Homeಅಂತರಾಷ್ಟ್ರೀಯಉಕ್ರೆನ್ ಸೇನಾ ವಿಮಾನ ಪತನ: 22 ಜನರ ಸಾವು

ಉಕ್ರೆನ್ ಸೇನಾ ವಿಮಾನ ಪತನ: 22 ಜನರ ಸಾವು

ಉಕ್ರೇನ್ ರಾಜಧಾನಿ ಕೈವ್‌ನಿಂದ ಪೂರ್ವಕ್ಕೆ 400 ಕಿ.ಮೀ ದೂರದಲ್ಲಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ 28 ಜನರನ್ನು ಹೊತ್ತ An-26 ವಿಮಾನ ಅಪಘಾತಕ್ಕೀಡಾಗಿದೆ.

- Advertisement -
- Advertisement -

ವಾಯುಯಾನ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಉಕ್ರೇನಿಯನ್ ಮಿಲಿಟರಿ ವಿಮಾನವು ಇಳಿಯುತ್ತಿರುವಾಗ ನೆಲಕ್ಕೆ ಅಪ್ಪಳಿಸಿ ಪತನಗೊಂಡಿದ್ದು, 22 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ತುರ್ತು ಸೇವೆ ತಿಳಿಸಿದೆ.

ಉಕ್ರೇನ್ ರಾಜಧಾನಿ ಕೈವ್‌ನಿಂದ ಪೂರ್ವಕ್ಕೆ 400 ಕಿ.ಮೀ ದೂರದಲ್ಲಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ 28 ಜನರನ್ನು ಹೊತ್ತ An-26 ವಿಮಾನ ಅಪಘಾತಕ್ಕೀಡಾಗಿದೆ.

ಇದನ್ನೂ ಓದಿ: ಶೀಘ್ರವೇ ಯುದ್ಧವಿಮಾನ ’ರಫೇಲ್’ ಹಾರಿಸಲಿರುವ ಮಹಿಳಾ ಪೈಲಟ್

ಮಿಲಿಟರಿ ವಿಮಾನ ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ಪ್ರಕಟಣೆಯಲ್ಲಿ ತಿಳಿಸಿದೆ. “22 ಜನರ ಶವಗಳು ಪತ್ತೆಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಮತ್ತು ನಾಲ್ಕು ಜನರ ಹುಡುಕಾಟ ಮುಂದುವರೆದಿದೆ” ಎಂದು ಅದು ಹೇಳಿದೆ.

ವಿಮಾನವು ಮಿಲಿಟರಿ ಸಿಬ್ಬಂದಿಯನ್ನು ಹೊಂದಿದ್ದು, ವಿಮಾನದಲ್ಲಿದ್ದವರಲ್ಲಿ ಹೆಚ್ಚಿನವರು ರಕ್ಷಣಾ ಸಚಿವಾಲಯ ನಡೆಸುತ್ತಿರುವ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಗಂಭೀರವಾಗಿ ಗಾಯಗೊಂಡ ಇಬ್ಬರನ್ನು  ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಾಪತ್ತೆಯಾದ ನಾಲ್ವರ ಹುಡುಕಾಟ ಮುಂದುವರೆದಿದೆ ಎಂದು ಉಪ ಆಂತರಿಕ ಸಚಿವ ಆಂಟನ್ ಗೆರಾಶ್ಚೆಂಕೊ ತಿಳಿಸಿದ್ದಾರೆ. ಅಫಘಾತಕ್ಕೆ ಕಾರಣಗಳು ಇನ್ನೂ ತಿಳಿದು ಬಂದಿಲ್ಲ.


ಇದನ್ನೂ ಓದಿ: ಕೋಯಿಕೋಡ್ ವಿಮಾನ ದುರಂತ ಅಪಘಾತವಲ್ಲ, ಭೀಕರ ಕೊಲೆ!: ಕ್ಯಾಪ್ಟನ್ ಮೋಹನ್ ರಂಗನಾಥನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...