Homeಮುಖಪುಟನೋಟ್‌ ಬ್ಯಾನ್‌ ಮಾಡಿದ ರೀತಿ ಸರಿಯಿಲ್ಲ: ಜಸ್ಟಿಸ್‌ ನಾಗರತ್ನ

ನೋಟ್‌ ಬ್ಯಾನ್‌ ಮಾಡಿದ ರೀತಿ ಸರಿಯಿಲ್ಲ: ಜಸ್ಟಿಸ್‌ ನಾಗರತ್ನ

- Advertisement -
- Advertisement -

ನೋಟ್‌ ಬ್ಯಾನ್‌ ಮಾಡಿದ ರೀತಿ ಸರಿಯಿಲ್ಲ, ಆ ಬಗ್ಗೆ ಕಾನೂನಿಗೆ ಅನುಸಾರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಇರಲಿಲ್ಲ, ಇದನ್ನು ತುರಾತುರಿಯಲ್ಲಿ ಮಾಡಲಾಗಿದೆ. ಆಗಿನ ಹಣಕಾಸು ಸಚಿವರಿಗೂ ಈ ಬಗ್ಗೆ ಗೊತ್ತಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನಾಗರತ್ನ ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಹೈದರಾಬಾದ್‌ನಲ್ಲಿ ನಲ್ಸಾರ್ ಕಾನೂನು ವಿಶ್ವವಿದ್ಯಾಲಯ ಆಯೋಜಿಸಿದ್ದ ನ್ಯಾಯಾಲಯಗಳು ಮತ್ತು ಸಂವಿಧಾನ ಸಮ್ಮೇಳನ 2024ನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಅವರ ನೋಟು ಬ್ಯಾನ್‌  ಬಗ್ಗೆ ಒಂದು ಸಂಜೆ  ಮಾತುಕತೆ ನಡೆಸಿದರು ಮತ್ತು ಮರುದಿನ ನೋಟು ಅಮಾನ್ಯೀಕರಣವು ಸಂಭವಿಸಿತು. ಭಾರತವು ಪೇಪರ್ ಕರೆನ್ಸಿಯಿಂದ ಪ್ಲಾಸ್ಟಿಕ್ ಕರೆನ್ಸಿಗೆ ಹೋಗಲು ಬಯಸಿದರೆ, ಖಂಡಿತವಾಗಿ, ನೋಟು ಬ್ಯಾನ್‌ ಅದಕ್ಕೆ ಕಾರಣವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

2023ರ ವರ್ಷದಲ್ಲಿ ನಾನು ಬರೆದಿರುವ ಕೆಲವು ಸೇರಿದಂತೆ ಕೆಲವು ಪ್ರಮುಖ ತೀರ್ಪುಗಳ ಬಗ್ಗೆ ಮಾತನಾಡುತ್ತೇನೆ, ನಮ್ಮ ಪ್ರಜಾಸತ್ತಾತ್ಮಕ ಸಮಾಜದ ಅಡಿಪಾಯವನ್ನು ಸುಪ್ರೀಂಕೋರ್ಟ್‌ ಹೇಗೆ ಬಲಪಡಿಸಿದೆ ಎಂಬುದರ ಕುರಿತು ನಾನು ಮಾತನಾಡುತ್ತೇನೆ. ಕೋವಿಡ್-19 2020ರ ಹಿನ್ನೆಲೆಯೊಂದಿಗೆ ನಾನು ಪ್ರಾರಂಭಿಸುತ್ತೇನೆ, ಲಾಕ್‌ಡೌನ್‌ನಿಂದಾಗಿ ಸುಪ್ರೀಂಕೋರ್ಟ್‌ ಮತ್ತು ಇತರ ನ್ಯಾಯಾಲಯಗಳಲ್ಲಿನ ವಿಚಾರಣೆಗಳು ಕಡಿಮೆಯಾದವು ಮತ್ತು ವಿಚಾರಣೆಗಳನ್ನು ವಿಡಿಯೋ ಕಾನ್ಪರೆನ್ಸ್‌ ಮೂಲಕ ನಡೆಸಲಾಗುತ್ತಿತ್ತು. ಸಾಂಕ್ರಾಮಿಕ ರೋಗದ ನಂತರ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನ್ಯಾಯಮೂರ್ತಿ ಯುಯು ಲಲಿತ್  ಅವರು ಎಸ್‌ಸಿಯ ಕೆಲಸವನ್ನು ಶ್ರದ್ಧೆಯಿಂದ ಮುನ್ನಡೆಸಿದರು. ಅವರು ದೀರ್ಘಕಾಲ ಬಾಕಿ ಇರುವ ಪ್ರಕರಣಗಳನ್ನು ಸುಧಾರಿಸಲು ಮತ್ತು ವಿಲೇವಾರಿ ಮಾಡಲು ನಿರ್ಧರಿಸಿದರು ಮತ್ತು ಆದ್ದರಿಂದ, ಅವರು 5-ಸಂವಿಧಾನ ಪೀಠಗಳನ್ನು ಸ್ಥಾಪಿಸಿದರು. ತೀರಾ ಇತ್ತೀಚೆಗೆ ಹೈಕೋರ್ಟ್‌ಗೆ ಸೇರಿದ್ದ ನನ್ನನ್ನೂ ಒಳಗೊಂಡಂತೆ ಸುಪ್ರೀಂಕೋರ್ಟ್‌ನ ಎಲ್ಲಾ 30 ನ್ಯಾಯಾಧೀಶರಿಗೆ ಸಂವಿಧಾನ ಪೀಠದಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರ

ಸಾಂವಿಧಾನಿಕ ಪೀಠಗಳು ಕಾನೂನು ವ್ಯಾಪ್ತಿಗೆ ಒಳಪಡುವ 25 ದೀರ್ಘ ಬಾಕಿ ಪ್ರಕರಣಗಳನ್ನು ಕೈಗೆತ್ತಿಕೊಂಡವು. ವಿವೇಕ್ ನಾರಾಯಣ ಶರ್ಮಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ 2023ರ ಪ್ರಕರಣವನ್ನು ಎಲ್ಲರೂ ಓದಲೇಬೇಕು. ಇದು ನೋಟು ಅಮಾನ್ಯೀಕರಣ ಕೇಸ್ ಎಂದು ಜನಪ್ರಿಯವಾಗಿದೆ, ಆ ಪೀಠದ ಭಾಗವಾಗಲು ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ನವೆಂಬರ್ 8, 2016ರಂದು 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ  ಮಾಡಿದಾಗ ಏನಾಯಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕುತೂಹಲಕಾರಿ ಅಂಶವೆಂದರೆ ಆ ಕಾಲದ ಭಾರತೀಯ ಆರ್ಥಿಕತೆಯಲ್ಲಿ 86% ಕರೆನ್ಸಿಯು 500 ಮತ್ತು 1,000 ರೂಪಾಯಿ ನೋಟುಗಳನ್ನು ಒಳಗೊಂಡಿತ್ತು ಎಂದು ಹೇಳಿದ್ದಾರೆ.

86% ರಷ್ಟು ಕರೆನ್ಸಿಯು 500 ಮತ್ತು 1,000 ನೋಟುಗಳಾಗಿದ್ದು, ಆ ದಿನಗಳಲ್ಲಿ ಕೆಲಸಕ್ಕೆ ಹೋದ ಒಬ್ಬ ಕಾರ್ಮಿಕನು ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ದಿನಸಿ ಅಂಗಡಿಗೆ ಹೋಗುವ ಮೊದಲು ತನ್ನ ನೋಟುಗಳನ್ನು ಬದಲಾಯಿಸಿಕೊಳ್ಳಬೇಕಾಗಿತ್ತು ಎಂದು ಊಹಿಸಿಕೊಳ್ಳಿ. 98% ಕರೆನ್ಸಿ ಆರ್‌ಬಿಐಗೆ ಮರಳಿದೆ, ಹಾಗಾದರೆ ನೋಟು ರದ್ದತಿಯ ಗುರಿ ಏನು ಎಂದು ಪ್ರಶ್ನಿಸಿದ್ದಾರೆ.

ಕಪ್ಪುಹಣವನ್ನು ಬಿಳಿಹಣವನ್ನಾಗಿ ಪರಿವರ್ತಿಸಲು ಇದು ಉತ್ತಮ ಮಾರ್ಗ ಎಂದು ನಾನು ಭಾವಿಸಿದ್ದೆ. ಅದರ ನಂತರ ಆದಾಯ ತೆರಿಗೆ ಪ್ರಕ್ರಿಯೆಗಳ ಬಗ್ಗೆ ಏನಾಯಿತು ಎಂದು ನಮಗೆ ಗೊತ್ತಿಲ್ಲ. ಆದ್ದರಿಂದ, ಸಾಮಾನ್ಯ ಮನುಷ್ಯನ ಸಂಕಟವು ನಿಜವಾಗಿಯೂ ನನ್ನನ್ನು ಚಿಂತಗೀಡು ಮಾಡಿತ್ತು, ಅದೇ ಕಾರಣಕ್ಕೆ ‘ವಿವೇಕ್ ನಾರಾಯಣ ಶರ್ಮಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ’ ನಾನು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಬೇಕಾಯಿತು ಎಂದು ಹೇಳಿದ್ದಾರೆ.

ಇದನ್ನು ಓದಿ: ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರುವ 5,000 ಭಾರತೀಯರು: ಸೈಬರ್ ವಂಚನೆಗೆ ಬಲವಂತ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...