Homeಮುಖಪುಟಪಕ್ಷದ ಅಧೀಕೃತ ಟಿಕೆಟ್ ಘೋಷಣೆಗೂ ಮುನ್ನ ನಾಮಪತ್ರ ಸಲ್ಲಿಸಿದ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ!

ಪಕ್ಷದ ಅಧೀಕೃತ ಟಿಕೆಟ್ ಘೋಷಣೆಗೂ ಮುನ್ನ ನಾಮಪತ್ರ ಸಲ್ಲಿಸಿದ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ!

- Advertisement -
- Advertisement -

ಪಕ್ಷದ ಅಧೀಕೃತ ಟಿಕೆಟ್‌ ಘೋಷಣೆಗೂ ಮುನ್ನ ತಮಿಳುನಾಡಿನ ಬಿಜೆಪಿ ಉಪಾಧ್ಯಕ್ಷ ನೈನಾರ್ ನಾಗೇಂದ್ರನ್ ತಿರುನೆಲ್ವೇಲಿ ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿ ಕಾರ್ಯಕರ್ತರಿಗೆ ಅಘಾತ ನೀಡಿದ್ದಾರೆ.

ಫಾರ್ಮ್ ಬಿ ಅನ್ನು ಸಲ್ಲಿಸದೆ ನಾಗೇಂದ್ರನ್ ರಿಟರ್ನಿಂಗ್ ಅಧಿಕಾರಿ ಶಿವಕೃಷ್ಣಮೂರ್ತಿಯವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಬಿಜೆಪಿ ಸದಸ್ಯರು ಸೇರಿದಂತೆ ಮೈತ್ರಿ ಪಕ್ಷವಾದ ಎಐಎಡಿಎಂಕೆಯ ಯಾವುದೆ ನಾಯಕರು ಇರಲಿಲ್ಲ.

ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗೇಂದ್ರನ್, ಇಂದು ಶುಭ ದಿನವಾಗಿದ್ದರಿಂದ ನಾಮಪತ್ರ ಸಲ್ಲಿಕೆಗೆ ಈ ದಿನವನ್ನು ಆರಿಸಿದೆ ಎಂದು ಹೇಳಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಮೊದಲು ಫಾರ್ಮ್ ಬಿ ಅನ್ನು ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸೇರಲಿರುವ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್

‘ನಾಗೇಂದ್ರನ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಆಗುವವರೆಗೂ ಕಾಯಬಹುದಿತ್ತು. ಇದು ಭವಿಷ್ಯದಲ್ಲಿ ತೊಂದರೆ ಉಂಟು ಮಾಡುತ್ತದೆ’ ಎಂದು ಹೆಸರು ಹೇಳಲು ಇಚ್ಚಿಸದ ರಾಜ್ಯದ ಹಿರಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆಂದು TNIE ವರದಿ ಮಾಡಿದೆ.

‘ಎಐಎಡಿಎಂಕೆ ತಿರುನೆಲ್ವೇಲಿಯನ್ನು ಬಿಜೆಪಿಗೆ ನೀಡಿದ್ದರಿಂದ ಅವರು ಪ್ರಚಾರ ಆರಂಭಿಸಿದ್ದಾರೆ. ಈ ಕ್ಷೇತ್ರದಲ್ಲಿ ನಾಗೇಂದ್ರನ್‌ ಅವರೇ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ಪ್ರತಿಯೊಬ್ಬ ಸೇರಿದಂತೆ, ಸಾರ್ವಜನಿಕರಿಗೂ ತಿಳಿದಿದೆ. ತಾನು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಅವರು ಈಗಾಗಲೇ ರಾಜ್ಯ ಮುಖಂಡರಿಗೆ ಮಾಹಿತಿ ನೀಡಿದ್ದಾರೆ’ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.

ಇದನ್ನೂ ಓದಿ:‘ಲೈಂಗಿಕ ಕಿರುಕುಳದ ತನಿಖೆ ನಡೆಸುವ ಬದಲು ಸಚಿವನ ರಕ್ಷಣೆಗೆ ನಿಂತ ಸರ್ಕಾರ’

ತಿರುನೆಲ್ವೇಲಿ ಜಿಲ್ಲೆಯ ಐದು ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರದಿಂದ ಪ್ರಾರಂಭವಾಗಿದ್ದು, ಮೊದಲ ದಿನ ನಾಗೇಂದ್ರನ್ ಸೇರಿದಂತೆ ಇನ್ನೂ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯ ಪಕ್ಷದ ಮುಖಂಡರು ಘೋಷಿಸಲಿದ್ದಾರೆ ಎಂದು ನಾಗೇಂದ್ರನ್ ದೃಡಪಡಿಸಿದ್ದು, ಮಿತ್ರಪಕ್ಷವಾದ ಎಐಎಡಿಎಂಕೆ ತಮ್ಮ ವಿಜಯಕ್ಕಾಗಿ ಕೆಲಸ ಮಾಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಪಾಲಯಂ ಕೋಟೈನ 60 ವರ್ಷದ ಹೋಟೆಲ್‌ ಉದ್ಯಮಿ ನಾಗೇಂದ್ರನ್ ಅವರು ಎಐಎಡಿಎಂಕೆ ಪಕ್ಷದಲ್ಲಿದ್ದಾಗ ತಿರುನೆಲ್ವೇಲಿಯಿಂದ ನಾಲ್ಕು ಬಾರಿ ಸ್ಪರ್ಧಿಸಿದ್ದರು. ಅದರಲ್ಲಿ 2001 ಮತ್ತು 2011 ರಲ್ಲಿ ಎರಡು ಬಾರಿ ಗೆದ್ದಿದ್ದರು. 2016 ರ ಚುನಾವಣೆಯಲ್ಲಿ ಅವರು ಡಿಎಂಕೆ ಅಭ್ಯರ್ಥಿಯ ಎದುರು ಸೋತು ನಂತರ ಬಿಜೆಪಿಗೆ ಸೇರಿದ್ದರು.

ಇದನ್ನೂ ಓದಿ: ಎಡಿಆರ್ ವರದಿ – 5 ವರ್ಷಗಳಲ್ಲಿ ಪಕ್ಷಾಂತರಗೊಂಡ 44.9% ಶಾಸಕರು ಸೇರಿದ್ದು ಬಿಜೆಪಿಗೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...