Homeಮುಖಪುಟದೆಹಲಿ ಗಲಭೆ ಕೇಸ್‌ನಲ್ಲಿ ಉಮರ್‌ ಖಾಲಿದ್‌ ಆರೋಪ ಮುಕ್ತ: ಯುಎಪಿಎ ಪ್ರಕರಣದಲ್ಲೂ ಸಮಾನ ಆರೋಪ ಗುರುತಿಸಿದ...

ದೆಹಲಿ ಗಲಭೆ ಕೇಸ್‌ನಲ್ಲಿ ಉಮರ್‌ ಖಾಲಿದ್‌ ಆರೋಪ ಮುಕ್ತ: ಯುಎಪಿಎ ಪ್ರಕರಣದಲ್ಲೂ ಸಮಾನ ಆರೋಪ ಗುರುತಿಸಿದ ಕೋರ್ಟ್

- Advertisement -
- Advertisement -

ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಯುನೈಟೆಡ್ ಎಗೇನ್‌ಸ್ಟ್‌ ಹೇಟ್‌‌ ಸಂಸ್ಥಾಪಕ ಖಾಲಿದ್ ಸೈಫಿ ಅವರನ್ನು ಕೈಬಿಡುವಂತೆ ದೆಹಲಿ ನ್ಯಾಯಾಲಯ ಹೇಳಿದೆ. ಈ ಕುರಿತ ವಿವರವಾದ ಆದೇಶದಲ್ಲಿ, “ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಅವರು ಈಗಾಗಲೇ ಇದೇ ರೀತಿಯ ಆರೋಪಗಳನ್ನು ಎದುರಿಸುತ್ತಿದ್ದಾರೆ” ಎಂಬ ಅಂಶವನ್ನು ದೆಹಲಿ ನ್ಯಾಯಾಲಯ ಗುರುತಿಸಿದೆ.

ಫೆಬ್ರವರಿ 24, 2020ರಂದು ಚಾಂದ್ ಬಾಗ್ ಪುಲಿಯಾ ಬಳಿ ದೊಡ್ಡ ಜನಸಮೂಹ ಜಮಾಯಿಸಿ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿತು ಎಂದು ಕಾನ್‌ಸ್ಟೆಬಲ್ ಹೇಳಿದ್ದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ಅನ್ನು ಸೆಕ್ಷನ್ 109, 114, 147, 148, 149, 153-ಎ, 186, 212, 353, 395, 427, 435, 436, 452, 454, 505, 34 ಮತ್ತು 120 ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ.

ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯಿದೆಯ 3 ಮತ್ತು 4, ಶಸ್ತ್ರಾಸ್ತ್ರ ಕಾಯಿದೆಯ ವಿಭಾಗ 25 ಮತ್ತು 27ನೇ ಸೆಕ್ಷನ್‌ಗಳನ್ನೂ ಇಲ್ಲಿ ಸೇರಿಸಲಾಗಿದೆ. ಈ ಎಫ್‌ಐಆರ್‌ ಸಂಬಂಧಿಸಿದಂತೆ ಕೋರ್ಟ್ ಆರೋಪ ಮುಕ್ತವನ್ನಾಗಿ ಮಾಡಲಾಗಿದೆ. ಆದರೆ ಯುಎಪಿಎ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಗದ ಕಾರಣ ಇಬ್ಬರೂ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾರೆ.

ಪ್ರಾಸಿಕ್ಯೂಷನ್ ಪ್ರಕಾರ, “ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹೀರ್ ಹುಸೇನ್ ಅವರ ಕಟ್ಟಡವನ್ನು ಗಲಭೆಕೋರರು ‘ಇಟ್ಟಿಗೆ, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಮತ್ತು ಆಸಿಡ್ ಬಾಂಬ್ ದಾಳಿ ನಡೆಸಲು ಬಳಸಿದ್ದಾರೆ.”

ಇದನ್ನೂ ಓದಿರಿ: ಬಿಜೆಪಿ, ಆರ್‌ಎಸ್‌ಎಸ್‌ನವರು ಶ್ರೀರಾಮನಂತೆ ಜೀವನ ನಡೆಸಲ್ಲ: ರಾಹುಲ್‌

ಕಟ್ಟಡದ ಮೂರನೇ ಮಹಡಿ ಮತ್ತು ಮೇಲ್ಛಾವಣಿಯಲ್ಲಿ ಈ ವಸ್ತು ಬಿದ್ದಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಉಮರ್ ಖಾಲಿದ್ ಅವರು ಜನಸಮೂಹದ ಭಾಗವಾಗಿಲ್ಲದಿದ್ದರೂ, ಉಮರ್‌ ಮತ್ತು ಖಾಲಿದ್ ಸೈಫೀ ಅವರನ್ನು ಪ್ರಕರಣದಲ್ಲಿ ಸೇರಿಸಿ ಕ್ರಿಮಿನಲ್ ಪಿತೂರಿಯ ಆರೋಪ ಹೊರಿಸಲಾಗಿದೆ.

ಉಮರ್ ಖಾಲಿದ್‌ಗೆ ಜಾಮೀನು ನೀಡುವಾಗ, “ಉಮರ್‌‌ ವಿರುದ್ಧದ ನಿಖರವಲ್ಲದ ಆಧಾರದ ಮೇಲೆ ಅವರನ್ನು ಜೈಲಿನಲ್ಲಿ ಉಳಿಯಲು ಅನುಮತಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ತನಿಖೆ ಪೂರ್ಣಗೊಂಡಿದೆ ಮತ್ತು ದೋಷಾರೋಪ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಪುಲಸ್ತ್ಯ ಪ್ರಮಚಲ ಅವರು, ಉಮರ್ ಮತ್ತು ಸೈಫಿ ವಿರುದ್ಧ ಮಾಡಲಾದ ಆರೋಪಗಳು ಈ ಪ್ರಕರಣದಲ್ಲಿ ತನಿಖೆ ನಡೆಸಿದ ಘಟನೆಗಿಂತ ಹೆಚ್ಚಾಗಿ ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿವೆ ಎಂದು ಗಮನಿಸಿದ್ದಾರೆ.

“ದೆಹಲಿಯಲ್ಲಿ ಗಲಭೆಗಳನ್ನು ಪ್ರಚೋದಿಸುವ ದೊಡ್ಡ ಪಿತೂರಿಯು ಈಗಾಗಲೇ ಪರಿಗಣನೆಯ ವಿಷಯವಾಗಿದೆ. ಆದ್ದರಿಂದ ಈ ಇಬ್ಬರು ಆರೋಪಿಗಳು ಪ್ರಸ್ತುತ ಪ್ರಕರಣದಲ್ಲಿ ಬಿಡುಗಡೆಗೆ ಅರ್ಹರಾಗಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಸಹ ಆರೋಪಿಗಳಾದ ತಾರಿಕ್ ಮೊಯಿನ್ ರಿಜ್ವಿ, ಜಾಗರ್ ಖಾನ್ ಮತ್ತು ಮೊಹಮ್ಮದ್ ಇಲಿಯಾಸ್ ಅವರನ್ನೂ ನ್ಯಾಯಾಲಯ ಪ್ರಕರಣದಿಂದ ಬಿಡುಗಡೆ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...