Homeಮುಖಪುಟ‘40 ಶಾಸಕರ ಬೇಟೆಗೆ ಪ್ರಯತ್ನ’: ಆಪರೇಷನ್‌ ಕಮಲ ವಿಫಲ ಎಂದ ಎಎಪಿ

‘40 ಶಾಸಕರ ಬೇಟೆಗೆ ಪ್ರಯತ್ನ’: ಆಪರೇಷನ್‌ ಕಮಲ ವಿಫಲ ಎಂದ ಎಎಪಿ

- Advertisement -
- Advertisement -

ದೆಹಲಿಯ ಎಎಪಿ ಸರ್ಕಾರವನ್ನು ಉರುಳಿಸಲು ಬಿಜೆಪಿಯು ತಮ್ಮ ಶಾಸಕರಿಗೆ 20 ಕೋಟಿ ರೂ. ಆಫರ್‌ ನೀಡಿದೆ ಎಂದು ಪಕ್ಷವು ಆರೋಪಿಸಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ಶಾಸಕರ ‘ತುರ್ತು’ ಸಭೆ ನಡೆಸಿದ್ದಾರೆ.

ದೆಹಲಿ ಎಎಪಿಯ 62 ಶಾಸಕರಲ್ಲಿ 53 ಮಂದಿ ಸದಸ್ಯರು ಮುಖ್ಯಮಂತ್ರಿ ಕೇಜ್ರಿವಾಲ್ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ. ಉಳಿದ ಶಾಸಕರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸ್ಪೀಕರ್ ಮೂಲಕ ಫೋನ್‌ನಲ್ಲಿ ತಮ್ಮ ಬೆಂಬಲವನ್ನು ವಾಗ್ದಾನ ಮಾಡಿದ್ದಾರೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಕ್ಷದ ಕನಿಷ್ಠ 12 ಶಾಸಕರು ತಮಗೆ ಬಿಜೆಪಿಯಿಂದ ಆಫರ್‌ ಬಂದಿದೆ ಎಂದು ಹೇಳಿದ್ದಾರೆ. ಆದರೆ ಅವರೆಲ್ಲರೂ ತಮ್ಮ ಕೊನೆಯ ಉಸಿರು ಇರುವವರೆಗೂ ಕೇಜ್ರಿವಾಲ್‌ಗೆ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ಸೌರಭ್‌ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಸರ್ಕಾರ ಉರುಳಿಸಲು ಬಿಜೆಪಿ ಯತ್ನ: ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಶಾಸಕರ ಸಭೆ

‘ಬಿಜೆಪಿಯ ಆಪರೇಷನ್ ಕಮಲದ ವೈಫಲ್ಯಕ್ಕಾಗಿ ಪ್ರಾರ್ಥಿಸಲು’ ಸಭೆಯ ನಂತರ ಕೇಜ್ರಿವಾಲ್ ಮತ್ತು ಅವರ ಶಾಸಕರು ಮಹಾತ್ಮಾ ಗಾಂಧಿಯವರ ಸ್ಮಾರಕ ರಾಜ್‌ಘಾಟ್‌ಗೆ ದೊಡ್ಡ ಗುಂಪಿನೊಂದಿಗೆ ತೆರಳಿದ್ದಾರೆ. “ಅವರು 40 ಶಾಸಕರಿಗೆ ಲಂಚ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ತಿಳಿಯಿತು. ಆದರೆ ಒಬ್ಬ ಶಾಸಕ ಕೂಡಾ ಅವರಿಗೆ ಮಣಿಯದಿರುವುದು ನನಗೆ ಸಂತೋಷವಾಗಿದೆ” ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೆಳಿಗ್ಗೆ ಎಎಪಿ ಸಭೆಗೆ ಆಗಮಿಸಿದವರನ್ನು ಟ್ರ್ಯಾಕ್ ಮಾಡುವಾಗ ಮತ್ತು ಸಂಪರ್ಕಕ್ಕೆ ಸಿಗದ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಗೊಂದಲ ಉಂಟಾಗಿದ್ದವು. “ಎಲ್ಲಾ ಶಾಸಕರನ್ನು ಸಂಪರ್ಕಿಸಲಾಗುತ್ತಿದೆ. ಸಭೆಯ ಬಗ್ಗೆ ನಿನ್ನೆಯೆ ಸಂದೇಶ ನೀಡಲಾಗಿದೆ. ಸಂಪರ್ಕಕ್ಕೆ ಸಿಗದ ಶಾಸಕರನ್ನು ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ. ಬಿಜೆಪಿ 40 ಶಾಸಕರನ್ನು ಒಡೆಯಲು ತಯಾರಿ ನಡೆಸುತ್ತಿದೆ” ಎಂದು ಶಾಸಕ ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದೆ. ಬಿಜೆಪಿಗೆ ಎಂಟು ಸ್ಥಾನಗಳಿದ್ದು ಬಹುಮತಕ್ಕೆ ಇನ್ನೂ 28ರ ಅಗತ್ಯವಿದೆ. ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಕ್ರಮ ಎದುರಿಸದೆ ಇರಲು ಎಎಪಿಯಿಂದ ಸುಮಾರು 40 ಶಾಸಕರು ಪಕ್ಷಾಂತರವಾಗಬೇಕಾಗಿದೆ.

ಇದನ್ನೂ ಓದಿ: `ಬಿಜೆಪಿ ಸೇರುವುದಾದರೆ CBI & ED ಪ್ರಕರಣ ಮುಕ್ತಾಯ’: ಬಿಜೆಪಿಯಿಂದ ಆಫರ್‌ ಬಂದಿದೆ ಎಂದ ದೆಹಲಿ ಉಪಮುಖ್ಯಮಂತ್ರಿ

ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಾದರಿಯಲ್ಲಿ ಬಿಜೆಪಿ ತನ್ನ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲದ ಸಂಚು ರೂಪಿಸುತ್ತಿದೆ ಎಂದು ಎಎಪಿ ಆರೋಪಿಸಿದೆ. ಬಿಜೆಪಿಯು ತಮ್ಮ ಶಾಸಕರಿಗೆ 20 ಕೋಟಿ ರೂ. ಆಫರ್‌ ನೀಡಿದ್ದು, ಅವರ ಜೊತೆಗೆ ಇನ್ನೂ ಹೆಚ್ಚಿನ ಜನರನ್ನು ತಂದರೆ 25 ಕೋಟಿ ರೂ. ನೀಡುತ್ತೇವೆ ಎಂದು ಹೇಳಿದೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ದೆಹಲಿ ಮದ್ಯ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ದಾಳಿ ನಡೆಸಿದ ಎರಡು ದಿನಗಳ ನಂತರ ಈ ಆರೋಪಗಳನ್ನು ಮಾಡಲಾಗಿದೆ.

ಪಕ್ಷ ಬದಲಾಯಿಸಿದರೆ ತನ್ನ ವಿರುದ್ಧದ ಪ್ರಕರಣಗಳನ್ನು ಕೈಬಿಡುವ ಮತ್ತು ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಸ್ತಾಪದೊಂದಿಗೆ ಬಿಜೆಪಿ ತಮ್ಮನ್ನು ಸಂಪರ್ಕಿಸಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ. ‘‘ಮನೀಷ್ ಸಿಸೋಡಿಯಾ ಅವರಂತಹ ಸಹವರ್ತಿಯನ್ನು ಪಡೆಯಲು ಅದೃಷ್ಟ ಮಾಡಿದ್ದೇನೆ. ಅವರು ಮುಖ್ಯಮಂತ್ರಿಯಾಗುವ ಪ್ರಸ್ತಾಪವನ್ನು ತಿರಸ್ಕರಿಸಿದರು” ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ ರಾಜಕೀಯ: ನಿತೀಶ್ ಹೊಸ ಪಟ್ಟು; ದೆಹಲಿ ರಾಜಕೀಯದಲ್ಲಿ ಬೀಸುವುದೇ ಹೊಸ ಗಾಳಿ?

ಸಿಸೋಡಿಯಾ ಅವರ ವಿರುದ್ಧ 14 ಗಂಟೆಗಳ ದಾಳಿ ನಡದರೂ ಸಿಬಿಐಗೆ ಏನೂ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ. 40 ಶಾಸಕರನ್ನು ಖರೀದಿಸಲು ಬಿಜೆಪಿಗೆ 800 ಕೋಟಿ ಎಲ್ಲಿಂದ ಬಂತು ಎಂದು ಎಎಪಿ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಕಳಂಕಿತ CBI,ED ಮತ್ತು ಇತರೆ ಬಿಜೆಪಿ ಕೃಪಾಪೋಷಿತ ಗುಲಾಮ ಸರ್ಕಾರಿ ಸಂಸ್ಥೆಗಳಿಗೆ ಇಲ್ಲಿ ಕರ್ನಾಟಕದಲ್ಲಿ 2019ರಲ್ಲಿ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಗುಲಾಮ ಪ್ರತಿನಿಧಿಗಳನ್ನ ಜಾನುವಾರುಗಳಿಗಿಂತ ಕೀಳಾಗಿ ಖರೀದಿ ಮಾಡಿತಲ್ಲಾ ಅದರ ತನಿಖಾ ವ್ಯಾಪ್ತಿಯು ಈ ಗುಲಾಮ CBI ಮತ್ತು ED ಸಂಸ್ಥೆಗಳಿಗೆ ಬರೋದಿಲ್ವಾ? ಈ ಸಂಸ್ಥೆಗಳಲ್ಲಿ ಕೆಲಸ ಮಾಡೋ ಗುಲಾಮರೇ ಒಂದು ವಿಷಯ ಮನದಟ್ಟಾಗಿರಲಿ ನೀವು ತಿನ್ನುತ್ತಿರೋ ಅನ್ನ ಪ್ರಜೆಗಳ ತೆರಿಗೆ ಹಣದಿಂದ ಅ ಕಾರಣಕ್ಕಾಗಿಯಾದರು ಪ್ರಜೆಗಳಿಗೆ ಮತ್ತು ಸಂವಿಧಾನಕ್ಕೆ ಬದ್ದರಾಗಿರಿ,ಯಾವುದೋ ರಾಜಕೀಯ ಪಕ್ಷಕ್ಕಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...