Homeಮುಖಪುಟಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ನೀಡಲು ಮುಂದಾದ 200 ತಬ್ಲೀಘಿ ಜಮಾಅತ್ ಸದಸ್ಯರು

ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ನೀಡಲು ಮುಂದಾದ 200 ತಬ್ಲೀಘಿ ಜಮಾಅತ್ ಸದಸ್ಯರು

- Advertisement -
- Advertisement -

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ತಬ್ಲೀಘಿ ಜಮಾಅತ್‌ನ 200 ಕ್ಕೂ ಹೆಚ್ಚು ಸದಸ್ಯರು ಸದ್ಯಕ್ಕೆ ತೀವ್ರ ಸೋಂಕಿನಿಂದ ದೆಹಲಿಯ ಆಸ್ಪತ್ರೆಗಳಲ್ಲಿ ದಾಖಲಾದವರಿಗೆ ಸಹಾಯ ಮಾಡಲು ಪ್ಲಾಸ್ಮಾ ದಾನ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.

ಕೊರೊನಾದಿಂದ ಚೇತರಿಸಿಕೊಂಡ ಪ್ರತಿಯೊಬ್ಬರೂ ಧಾರ್ಮಿಕ ದೃಷ್ಟಿಯಿಂದ ಯೋಚಿಸದೆ ಪ್ಲಾಸ್ಮಾ ದಾನ ಮಾಡಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಹಿಂದೆ ಮನವಿ ಮಾಡಿದ್ದರು. ಈಗಾಗಲೇ ಪ್ಲಾಸ್ಮಾ ಥೆರಪಿಯಿಂದ ನಾಲ್ಕು ಜನ ಗುಣಮುಖರಾಗಿದ್ದಾರೆ.

“ಜನರನ್ನು ಮತ್ತೊಮ್ಮೆ ಪರೀಕ್ಷಿಸಲಾಗಿದೆ; ಅವರ ಪ್ಲಾಸ್ಮಾ ಸಂಗ್ರಹವು ಪ್ರಾರಂಭವಾಗಲಿದೆ ”ಎಂದು ದೆಹಲಿಯ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ ಅಂತ್ಯದಲ್ಲಿ ನಿಜಾಮುದ್ದೀನ್ ಮಾರ್ಕಝ್ ನಿಂದ ಸ್ಥಳಾಂತರಿಸಲ್ಪಟ್ಟ 2,300 ಕ್ಕೂ ಹೆಚ್ಚು ಜನರಲ್ಲಿ, 1,080 ಜನರು ಸೋಂಕಿಗೆ ಒಳಗಾಗಿದ್ದು ದೃಢಪಟ್ಟಿತ್ತು; ಅದರಲ್ಲಿ ಹಲವರು ಈಗ ಚೇತರಿಸಿಕೊಂಡಿದ್ದಾರೆ. ದೆಹಲಿ ರಾಜ್ಯವೊಂದರಲ್ಲೇ ಇದುವರೆಗೆ 869 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ “ದೇವರು ವ್ಯಕ್ತಿಗಳ ನಡುವೆ ವ್ಯತ್ಯಾಸ ತೋರಿಲ್ಲ. ಆದರೆ ನಾವೇ ನಂಬಿಕೆಯ ಆಧಾರದ ಮೇಲೆ ಮಾನವರ ನಡುವೆ ವ್ಯತ್ಯಾಸವನ್ನು ತೋರಿಸಲು ಪ್ರಾರಂಭಿಸಿದ್ದೇವೆ. ಒಬ್ಬರ ನಂಬಿಕೆಯ ಹೊರತಾಗಿಯೂ ಯಾರಿಗಾದರೂ ಕೊರೊನಾ ವೈರಸ್ ತಗುಲಬಹುದು… ಹಿಂದೂ ವ್ಯಕ್ತಿಯ ರಕ್ತ ಪ್ಲಾಸ್ಮಾವು ಮುಸ್ಲಿಂ ವ್ಯಕ್ತಿಯ ಜೀವವನ್ನು ಉಳಿಸಬಹುದು ಮತ್ತು ಮುಸ್ಲಿಂ ವ್ಯಕ್ತಿಯ ಪ್ಲಾಸ್ಮಾವೂ ಹಿಂದೂ ವ್ಯಕ್ತಿಯ ಜೀವವನ್ನು ಉಳಿದಬಹುದು. ಆದರೆ, ನಾವು ಗೋಡೆಗಳನ್ನು ಯಾಕೆ ರಚಿಸಿದ್ದೇವೆ? ನಾವು ಒಗ್ಗಟ್ಟಿನಿಂದ ನಿಂತರೆ ಯಾವುದೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ವೈರಸ್ ನಮಗೆ ಕಲಿಸಿದೆ. ನಾವು ನಮ್ಮ ನಡುವೆ ವಿಭಜನೆಯಾದರೆ, ಯುದ್ಧವನ್ನು ಸೋಲುತ್ತೇವೆ” ಎಂದು ಹೇಳಿದ್ದಾರೆ.

ದೆಹಲಿಯ ಪ್ಲಾಸ್ಮಾ ಸಂಗ್ರಹವನ್ನು ನಿರ್ವಹಿಸುವ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಲ್ಬಿಎಸ್) ಇದುವರೆಗೂ ಸುಮಾರು ಒಂಬತ್ತು ಜನರಿಂದ ಪ್ಲಾಸ್ಮಾವನ್ನು ಪಡೆದಿದೆ, ಇನ್ನೂ ಕೆಲವರಿಂದ ಇಂದು ಪಡೆಯಲಿದೆ.


ಇದನ್ನೂ ಓದಿ: ಪ್ಲಾಸ್ಮಾ ಥೆರಪಿ ಎಂದರೇನು?


“ದೆಹಲಿಗೆ ಸುಮಾರು 200 ಜನರ ಕೊರೊನಾ ಪ್ಲಾಸ್ಮಾ ಬೇಕಾಗಿದ್ದು; ಸೋಂಕಿತ ವ್ಯಕ್ತಿಯೂ ಆಸ್ಪತ್ರೆಗೆ ಬಂದಾಗ ನಾವು ದೇಣಿಗೆಗಾಗಿ ಕಾಯಲು ಸಾಧ್ಯವಿಲ್ಲ. ಸೋಂಕಿನಿಂದ ಚೇತರಿಸಿಕೊಂಡ ಯಾರಾದರೂ-ಸತತ ಎರಡು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೆ ಎರಡು ವಾರಗಳ ಸಂಪರ್ಕತಡೆಯನ್ನು ಪೂರ್ಣಗೊಳಿಸಿ ಪ್ಲಾಸ್ಮಾವನ್ನು ದಾನ ಮಾಡಬಹುದು. ಚೇತರಿಸಿಕೊಂಡವರು ಪ್ರತಿ ಏಳರಿಂದ ಹತ್ತು ದಿನಗಳಿಗೊಮ್ಮೆ ಪ್ಲಾಸ್ಮಾವನ್ನು ದಾನ ಮಾಡಬಹುದು” ಎಂದು ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ ನಿರ್ದೇಶಕ ಡಾ ಎಸ್.ಕೆ.ಸಾರಿನ್ ಹೇಳಿದ್ದಾರೆ.

ಮಧುಮೇಹ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಲ್ಲದ, ಸಾಮಾನ್ಯ ತೂಕವಿರುವ, 12 ಕ್ಕಿಂತ ಹೆಚ್ಚು ಹಿಮೋಗ್ಲೋಬಿನ್ ಇರುವ ಆರೋಗ್ಯವಂತ ವ್ಯಕ್ತಿ ಪ್ಲಾಸ್ಮಾವನ್ನು ದಾನ ಮಾಡಬಹುದು. ವೈದ್ಯರು ಸೋಂಕಿನ ಮೂರು ವಾರಗಳ ನಂತರ ಉತ್ತಮ ಮಟ್ಟದ ಆಂಟಿ ಭಾಡಿಗಳನ್ನು ಕಂಡುಕೊಂಡಿದ್ದಾರೆ.

ಗಂಭೀರ ಪರಿಸ್ಥಿತಿಯಲ್ಲಿರುವ 20 ರೋಗಿಗಳಿಗೆ ಚಿಕಿತ್ಸೆಯ ಯಾದೃಚ್ಚಿಕ ನಿಯಂತ್ರಣ ಪ್ರಯೋಗವನ್ನು ನಡೆಸಲು ಅನುಮತಿ ನೀಡಲಾಗಿದೆ. ಅವರಲ್ಲಿ ಅರ್ಧದಷ್ಟು ಜನರು ಪ್ರತಿಕಾಯ-ಭರಿತ ಪ್ಲಾಸ್ಮಾವನ್ನು ಪಡೆಯುತ್ತಾರೆ ಮತ್ತು ಉಳಿದ ಅರ್ಧ ಜನರು ಪ್ಲಸೀಬೊವನ್ನು ಪಡೆಯುತ್ತಾರೆ. ಇದು ಕೊರೊನಾ ಇರುವವರನ್ನು ಗುಣಪಡಿಸಲು ಪ್ಲಾಸ್ಮಾ ಸಹಾಯ ಮಾಡುತ್ತದೆಯೆ ಎಂಬುದನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ.

ಈ ಚಿಕಿತ್ಸೆಯನ್ನು 30 ಕ್ಕಿಂತ ಹೆಚ್ಚು ಉಸಿರಾಟ ದರವಿರುವ(ಸಾಮಾನ್ಯ 20) 90% ಕ್ಕಿಂತ ಕಡಿಮೆ ಆಮ್ಲಜನಕ ಆರ್ದ್ರೀಕರಣ ಹೊಂದಿರುವ (ಸಾಮಾನ್ಯವಾಗಿ 95 ರಿಂದ 100% ಇರುತ್ತದೆ) ಅಥವಾ ಶ್ವಾಸಕೋಶದಲ್ಲಿ ಕೀವು ಇರುವವರಿಗೆ ನೀಡಲಾಗುತ್ತದೆ. ಗಂಭೀರ ಪರಿಸ್ಥಿತಿಯಲ್ಲಿದ್ದ ನಾಲ್ಕು ಕೊರೊನಾ ರೋಗಿಗಳು ಕಳೆದ 24 ಗಂಟೆಯಲ್ಲಿ ಸುಧಾರಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.


ಇದನ್ನೂ ಓದಿ: Fact check: ಕೊರೊನಾ ಹರಡಲು ಪೆಟ್ರೋಲ್‌ ಪಂಪ್‌ನಲ್ಲಿ ನೋಟು ಎಸೆದ ಮುಸ್ಲಿಂ ವ್ಯಕ್ತಿ: ಈ ಸುದ್ದಿಯ ಅಸಲಿಯತ್ತೇನು ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...