ಭಾರತೀಯ
ಸಾಂದರ್ಭಿಕ ಚಿತ್ರ (Daniel Kramer/Reuters)

ಭಾರತೀಯ ಅಮೆರಿಕನ್ನರು ರಾಜಕೀಯ ವಿಷಯದ ಬಗ್ಗೆ ಅಮೆರಿಕದಲ್ಲಿ ಉದಾರವಾದಿ ದೃಷ್ಟಿಕೋನ ಹೊಂದಿದ್ದು, ಅದುವೆ ಭಾರತದ ವಿಷಯಕ್ಕೆ ಬಂದಾಗ ಸಂಪ್ರದಾಯವಾದಿಗಳಾಗಿ ಪರಿವರ್ತನೆ ಹೊಂದುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ಉದಾಹರಣೆಗೆ, “ಹಿಂದೂಗಳು ಹಾಗೂ ಹಿಂದೂಯೇತರರು ’ಬಿಳಿ ಜನಾಂಗೀಯವಾದದ ಪ್ರಾಬಲ್ಯವು’ ಅಮೆರಿಕದಲ್ಲಿ ಅಪಾಯವನ್ನುಂಟುಮಾಡುತ್ತದೆ ಎಂದು ಒಪ್ಪುತ್ತಾರೆ. ಆದರೆ ಭಾರತದಲ್ಲಿ ಹಿಂದೂ ಬಹುಸಂಖ್ಯಾತವಾದದಿಂದ ಉಂಟಾಗುವ ಬೆದರಿಕೆಯ ಬಗ್ಗೆ ಅವರ ದೃಷ್ಟಿಕೋನ ಗಮನಾರ್ಹವಾಗಿ ಭಿನ್ನವಾಗಿದೆ” ಎಂದು ಸಮೀಕ್ಷೆಯು ಹೇಳಿದೆ.

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು 2020 ಸೆಪ್ಟೆಂಬರ್‌ನಲ್ಲಿ ಆನ್‌ಲೈನ್ ಮೂಲಕ ಈ ಸಮೀಕ್ಷೆ ನಡೆಸಿದೆ. ಸಮೀಕ್ಷೆಯು 1,200 ಭಾರತೀಯ ಅಮೆರಿಕನ್ ವಯಸ್ಕ ನಿವಾಸಿಗಳನ್ನು ಒಳಗೊಂಡಿದೆ. ಅಮೆರಿಕದಲ್ಲಿ 42 ಲಕ್ಷ ಭಾರತೀಯ ಅಮೆರಿಕನ್ನರಿದ್ದು, ಇದು ಎರಡನೇ ಅತಿದೊಡ್ಡ ವಲಸೆಗಾರ ಸಮುದಾಯವಾಗಿದೆ. ಇದರಲ್ಲಿ 38% ಜನರು ಇನ್ನೂ ಅಮೆರಿಕದ ಪ್ರಜೆಗಳಲ್ಲ.

ಇದನ್ನೂ ಓದಿ: ಹಂಪನಾ ಅವರ ಪ್ರತಿರೋಧ ಮತ್ತು ವಿಸ್ತಾರವಾದ ವ್ಯಾಪ್ತಿ ಪಡೆಯಬೇಕಿರುವ ಕನ್ನಡದ ಕೆಲಸ

ಅಮೆರಿಕದಲ್ಲಿ ಬಿಳಿಜನಾಂಗೀಯವಾದವು ಅಲ್ಪಸಂಖ್ಯಾತರಿಗೆ ಅಪಾಯಕಾರಿಯಾಗಿದೆ ಎಂದು ಹೇಳಿರುವ 73% ದಷ್ಟು ಜನರಲ್ಲಿ, ಅರ್ಧಕ್ಕಿಂತ ಕಡಿಮೆ ಜನರು ಹಿಂದೂ ಬಹುಸಂಖ್ಯಾತವಾದವು ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಅಪಾಯಕಾರಿಯಾಗಿದೆ ಎಂದು ನಂಬಿದ್ದಾರೆ. ಕೇವಲ 40% ಭಾರತೀಯ ಅಮೆರಿಕನ್‌ ಹಿಂದೂಗಳು, ಹಿಂದೂ ಬಹುಸಂಖ್ಯಾವಾದವು ಅಪಾಕಾರಿ ಎಂದು ನಂಬಿದ್ದಾರೆ. ಆದರೆ 67% ಹಿಂದೂಯೇತರ ಭಾರತೀಯ ಅಮೆರಿಕನ್ನರು ಹಿಂದೂ ಬಹುಸಂಖ್ಯಾತವಾದವು ಅಪಾಯ ಎಂದು ಹೇಳಿದ್ದಾರೆ.

ಭಾರತವು “ಸರಿಯಾದ ಹಾದಿಯಲ್ಲಿದೆ” ಎಂದು 36% ಜನರು ಒಪ್ಪಿಕೊಂಡಿದ್ದಾರೆ. ಆದರೆ 39% ಜನರು ಅದನ್ನು ಒಪ್ಪಿಕೊಂಡಿಲ್ಲ. ಅಮೆರಿಕದಲ್ಲಿ ಹುಟ್ಟಿದ ಭಾರತೀಯ ಅಮೆರಿಕನ್ನರಿಗಿಂತ ಹೆಚ್ಚಾಗಿ, ವಿದೇಶದಲ್ಲಿ ಹುಟ್ಟಿದ ಭಾರತೀಯ ಅಮೆರಿಕನ್ನರು ಭಾರತವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಂಬುತ್ತಾರೆ.

ಇದನ್ನೂ ಓದಿ: ಗೌರಿ ಕಾರ್ನರ್: ಓರ್ವ ಜನಪರ ನ್ಯಾಯಮೂರ್ತಿಯವರನ್ನು ಕುರಿತು

ಜನಸಂಖ್ಯೆಯ ಅತಿದೊಡ್ಡ ಭಾಗವಾದ 35% ಜನರು ತಮ್ಮನ್ನು “ಭಾರತ ಪರ” ಎಂದು ಗುರುತಿಸಿಕೊಂಡಿದ್ದಾರೆ ಆದರೆ ಪ್ರಸ್ತುತ ಸರ್ಕಾರದ ಕೆಲವು ನೀತಿಗಳನ್ನು ಟೀಕಿಸಿದ್ದಾರೆ. ಇನ್ನೂ 23% ಜನರು ಭಾರತದ ಪರವಾಗಿದ್ದರಾದರೂ ಅನೇಕ ರಾಜಕಾರಣವನ್ನು ಟೀಕಿಸಿದ್ದಾರೆ. 17% ಜನರು ಭಾರತ ಮತ್ತು ಪ್ರಸ್ತುತ ಸರ್ಕಾರದ ಬಗ್ಗೆ ಸಕಾರಾತ್ಮಕ ನಿಲುವನ್ನು ಹೊಂದಿದ್ದಾರೆ.

NRC-CAA ಯನ್ನು ಕ್ರಮವಾಗಿ 55% ಮತ್ತು 51% ರಷ್ಟು ಜನರು ಬೆಂಬಲಿಸಿದ್ದಾರೆ. ಆದರೆ, ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸ್ ಬಲವನ್ನು ಬಳಸುವುದನ್ನು ಅವರು ವಿರೋಧಿಸಿದ್ದಾರೆ ಹಾಗೂ ಪತ್ರಕರ್ತರ ವಿರುದ್ಧ ಮತ್ತು ಮೋದಿ ಸರ್ಕಾರವನ್ನು ಟೀಕಿಸುವವರ ವಿರುದ್ದ ಮಾನಹಾನಿ ಮತ್ತು ದೇಶದ್ರೋಹ ಪ್ರಕರಣ ದಾಖಲಿಸುವುದನ್ನು ವಿರೋಧಿಸಿದ್ದಾರೆ.

ಅಮರಿಕದಲ್ಲಿ ಭಾರತೀಯ ಅಮೆರಿಕನ್ನರು ಹೆಚ್ಚು ಉದಾರವಾದಿಗಳಾಗಿದ್ದಾರೆ. ಉದಾಹರಣೆಗೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೆಲವು ಮುಸ್ಲಿಂ ಬಹುಸಂಖ್ಯಾತ ದೇಶಗಳ ಮೇಲೆ ಹೇರಿದ ನಿಷೇಧವನ್ನು 60% ಜನರು ವಿರೋಧಿಸಿದ್ದಾರೆ.

ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ

40% ಜನರು ಭಾರತೀಯ ರಾಜಕೀಯ ಪಕ್ಷದಲ್ಲಿ ಯಾವುದೆ ಪಕ್ಷವನ್ನು ಆಯ್ಕೆ ಮಾಡಲಿಲ್ಲ, ಆದರೆ 33% ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದು, 12% ಜನರು ಕಾಂಗ್ರೆಸ್‌ ಪಕ್ಷವನ್ನು ಮತ್ತು 16% ಇತರ ಪಕ್ಷವನ್ನು ಆಯ್ಕೆ ಮಾಡಿದ್ದಾರೆ.

ಭಾರತ ಎದುರಿಸುತ್ತಿರುವ ದೊಡ್ಡ ಸವಾಲುಗಳ ಬಗ್ಗೆ, ಭ್ರಷ್ಟಾಚಾರವೆ ಅತೀ ದೊಡ್ಡ ಸಮಸ್ಯೆ ಎಂದು 18%  ಜನರು ಹೇಳಿದ್ದಾರೆ. ಆರ್ಥಿಕತೆ ಸಮಸ್ಯೆ 15%, ಧಾರ್ಮಿಕ ಬಹುಸಂಖ್ಯಾತವಾದ ಸಮಸ್ಯೆ 10%, ಆರೋಗ್ಯ ರಕ್ಷಣೆಯ ಸಮಸ್ಯೆ 8%, ಚೀನಾ 7%, ಭಯೋತ್ಪಾದನೆ 7%, ಜಾತಿ ತಾರತಮ್ಯ 6%, ಶಿಕ್ಷಣದ ಸಮಸ್ಯೆ 6%, ಆದಾಯ ಅಸಮಾನತೆ ಸಮಸ್ಯೆ 5%, ಹವಾಮಾನ ಬದಲಾವಣೆಯ ಸಮಸ್ಯೆ 4% ಮತ್ತು ಲಿಂಗಭೇದಭಾವದ ಸಮಸ್ಯೆ ಎಂದು 4% ಜನರು ಹೇಳಿದ್ದಾರೆ.

ಟ್ರಂಪ್‌ ಪಕ್ಷದಲ್ಲಿ ಮೋದಿ ಮತ್ತು ಬಿಜೆಪಿಯ ಬೆಂಬಲಿಗರ ನಡುವಿನ ಸಂಬಂಧವನ್ನು ಸಮೀಕ್ಷೆಯು ಕಂಡುಹಿಡಿದಿದೆ. ಅಮೆರಿಕನ್ ಭಾರತೀಯ ಹಿಂದೂಗಳಲ್ಲಿ 69% ಜನರು ಮೋದಿಯನ್ನು ಬೆಂಬಲಿಸುತ್ತಾರೆ. ಇತರ ಸಮುದಾಯಗಳಲ್ಲಿ 20% ರಿಂದ 33% ಜನರು ಮೋದಿಯನ್ನು ಬೆಂಬಲಿಸುತ್ತಾರೆ. ವೃತ್ತಿಯಲ್ಲಿ ಇಂಜಿನಿಯರ್‌ ಆಗಿರುವ 61% ಜನರು ಮೋದಿಯನ್ನು ಬೆಂಬಲಿಸುತ್ತಾರೆ. ಇಂಜಿನಿಯರ್‌ ಅಲ್ಲದ 48% ಜನರಷ್ಟೇ ಮೋದಿಯನ್ನು ಬೆಂಬಲಿಸುತ್ತಾರೆ.

ಇದನ್ನೂ ಓದಿ: ಬಹುಜನ ಭಾರತ: ಹೆಣ್ಣುಮಕ್ಕಳು ರೈತರಲ್ಲವೇ? ಸುಪ್ರೀಮ್ ಕೋರ್ಟು ತಿಳಿಯಲೊಲ್ಲದೇ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here