Homeಮುಖಪುಟನೆರೆಯ ರಾಜ್ಯಗಳಿಂದ ಹೆಚ್ಚಿನ ನೀರು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ದೆಹಲಿ ಸರ್ಕಾರ

ನೆರೆಯ ರಾಜ್ಯಗಳಿಂದ ಹೆಚ್ಚಿನ ನೀರು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ದೆಹಲಿ ಸರ್ಕಾರ

- Advertisement -
- Advertisement -

ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ಮಧ್ಯೆ ನೆರೆಯ ಹರಿಯಾಣ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ಹೆಚ್ಚುವರಿ ನೀರಿನ ಪೂರೈಕೆಯನ್ನು ಪಡೆಯಲು ದೆಹಲಿ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಇದಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜಧಾನಿಯೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳು ನೀರಿನ ಪೂರೈಕೆಯನ್ನು ಕಡಿಮೆಗೊಳಿಸಿವೆ ಎಂದು ಹೇಳಿಕೊಂಡಿದ್ದರು.

“ಬಿಜೆಪಿಯು ಹರಿಯಾಣ ಮತ್ತು ಯುಪಿಯಲ್ಲಿ ತನ್ನ ಸರ್ಕಾರಗಳೊಂದಿಗೆ ಮಾತನಾಡಿ ದೆಹಲಿಗೆ ಒಂದು ತಿಂಗಳ ಕಾಲ ನೀರು ಕೊಟ್ಟರೆ, ದೆಹಲಿಯ ಜನರು ಬಿಜೆಪಿಯ ಈ ಕ್ರಮವನ್ನು ಬಹಳವಾಗಿ ಮೆಚ್ಚುತ್ತಾರೆ, ಇಂತಹ ಸುಡುವ ಬಿಸಿಯು ಯಾರ ನಿಯಂತ್ರಣದಲ್ಲಿಲ್ಲ. ಆದರೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಜನರಿಗೆ ಪರಿಹಾರವನ್ನು ನೀಡಬಹುದು” ಎಂದರು.

ನೀರಿನ ಬಿಕ್ಕಟ್ಟಿನ ನಡುವೆ, ದೆಹಲಿ ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳನ್ನು ಪರಿಚಯಿಸಿದೆ. ಇದರಲ್ಲಿ ಯಾರಾದರೂ ನೀರನ್ನು ವ್ಯರ್ಥ ಮಾಡುವುದು ಕಂಡುಬಂದರೆ ಅವರಿಗೆ ₹ 2,000 ದಂಡ ವಿಧಿಸಲಾಗುತ್ತದೆ. ನಿರ್ಮಾಣ ಸ್ಥಳಗಳು ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ಅಕ್ರಮ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿದೆ.

ಇದನ್ನೂ ಓದಿ; ಈಶಾನ್ಯ ಭಾರತದಲ್ಲಿ ರೆಮಲ್ ಚಂಡಮಾರುತ ಪ್ರಭಾವ: ಭೂಕುಸಿತ, ಪ್ರವಾಹದಲ್ಲಿ 40 ಮಂದಿ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್-ಯುಜಿ ಪರಿಷ್ಕೃತ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ, ಹಳೆಯ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತಿದೆ: ಕೇಂದ್ರ

0
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯು ಇಂದು ಪರಿಷ್ಕೃತ ನೀಟ್ ಯುಜಿ 2024 ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ ಎಂಬ ಊಹಾಪೋಹದ ನಂತರ, ಆರಂಭದಲ್ಲಿ ನೀಡಲಾದ ಪರಿಹಾರದ ಅಂಕಗಳನ್ನು ಹಿಂತೆಗೆದುಕೊಳ್ಳುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ,...