Homeಮುಖಪುಟಬಿಜೆಪಿಗೆ ಮುಳುವಾದ 'ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ

ಬಿಜೆಪಿಗೆ ಮುಳುವಾದ ‘ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ

- Advertisement -
- Advertisement -

ಕೇರಳ ಸ್ಟೋರಿ ಎಂಬ ಕಲ್ಪಿತ ಚಲನಚಿತ್ರ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ ಸ್ಟೋರಿಯಿಂದ ಬಿಜೆಪಿಗೆ ಬೀಳಬೇಕಿದ್ದ ಮತಗಳು ಕೂಡ ಈಗ ಸಿಗದಂತಾಗಿದೆ ಎಂದು ಕೇರಳದ ಮಲಪ್ಪುರಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಎಂ ಅಬ್ದುಲ್ ಸಲಾಂ ಅಸಹಾಯಕತೆ ತೋಡಿಕೊಂಡಿದ್ದಾರೆ.

ಡಾ ಎಂ ಅಬ್ದುಲ್ ಸಲಾಂ ಎನ್‌ಡಿಎ ಮೈತ್ರಿಕೂಟದ ಕೇರಳದ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಮೋದಿ ಕೇರಳಕ್ಕೆ ಚುನಾವಣೆ ಪ್ರಚಾರಕ್ಕೆ ಬಂದಾಗ ಸಲಾಂ ಅವರನ್ನು ಆಹ್ವಾನಿಸಿಲ್ಲ ಎಂದು ಹೇಳಲಾಗಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇರಳದಲ್ಲಿ ‘ಕೇರಳ ಸ್ಟೋರಿ ಚಲನಚಿತ್ರ’ವನ್ನು ದೂರದರ್ಶನ ಪ್ರಸಾರ ಮಾಡುವ ಬಗ್ಗೆ ಕೇರಳ ಕಾಂಗ್ರೆಸ್ ‘ಭಾರತೀಯ ಚುನಾವಣಾ ಆಯೋಗ’ವನ್ನು (ಇಸಿಐ) ಸಂಪರ್ಕಿಸಿ ದೂರು ನೀಡಿತ್ತು. ದೂರದರ್ಶನದ ನಿರ್ಧಾರವು ಕೇರಳದ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಎರಡರಿಂದಲೂ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಬಿಜೆಪಿ ಅಭ್ಯರ್ಥಿಯೇ ಈ ಕಲ್ಪಿತ ಸಿನಿಮಾ ಪ್ರದರ್ಶನದಿಂದ ಬಿಜೆಪಿ ವೋಟ್‌ ಬ್ಯಾಂಕ್‌ಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.

ಕೇರಳ ಸ್ಟೋರಿ ಸಿನಿಮಾ ಪ್ರದರ್ಶಿಸುವುದರಿಂದ ಮುಸ್ಲಿಮರು ಬಿಜೆಪಿಯಿಂದ ದೂರವಾಗುತ್ತಾರೆ. ಚುನಾವಣಾ ಸಂದರ್ಭವಾಗಿರುವ ಹಿನ್ನೆಲೆ ಮತಗಳ ಮೇಲೆ ಪ್ರಭಾವ ಬೀರುತ್ತದೆ. ಮಲಪ್ಪುರಂ ಕ್ಷೇತ್ರದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ ಎಂದು ಹೇಳಿದ್ದಾರೆ. ನನಗೆ ಶೇ.70ರಷ್ಟು ಮುಸ್ಲಿಮರಿರುವ ಜಿಲ್ಲೆಯಿಂದ ಟಿಕೆಟ್‌ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ.5ರಷ್ಟು ಮತ ಪಡೆದಿದೆ. ಈ ವಿದಾತ್ಮಕ ಸಿನಿಮಾದಿಂದ ಈ ಕ್ಷೇತ್ರದಲ್ಲಿ ನಾನು ಅನುಭವಿಸುತ್ತಿರುವ ಸಮಸ್ಯೆಯನ್ನು ಚೆನ್ನಾಗಿ ಊಹಿಸಬಹುದು ಎಂದು ಹೇಳಿದ್ದಾರೆ.

ಕೇರಳದ ಸ್ಟೋರಿ ಸಿನಿಮಾ ಆರಂಭದಿಂದಲೂ ವಿವಾದಾತ್ಮಕವಾಗಿದೆ. ಇದು ಕೇರಳವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ ಮತ್ತು ಕೇರಳದ ಮುಸ್ಲಿಂ ಸಮುದಾಯಗಳ ಬಗ್ಗೆ ತಪ್ಪು ಸಂದೇಶ ನೀಡುತ್ತದೆ. ಈ ಚಲನಚಿತ್ರವನ್ನು ಇತ್ತೀಚೆಗೆ ಭಾರತದ ಸರ್ಕಾರಿ ಸ್ವಾಮ್ಯದ ದೂರದರ್ಶನ ಪ್ರಸಾರಕ್ಕಾಗಿ ಆಯ್ಕೆ ಮಾಡಿತ್ತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಸೇರಿದಂತೆ ಹಲವಾರು ರಾಜಕಾರಣಿಗಳು ಚಲನಚಿತ್ರವನ್ನು ಟೀಕಿಸಿದ್ದರು.

ಇದು ಪಕ್ಷದ ನಿಲುವಲ್ಲ, ಕೇವಲ ನನ್ನ ವೈಯಕ್ತಿಕ ಅಭಿಪ್ರಾಯ ಎಂದ ಡಾ ಎಂ ಅಬ್ದುಲ್ ಸಲಾಂ, ಮತಬ್ಯಾಂಕ್ ನಡುವೆ ಹಗೆತನವನ್ನು ಹುಟ್ಟುಹಾಕಲು ಇದು ಸೂಕ್ತ ಸಮಯವಲ್ಲ ಎಂದು ನಾನು ನಂಬುತ್ತೇನೆ. 70% ಮುಸ್ಲಿಮರು ಮತಬ್ಯಾಂಕ್ ಹೊಂದಿರುವ ಕ್ಷೇತ್ರದಲ್ಲಿ ನಾನು ಮುಸ್ಲಿಮರ ಶತ್ರು ಎಂಬ ಹಣೆಪಟ್ಟಿ ಹೊಂದಲು ಬಯಸುವುದಿಲ್ಲ ಎಂದು ಹೇಳಿದರು. ಕೇರಳ ಸ್ಟೋರಿ ಚಿತ್ರದ ಕುರಿತು ಮಾತನಾಡಿದ ಅವರು, ನಾನು ಸಿನಿಮಾವನ್ನು ನೋಡಿಲ್ಲ ಮತ್ತು ಚಿತ್ರದ ವಿಷಯದ ಬಗ್ಗೆ ಧನಾತ್ಮಕ ಅಥವಾ ಋಣಾತ್ಮಕ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ. ಇದೊಂದು ಕಥೆ. ಕಥೆಯು ವಾಸ್ತವವನ್ನು ಆಧರಿಸಿರಬಹುದು ಅಥವಾ ಕಾಲ್ಪನಿಕ ಕಥೆಯನ್ನು ಆಧರಿಸಿರಬಹುದು. ಆದ್ದರಿಂದ ಗೊಂದಲವು ತುಂಬಾ ಇದೆ, ಏಕೆಂದರೆ ಕಥೆಯ ನೈಜತೆಯ ಬಗ್ಗೆ ನಿಮಗೆ ತಿಳಿದಿಲ್ಲ, ಅದು ನಿಜವೋ ಅಥವಾ ಕಾಲ್ಪನಿಕವೋ, ನಾನು ಕೇರಳ ಕಥೆಯನ್ನು ನೋಡಿಲ್ಲ ಮತ್ತು ನಾನು ಈ ಬಗ್ಗೆ ಪ್ರಚಾರ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಜಾರಿಗೊಳಿಸುವ ಭರವಸೆಯ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈಗ ಸಿಎಎ ನಿಯಮಗಳನ್ನು ತಿಳಿಸಲಾಗಿದೆ. ಇದು ಅಲ್ಪಸಂಖ್ಯಾತರಲ್ಲಿ ಸಾಕಷ್ಟು ಗೊಂದಲ ಮತ್ತು ಆಕ್ರೋಶವನ್ನು ಸೃಷ್ಟಿಸಿದೆ. ಆದರೆ ನೀವು ಕಾಯಿದೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಅದು ಜನರನ್ನು ಎಂದೂ ದೇಶ ತೊರೆಯಲು ಹೇಳುವುದಿಲ್ಲ ಎಂದು ನಿಮಗೆ ಅರಿವಾಗುತ್ತದೆ. ಇದು ಅರ್ಹ ಜನರನ್ನು ದೇಶಕ್ಕೆ ಸೇರಿಸುವುದಕ್ಕಾಗಿದೆ. ವಿರೋಧ ಪಕ್ಷಗಳು ಈ ಬಗ್ಗೆ ಗೊಂದಲ ಸೃಷ್ಟಿಸಿದೆ. ನಾವು ಗೊಂದಲವನ್ನು ನಿವಾರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಚುನಾವಣಾ ಪ್ರಚಾರದ ವೇಳೆ ಮಹಿಳೆಯೋರ್ವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಸ್ಥಳದಿಂದ ಕಾಲ್ಕಿತ್ತ ಬಿಜೆಪಿ ಸಂಸದ ಪಿಸಿ ಮೋಹನ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...