Homeಚಳವಳಿಪ್ರಧಾನಿ ಮೋದಿಗೆ 24 ಗಂಟೆಗಳ ಗಡುವು ನೀಡಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್!

ಪ್ರಧಾನಿ ಮೋದಿಗೆ 24 ಗಂಟೆಗಳ ಗಡುವು ನೀಡಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್!

- Advertisement -
- Advertisement -

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ತಮ್ಮ ರಾಜ್ಯದ ರೈತರಿಂದ ಅಕ್ಕಿ ಖರೀದಿಸುವ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸೋಮವಾರ ಧರಣಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ 24 ಗಂಟೆಗಳ ಗಡುವು ನೀಡಿದ ಅವರು, ಒಕ್ಕೂಟ ಸರ್ಕಾರವು ರಾಜ್ಯದಿಂದ ಭತ್ತ ಖರೀದಿಸಿ ಪ್ರತಿಕ್ರಿಯಿಸಬೇಕು, ಇಲ್ಲವೆಂದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಚಂದ್ರಶೇಖರ ರಾವ್‌ ಹೇಳಿದ್ದಾರೆ.

ಶೀಘ್ರದಲ್ಲೇ ಹೊಸ ಕೃಷಿ ನೀತಿಯನ್ನು ರೂಪಿಸದಿದ್ದರೆ ರೈತರು ಸರ್ಕಾರವನ್ನು ಬೀಳಿಸುತ್ತಾರೆ ಎಂದು ಅವರು ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನೀವು ರೈತರೊಂದಿಗೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ನಾನು ಪ್ರಧಾನಿ ಮೋದಿಯವರಿಗೆ ಎಚ್ಚರಿಕೆ ನೀಡುತ್ತೇನೆ. ರೈತರು ಅಳುವಲ್ಲೆಲ್ಲಾ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ ಎಂಬುದಕ್ಕೆ ಭಾರತೀಯ ಇತಿಹಾಸ ಸಾಕ್ಷಿಯಾಗಿದೆ. ಯಾರೂ ಶಾಶ್ವತರಲ್ಲ… ಅಧಿಕಾರದಲ್ಲಿದ್ದಾಗ ರೈತರಿಗೆ ಅನ್ಯಾಯ ಮಾಡಬೇಡಿ” ಎಂದು ಚಂದ್ರಶೇಖರ್‌ ರಾವ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಕೆಸಿಆರ್‌ ವಿರುದ್ಧ ಟೀಕೆ: ತೆಲಂಗಾಣ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರೇವಂತ್ ರೆಡ್ಡಿ ಬಂಧನ

“ತೆಲಂಗಾಣವು ತಮ್ಮ ಹಕ್ಕನ್ನು ಕೇಳುತ್ತದೆ. ಹೊಸ ಕೃಷಿ ನೀತಿಯನ್ನು ರೂಪಿಸಿ ಎಂದು ನಾನು ಪ್ರಧಾನಿಯವರಿಗೆ ಹೇಳಲು ಬಯಸುತ್ತೇನೆ. ಅದಕ್ಕೆ ನಾವು ಸಹ ಕೊಡುಗೆ ನೀಡುತ್ತೇವೆ. ಅದನ್ನು ಮಾಡದಿದ್ದರೆ ನಿಮ್ಮನ್ನು ತೆಗೆದುಹಾಕಲಾಗುತ್ತದೆ ಮತ್ತು ಹೊಸ ಸರ್ಕಾರವು ಹೊಸ ಸಮಗ್ರ ಕೃಷಿ ನೀತಿಯನ್ನು ಮಾಡುತ್ತದೆ” ಎಂದು ಅವರು ಧರಣಿ ಸ್ಥಳದಲ್ಲಿ ಹೇಳಿದ್ದಾರೆ.

ರೈತರು ಭಿಕ್ಷುಕರಲ್ಲ, ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪಡೆಯುವ ಹಕ್ಕಿದೆ ಎಂದು ಚಂದ್ರಶೇಖರ್‌ ರಾವ್‌ ಪ್ರತಿಪಾದಿಸಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಮತ್ತು ಸಚಿವ ಕೆಟಿ ರಾಮರಾವ್, ಸಚಿವರು, ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳು ಸೇರಿದಂತೆ ಅನೇಕ ಟಿಆರ್‌ಎಸ್ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರಸಕ್ತ ರಬಿ ಋತುವಿನಲ್ಲಿ ಬೇಯಿಸಿದ ಅಕ್ಕಿ(parboiled rice) ಖರೀದಿಸಲು ತೆಲಂಗಾಣದ ಮನವಿಯನ್ನು ಒಕ್ಕೂಟ ನಿರಾಕರಿಸಿದ ನಂತರ ಟಿಆರ್‌ಎಸ್ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ದೆಹಲಿಯನ್ನು ತಲುಪಿದೆ. ಆದರೆ ಒಕ್ಕೂಟ ಸರ್ಕಾರವು ಹಸಿ ಅಕ್ಕಿಯನ್ನು ಮಾತ್ರ ಖರೀದಿಸಬಹುದು ಎಂದು ಹೇಳಿದ್ದು, ಭಾರತದಲ್ಲಿ ಹೆಚ್ಚಾಗಿ ಸೇವಿಸದ ಬೇಯಿಸಿದ ಅಕ್ಕಿಯನ್ನು ಅಲ್ಲ ಎಂದು ಹೇಳಿದೆ.

“ಮೋದಿ ಮತ್ತು ಪಿಯೂಷ್‌ ಗೋಯಲ್‌ ಅವರನ್ನು 24 ಗಂಟೆಗಳ ಒಳಗೆ ಭತ್ತದ ಖರೀದಿಯ ಕುರಿತು ರಾಜ್ಯದ ಬೇಡಿಕೆಗೆ ಸ್ಪಂದಿಸುವಂತೆ ನಾನು ಕೈ ಜೋಡಿಸಿ ಎಂದು ಒತ್ತಾಯಿಸುತ್ತೇನೆ. ಅದರ ನಂತರ ನಾವು ಪ್ರತಿಭಟನೆಗೆ ಕರೆ ನೀಡುತ್ತೇವೆ” ಎಂದು ಚಂದ್ರಶೇಖರ್‌ ರಾವ್ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌ ಕರೆ

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಕೂಡ ದಿನವಿಡೀ ನಡೆದ ಧರಣಿಯಲ್ಲಿ ಇದ್ದು ಚಂದ್ರಶೇಖರ್‌ ರಾವ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

2014 ರಲ್ಲಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ನಂತರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷವು ದೇಶದ ರಾಜಧಾನಿಯಲ್ಲಿ ನಡೆಸುತ್ತಿರುವ ಮೊದಲ ಪ್ರತಿಭಟನಾ ರ್‍ಯಾಲಿ ಇದಾಗಿದೆ.

ಈ ಮಧ್ಯೆ, ಬಿಜೆಪಿ ತೆಲಂಗಾಣ ಭವನದ ಪ್ರತಿಭಟನಾ ಸ್ಥಳದ ಬಳಿ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಹಲವು ಪೋಸ್ಟರ್‌ಗಳನ್ನು ಹಾಕಿದೆ.

ಬಿಜೆಪಿ ತೆಲಂಗಾಣ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪೋಸ್ಟರ್‌ನಲ್ಲಿ, “ಕೆ. ಚಂದ್ರಶೇಖರ ರಾವ್‌, ಅಕ್ಕಿ ಖರೀದಿಯಲ್ಲಿ ನಿಮ್ಮ ಸಮಸ್ಯೆ ಏನು, ಈ ಧರಣಿ ಯಾಕೆ? ಇದು ರಾಜಕೀಯಕ್ಕಾಗಿಯೆ? ಅಥವಾ ರೈತರಿಗಾಗಿಯೆ? ನಿಮಗೆ ಸಾಧ್ಯವಾದರೆ ಅಕ್ಕಿ ಖರೀದಿಸಿ, ಇಲ್ಲದಿದ್ದರೆ ಸ್ಥಾನದಿಂದ ಕೆಳಗಿಳಿಯಿರಿ” ಎಂದು ಉಲ್ಲೇಖಿಸಲಾಗಿದೆ.

ಇತ್ತೀಚೆಗೆ, ಟಿಆರ್‌ಎಸ್ ಕಾರ್ಯಕರ್ತರು ತೆಲಂಗಾಣದಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ದೇಶದಲ್ಲಿ “ಏಕರೂಪ” ಖರೀದಿ ನೀತಿಗಾಗಿ ತಮ್ಮ ಬೇಡಿಕೆಯನ್ನು ಒತ್ತಾಯಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ: ಹಿಜಾಬ್ ರಾಜಕೀಯ: ಬಿಜೆಪಿ ಮೇಲೆ ತೆಲಂಗಾಣ ಸಿಎಂ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಚಲೋ’ ಪ್ರತಿಭಟನೆ: ಮತ್ತೊಬ್ಬ ರೈತ ಮೃತ್ಯು; 15 ದಿನಗಳಲ್ಲಿ ಆರನೇ ಸಾವು

0
ಪಂಜಾಬ್-ಹರಿಯಾಣದ ಖನೌರಿ ಗಡಿಯಲ್ಲಿ ಮತ್ತೋರ್ವ ರೈತ ಸಾವನ್ನಪ್ಪಿದ್ದು, ಈ ಮೂಲಕ ಕಳೆದ 15 ದಿನಗಳಲ್ಲಿ 'ದೆಹಲಿ ಚಲೋ' ಮೆರವಣಿಗೆಯಲ್ಲಿ ಭಾಗವಹಿಸಿದ್ದ ಒಟ್ಟು ಆರು ಮಂದಿ ರೈತರು ಮೃತಪಟ್ಟಂತಾಗಿದೆ. ಮೃತ ರೈತನನ್ನು ಕರ್ನೈಲ್ ಸಿಂಗ್ (62)...