Homeಅಂಕಣಗಳುಕಾನೂನು ಸಚಿವ ಮಾಧುಸ್ವಾಮಿಯವರಲ್ಲಿ ಒಂದು ಬಿನ್ನಹ

ಕಾನೂನು ಸಚಿವ ಮಾಧುಸ್ವಾಮಿಯವರಲ್ಲಿ ಒಂದು ಬಿನ್ನಹ

- Advertisement -
- Advertisement -

ಒಂದು ಎಕರೆ, ಎರಡು ಎಕರೆ ಜಮೀನು ಒತ್ತುವರಿ ಮಾಡಿಕೊಂಡಿರುವವರನ್ನು ವಿಶೇಷ ನ್ಯಾಯಾಲಯ ವಿಚಾರಣೆಗೆ ಒಳಪಡಿಸುವಂತಿಲ್ಲ. ಅಕ್ರಮ-ಸಕ್ರಮ ಕಾಯ್ದೆಯಡಿ ಈ ಕಬಳಿಕೆಯ ಪ್ರಶ್ನೆಯನ್ನು ಇತ್ಯಾರ್ಥಗೊಳಿಸಲಾಗುವುದು ಎಂದು ಸಂಪುಟ ಸಭೆ ತೀರ್ಮಾನಿಸಿ ಈ ಸುಗ್ರಿವಾಜ್ಞೆಗೆ ಅನುಮತಿಯನ್ನು ರಾಜ್ಯಪಾಲರಿಂದ ಪಡೆಯಲಾಗಿದೆ ಇದು ಸರಿಯಾದ ಕ್ರಮ.

ಒಂದು ಎಕರೆ, ಎರಡು ಎಕರೆ ಭೂಕಬಳಿಕೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ಹೇಗೆ ಕೈಗೆತ್ತಿಕೊಂಡಿತು? ವಿಶೇಷ ನ್ಯಾಯಾಲಯ ಸ್ಥಾಪನೆಯಾದದ್ದೇ ಎ.ಟಿ.ರಾಮಸ್ವಾಮಿ ಸಮಿತಿಯ ವರದಿಯ ಆಧಾರದ ಮೇಲೆ ಹೌಸ್ ಕಮಿಟಿಯ ಶಿಫಾರಸ್ಸನ್ನು ಆಧರಿಸಿ. ಎ.ಟಿ.ರಾಮಸ್ವಾಮಿ ಸಮಿತಿಯ ವರದಿಯ ರೀತ್ಯಾ ಮುಖ್ಯಮಂತ್ರಿಗಳು, ಶಾಸಕರು, ಮಂತ್ರಿಗಳು, ಸರ್ಕಾರಿ ಉನ್ನತಾಧಿಕಾರಿಗಳು, ಭೂಗಳ್ಳರು, ರಿಯಲ್ ಎಸ್ಟೇಟ್ ಏಜೆಂಟರ್‍ಗಳು, ಬಿಲ್ಡರ್‍ಗಳು ಎಲ್ಲರೂ ಸೇರಿ ಈ ಭೂಹಗರಣದಲ್ಲಿ ಭಾಗಿಗಳು. ಅವರ ಜೊತೆಗೆ ಕೆಲವರು ಜಮೀನಿರುವ ಪ್ರಭಾವಿ ರೈತರು, ಭೂಹೀನರೂ ಸೇರಿರಬಹುದು. ವಿಶೇಷ ನ್ಯಾಯಾಲಯ ಆರಂಭವಾಯಿತಾದರೂ ಒಂದು ವರ್ಷದವರೆಗೆ ಯಾವ ಜಿಲ್ಲಾಧಿಕಾರಿಯೂ ಈ ನ್ಯಾಯಾಲಯದಲ್ಲಿ ಎ.ಟಿ.ರಾಮಸ್ವಾಮಿ ವರದಿಯಲ್ಲಿ ನಮೂದಿಸಿದ್ದ ಯಾರೊಬ್ಬರ ಮೇಲೂ ಕೇಸು ದಾಖಲು ಮಾಡಲಿಲ್ಲ.

ಜಿಲ್ಲಾಧಿಕಾರಿಗಳ ಈ ಅಸಹಕಾರಕ್ಕೆ ಬೇಸರಿದ ವಿಶೇಷ ನ್ಯಾಯಾಲಯ ಪತ್ರಿಕೆಗಳಲ್ಲಿ ವರದಿಯಾದ ದೂರುಗಳನ್ನು ಆಧರಿಸಿ ಒಂದು ಎಕರೆ, ಎರಡು ಎಕರೆ ಕಬಳಿಸಿದ್ದ ಬಡ ರೈತರ ಬಗೆಗೆ ವಿಚಾರಣೆಯನ್ನು ಆರಂಭಿಸಿತು. ವಿಶೇಷ ನ್ಯಾಯಾಲಯ ಸ್ಥಾಪನೆಯಾದ ಸುದ್ದಿ ತಿಳಿದ ಮಾಜಿ ಮುಖ್ಯ ಮಂತ್ರಿ ಗುಂಡೂರಾಯರ ಮಗ ದಿನೇಶ್ ಗೂಂಡೂರಾವ್ ತನ್ನ ಪಾಲಿಗೆ ಅಕ್ರಮವಾಗಿ ಬಂದಿದ್ದ 11 ಎಕರೆ ಜಮೀನನ್ನು ಸರಕಾರಕ್ಕೆ ಹಿಂದಿರುಗಿಸಿದರು. ಮಂತ್ರಿಗಳಾಗಿದ್ದ ಲೇಔಟ್ ಕೃಷ್ಣಪ್ಪ ಎಂದೇ ಖ್ಯಾತನಾಮರಾಗಿರುವ ಮಗ ಪ್ರಿಯಾಕೃಷ್ಣ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ನೂರಾರು ಎಕರೆ ಜಮೀನಿನ ಪೈಕಿ ಹತ್ತಾರು ಎಕರೆ ಜಮೀನನ್ನು ವಶಪಡಿಸಿಕೊಂಡು ಮಾರಾಟ ಮಾಡಿರುವುದಾಗಿ ಆರೋಪಣೆ ಮಾಡಿ ವಿಶೇಷ ನ್ಯಾಯಾಲಯದಲ್ಲಿ ಮಾಹಿತಿಹಕ್ಕು ಕಾಯ್ದೆ ಕಾರ್ಯಕರ್ತರೊಬ್ಬರು ಖಟ್ಲೆ ಹೂಡಿದರು. ವಿಚಾರಣೆಯಾಗಿ ಇನ್ನೇನು ತೀರ್ಪು ನೀಡುವ ಸನ್ನಿವೇಶದಲ್ಲಿ ಸುಪ್ರಸಿದ್ದ ನ್ಯಾಯವಾದಿಯೊಬ್ಬರು ಪೂವಯ್ಯ ಹೈಕೋರ್ಟಿಗೆ ಅರ್ಜಿಸಲ್ಲಿಸಿ ವಿಶೇಷ ನ್ಯಾಯಾಲಯ ತನಿಖೆ ಮುಂದುವರೆಸದಂತೆ ತಡೆಯಾಜ್ಞೆ ತಂದರು. ಇದು ಮಾತ್ರವಲ್ಲ. ವಿಶೇಷ ನ್ಯಾಯಾಲಯ ಇನ್ನೇನು ತೀರ್ಪು ನೀಡಲಿದ್ದಾರೆ ಎಂದು ತಿಳಿದ ಅನೇಕ ಪಟ್ಟಭದ್ರರು ಉಚ್ಚನ್ಯಾಯಾಲಯದ ಮೊರೆಹೊಕ್ಕು ತಡೆಯಾಜ್ಞೆ ತಂದಿದ್ದಾರೆ. ಮೊದಲನೇ ವರ್ಷ 80 ಮಂದಿ ತಡೆಯಾಜ್ಞೆ ಪಡೆದಿದ್ದರೆ, ಎರಡನೇ ವರ್ಷದ ಅವಧಿಯಲ್ಲಿ ಮತ್ತೆ ನೂರು ಮಂದಿ ತಡೆಯಾಜ್ಞೆ ಪಡೆದಿದ್ದಾರೆ. ಎರಡು ವರ್ಷ ಕಳೆದರೂ ಸ್ಟೇ ವೆಕೆಟ್ ಆಗದ್ದನ್ನು ಗಮನಿಸಿ ಅಂದಿನ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ನಾನು ಪತ್ರ ಬರೆದರೂ ಅವರು ಕಾರ್ಯೋನ್ಮುಖರಾಗಲಿಲ್ಲ. ಇಂದಿಗೂ 180 ಕೇಸುಗಳ ಸ್ಟೇ ಹಾಗೇ ಉಳಿದಿದೆ. ಸರ್ಕಾರದ ಉನ್ನತಾಧಿಕಾರಿಗಳು ಜಮೀನ ಪಡೆಯುವಂತಿಲ್ಲ ಎಂಬ ಕಾನೂನಿದ್ದರೂ ಐಜಿಪಿ ಆಗಿದ್ದ ಸಮಯದಲ್ಲಿ ಸಾಂಗ್ಲಿಯಾನ ತನ್ನ ಹೆಂಡತಿ, ಮಕ್ಕಳು ಅಳಿಯನ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಸಿದ್ದರು. ಅವರೂ ತಾವು ಅಕ್ರಮವಾಗಿ ಪಡೆದ ಜಮೀನನ್ನು ವಾಪಸು ಮಾಡಿರಬಹುದು.

ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಏನೆಂದರೆ ಎ.ಟಿ.ರಾಮಸ್ವಾಮಿ ವರದಿಯಲ್ಲಿ ನಮೂದಾಗಿರುವ ಭಾರೀ ಭೂಗಳ್ಳರ ಮೇಲೆ ಮೊಕದ್ದಮೆ ಹೂಡಲು ಈ ಕೂಡಲೇ ಮಂತ್ರಿಮಂಡಲ ತೀರ್ಮಾನ ಮಾಡಬೇಕು. ಒಂದು ಎಕರೆ, ಎರಡು ಎಕರೆ ಕಬಳಿಸಿರುವ ಭೂಹೀನ ರೈತರಿಗೆ ನ್ಯಾಯ ಒದಗಿಸಬೇಕು.

ಆದರೆ ಹತ್ತಾರು ಎಕರೆ ಸ್ವಾಹಾನೂ ಮಾಡಿರುವ ಧೂರ್ತರ ಬಗ್ಗೆ ಸರ್ಕಾರ ಚಕಾರ ಶಬ್ದವನ್ನು ಎತ್ತದಿರುವ ಬಗೆಗೆ ನನ್ನ ಖಂಡನೆ ಇದೆ. ಕೂಡಲೇ ಮಂತ್ರಿ ಮಂಡಲ ಎ.ಟಿ.ರಾಮಸ್ವಾಮಿ ವರದಿಯಲ್ಲಿ ನಮೂದಿಸಿರುವ ಎಲ್ಲಾ ಪಟ್ಟಭದ್ರರ ಮೇಲೆ ಕೇಸು ಹೂಡಿ ಅವರು ಕಬಳಿಸಿರುವ ಜಮೀನುಗಳನ್ನು ವಾಪಸ್ ಪಡೆಯಬೇಕಲ್ಲದೆ ಅವರಿಗೆ ಶಿಕ್ಷೆಯೂ ಆಗಬೇಕು. ನ್ಯಾಯಾಂಗ ಖಾತೆಯ ಹೊಣೆಗಾರಿಕೆ ಹೊತ್ತಿರುವ ಮಾಧುಸ್ವಾಮಿವರು ಸತ್ಯನಿಷ್ಠುರರೂ ಎಂದು ತಿಳಿದಿದ್ದೇನೆ. ಅವರು ಭೂಕಬಳಿಕೆ ಮಾಡಿರುವ ಭೂಹೀನ ರೈತರ ಬಗೆಗೆ ತಳೆದಿರುವ ಭಾವನೆ ಮೆಚ್ಚತಕ್ಕದ್ದೇ. ಆದರೆ ಅಷ್ಟೇ ಅಲ್ಲ ಅವರ ಹೊಣೆಗಾರಿಕೆ. ವಿಶೇಷ ನ್ಯಾಯಾಲಯದ ಅಂತಿಮ ತೀರ್ಪು ಬರುವ ಸಂದರ್ಭದಲ್ಲಿ ‘ಬೀಸೋ ದೊಣ್ಣೆಯಿಂದ ಏಟು ಬೀಳದಿದ್ದರೆ, ನೂರು ವರ್ಷ ಆಯಸ್ಸು’ ಎಂದು ಭಾವಿಸಿ ಹೈಕೋರ್ಟ್‍ನಿಂದ ಸ್ಟೇ ತಂದಿರುವ 180ಕ್ಕೂ ಹೆಚ್ಚು ಅಪರಾಧಿಗಳ ಸ್ಟೇಯನ್ನು ಕೂಡಲೇ ಅವರು ತೆರವುಗೊಳಿಸಬೇಕು. ಅಲ್ಲದೆ ಸರ್ಕಾರಿ ಜಮೀನು ಸ್ವಾಹಾ ಮಾಡಿರುವವರ ಮೇಲೆ ವಿಶೇಷ ನ್ಯಾಯಾಲಯದಲ್ಲಿ ಖಟ್ಲೆ ಹೂಡಬೇಕು. ನನ್ನ ಸ್ನೇಹಿತರೂ, ನಿಷ್ಟೂರವಾದಿಗಳೂ ಆದ ಮಾಧುಸ್ವಾಮಿಯವರು ಎ.ಟಿ.ರಾಮಸ್ವಾಮಿಯವರಿಗೆ ಆ ಮೂಲಕ ಗೌರವ ಸಲ್ಲಿಸುವರೆಂದು ಭಾವಿಸುತ್ತೇನೆ.

ಮಾಧುಸ್ವಾಮಿಯವರಲ್ಲಿ ಮತ್ತೊಂದು ಬಿನ್ನಹ. ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸುವ ಅಧಿಕಾರ ಸರ್ಕಾರಕ್ಕಿಲ್ಲದಿದ್ದರೂ ನಾಲ್ಕಾರು ಹುದ್ದೆಗಳನ್ನು ಸೃಷ್ಟಿಸಿ ಅವರು ಸಾವಿರಾರು ಜನರಿಗೆ ಹತ್ತಿರ ಹತ್ತಿರ 40 ಸಾವಿರ ಎಕರೆ ಜಮೀನನ್ನು 1, 2, 4 ಮತ್ತು 6 ಎಕರೆಯಂತೆ ಹಂಚಿರುವುದು ನ್ಯಾಯಭಾಹಿರವೆಂದು ಹೈಕೋರ್ಟಿನ ನ್ಯಾಮೂರ್ತಿಗಳಾಗಿದ್ದ ಶೈಲೆಂದ್ರಕುಮಾರ್ ತೀರ್ಪು ನೀಡಿದ್ದಾರೆ. ಅವರು ತಮ್ಮ ತೀರ್ಪಿನಲ್ಲಿ

“the post of special deputy commissinoner has now become synonym for corruption, nepotism and arbitrarininessof which fact this court can take judicial notice and it is high time a governance woth it is name having some sumbalnce of commitiment to maintenance of rule of law looks into suc anarchic exereise of power by these special deputy commissinoner and takes correctiv measures, instead of each and every affected person to seek for relief in right jurisdiction before thi high court”

ಈ ಆದೇಶದನ್ವಯ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಯನ್ನು ಆಗಿನ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರ ಆಡಳಿತದ ಕಾಲದಲ್ಲಿ ರದ್ದು ಮಾಡಲಾಯಿತು. ಆದರೆ 40 ಸಾವಿರ ಎಕರೆ ಸರ್ಕಾರಿ ಜಮೀನನ್ನು ವಶಪಡಿಸಿಕೊಳ್ಳುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಕುಂಟುತ್ತಾ ನಡೆದಿದ್ದಾರೆ. ಇಲ್ಲಿಯವರೆಗೂ ಶೇ.25 ರಷ್ಟು ಜಮೀನು ಕೂಡ ಸರ್ಕಾರ ವಶಪಡಿಸಿಕೊಂಡಿಲ್ಲ.

ಈ ಜಮೀನು ಹಂಚಿಕೆಯ ಪ್ರಕ್ರಿಯೆಯೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತಮಗೆ ತೋಚಿದಂತೆ ಇರುವುದರಿಂದಲೂ ಸರ್ಕಾರವೇ ನೇಮಿಸಿರುವ ವಿಶೇಷ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ಜಮೀನು ಹಂಚುವ ಜವಾಬ್ದಾರಿ ಇರುವುದಿಲ್ಲವೆಂದು ನ್ಯಾಯಾಲಯವೇ ಹೇಳಿರುವುದರಿಂದ ಈ 40 ಸಾವಿರ ಎಕರೆ ಜಮೀನನ್ನು ಒಂದು ordinance ಮುಖಾಂತರ ಸರ್ಕಾರ ಹಿಂಪಡೆಯಬಹುದೆಂಬುದು ನನ್ನ ಅನಿಸಿಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂತಹ ಕೇಸುಗಳಿಗೆ ಹೊಂದಿಕೊಂಡತೆ, ಡೊಡ್ಡ ಪಟ್ಟಣಗಳಿಗೆ ಹೊಂದಿಕೊಂಡಂತಿರುವ ನೆಲವನ್ನು ಕಬಳಿಸಿರುವ,ಮಂಜೂರು ಮಾಡಿಸಿಕೊಂಡಿರುವುದನ್ನು ಆಳ್ವಿಕೆ ಹಿಂಪಡೆಯಲು ಮೊದಲು ಹೆಜ್ಜೆ ಇಡಬೇಕು. ತರುವಾಯ ಉಳಿಕೆ ಕೇಸುಗಳ ಬಗ್ಗೆ ಹೆಜ್ಜೆ ಇಡಬೇಕು. ಸಿಬ್ಬಂದಿ ಕೊರತೆ ನೆಪಹೇಳಿ ಎಲ್ಲವೂ ಆಮೆ ವೇಗದಲ್ಲಿ ಆಗುವುದನ್ನು ತಪ್ಪಿಸಲು ಮೊದಲು ರಿಯಲ್ ಎಸ್ಟೇಟ್ ವಹಿವಾಟಿಗೆ ಒಳಗಾಗಬಹುದಾದ ಕೇಸಗಳನ್ನು ಅಂದರೆ, ಡೊಡ್ಡ ಪಟ್ಟಣಗಳನ್ಮು ಗುರಿಮಾಡಿ ಕೆಲಸ ಮಾಡಬೇಕು.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...