೆ ಹೋಗಬವುದಿತ್ತಪ್ಪ” ಅಂದೆ. “ಯಲ್ಲಾನು ಹೇಳಿಬುಟ್ಟಿ ಮಾಡಕ್ಕಾದತ್ಲೆ” ಅಂದ. ಕಷ್ಟದಲ್ಲಿದ್ದವುರೆ ಸಹಾಯ ಮಾಡದು ಅವನ ಜನ್ಮದಲ್ಲೇ ಬಂದ ಗುಣ ಆಗಿತ್ತು. ಅವುನಿನ್ನು ಸಂಬಳ ತಗಿತಿರಲಿಲ್ಲ, ಆದ್ರು ಓದೊ ದುಡ್ಡಲ್ಲೇ ಸಹಾಯ ಮಾಡತಿದ್ದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ: ಭಾಗ-5; “ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ ಅದ್ಕೂ ಕಲ್ಲಾಕಿದೆ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...