Homeಕರ್ನಾಟಕ‘ಬಾಳಿಗ ಕೊಲೆಯ ಬಗ್ಗೆ ಬಾಯಿಬಿಡದವರು, ದಲಿತ ವ್ಯಕ್ತಿ ಕೊಲೆಯಾದದ್ದು ಖಂಡಿಸುತ್ತಾರಾ?’

‘ಬಾಳಿಗ ಕೊಲೆಯ ಬಗ್ಗೆ ಬಾಯಿಬಿಡದವರು, ದಲಿತ ವ್ಯಕ್ತಿ ಕೊಲೆಯಾದದ್ದು ಖಂಡಿಸುತ್ತಾರಾ?’

- Advertisement -
- Advertisement -

“ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರು ಕೊಲೆಯಾಗಿದ್ದರ ಬಗ್ಗೆ ಇಲ್ಲಿಯ (ಕರಾವಳಿ) ಮುಖಂಡರು ಇದುವರೆಗೂ ಬಾಯಿ ತೆರೆದಿಲ್ಲ. ಇನ್ನು ಧರ್ಮಸ್ಥಳದ ದಲಿತ ವ್ಯಕ್ತಿ ದಿನೇಶ ಅವರು ಕೊಲೆಯಾಗಿರುವುದನ್ನು ಖಂಡಿಸುತ್ತಾರಾ?” ಎಂದು ಸಂಘ ಪರಿವಾರದ ಮಾಜಿ ನಾಯಕ ಸುನಿಲ್ ಬಜಿಲಕೇರಿ ಪ್ರಶ್ನಿಸಿದ್ದಾರೆ.

‘ನಾನುಗೌರಿ.ಕಾಂ’ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, “ನಮ್ಮಲ್ಲಿ ಕೊಲೆಯಾದವರು ಮುಖ್ಯವಲ್ಲ, ಯಾರು ಕೊಲೆ ಮಾಡಿದ್ದೆನ್ನುವುದು ಮುಖ್ಯ. ಹಾಗಾಗಿ ಶರತ್ ಮಡಿವಾಳನ ಜೀವಕ್ಕಿರುವ ಬೆಲೆ ವಿನಾಯಕ ಬಾಳಿಗರ ಜೀವಕ್ಕಿಲ್ಲ. ಹರ್ಷನ ಜೀವಕ್ಕಿರುವ ಬೆಲೆ ದಿನೇಶರ ಜೀವಕ್ಕಿಲ್ಲ” ಎಂದು ವಿಷಾದಿಸಿದ್ದಾರೆ.

“ಅಷ್ಟೇ ಯಾಕೆ ಪಾಕ್ ಸೈನಿಕರಿಂದ ಹತರಾದ ಯೋಧರಿಗಿರುವ ಬೆಲೆ ಗಾಲ್ವಾನ್‍ನಲ್ಲಿ ಚೀನೀ ಸೈನಿಕರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗಿಲ್ಲ. ಅದೇ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಅಪಹರಿಸಿದ ಹತ್ತು ಮಂದಿ ಭಾರತೀಯ ಸೈನಿಕರ ಬಗ್ಗೆ ನಮ್ಮಲ್ಲಿ ಯಾವತ್ತಾದರೂ ಚರ್ಚೆ ನಡೆದಿದೆಯೇ? ಊಹುಂ! ನಮ್ಮಲ್ಲಿ ನೀರವ ಮೌನ” ಎಂದು ಹೇಳಿದ್ದಾರೆ.

ಸಂಘ ಪರಿವಾರದ ಮಾಜಿ ನಾಯಕ ಸುನಿಲ್ ಬಜಿಲಕೇರಿ

“ನಮ್ಮ ದೇಶಭಕ್ತಿ ಉಕ್ಕಿ ಹರಿಯಬೇಕಾದರೆ, ನಮ್ಮ ಘೋಷಣೆಗಳು ಮುಗಿಲು ಮುಟ್ಟಬೇಕಾದರೆ, ನಮ್ಮ ಜನರ ಹಾಗೂ ನಾಯಕರ ಎದೆಯ ವಿಸ್ತೀರ್ಣ ಜಗತ್ತಿಗೆ ತಿಳಿಯಬೇಕಾದರೆ ನಮ್ಮ ಶತ್ರು ಮುಸ್ಲಿಮನಾಗಿರಬೇಕು ಇಲ್ಲವೇ ನಮ್ಮ ಸಂತ್ರಸ್ತರು ಸಮಾಜದ ಗಣ್ಯ ವರ್ಗದವರಾಗಿರಬೇಕು” ಎಂದು ಅವರು ಟೀಕಿಸಿದ್ದಾರೆ.

“ಇಲ್ಲಿ ಮುಸ್ಲಿಮರ ಜೀವಕ್ಕೆ ಬೆಲೆಯಿಲ್ಲ. ಆದರೆ ಮುಸ್ಲಿಮರಿಂದ ಕೊಲೆಯಾದ ದೇಹಕ್ಕೆ ಬೆಲೆಯಿದೆ. ಇದು ಸಿರಿವಂತರ ಸಮಾಜ, ಇದು ಗಣ್ಯರ ಸಮಾಜ, ಇದು ಮೇಲ್ವರ್ಗದವರ ಸಮಾಜ. ಇಲ್ಲಿ ದೊಡ್ಡವರ, ಉಳ್ಳವರ ಪ್ರಾಣಕ್ಕೆ ಬೆಲೆಯೇ ಹೊರತು, ತಳವರ್ಗದ, ಬಡವರ ಪ್ರಾಣಕ್ಕಲ್ಲ. ಇದು ಇಂದಿನ ವಿದ್ಯಾಮಾನ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕರಾವಳಿಯ ಸಾಮಾನ್ಯರು ಬುದ್ಧಿವಂತರಾಗುತ್ತಿದ್ದಾರೆ’

“ನಮ್ಮ ಕರಾವಳಿ ಯಾಕೆ ಶಾಂತವಾಗಿದೆ? ಮಂಗಳೂರಿನಲ್ಲಿ ನಾಗವನ ದೇವಸ್ಥಾನಕ್ಕೆ ಅಪಚಾರವಾದರೂ ಕೂಡ ನಮ್ಮವರು ಶಾಂತವಾಗಿದ್ದಾರೆ. ದೂರದ ಶಿವಮೊಗ್ಗದಲ್ಲಿ ಸಂಘಟನೆಯ ಯುವಕರನ್ನು ಕೊಲೆ ಮಾಡಿದರೂ ನಮ್ಮ ಮಂಗಳೂರು ಶಾಂತವಾಗಿದೆ. ಕರಾವಳಿಯ ಜನ ಬುದ್ಧಿವಂತರು. ಇದಕ್ಕೆಲ್ಲ ಮುಖ್ಯ ಕಾರಣ- ಕರಾವಳಿ ಜನ ತಮ್ಮ ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುತ್ತಿರುವುದು” ಎಂದು ಸುನಿಲ್ ಬಜಿಲಕೇರಿ ತಿಳಿಸಿದ್ದಾರೆ.

“ಒಂದು ಸಂದರ್ಭದಲ್ಲಿ ಕರಾವಳಿಯ ಹಿಂದುಳಿದ ವರ್ಗದ ಮನೆಗಳಲ್ಲಿ ಕಾರ್ಪೆಂಟರ್, ಮೆಕಾನಿಕ್, ಪ್ಲಂಬರ್ ಪೇಂಟರ್ ಮತ್ತು ಕೂಲಿ ಕೆಲಸ, ಮೇಸ್ತ್ರಿ ಕೆಲಸ ಮಾಡುವವರೇ ಹೆಚ್ಚಾಗಿದ್ದರು. ಈ ಹಿಂದುಳಿದ ವರ್ಗದ ಇಂಥ ಯುವಕರನ್ನು ಪ್ರಚೋದಿಸಲು ಸುಲಭವಾಗುತ್ತಿತ್ತು. ಸುರತ್ಕಲ್ ಪ್ರದೇಶದಲ್ಲಿ ಸತ್ಯಜಿತ್ ಹಿಡಿತವಿದ್ದು ಅವರು ತನ್ನ ಯುವಕರನ್ನು ಯಾವುದೇ ಗಲಭೆಗೆ ಹೋಗದಂತೆ ನಿಯಂತ್ರಿಸಿದ್ದಾರೆ. ಕಾರಣ ಅವರಿಗೆ ಬಿಜೆಪಿಯ ಕುತಂತ್ರ ತಿಳಿದದ್ದು, ಕುದ್ರೋಳಿ ಬಜಿಲಕೇರಿ ಇವತ್ತು ತುಂಬಾ ಶಾಂತವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಬಲಿದಾನಿಗಳ ಕುಟುಂಬಕ್ಕೆ ಎಂಎಲ್‌ಎ ಟಿಕೆಟ್ ನೀಡಿ’

ಹಿಂದುತ್ವ ಹೆಸರಲ್ಲಿ, ಮತೀಯ ರಾಜಕಾರಣದ ಹೆಸರಲ್ಲಿ ಬಡವರ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ ಎಂಬ ಜಾಗೃತಿ ಮೂಡಿಸಲಾಗುತ್ತಿದ್ದು, ಅದರ ಭಾಗವಾಗಿ ಕೊಲೆಯಾದ ಕಾರ್ಯಕರ್ತರ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಈ ಸಂಬಂಧ ಶಿಕ್ಷಣ ತಜ್ಞ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆಯವರು ದನಿಗೂಡಿಸಿದ್ದಾರೆ.


ಇದನ್ನೂ ಓದಿರಿ: ಧರ್ಮಸ್ಥಳ: ಬಜರಂಗದಳ ಮುಖಂಡನಿಂದ ದಲಿತ ಯುವಕನ ಹತ್ಯೆ – ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಡವರ ಮಕ್ಕಳ ಆ ವೇಷಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ದಾಹ ತೀರಿಸಿಕೊಳ್ಳುತ್ತಿರುವ ದಲ್ಬಾಜಿ ನಾಯಕರಿಗೆ ಮುಂದಿದೆ ಮಾರಿ ಹಬ್ಬ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...