Homeಮುಖಪುಟಕೊರೊನಾ ವೈರಸ್ ಹರಡಲು ತಬ್ಲೀಘಿಗಳ ಕೈವಾಡ ಕಾರಣ: ಯುಪಿ ಮುಖ್ಯಮಂತ್ರಿ ಆದಿತ್ಯನಾಥ್

ಕೊರೊನಾ ವೈರಸ್ ಹರಡಲು ತಬ್ಲೀಘಿಗಳ ಕೈವಾಡ ಕಾರಣ: ಯುಪಿ ಮುಖ್ಯಮಂತ್ರಿ ಆದಿತ್ಯನಾಥ್

- Advertisement -
- Advertisement -

ಕೊರೊನಾ ವೈರಸ್ ಹರಡಲು ತಬ್ಲೀಘಿ ಜಮಾಅತ್ ಪಾತ್ರ ಅತ್ಯಂತ ಖಂಡನೀಯ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.

ಶನಿವಾರ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಆದಿತ್ಯನಾಥ್ ತಬ್ಲೀಘಿಗಳನ್ನು ಉದ್ದೇಶಿಸಿ, ವೈರಸ್ ಸೋಂಕಿಗೆ ಒಳಗಾಗುವುದು ಅಪರಾಧವಲ್ಲ, ಆದರೆ ಅದನ್ನು ಮರೆಮಾಡುವುದು ಖಂಡಿತವಾಗಿಯೂ ಒಂದು ಅಪರಾಧ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.

ಆದಿತ್ಯನಾಥ್ “ತಬ್ಲಿಘಿ ಜಮಾಅತ್ ಪಾತ್ರ ಅತ್ಯಂತ ಖಂಡನೀಯ. ರೋಗವನ್ನು ಪಡೆಯುವುದು ಅಪರಾಧವಲ್ಲ. ಆದರೆ ಸಾಂಕ್ರಾಮಿಕ ರೋಗವನ್ನು ಮರೆಮಾಡುವುದು ಖಂಡಿತವಾಗಿಯೂ ಅಪರಾಧವಾಗಿದೆ. ಈ ಅಪರಾಧ ತಬ್ಲಿಘಿ ಜಮಾಅತ್‌ಗೆ ಸಂಬಂಧಿಸಿದವರು ಮಾಡಿದ್ದು” ಎಂದು ಹೇಳಿದ್ದಾರೆ.

“ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಹರಡುವಲ್ಲಿ, ತಬ್ಲೀಘಿ ಜಮಾಅತ್ ಕೈವಾಡವಿದೆ. ಅವರು ರೋಗವನ್ನು ಮರೆಮಾಡಿ ಅದರ ವಾಹಕಗಳಂತೆ ಸಾಗದಿದ್ದರೆ, ಬಹುಶಃ ಕೊರೊನಾ ವೈರಸ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಹರಡುವುದನ್ನು ನಿಯಂತ್ರಿಸಬಹುದಿತ್ತು” ಎಂದು ಅವರು ಹೇಳಿದ್ದಾರೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಮಾರ್ಚ್ ನಲ್ಲಿ ನಡೆದ ತಬ್ಲಿಘಿ ಜಮಾಅತ್ ಸಭೆಯ ನಂತರ ಅವರ ವಿರುದ್ದ ಬಲಪಂಥೀಯ ಸಂಘಟನೆಗಳು, ಮಾಧ್ಯಮಗಳು, ಬಿಜೆಪಿ ಪಕ್ಷದ ನಾಯಕರು ಸೇರಿದಂತೆ ವ್ಯಾಪಕವಾಗಿ ಸುಳ್ಳು ಸುದ್ದಿಯನ್ನು ಹರಡುವ ಅಭಿಯಾನದಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸಿದವು. ಇದರಿಂದಾಗಿ ಕೊರೊನಾ ವೈರಸಿಗೆ ಮುಸ್ಲಿಮರೆ ಕಾರಣ ಎಂದು ದೇಶದಾದ್ಯಂತ ಮುಸ್ಲಿಮರ ಮೇಲೆ ಹಲ್ಲೆಗಳು ನಡೆದಿದ್ದವು.

ಇದರಿಂದಾಗಿ ಭಾರತ ಅಂತರಾಷ್ಟ್ರೀಯವಾಗಿ ಸುದ್ದಿಯಾಗಿತ್ತು. ಮದ್ಯಪ್ರಾಚ್ಯ ದೇಶಗಳಿಂದ ಇದರ ವಿರುದ್ದ ಧ್ವನಿ ಎದ್ದ ನಂತರ ಪ್ರಧಾನಿ ಮೋದಿ ಕೊರೊನಾ ಯಾವುದೆ ಧರ್ಮ ನೋಡಿ ಬರುವುದಿಲ್ಲ ಎಂದು ಹೇಳಿದ್ದರು.


ಇದನ್ನೂ ಓದಿ:  ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ನೀಡಲು ಮುಂದಾದ 200 ತಬ್ಲೀಘಿ ಜಮಾಅತ್ ಸದಸ್ಯರು


ವಿಡಿಯೊ ನೋಡಿ: ಲಾಕ್‌ಡೌನ್‌ ನಂತರದ  ದಿನಗಳು ಹೇಗಿರುತ್ತವೆ ? ತಜ್ಞರು ಏನು ಹೇಳುತ್ತಾರೆ ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...