Homeಮುಖಪುಟಒಬ್ಬನೇ ದೇವರೆಂದು ಘೋಷಿಸುವಂತೆ ಅರ್ಜಿ ಸಲ್ಲಿಸಿದವನಿಗೆ ಸುಪ್ರೀಂ ಕೋರ್ಟ್ ದಂಡ

ಒಬ್ಬನೇ ದೇವರೆಂದು ಘೋಷಿಸುವಂತೆ ಅರ್ಜಿ ಸಲ್ಲಿಸಿದವನಿಗೆ ಸುಪ್ರೀಂ ಕೋರ್ಟ್ ದಂಡ

- Advertisement -
- Advertisement -

ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಪ್ರತಿಯೊಬ್ಬರೂ ತಮ್ಮದೇ ಆದ ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಎಲ್ಲಾ ನಾಗರಿಕರು ಹಿಂದೂ ಧರ್ಮದ ನಿರ್ದಿಷ್ಟ ಪಂಗಡವನ್ನು (ಪರಮಾತ್ಮನನ್ನು) ಅನುಸರಿಸಬೇಕೆಂದು ಸಲ್ಲಿಸಿದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಭವಿಷ್ಯದಲ್ಲಿ ಜನರು ಇಂತಹ ಅರ್ಜಿ ಸಲ್ಲಿಸುವ ಮುನ್ನ ಯೋಚಿಸಬೇಕು ಎಂಬ ಮುನ್ನೆಚ್ಚರಿಕೆಯ ಭಾಗವಾಗಿ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಮನವಿಯು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿದೆ ಎಂದು ಸೂಚಿಸಿದ ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಸಿಟಿ ರವಿಕುಮಾರ್ ಅವರ ಪೀಠವು ಅರ್ಜಿದಾರ ಉಪೇಂದ್ರ ನಾಥ್ ದಲೈ ಅವರ ಅರ್ಜಿಯನ್ನು ವಜಾಗೊಳಿಸಿತು. “ನೀವು ಬಯಸಿದರೆ ನೀವು ಅವರನ್ನು ಪರಮಾತ್ಮ ಎಂದು ಪರಿಗಣಿಸಬಹುದು. ಅದನ್ನು ಇತರರ ಮೇಲೆ ಏಕೆ ಹೇರಲು ಬಯಸುತ್ತೀರಿ?” ಎಂದು ಕೋರ್ಟ್ ಪ್ರಶ್ನಿಸಿದೆ.

“ಭಾರತದಲ್ಲಿ, ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಅನುಸರಿಸಲು ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ. ಪ್ರತಿಯೊಬ್ಬರೂ ಒಂದೇ ಧರ್ಮವನ್ನು ಅನುಸರಿಸಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಅರ್ಜಿಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ. ಈ ಅರ್ಜಿಯು ₹ 1 ಲಕ್ಷದ ಅನುಕರಣೀಯ ವೆಚ್ಚಗಳೊಂದಿಗೆ, ಇಂದಿನಿಂದ ನಾಲ್ಕು ವಾರಗಳಲ್ಲಿ ಈ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಠೇವಣಿ ಮಾಡಲು ಅರ್ಹವಾಗಿದೆ ಎಂದು ಕೋರ್ಟ್ ಹೇಳಿದೆ.

ದಂಡ‌ವನ್ನು ವಿಧಿಸಿರುವುದರಿಂದ ಇಂತಹ ಸಾರ್ವಜನಿಕ ಹಿತಾಸಕ್ತಿಗಳನ್ನು ಸಲ್ಲಿಸುವ ಮೊದಲು ಕನಿಷ್ಠ ನಾಲ್ಕು ಬಾರಿ ಯೋಚಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಎಂ.ಆರ್‌.ಷಾ ತಿಳಿಸಿದ್ದಾರೆ.

ಇದನ್ನೂ ಓದಿರಿ: ದಲಿತ ಸಂಘಟನೆಗಳ ಐಕ್ಯತೆ ಕುರಿತು ಎದ್ದಿರುವ ಪ್ರಶ್ನೆಗಳ ಸುತ್ತ…

ಪಿಐಎಲ್ ವಜಾಗೊಳಿಸಿದ ನ್ಯಾಯಮೂರ್ತಿ ಷಾ ಅವರು, “ಆಪ್ ಮನೋ ಕಿ ಏಕ್ ಹೈ ಗುರೂಜಿ ಹೈಂ. ಐಸೇ ಕಭಿ ಹೋತಾ ಹೈ ಭಯ್ಯಾ? ಸಬ್ಕೋ ಪುರಾ ಅಧಿಕಾರ ಹೈಂ ಯೇ ಕಂಟ್ರಿ ಮೇ ಜಿಸ್ಕೋ ಜೋ ಧರಮ್ ಮನ್ನಾ ಹೈ, ಮಾನೆ (ನಿಮ್ಮ ಗುರೂಜಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ನೀವು ಹೇಳುತ್ತಿದ್ದೀರಿ. ಅದು ಹೇಗೆ ಸಾಧ್ಯ? ಭಾರತದಲ್ಲಿ ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಅನುಸರಿಸುವ ಹಕ್ಕಿದೆ)” ಎಂದಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್, ವಿಎಚ್‌ಪಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ನ್ಯಾಷನಲ್‌ ಕ್ರಿಶ್ಚಿಯನ್ ಕೌನ್ಸಿಲ್, ಶ್ರೀ ಪಾಲನ್‌ಪುರಿ ಸ್ಥಾನಕ್ವಾಸಿ ಜೈನ್ ಅಸೋಸಿಯೇಷನ್, ಬೌದ್ಧ ಸೊಸೈಟಿ ಆಫ್ ಇಂಡಿಯಾ, ಪುರಿ ಜಗನ್ನಾಥ ಮಂದಿರ ನಿರ್ವಹಣಾ ಸಮಿತಿ, ಅಖಿಲ ಭಾರತ ಇಸ್ಕಾನ್ ಸಮಿತಿ, ರಾಮಕೃಷ್ಣ ಮಠ, ಗುರುದ್ವಾರ ಬಾಂಗ್ಲಾ ಸಾಹಿಬ್‌ಗಳನ್ನುಈ ಪ್ರಕರಣದಲ್ಲಿ ಎದುರುದಾರರನ್ನಾಗಿ ಅರ್ಜಿದಾರರು ನಿಲ್ಲಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...