Homeದಲಿತ್ ಫೈಲ್ಸ್ತಮಿಳುನಾಡು: ‘ದನದ ಮಾಂಸ’ ಇಲ್ಲದ ಅಂಬೂರ್‌ ಬಿರಿಯಾನಿ ಹಬ್ಬ; ದಲಿತರಿಂದ ವ್ಯಾಪಕ ಟೀಕೆ

ತಮಿಳುನಾಡು: ‘ದನದ ಮಾಂಸ’ ಇಲ್ಲದ ಅಂಬೂರ್‌ ಬಿರಿಯಾನಿ ಹಬ್ಬ; ದಲಿತರಿಂದ ವ್ಯಾಪಕ ಟೀಕೆ

ತಮಿಳುನಾಡು ಸರ್ಕಾರ ಅಂಬೂರು ಬಿರಿಯಾನಿ ಹಬ್ಬ ಆಯೋಜಿಸಿ, ‘ದನ ಹಾಗೂ ಹಂದಿ’ ಮಾಂಸಗಳಿಗೆ ನಿಷೇಧ ಹೇರಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.

- Advertisement -
- Advertisement -

ತಮಿಳುನಾಡು ಸರ್ಕಾರ ಆಯೋಜಿಸಿರುವ ಅಂಬೂರ್ ಬಿರಿಯಾನಿ ಹಬ್ಬದಲ್ಲಿ ದನದ ಮಾಂಸ ಮತ್ತು ಹಂದಿ ಮಾಂಸವನ್ನು ನಿಷೇಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಾರ್ಯಕ್ರಮದ ಆವರಣದಲ್ಲಿ ದನದ ಮಾಂಸ ಮತ್ತು ಹಂದಿಮಾಂಸವನ್ನು ತಿರುಪತ್ತೂರ್ ಜಿಲ್ಲಾಧಿಕಾರಿಗಳು ನಿಷೇಧಿಸಲು ನಿರ್ಧರಿಸಿದ ನಂತರ ಅಂಬೂರ್‌ ಬಿರಿಯಾನಿ ಹಬ್ಬ ವ್ಯಾಪಕ ಟೀಕೆಗೆ ಒಳಗಾಗಿದೆ. ವಿಶಿಷ್ಠ ಹಾಗೂ ರಾಜ್ಯದ್ಯಾಂತ ಜನಪ್ರಿಯಯವಾಗಿರುವ ಅಂಬೂರ್ ಬಿರಿಯಾನಿಗೆ ಅಂಬೂರು ಪಟ್ಟಣ ಹೆಸರಾಗಿದೆ.

ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಅಂಬೂರ್ ಬೀಫ್‌ ಬಿರಿಯಾನಿಯನ್ನು ಆಹಾರೋತ್ಸವದಿಂದ ಹೊರಗಿಡಲಾಗಿದೆ. ಕಾರ್ಯಕ್ರಮದ ಆವರಣದಲ್ಲಿ ದನ ಹಾಗೂ ಹಂದಿಯ ಬಿರಿಯಾನಿಯನ್ನು ಬ್ಯಾನ್‌ ಮಾಡುವ ಮೂಲಕ ಜಿಲ್ಲಾಧಿಕಾರಿ ಅಮರ್ ಕುಶ್ವಾಹ ವಿವಾದ ಸೃಷ್ಟಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಂಬೂರಿನಲ್ಲಿ ಬೀಫ್ ಬಿರಿಯಾನಿ ಜನಪ್ರಿಯವಾಗಿದೆ. ಹಂದಿ ಮಾಂಸದ ಬಿರಿಯಾನಿ ಅಪರೂಪವೆನ್ನಬಹುದು. ಆದರೆ ಗೋಮಾಂಸ ಹಾಗೂ ಹಂದಿ ಮಾಂಸ ಎರಡನ್ನೂ ನಿಷೇಧಿಸಿ ಬ್ಯಾಲೆನ್ಸ್ ಮಾಡಲಾಗಿದೆ ಎಂದು ಸಮರ್ಥಿಸಲಾಗುತ್ತಿದೆ.

ಈ ಹಬ್ಬವು ಮೇ 12ರಂದು ಆರಂಭವಾಗಿದ್ದು, ಮೇ 14 ರವರೆಗೆ ಮುಂದುವರಿಯುತ್ತದೆ. ಬಿರಿಯಾನಿಗೆ ಹೆಸರಾಗಿರುವ ಈ ಊರು ತಿರುಪತ್ತೂರ್ ಜಿಲ್ಲೆಯಲ್ಲಿದೆ. ತಮಿಳುನಾಡು ಮೂಲದ ಪರಿಮಳಯುಕ್ತ ಸೀರಗ ಸಾಂಬಾ ಅಕ್ಕಿಯ ಬಳಕೆಯ ಕಾರಣ ಈ ಬಿರಿಯಾನಿ ಶೈಲಿಯು ರಾಜ್ಯಾದ್ಯಂತ ಜನಪ್ರಿಯವಾಗಿದೆ.

ಇದನ್ನೂ ಓದಿರಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ಅಂಬೂರು ಬೀಫ್‌ ಬಿರಿಯಾನಿಗೆ ನಿಷೇಧ ಹೇರಿರುವುದು ದಲಿತ ಮತ್ತು ಇತರ ಅನೇಕ ದಮನಿತ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಮುದಾಯಗಳಲ್ಲಿ ಗೋಮಾಂಸವು ಪ್ರಧಾನ ಆಹಾರವಾಗಿದೆ.

ದ್ರಾವಿಡ ಮಾದರಿಗೆ ವಿರುದ್ಧ

ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಉಪ ಪ್ರಧಾನ ಕಾರ್ಯದರ್ಶಿ ವನ್ನಿ ಅರಸು ಸೇರಿದಂತೆ ಪ್ರಸಿದ್ಧ ಬರಹಗಾರರು, ರಾಜಕೀಯ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ಬಿರಿಯಾನಿ ಹಬ್ಬದಲ್ಲಿ ಗೋಮಾಂಸ ನಿಷೇಧವು ಸಾಮಾಜಿಕ ನ್ಯಾಯ ಮತ್ತು ಪ್ರಸ್ತುತ ಅಧಿಕಾರದಲ್ಲಿರುವ ಡಿಎಂಕೆ ಮುಂದಾಳತ್ವದ ‘ದ್ರಾವಿಡ ಮಾದರಿ’ಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, “ಎರಡು ಗುಂಪುಗಳಿವೆ. ಒಬ್ಬರು ಹಂದಿ ಬಿರಿಯಾನಿ ಕೇಳಿದರೆ ಮತ್ತೊಬ್ಬರು ಬೀಫ್ ಬಿರಿಯಾನಿ ಕೇಳುತ್ತಾರೆ. ಹಿಂದೂಗಳು ಹಾಗೂ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಾರದೆಂಬ ಕಾರಣದಿಂದ ಎರಡನ್ನೂ ನಿಷೇಧಿಸಿದ್ದೇವೆ” ಎಂದಿರುವುದಾಗಿ ‘ದಿ ನ್ಯೂಸ್‌ ಮಿನಿಟ್’ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಈ ಹಬ್ಬದಲ್ಲಿ ತಯಾರಿಸಲಾಗುವ ಅಂಬೂರ್‌ ಬಿರಿಯಾನಿಯು ಕೇವಲ ಕುರಿ, ಕೋಳಿ ಮತ್ತು ಮೀನುಗಳಿಗೆ ಸೀಮಿತವಾಗಿದೆ. ಬಿರಿಯಾನಿಯನ್ನು ಉಚಿತವಾಗಿ ನೀಡುವುದಿಲ್ಲ. ಜನರು ಅದನ್ನು ಖರೀದಿಸಬೇಕಾಗುತ್ತದೆ. ದನ ಅಥವಾ ಹಂದಿಮಾಂಸ ಬೇಕಾದರೆ ಹಬ್ಬದ ಆವರಣದಿಂದ ಹೊರಗೆ ಇರುವ ಅಂಗಡಿಯಲ್ಲಿ ಖರೀದಿಸಬಹುದು” ಎಂದಿದ್ದಾರೆ.

ಇದನ್ನೂ ಓದಿರಿ: ಸುರಕೋಡ: ಮಠಕ್ಕೆ ಪ್ರವೇಶಿಸಿದ ದಲಿತರ ಮೇಲೆ ಹಲ್ಲೆ; 23 ಸವರ್ಣೀಯರ ವಿರುದ್ಧ ಎಫ್‌ಐಆರ್‌

ಹಬ್ಬಕ್ಕೆ ಸಂಬಂಧಿಸಿದಂತೆ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, “ಇದು ಸವರ್ಣೀಯ ಅಥವಾ ದಮನಿತ ಸಮುದಾಯಗಳ ಸಮಸ್ಯೆಯಲ್ಲ. ನಾನು ಗೋಮಾಂಸ ಅಥವಾ ಹಂದಿ ಮಾಂಸದ ವಿರೋಧಿಯಲ್ಲ. ಜನರು ತಮಗೆ ಬೇಕಾದುದನ್ನು ತಿನ್ನಲಿ. ಜನರು ನನ್ನೊಂದಿಗೆ ಕುಳಿತು ತಮಗೆ ಬೇಕಾದುದನ್ನು ತಿನ್ನಬಹುದು. ಜನಸಂಖ್ಯೆಯ 0.5% ಜನರು ಮಾತ್ರ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ನಾನು ಅಧಿಕಾರಿಯಾಗಿ, ಉಳಿದ 99.5% ಬಗ್ಗೆ ಯೋಚಿಸಬೇಕಾಗಿದೆ. ಯಾವುದೇ ವಿವಾದಗಳು ನಡೆಯುವುದನ್ನು ನಾನು ಬಯಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಂಬೂರು ಮೂಲದ ದಲಿತ ಕವಿ ಯಲನ್ ಆಠಿ ಅವರು ಜಿಲ್ಲಾಧಿಕಾರಿಯವರ ಹೇಳಿಕೆಯನ್ನು ಖಂಡಿಸಿದ್ದು, “ಬೀಫ್ ಬಿರಿಯಾನಿ ಇಲ್ಲದೆ ಅಂಬೂರ್ ಬಿರಿಯಾನಿ ಇಲ್ಲ. ನೀವು ಅಂಬೂರಿಗೆ ಬಂದರೆ, ದನದ ಬಿರಿಯಾನಿ ಅಂಗಡಿಗಳ ಪ್ರಮಾಣವನ್ನು ನೀವೇ ನೋಡಬಹುದು. ಅಂಬೂರಿನಲ್ಲಿ ಬಿರಿಯಾನಿ ಸ್ಟಾಲ್ ನೋಡದೆ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ” ಎಂದಿದ್ದಾರೆ.

“ಅಂಬೂರು ಪಟ್ಟಣವು ಚರ್ಮದ ಉದ್ಯಮ ಕೇಂದ್ರವಾಗಿದೆ. ಇಲ್ಲಿನ ಬಹುಪಾಲು ಜನರು ಕಾರ್ಮಿಕ ವರ್ಗದವರಾಗಿದ್ದಾರೆ. ಅವರ ಜೀವನವು ಈ ಉದ್ಯಮವನ್ನು ಅವಲಂಬಿಸಿದೆ. ಒಂದು ಪ್ಲೇಟ್ ಮಟನ್ ಬಿರಿಯಾನಿಯ ಬೆಲೆ ಸುಮಾರು 225 ರೂ., ಬೀಫ್ ಬಿರಿಯಾನಿಯ ಬೆಲೆ 50 ರಿಂದ 70 ರೂ” ಎಂದು ವಿವರಿಸಿದ್ದಾರೆ.

“ಹಿಂದೂಗಳ ಭಾವನೆ ಮುಖ್ಯವಾದರೆ, ದಲಿತರ ಭಾವನೆಗಳ ಬಗ್ಗೆ ಏನು ಹೇಳುತ್ತಾರೆ? ನಾನು ಚಿಕನ್ ಅಥವಾ ಮಟನ್ ತಿನ್ನುವುದಿಲ್ಲ. ಹಾಗಾದರೆ ಸರ್ಕಾರ ನಡೆಸುತ್ತಿರುವ ಆ ಉತ್ಸವದಲ್ಲಿ ನನಗೆ ಅವಕಾಶವಿದೆಯೇ ಅಥವಾ ಇಲ್ಲವೇ? ನಾನು ಈ ಸಮಾಜದ ಪ್ರಜೆಯೇ ಅಥವಾ ಅಲ್ಲವೇ? ಚರ್ಮದ ಉದ್ಯಮದಲ್ಲಿ ಕೆಲಸ ಮಾಡುವ ಬಹುಪಾಲು ಜನರು ದಲಿತರು ಅಥವಾ ಮುಸ್ಲಿಮರು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿರಿ: ದಲಿತ- ಮುಸ್ಲಿಂ ದಂಪತಿ ಪ್ರಕರಣ: ಕೊನೆಯವರೆಗೂ ರಾಜು ನೆನಪಲ್ಲೇ ಬದುಕುವೆ- ಅಶ್ರಿನ್‌

ಬೀಫ್ ಬಿರಿಯಾನಿಗೆ ಹೆಸರುವಾಸಿಯಾಗಿರುವ ಅಂಬೂರಿನಲ್ಲಿರುವ ರೆಸ್ಟೊರೆಂಟ್‌ವೊಂದರ ಬಗ್ಗೆ ಹೇಳುತ್ತಾ ಕವಿ ಯಲನ್‌, “ಆ ಅಂಗಡಿಯೊಂದರಲ್ಲಿ ದಿನಕ್ಕೆ 200 ಕಿಲೋ ಗೋಮಾಂಸ ಬಿರಿಯಾನಿ ಮಾರಾಟವಾಗುತ್ತದೆ. ಹಂದಿಮಾಂಸವನ್ನು ನಿಷೇಧಿಸುವ ಕ್ರಮವು ಕಣ್ಣೊರಿಸುವ ತಂತ್ರವಾಗಿದೆಯಷ್ಟೇ. ಹಂದಿ ಬಿರಿಯಾನಿಯನ್ನು ಯಾರು ಕೇಳಿದ್ದಾರೆ? ಆದರೆ ಜನರು ಹಂದಿಮಾಂಸವನ್ನು ಬಯಸಿದರೆ, ಅದನ್ನು ಸಹ ತಿನ್ನಲಿಬಿಡಿ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಧಿಕಾರಿಯ ನಡೆಯನ್ನು ಖಂಡಿಸಿ ವಿಸಿಕೆಯ ವನ್ನಿ ಅರಸು ಟ್ವೀಟ್ ಮಾಡಿದ್ದು, “ನಿರ್ದಿಷ್ಟ ಸಮುದಾಯದ ಆಹಾರವನ್ನು ಹೊರಗಿಟ್ಟು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ದ್ರಾವಿಡ ಮಾದರಿಯನ್ನು ಕಡೆಗಣಿಸಿದ್ದಾರೆ. 75% ಜನರು ಸೇವಿಸುವ ದನದ ಮಾಂಸವನ್ನು ಮೇ 12, 13 ಮತ್ತು 14 ರಂದು ನಡೆಯುವ ಬಿರಿಯಾನಿ ಹಬ್ಬದಲ್ಲಿ ಒಳಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...