ಲಾಕ್‌ಡೌನ್‌ ಸಮಯದಲ್ಲಿ ಅನಾಥರಾದ ನಾಲ್ಕು ಮಕ್ಕಳ ರಕ್ಷಣೆಯ ಹೊಣೆ ಹೊತ್ತ ತೆಲಂಗಾಣ ಸಿಎಂ ಕೆಸಿಆರ್

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಇದ್ದ ಒಬ್ಬ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ನಾಲ್ಕು ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳಲು ತೆಲಗಾಂಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಮುಂದಾಗಿದ್ದಾರೆ.

ಹೈದ್ರಾಬಾದ್‌ನ ಭೌದ್ದನಗರ್ ಎಂಬಲ್ಲಿ ವಾಸವಿದ್ದ ಸಂಜಯ್ ಮತ್ತು ರಾಧ ಇಬ್ಬರೂ ಕೂಲಿಕಾರ್ಮಿಕರು. ಕಷ್ಟಪಟ್ಟು ಅಲ್ಲಿ ಇಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಇವರಿಗೆ ನಾಲ್ಕು ಜನ ಮಕ್ಕಳಿದ್ದು, ಅವರು ತಮ್ಮಂತೆ ಕೂಲಿ ಕಾರ್ಮಿಕರಾಗದೇ ಓದಿ ವಿದ್ಯಾವಂತರಾಗಬೇಕೆಂದು ಸಾಕಷ್ಟು ಕನಸು ಕಂಡಿದ್ದರು.

ಆದರೆ ಮೂರು ವರ್ಷಗಳ ಕೆಳಗೆ ಸಂಜಯ್ ಏಕಾಏಕಿ ಅನಾರೋಗ್ಯದಿಂದ ಮರಣ ಹೊಂದಿದ್ದಾನೆ. ಇದರಿಂದ ನಾಲ್ಕು ಮಕ್ಕಳ ಜವಾಬ್ದಾರಿ ತಾಯಿ ರಾಧ ಹೆಗಲಿಗೆ ಬಿದ್ದಿದೆ. ಅವರೊಬ್ಬರೆ ನಾಲ್ಕು ಮಕ್ಕಳನ್ನು ಓದಿಸುವ ಜವಾಬ್ದಾರಿ ಹೊತ್ತು ಸಾಲಕ್ಕೆ ತುತ್ತಾಗಿದ್ದಾರೆ.

ನಾಲ್ಕು ಮಕ್ಕಳನ್ನು ಒಬ್ಬರೆ ದುಡಿದು ಸಾಕುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ. ಸಾಕಷ್ಟು ಒತ್ತಡದಲ್ಲಿದ್ದ ರಾಧರವರಿಗೂ ಅನಾರೋಗ್ಯ ಕಾಡತೊಡಗಿತ್ತು. ಇಂತಹ ಸಮಯದಲ್ಲಿ ಎರಗಿಬಂದ 21 ದಿನಗಳ ಲಾಕ್‌ಡೌನ್‌ ಅವರನ್ನು ಅಕ್ಷರಶಃ ಪ್ರಪಾತಕ್ಕೆ ತಳ್ಳಿದೆ. ಕೆಲಸವಿಲ್ಲದೇ ನಾಲ್ಕು ಜನರನ್ನು ಸಾಕುವ ಒತ್ತಡ ಅವರನ್ನು ಕೊನೆಗೂ ಸಾವಿನ ದವಡೆಗೆ ತಳ್ಳಿಬಿಟ್ಟಿದೆ.

ಮೊದಲೇ ತಂದೆ ಕಳೆದುಕೊಂಡು ದುಃಖದಲ್ಲಿದ್ದ ನಾಲ್ಕು ಮತ್ತು ತಮ್ಮ ತಾಯಿಯ ಮರಣದಿಂದ ಆಘಾತಕ್ಕೊಳಕ್ಕಾಗಿದ್ದಾರೆ. ಅವರು ಎಷ್ಟು ಬಡವರೆಂದರ ರಾಧರವರು ಮರಣ ಹೊಂದಿದಾಗ ಅವರ ಅಂತ್ಯಕ್ರಿಯೆ ಮಾಡಲು ಸಹ ಅವರ ಸಂಬಂಧಿಕರ ಬಳಿ ಹಣವಿರಲಿಲ್ಲ. ಕೊನೆಗೆ ಸ್ವಯಂ ಸೇವಾ ಸಂಸ್ಥೆಯೊಂದುಸ ಸರ್ಕಾರದ ಸಹಾಯದಿಂದ ಅಂತ್ಯಕ್ರಿಯೆ ಮಾಡಿದೆ.

ಇಂತಹ ಸಮಯದಲ್ಲಿ ತಬ್ಬಲಿಗಳಾಗಿ ದಿಕ್ಕುತೋಚದೆ ಕಂಗಲಾಗಿದ್ದ ಈ ಮಕ್ಕಳ ವಿಷಯವನ್ನು ತಿಳಿದ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ “ಈ ಘಟನೆ ನನ್ನ ಮನಸ್ಸನ್ನು ತಟ್ಟಿದೆ. ಹಾಗಾಗಿ ಆ ನಾಲ್ಕು ಜನ ಮಕ್ಕಳನ್ನು ಸರ್ಕಾರವೇ ನೋಡಿಕೊಳ್ಳಲಿದ್ದು, ಅವರನ್ನು ಶೀಘ್ರ ಜಿಲ್ಲಾಧಿಕಾರಿಗಳ ಉಸ್ತುವಾರಿಗೆ ನೀಡಬೇಕೆಂದು ತಿಳಿಸಿದ್ದಾರೆ.

ಆ ಮಕ್ಕಳ ಎಲ್ಲಾ ರೀತಿ ಜವಾಬ್ದಾರಿಯನ್ನು ಸರ್ಕಾರವೇ ಭರಿಸುವುದಾಗಿ ಹೇಳಿರುವ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ ಆ ಮಕ್ಕಳ ಶಿಕ್ಷಣ ಸೇರಿದಂತೆ ಇತರ ಅಗತ್ಯಗಳನ್ನು ನೋಡಿಕೊಳ್ಳುವಂತೆ ಸೂಚನೆಗಳನ್ನು ನೀಡಿದ್ದಾರೆ. ಅವರು ಕಷ್ಟಕಾಲದಲ್ಲಿ ಮಾನವೀಯತೆ ಸಾರುವ ಮೂಲಕ ಮಾದರಿಯಾಗಿದ್ದಾರೆ.

ಇತ್ತ ಕರ್ನಾಟಕದಲ್ಲಿ ಸಿಂಧನೂರಿನ ಗಂಗಮ್ಮ ಎಂಬ ಹೆಣ್ಣು ಮಗಳೊಬ್ಬಳು ಲಾಕ್‌ಡೌನ್‌ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತನ್ನೂರಿಗೆ ಹೊರಟಿದ್ದಾಗ ಅನ್ನ ನೀರು ಸಿಗದೇ ಬಳಲಿ ಸಾವನಪ್ಪಿದ ಘಟನೆ ಇದೇ ಸಮಯದಲ್ಲಿ ಜರುಗಿದೆ.


ಇದನ್ನೂ ಓದಿ: ಮಾಧ್ಯಮಗಳೇ, ಧರ್ಮವೀರರೇ ಗಂಗಮ್ಮನ ಸಾವಿನ ಹೊಣೆಯನ್ನು ನೀವೂ ಹೊರಬೇಕಲ್ಲವೇ? 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here