Homeಮುಖಪುಟತಮಿಳುನಾಡು: 10ನೇ ಬಾರಿಯ ವಿಜಯಕ್ಕೆ ವಿಧಾನಸಭಾ ಚುನಾವಣಾ ಕಣಕ್ಕಿಳಿದ ದೊರೈ ಮುರುಗನ್!

ತಮಿಳುನಾಡು: 10ನೇ ಬಾರಿಯ ವಿಜಯಕ್ಕೆ ವಿಧಾನಸಭಾ ಚುನಾವಣಾ ಕಣಕ್ಕಿಳಿದ ದೊರೈ ಮುರುಗನ್!

ಇವರು ಇರುವರೆಗೂ ಹನ್ನೊಂದು ಬಾರಿ ಚುನಾವಣೆ ಎದುರಿಸಿದ್ದಾರೆ

- Advertisement -
- Advertisement -

ಏಪ್ರಿಲ್ 6 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಡಿಎಂಕೆಯ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಆಯ್ಕೆಯಾಗುವುದರೊಂದಿಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ದೊರೈ ಮುರುಗನ್ 12 ನೇ ಬಾರಿಗೆ ಜನರ ಆದೇಶವನ್ನು ಪಡೆಯಲು ಸಜ್ಜಾಗಿದ್ದಾರೆ. 1996 ರಿಂದ ಅವರ ಭದ್ರ ಕೋಟೆಯಾಗಿ ಉಳಿದಿರುವ ಕಟ್ಪಾಡಿಯಿಂದ ಪಕ್ಷದ ಅಭ್ಯರ್ಥಿಯಾಗಿ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ವರ್ಷ ಖಜಾಂಚಿಯಿಂದ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಅವರು 1971 ರಿಂದ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿಯವರೆಗೆ ಹನ್ನೊಂದು ಬಾರಿ ಸ್ಪರ್ಧಿಸಿದ್ದು, ಒಂಬತ್ತು ಚುನಾವಣೆಗಳನ್ನು ಅವರು ಗೆದ್ದಿದ್ದಾರೆ. 1984 ಮತ್ತು 1991 ರಲ್ಲಿ ಕೇವಲ ಎರಡು ಬಾರಿ ಮಾತ್ರ ತಮ್ಮ ಪ್ರತಿಸ್ಪರ್ಧಿ ಎಐಎಡಿಎಂಕೆ ವಿರುದ್ಧ ಸೋತಿದ್ದಾರೆ.

ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ

“ಅವರು ಕಟ್ಪಾಡಿಯಲ್ಲಿ ಏಳು ಬಾರಿ ಮತ್ತು ರಾಣಿಪೇಟೆಯಲ್ಲಿ ಎರಡು ಬಾರಿ ಗೆದ್ದಿದ್ದಾರೆ” ಎಂದು ವೆಲ್ಲೂರು ಸಂಸದ,ದೊರೈ ಮುರುಗನ್ ಅವರ ಪುತ್ರ ಡಿ.ಎಂ.ಕದಿರ್ ಆನಂದ್ ತಿಳಿಸಿದ್ದಾರೆ.

ಹಾಸ್ಯ ಮತ್ತು ವಿಡಂಬನೆಗೆ ಹೆಸರುವಾಸಿಯಾದ ದೊರೈ ಮುರುಗನ್, ಪ್ರಸ್ತುತ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಉಪನಾಯಕನಾಗಿದ್ದಾರೆ.

ದೊರೈ ಮುರುಗನ್‌‌‌‌ ಪಕ್ಷದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು, ವೆಲ್ಲೂರು ಪ್ರದೇಶದಲ್ಲಿ ಪಕ್ಷದ ಆಡಳಿತವನ್ನು ಹಿಡಿದಿಟ್ಟುಕೊಂಡು ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗಳ ಆಯ್ಕೆಯನ್ನು ನಿರ್ಧರಿಸುತ್ತಾರೆ. ಆದರೆ, ತಮ್ಮ ಮಗನನ್ನು ಲೋಕಸಭೆಯ ಸದಸ್ಯರನ್ನಾಗಿ ಮಾಡಿದ್ದಾರೆಂದು ಅವರ ವಿರುದ್ದ ಕುಟುಂಬ ರಾಜಕೀಯ ಆರೋಪಗಳು ಕೇಳಿ ಬಂದಿದೆ.

ಪ್ರಸ್ತುತ ಚುನಾವಣೆಯಲ್ಲಿ ದೊರೈ ಮುರುಗನ್‌ ವಿರುದ್ದ ಎಐಎಡಿಎಂಕೆಯು ಎಸ್. ರಾಮು ಅವರನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬಿಜೆಪಿಗೆ ಸೇರಿದ ನಟನನ್ನು ನಾಟಕದಿಂದ ಹೊರ ಹಾಕಿದ ತಂಡ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...