Homeಮುಖಪುಟಸಚಿವ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ನ್ಯಾಯಾಲಯ

ಸಚಿವ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ನ್ಯಾಯಾಲಯ

- Advertisement -
- Advertisement -

ಆರೋಗ್ಯ ಮತ್ತು ವೈಧ್ಯಕೀಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆರ್.ಆಂಜನೇಯ ರೆಡ್ಡಿಯವರು ಸಚಿವ ಸುಧಾಕರ್ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮ್ಮೆ ಅರ್ಜಿಯನ್ನು ಪರೀಶೀಲಿಸಿದ ನ್ಯಾಯಾಲಯವು, ಸುಪ್ರೀಂ ಕೋರ್ಟ್ ಉಲ್ಲೇಖದ ಆಧಾರದಲ್ಲಿ ಮಾನನಷ್ಟ ಪ್ರಕರಣವನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ

2019ರಲ್ಲಿ ಡಾ.ಕೆ ಸುಧಾಕರ್‌ರವರನ್ನು ಅಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆಗ ಸುಧಾಕರ್‌ರವರ ಅರ್ಹತೆ ಮತ್ತು ಮಾನದಂಡವನ್ನು ಪ್ರಶ್ನಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆರ್.ಆಂಜನೇಯ ರೆಡ್ಡಿಯವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಸುಧಾಕರ್, “ಕಾನೂನು ಹೋರಾಟದಲ್ಲಿ ಜಯ ನನ್ನದೆ, ರೈತರಿಗೆ ಕಳ್ಳಭಟ್ಟಿ ಕುಡಿಸಿ ಜೈಲು ಸೇರಿದ್ದ ವ್ಯಕ್ತಿ ನನ್ನ ವಿರುದ್ಧ ಹೋರಾಡುತ್ತಿದ್ದಾರೆ. ಒಂದು ಪಕ್ಷದಲ್ಲಿ ಗುರುತಿಸಿಕೊಂಡ ರೈತ ವಿರೋಧಿ ವ್ಯಕ್ತಿ ನನ್ನ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ” ಎಂದು ಆರೋಪಿಸಿದ್ದರು.

ಇದರ ವಿರುದ್ಧ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಆಂಜನೇಯ ರೆಡ್ಡಿಯವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಮೇಲ್ನೋಟಕ್ಕೆ ಆರೋಪ ಸರಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ವಿರುದ್ಧ ಮತ್ತು ಅದನ್ನು ಪ್ರಕಟಿಸಿದ ಉದಯವಾಣಿ ಮತ್ತು ವಿಜಯ ಕರ್ನಾಟಕ ಪತ್ರಿಕೆಯ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ಆದೇಶಿಸಿದೆ.

ರಾಜಕಾರಣಿಗಳಿಗೆ ಇದು ಪಾಠವಾಗಲಿ – ಆರ್.ಆಂಜನೇಯ ರೆಡ್ಡಿ

ಪ್ರಕರಣದ ಕುರಿತು ನಾನುಗೌರಿ.ಕಾಂನೊಂದಿಗೆ ಮಾತನಾಡಿದ ಆಂಜನೇಯರೆಡ್ಡಿಯವರು, “ನಮ್ಮ ರಾಜ್ಯದಲ್ಲಿ ಹಲವಾರು ವಿಚಾರಗಳನ್ನಿಟ್ಟು ಸಾವಿರಾರು ಜನರು ಹೋರಾಟ ನಡೆಸುತ್ತಿದ್ದಾರೆ. ಆದರೆ ಹೋರಾಟಗಾರರನ್ನು ಸರ್ಕಾರ ಮತ್ತು ರಾಜಕಾರಣಿಗಳು ಲಘುವಾಗಿ ಕಾಣುವ ಪರಿಪಾಠ ಬೆಳೆಯುತ್ತಿದೆ. ಚಳವಳಿಗಾರರ ವಿರುದ್ಧ ಪೊಲೀಸರನ್ನು ಬಿಟ್ಟು ಸುಳ್ಳು ಕೇಸುಗಳನ್ನು ಹಾಕಿಸುವುದು, ಅವರ ಧ್ವನಿಯನ್ನು ದಮನಿಸುವ ಕೆಲಸ ನಡೆಯುತ್ತಿದೆ. ಅಂತಹವರಿಗೆ ಇಂದಿನ ತೀರ್ಪು ಪಾಠವಾಗಬೇಕು” ಎಂದರು.

ಆರ್.ಆಂಜನೇಯ ರೆಡ್ಡಿ

ನಾನು ಸುಧಾಕರ್‌ರವರ ವಿರುದ್ಧ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದಾಗ ಅದನ್ನು ಅವರು ನ್ಯಾಯಯುತವಾಗಿ ಹೋರಾಡಬೇಕಿತ್ತು. ಅದನ್ನು ಬಿಟ್ಟು ನಿಂದನೆ ಮಾಡುವುದು, ತೇಜೋವಧೆ ಮಾಡಿದ್ದನ್ನು ಸಹಿಸಲು ಸಾಧ್ಯವಿಲ್ಲ. ಇದು ಹೋರಾಟಗಾರರ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಚಳವಳಿಕಾರರ ನೈತಿಕ ಶಕ್ತಿಯನ್ನು ಕುಂದಿಸುವ ಉದ್ದೇಶದಿಂದ ಕೂಡಿತ್ತು. ಹಾಗಾಗಿ ರಾಜಕಾರಣಿಗಳು ಈ ರೀತಿ ವರ್ತಿಸದಂತೆ ತಡೆಯಲು ನಾವು ಗಂಭೀರವಾಗಿ ಪರಿಗಣಿಸಿ ದೂರು ನೀಡಿದೆವು. ಒಬ್ಬರಿಗೆ ಬುದ್ಧಿ ಕಲಿಸಿದರೆ ಉಳಿದವರು ಸಹ ಎಚ್ಚೆತ್ತುಕೊಳ್ಳುತ್ತಾರೆ ಎಂದು ನಿರಂತರವಾಗಿ ಪ್ರಕರಣವನ್ನು ಫಾಲೋಅಪ್ ಮಾಡಿದೆವು. ಸಾಕ್ಷಿ ಆಧಾರಗಳನ್ನು ನೋಡಿದ ಮೇಲೆ ಕೋರ್ಟ್ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದೆ. ಇಂದಿನ ಆದೇಶದಿಂದ ಹೋರಾಟಗಾರರಲ್ಲಿ ನಂಬಿಕೆ ಮತ್ತು ವಿಶ್ವಾಸ ಬರಬೇಕು ಎಂದು ಆಶಿಸಿದರು.

ಇದನ್ನೂ ಓದಿ: ರಾಜಕೀಯ ನಿರ್ಧಾರಕ್ಕೆ ಅಣಿಯಾಗಬೇಕಿರುವ ರೈತ ಚಳವಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಆಂಜನೇಯರೆಡ್ಡಿ ರವರ ಹೋರಾಟದ ಫಲವಾಗಿ ಸರ್ಕಾರ ಮತ್ತು ರಾಜಕಾರಣಿಗಳಿಗೆ ತಕ್ಕ ಪಾಠವನ್ನು ಕಲಿಸಿದೆ
    ಜೈ ಭೀಮ್ 👍🙏

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...