HomeUncategorizedಮನಿ ಲಾಂಡರಿಂಗ್ ತೀರ್ಪಿನ ಎರಡು 'ಸಮಸ್ಯಾತ್ಮಕ' ಅಂಶಗಳನ್ನು ಪರಿಶೀಲಿಸಲು ಒಪ್ಪಿದ ಸುಪ್ರೀಂ

ಮನಿ ಲಾಂಡರಿಂಗ್ ತೀರ್ಪಿನ ಎರಡು ‘ಸಮಸ್ಯಾತ್ಮಕ’ ಅಂಶಗಳನ್ನು ಪರಿಶೀಲಿಸಲು ಒಪ್ಪಿದ ಸುಪ್ರೀಂ

- Advertisement -
- Advertisement -

27 ಜುಲೈ 2022ರಂದು ವಿಜಯ್ ಮದನ್‌ಲಾಲ್ ಚೌಧರಿ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (ಪಿಎಂಎಲ್‌ಎ)ಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ. ಮನಿ ಲಾಂಡರಿಂಗ್ ತೀರ್ಪಿನಲ್ಲಿ ಕೇಂದ್ರಿ ತನಿಖಾ ಸಂಸ್ಥಗಳಿಗೆ (ಇಡಿ) ನೀಡಿದ ಪರಮಾಧಿಕಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಸಲ್ಲಿಸಿರುವ ಮೇಲ್ಮನವಿಯನ್ನು ಆಲಿಸಿದ ಸುಪ್ರೀಂ ಇಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಕಳೆದ ತಿಂಗಳಿನ ತೀರ್ಪಿನ ಎರಡು ಅಂಶಗಳನ್ನು ಪರಿಶೀಲಿಸಲು ಒಪ್ಪಿಗೆ ನೀಡಿದೆ.

ಕಳೆದ ತಿಂಗಳ ತೀರ್ಪಿನಂತೆ ಜಾರಿ ನಿರ್ದೇಶನಾಲಯವು ಪ್ರಕರಣದ ಮಾಹಿತಿ ಪ್ರತಿಯನ್ನು (ECIR) ಆರೋಪಿಗೆ ನೀಡುವ ಅಗತ್ಯವಿರಲಿಲ್ಲ. ಜೊತೆಗೆ ಅಪರಾಧವನ್ನು ಸಾಬೀತುಪಡಿಸುವುದು ಇಡಿಯ ಕರ್ತವ್ಯವಾಗಿರದೆ ಆರೋಪಿಯು ತಾನು ನಿರಪರಾಧಿ ಎಂದು ಸಾಬೀತುಪಡಿಸುವ ಜವಾಬ್ದಾರಿ ಹೊಂದಿದ್ದರು. ಈ ಎರಡು ಅಂಶಗಳನ್ನು ಮರು ಪರೀಶಿಲನೆ ನಡೆಸುವುದಾಗಿ ಸುಪ್ರೀಂ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು “ಇವು ಪ್ರಾಥಮಿಕವಾಗಿ ಪರಿಗಣಿಸಬೇಕಾದ ಎರಡು ಸಮಸ್ಯೆಗಳಾಗಿವೆ” ಎಂದು ಹೇಳಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಜರಾಗಿ, ಇಡೀ ಪಿಎಂಎಲ್‌ಎ ತೀರ್ಪನ್ನು ಮರುಪರಿಶೀಲನೆ ನಡೆಸಬೇಕು ಎಂದು ವಾದಿಸಿದರು. ಆದರೆ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಡೀ ತೀರ್ಪಿನ ಬದಲಾಗಿ ಆ ಎರಡು ಅಂಶಗಳ ಕುರಿತಾಗಿ ಮಾತ್ರ ಮರುಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ಆರೋಪಿಯನ್ನು ಬಂಧಿಸುವ, ಹುಡುಕಾಡುವ, ವಶಕ್ಕೆ ಪಡೆಯುವ, ಆರೋಪಿಯ ಆಸ್ತಿಯನ್ನು ಪ್ರಕರಣಕ್ಕೆ ಜೋಡಿಸುವ ಮತ್ತು ಕಾನೂನಾತ್ಮಕ ಶಿಕ್ಷೆ ವಿಧಿಸುವಂತಹ ಎಲ್ಲ ಅಧಿಕಾರಗಳನ್ನೂ ಮರುಪರಿಶೀಲನೆ ನಡೆಸುವುದಿಲ್ಲ ಎಂದು ಸುಪ್ರೀಂ ಹೇಳಿದೆ.

ಬಂಧನಕ್ಕೆ ಆಧಾರ ಅಥವಾ ಸಾಕ್ಷ್ಯವನ್ನು ತಿಳಿಸದೆ ಆರೋಪಿಗಳನ್ನು ಬಂಧಿಸುವ ಅನಿಯಂತ್ರಿತ ಅಧಿಕಾರ ಅಸಂವಿಧಾನಿಕ ಎಂದು ಅರ್ಜಿದಾರರು ವಾದಿಸಿದ್ದರು. ಪ್ರತಿ ಪ್ರಕರಣದಲ್ಲೂ ಇಸಿಐಆರ್ (ಎನ್‌ಫೋರ್ಸ್‌ಮೆಂಟ್ ಕೇಸ್ ಇನ್ಫರ್‌ಮೆ‍ಷನ್ ರಿಪೋರ್ಟ್) ಪ್ರತಿಯನ್ನು ಪೂರೈಸುವುದು ಕಡ್ಡಾಯವಾಗಿಲ್ಲ. ಅದು ಸಹ ಎಫ್‌ಐಆರ್‌ನಂತೆಯೇ ಇದೆ ಮತ್ತು ಆರೋಪಿಯು ಪ್ರತಿಯನ್ನು ಪಡೆಯಲು ಅರ್ಹರು ಎಂದು ಅರ್ಜಿದಾರರು ವಾದಿಸಿದ್ದರು.

ಇದರ ಆಧಾರದಲ್ಲಿ ಎರಡು ಅಂಶಗಳನ್ನು ಮರುಪರಿಶೀಲಿಸುವುದಾಗಿ ಹೇಳಿಕ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಇದನ್ನೂ ಓದಿ: ಸಂವಿಧಾನ ಮತ್ತು ಮನಿ ಲಾಂಡರಿಂಗ್ ತಡೆ ತಿದ್ದುಪಡಿ ಕಾಯ್ದೆ ತೀರ್ಪಿನ ವಿರೋಧಭಾಸಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...