Homeಮುಖಪುಟಉತ್ತರಾಖಂಡ ಹಿಮಪ್ರವಾಹ-ಇನ್ನೂ ಮುಂದುವರಿದ ರಕ್ಷಣಾ ಕಾರ್ಯ; 26 ಮೃತದೇಹ ಪತ್ತೆ

ಉತ್ತರಾಖಂಡ ಹಿಮಪ್ರವಾಹ-ಇನ್ನೂ ಮುಂದುವರಿದ ರಕ್ಷಣಾ ಕಾರ್ಯ; 26 ಮೃತದೇಹ ಪತ್ತೆ

- Advertisement -
- Advertisement -

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮ ಪ್ರವಾಹದಲ್ಲಿ ನಾಪತ್ತೆಯಾದವರ ಸಂಖ್ಯೆ 170 ಕ್ಕೆ ಏರಿಕೆಯಾಗಿದೆ. ಪ್ರವಾಹ ಉಂಟಾಗಿ 24 ಗಂಟೆಗಳು ಕಳೆದರೂ ಐಟಿಬಿಪಿ, ಎನ್‌ಡಿಆರ್‌ಎಫ್ ಮತ್ತು ಸೇನಾ ಸಿಬ್ಬಂದಿಗಳು ಇನ್ನೂ ರಕ್ಷಣಾಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾಣೆಯಾದವರಲ್ಲಿ ಹೆಚ್ಚಾಗಿ ವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಎಂದು ವರದಿಯಾಗಿದೆ.

ರಾಜ್ಯ ಎಮೆಜೆನ್ಸಿ ಕಂಟ್ರೋಲ್ ರೂಮ್ ಪ್ರಕಾರ, ಎನ್‌ಟಿಪಿಸಿಯ ತಪೋವನ್ ವಿಷ್ಣುಗಡ್ ಜಲ ವಿದ್ಯುತ್ ಯೋಜನೆ ಮತ್ತು ಖಾಸಗಿ ಒಡೆತನದ ಋಷಿಗಂಗಾ ವಿದ್ಯುತ್ ಯೋಜನೆಯ ಯೋಜನಾ ಸ್ಥಳಗಳಲ್ಲಿ ಈವರೆಗೆ 26 ಮೃತ ಶರೀರಗಳು ಪತ್ತೆಯಾಗಿದೆ.

ಎನ್‌ಟಿಪಿಸಿಯ ತಪೋವನ್ ಸ್ಥಳದಲ್ಲಿ 1,900 ಮೀಟರ್ ಉದ್ದದ ಸುರಂಗದ ಸುತ್ತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಅಲ್ಲಿ ಕನಿಷ್ಠ 35 ಜನರು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಉತ್ತರಾಖಂಡ: ಹಿಮನದಿಯಲ್ಲಿ ಭಾರಿ ಹಿಮ ಪ್ರವಾಹ, 150 ಜನರು ನಾಪತ್ತೆ

“ಜನರು ಸುರಂಗದ ಒಳಗೆ ಇನ್ನೂ ಜೀವಂತವಾಗಿರುವ ಎಲ್ಲ ಅವಕಾಶಗಳಿವೆ. ಇದು ಉದ್ದವಾದ ಸುರಂಗವಾಗಿರುವುದರಿಂದ, ಸಾಕಷ್ಟು ಆಮ್ಲಜನಕವು ಅಲ್ಲಿ ಇರುವ ಸಾಧ್ಯತೆಯಿದೆ. ಈ ಸುರಂಗದ ಒಂದು ಸಣ್ಣ ಮಾರ್ಗ ಕಂಡುಕೊಂಡರೂ, ನಾವು ಕೊಳವೆಗಳ ಮೂಲಕ ಸುರಂಗಕ್ಕೆ ಆಮ್ಲಜನಕವನ್ನು ತುಂಬುತ್ತೇವೆ” ಎಂದು ಐಟಿಬಿಪಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌‌ಪ್ರೆಸ್ ವರದಿ ಮಾಡಿದೆ.

ಈಗಾಗಲೆ ತಪೋವನ್ ಸುರಂಗದಲ್ಲಿ 130 ಮೀಟರ್‌ವರೆಗೂ ತಲುಪಿದ್ದೇವೆ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್‌ ತಿಳಿಸಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಉತ್ತರಾಖಂಡ ಹಿಮ ಪ್ರವಾಹ: ಸುರಂಗದಲ್ಲಿ ಸಿಕ್ಕಿಬಿದ್ದ 12 ಜನರ ರಕ್ಷಣೆ

“ನಿನ್ನೆ ತನಕ ನಾವು ಸುರಂಗದ 80 ಮೀಟರ್ ದೂರ ಹೋಗಿದ್ದೇವೆ. ಸೋಮವಾರ ಸಂಜೆ ವೇಳೆಗೆ ಇನ್ನೂ 50 ಮೀಟರ್ ದೂರ ತಲುಪಿದ್ದೇವೆ. ಇಡೀ ರಾತ್ರಿ ಕಾರ್ಯಾಚರಣೆ ಮುಂದುವರಿಯುತ್ತಿದೆ. ಅಲ್ಲಿ ಬಹಳಷ್ಟು ಕೆಸರು ತುಂಬಿದ್ದು ಅದನ್ನು ತೆಗೆಯಬೇಕಾಗಿದೆ. ಸಶಸ್ತ್ರ ಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಎಲ್ಲರೂ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ” ಎಂದು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಸಂಘಟಿಸುತ್ತಿರುವ ಭಾರತೀಯ ರಿಸರ್ವ್ ಬೆಟಾಲಿಯನ್‌ನ ಕಮಾಂಡೆಂಟ್ ಮಂಜುನಾಥ್ ಎಸ್ ಆರ್ ಹೇಳಿಕೆಯನ್ನು ಪತ್ರಿಗೆ ಉಲ್ಲೇಖಿಸಿದೆ.

ತಪೋವನ್‌‌ ಎನ್‌ಟಿಪಿಸಿ ಯೋಜನಾ ಸ್ಥಳದಲ್ಲಿ ಕೆಲಸ ಮಾಡುವ ಹೆಚ್ಚಿನ ಕಾರ್ಮಿಕರನ್ನು ಖಾಸಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ವಿಪತ್ತು ಪರಿಹಾರ ಅಧಿಕಾರಿ ತಿಳಿಸಿದ್ದಾರೆ. “ಕಂಪನಿಯು ನಮಗೆ ನೀಡಿರುವ ಮಾಹಿತಿಯ ಆಧಾರದಲ್ಲಿ ಮೇಲೆ, ಸುರಂಗದಲ್ಲಿ ಸುಮಾರು 35 ಜನರು ಸಿಲುಕಿಕೊಂಡಿದ್ದಾರೆ. ಇದಲ್ಲದೆ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಜನರು ಸುರಂಗದಲ್ಲಿ ಸಿಲುಕಿಕೊಂಡಿರಬಹುದು” ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ಬಹುಮಾನ ಘೋಷಿಸಿದ ಕಾಂಗ್ರೆಸ್ ನಾಯಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಸರಗೋಡು: ಅಣಕು ಮತದಾನದ ವೇಳೆ ಬಿಜೆಪಿ ಚಿಹ್ನೆಯೊಂದಿಗೆ ಹೆಚ್ಚುವರಿ ಸ್ಲಿಪ್ ಮುದ್ರಿಸಿದ ವಿವಿಪ್ಯಾಟ್

0
ಕೇರಳದ ಕಾಸರಗೋಡಿನಲ್ಲಿ ಬುಧವಾರ (ಏ.17) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಮೂರು ವಿವಿ ಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಮಲದ ಚಿಹ್ನೆಯೊಂದಿಗೆ ತಲಾ...