Homeಮುಖಪುಟ’ದಿ ವೈರ್‌’ಗೆ ಅಂತಾರಾಷ್ಟ್ರೀಯ ಮಟ್ಟದ ಗೌರವ; 2021ರ ಫ್ರೀ ಮೀಡಿಯಾ ಪೊಯೊನೀರ್‌ ಪ್ರಶಸ್ತಿ

’ದಿ ವೈರ್‌’ಗೆ ಅಂತಾರಾಷ್ಟ್ರೀಯ ಮಟ್ಟದ ಗೌರವ; 2021ರ ಫ್ರೀ ಮೀಡಿಯಾ ಪೊಯೊನೀರ್‌ ಪ್ರಶಸ್ತಿ

ಕಾರ್ಪೊರೇಟ್‌ ಪ್ರಧಾನ ಸಾಂಪ್ರದಾಯಿಕ ಮಾದರಿಯನ್ನು ಒಡೆದು, ಓದುಗ ಕೇಂದ್ರಿತ ಪತ್ರಿಕೋದ್ಯಮದತ್ತ ದಿ ವೈರ್‌ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ ಪೆಗಾಸಸ್ ಗೂಢಾಚರ್ಯೆನ್ನು ಬಹಿರಂಗಗೊಳಿಸಿದೆ.

- Advertisement -
- Advertisement -

ನಿರ್ಭೀತ ಹಾಗೂ ಗುಣಮಟ್ಟದ ಪತ್ರಿಕೋದ್ಯಮಕ್ಕೆ ಹೆಸರಾದ, ಅಭಿವ್ಯಕ್ತಿಯ ಗಟ್ಟಿ ದನಿಯಾಗಿ, ಹಣಕಾಸು ಲಾಭದಾಯಕ ಗುರಿಗಳಿಲ್ಲದೆ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದಿರುವ ಭಾರತದ “ದಿ ವೈರ್‌” ಸುದ್ದಿ ಜಾಲತಾಣವು, ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ನೀಡುವ “2021 ಫ್ರೀ ಮೀಡಿಯಾ ಪೊಯೊನೀರ್‌ ಪ್ರಶಸ್ತಿ”ಗೆ ಭಾಜನವಾಗಿದೆ.

ಒಂದು ದೇಶ ಅಥವಾ ಪ್ರದೇಶದಲ್ಲಿ ಸ್ವತಂತ್ರವಾಗಿ ಪತ್ರಿಕೋದ್ಯಮ ನಡೆಸುತ್ತಾ, ಜನರಿಗೆ ನಿಖರ ಸುದ್ದಿಗಳನ್ನು ನೀಡುತ್ತಿರುವ ಸಂಸ್ಥೆಗಳನ್ನು ಗುರುತಿಸಲೆಂದು 1996ರಲ್ಲಿ ಐಪಿಐ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಕಳೆದ ಆರು ವರ್ಷಗಳಿಂದ ಈ ಪ್ರಶಸ್ತಿಯನ್ನು ಕೋಪೆನ್‌ಹೆಗನ್‌ ಮೂಲದ ಇಂಟರ್‌ ನ್ಯಾಷನಲ್‌ ಮೀಡಿಯಾ ಸಪೋರ್ಟ್ (ಐಎಂಎಸ್‌) ಸಹಭಾಗಿತ್ವದಲ್ಲಿ ನೀಡಲಾಗುತ್ತಿದೆ.

ಆಸ್ಟ್ರೇಲಿಯದ ವಿಯೆನ್ನದಲ್ಲಿ ಐಪಿಐ ವಾರ್ಷಿಕ ಮಹೋತ್ಸವ (ವರ್ಡ್ ಕಾಂಗ್ರೆಸ್) ಸೆ.16ರಂದು ನಡೆಯಲಿದ್ದು, ಈ ಬಾರಿಯ ಪೊಯೊನೀರ್‌ ಪ್ರಶಸ್ತಿಯನ್ನು ಐಪಿಎಸ್‌ನ ವರ್ಡ್ ಫ್ರೀಡಮ್‌ ಹಿರೋ ಪ್ರಶಸ್ತಿಯೊಂದಿಗೆ ಪ್ರದಾನ ಮಾಡುತ್ತಿರುವುದು ವಿಶೇಷ.

“ದಿ ವೈರ್‌” ಹುಟ್ಟಿದ ಬಗೆ

ವಿಶೇಷ ಪ್ರಶಸ್ತಿಗೆ ಭಾಜನವಾಗಿರುವ “ದಿ ವೈರ್‌” 2015ರಲ್ಲಿ ಸ್ಥಾಪನೆಯಾಯಿತು. ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಪಳಗಿದ್ದ ಸಿದ್ಧಾರ್ಥ್ ವರದರಾಜನ್‌, ಎಂ.ಕೆ.ವೇಣು ಮತ್ತು ಸಿದ್ಧಾರ್ಥ್ ಭಾಟಿಯಾ ದಿ ವೈರ್‌ನ ಸಂಸ್ಥಾಪಕರು. ಕಾರ್ಪೊರೇಟ್‌ ಪ್ರಧಾನ ಸಾಂಪ್ರದಾಯಿಕ ಮಾದರಿಯನ್ನು ಒಡೆದು, ಓದುಗ ಕೇಂದ್ರಿತ ಪತ್ರಿಕೋದ್ಯಮದತ್ತ ದಿ ವೈರ್‌ ಹೆಜ್ಜೆ ಇಟ್ಟಿತು. ಬದ್ಧತೆಗೆ ಎಂದಿಗೂ ಓದುಗರು ಬೆಲೆ ಕೊಡುತ್ತಾರೆ ಎಂಬುದನ್ನು ದಿ ವೈರ್‌ ಸಾಬೀತು ಮಾಡಿದೆ. ಇತ್ತೀಚೆಗೆ ಪೆಗಾಸಸ್ ಗೂಢಾಚರ್ಯೆನ್ನು ಬಹಿರಂಗಗೊಳಿಸಿದ್ದು ದಿ ವೈರ್..

“ಉತ್ತಮ ಪತ್ರಿಕೋದ್ಯಮ ಎಂದಿಗೂ ಉಳಿಯುತ್ತದೆ ಮತ್ತು ಜನರು ಅದನ್ನು ಬೆಳೆಸುತ್ತಾರೆ. ಸಂಪಾದಕೀಯ ನೀತಿ ಮತ್ತು ಆರ್ಥಿಕ ನೀತಿ ಸ್ವತಂತ್ರವಾಗಿದ್ದಾಗ ಮಾತ್ರ ಇದು ಸಾಧ್ಯ. ಉತ್ತಮ ಪತ್ರಿಕೋದ್ಯಮವಲ್ಲದೇ ಬೇರೆ ಯಾವುದೇ ಉದ್ದೇಶವಿಲ್ಲದ ಪತ್ರಿಕೋದ್ಯಮವನ್ನು ಓದುಗರು ಹಾಗೂ ನಾಗರಿಕರು ಬೆಳೆಸುತ್ತಾರೆ. ಇದು ವೈರ್‌ ನೀಡಿರುವ ಸಂಸ್ಥಾಪನಾ ಪ್ರಮಾಣ” ಎಂದು ಸಂಸ್ಥೆಯ ಸಂಸ್ಥಾಪಕ ಸಂಪಾದಕರು ನೆನಪಿಸಿದ್ದಾರೆ.

ದಿ ವೈರ್‌ ಇಂಗ್ಲಿಷ್‌, ಹಿಂದಿ, ಉರ್ದು ಮತ್ತು ಮರಾಠಿ ಭಾಷೆಯಲ್ಲಿ ವರದಿಗಳನ್ನು ಮಾಡುತ್ತಿದ್ದು, ಅತಿದೊಡ್ಡ ಸಂಸ್ಥೆಯಾಗಿ ಬೆಳೆದುನಿಂತಿದೆ. ಅಧಿಕಾರಶಾಹಿಯ ನೀತಿಗಳು ಹೇಗೆ ದೇಶದ ಜನಜೀವನದ ಮೇಲೆ ದಿನೇದಿನೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿವೆ ಎಂಬುದನ್ನು ದಿ ವೈರ್‌ ಸೂಕ್ಷ್ಮವಾಗಿ ಬಿತ್ತರಿಸಿ, ಪತ್ರಿಕೋದ್ಯಮದಲ್ಲಿನ ದೊಡ್ಡ ಕೊರತೆಯನ್ನು ತುಂಬುತ್ತಿದೆ. ದಿ ವೈರ್‌ನ ಯೂಟ್ಯೂಬ್‌ ಚಾನೆಲ್‌ 35 ಲಕ್ಷ ಚಂದಾದಾರರನ್ನು ಹೊಂದಿದ್ದು, ಪ್ರತಿ ತಿಂಗಳು 2 ಕೋಟಿಗೂ ಅಧಿಕ ವೀಕ್ಷಣೆ ಪಡೆಯುತ್ತಿರುವುದು ದಾಖಲೆಯೇ ಸರಿ.

ಭಾರತದ ಪತ್ರಿಕೋದ್ಯಮ ಕುಸಿಯುತ್ತಿರುವ ಕಾಲದಲ್ಲಿ ದಿ ವೈರ್‌, ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡುತ್ತಿದೆ. ಮತ್ತೊಂದೆದೆ ಸರ್ಕಾರದ ಕಿರುಕುಳವನ್ನೂ ಸಹಿಸಿಕೊಳ್ಳಬೇಕಾಗಿದೆ. ದೆಹಲಿಯಲ್ಲಿ ರೈತರ ಪ್ರತಿಭಟನೆಯ ಸಂಬಂಧದ ವರದಿಗಾರಿಕೆ ಒಳಗೊಂಡಂತೆ ಕಳೆದ ವರ್ಷ ಮೂರು ಪ್ರಕರಣಗಳನ್ನು ದಿ ವೈರ್‌ ವರದಿಗಾರರ ಮೇಲೆ ದಾಖಲಿಸಲಾಗಿತ್ತು. ಧಾರ್ಮಿಕ ಮುಖಂಡರು ಕೋವಿಡ್‌ 19 ನಿಯಮಗಳನ್ನು ಉಲ್ಲಂಘಿಸಿದ ಕುರಿತು ವರದಿ ಮಾಡಿದ್ದಕ್ಕಾಗಿ ದಿ ವೈರ್‌ ಮತ್ತು ವರದರಾಜನ್‌ ಅವರ ಮೇಲೆ “ಭೀತಿ ಹರಡುವಿಕೆ’ಯ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆ 14 ಮಾನನಷ್ಟ ಮೊಕದ್ದಮೆಗಳನ್ನು ದಿ ವೈರ್‌ ಎದುರಿಸಿದ್ದು, ಆಡಳಿತ ಪಕ್ಷ 1.4 ಬಿಲಿಯನ್‌ ಡಾಲರ್‌ಗಳಷ್ಟು ಪರಿಹಾರವನ್ನು ನೀಡಬೇಕೆಂದು ಬೇಡಿಕೆ ಇಟ್ಟಿತ್ತು.

ಸರ್ಕಾರದ ಹದ್ದಿನ ಕಣ್ಣು ದಿ ವೈರ್‌ ಮೇಲೆ ಇತ್ತೆಂಬುದನ್ನು ಪೆಗಾಗಸ್‌ ಪ್ರಕರಣ ಬಹಿರಂಗ ಮಾಡಿತ್ತು. ವರದರಾಜನ್‌ ಮತ್ತು ವೇಣು ಅವರ ಮೊಬೈಲ್‌ನಲ್ಲಿ ಇಸ್ರೇಲಿ ಮೂಲದ ಸ್ಪೈವೇರ್‌ ಸ್ಥಾಪಿಸಲಾಗಿತ್ತು. ನಂತರ ದಿ ವೈರ್‌ ಫಾರ್‍ಬಿಡನ್‌ ಸ್ಟೋರಿಸ್‌ನೊಂದಿಗೆ ಸೇರಿ ಫೆಗಾಸಸ್‌ ದಾಳಿಯ ಸಂಭಾವಿತ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.


ಇದನ್ನೂ ಓದಿ; ದೆಹಲಿ ಹಿಂಸಾಚಾರದ ಅಸಲಿ ಪಿತೂರಿಗಾರರು ಯಾರು? ದೆಹಲಿ ಪೊಲೀಸ್ ನೋಡಲೊಲ್ಲದ ಭೀಕರ ಸತ್ಯಗಳನ್ನು ತೆರೆದಿಟ್ಟ ದಿ ವೈರ್ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...