Homeಕರ್ನಾಟಕವಿಸ್ಟ್ರಾನ್ ಬಿಕ್ಕಟ್ಟು: ಕಾರ್ಮಿಕರ ಹೋರಾಟಕ್ಕೆ AILU ಉಚಿತ ಕಾನೂನು ನೆರವು

ವಿಸ್ಟ್ರಾನ್ ಬಿಕ್ಕಟ್ಟು: ಕಾರ್ಮಿಕರ ಹೋರಾಟಕ್ಕೆ AILU ಉಚಿತ ಕಾನೂನು ನೆರವು

ಪೊಲೀಸರು 700 ಎಫ್‌ಐಆರ್ ದಾಖಲಿಸಿದ್ದು ಇದುವರೆಗೂ 160 ಜನರನ್ನು ಬಂಧಿಸಿದ್ದಾರೆ.

- Advertisement -
- Advertisement -

ತೈವಾನ್ ಮೂಲದ ಆಪನ್ ಐಫೋನ್ ತಯಾರಿಕಾ ಕಂಪೆನಿ ವಿಸ್ಟ್ರಾನ್‌ನಲ್ಲಿ ಉಂಟಾದ ಬಿಕ್ಕಟ್ಟಿನ ಹಿನ್ನೆಯಲ್ಲಿ ಕಾರ್ಮಿಕ ಹೋರಾಟದ ಪರವಾಗಿ ಉಚಿತ ಕಾನೂನು ನೆರವು ನೀಡುವುದಾಗಿ ’ಆಲ್ ಇಂಡಿಯಾ ಲಾಯರ್ಸ್ ಯೂನಿಯನ್’ (AILU) ನಿರ್ಣಯ ಕೈಗೊಂಡಿದೆ.

ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದ ಅಖಿಲ ಭಾರತ ವಕೀಲರ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದೆ ಎಂದು AILU ಕರ್ನಾಟಕದ ಅಧ್ಯಕ್ಷರಾದ ಎಸ್‌. ಶಂಕರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ವಿಸ್ಟ್ರಾನ್ ಬಿಕ್ಕಟ್ಟು – ಕಾರ್ಮಿಕರ ಬಳಿ ಕ್ಷಮೆಯಾಚಿಸಿದ ಕಂಪೆನಿ; ಉಪಾಧ್ಯಕ್ಷನ ವಜಾ!

ಈ ಬಗ್ಗೆ ಮಾತನಾಡಿದ ಅವರು, “ತಮ್ಮ ಪರವಾಗಿ ವಾದಿಸುವ ವಕೀಲರಿಗೆ‌ ಫೀಸ್ ಕಟ್ಟಲು ಬಡ ಕಾರ್ಮಿಕರಿಗೆ ಸಾಧ್ಯವಿಲ್ಲದಿದ್ದರಿಂದ, ತಮ್ಮ ಮೇಲೆ ದಾಖಲಾದ ಕೇಸ್‌ನಿಂದ ಜಾಮೀನು ಪಡೆಯುವುದು ಸೇರಿದಂತೆ ಇನ್ನಿತರ ಕಾನೂನು ನೆರವು ನೀಡಲು AILU ರಾಜ್ಯ ಸಮಿತಿ ತೀರ್ಮಾನಿಸಿದೆ” ಎಂದು ಹೇಳಿದ್ದಾರೆ.

ಕಾರ್ಮಿಕರ ಬಳಿ ಕ್ಷಮೆಯಾಚಿಸಿರುವ ವಿಸ್ಟ್ರಾನ್. ಕಂಪೆನಿ ಉಪಾಧ್ಯಕ್ಷನ ವಜಾ ಮಾಡಿದ ಹಿನ್ನಲೆಯಲ್ಲಿ SFI ಕಾರ್ಯದರ್ಶಿಯ ಮಾತು

ಕೋಲಾರದಲ್ಲಿನ ವಿಸ್ಟ್ರಾನ್ ಕಾರ್ಮಿಕರು, ಕಂಪೆನಿಯು ತಮ್ಮ ದುಡಿಮೆಯ ವೇತನ ಪಾವತಿಸಿಲ್ಲ ಎಂದು ಆರೋಪಿಸಿ ಹಲವು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಡಿಸೆಂಬರ್‌ 12 ರಂದು ಆಕ್ರೋಶಗೊಂಡ ಗುಂಪೊಂದು ಘಟಕದ ಆಸ್ತಿಪಾಸ್ತಿಗೆ ಹಾನಿ ಮಾಡಿತ್ತು. ಈ ಹಿನ್ನಲೆಯಲ್ಲಿ ಕಂಪೆನಿಯು ಘಟನೆಯ ಬಗ್ಗೆ ತನಿಖೆ ನಡೆಸಿದ್ದು, ಕೆಲವು ಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿತ್ತು. ಜೊತೆಗೆ ಭಾರತದ ವಿಸ್ಟ್ರಾನ್ ಕಂಪೆನಿಯ ಉಪಾಧ್ಯಕ್ಷನನ್ನು ವಜಾ ಮಾಡಿ, ಕಾರ್ಮಿಕರ ಕ್ಷಮೆ ಕೋರಿತ್ತು.

ಹಿಂಸಾಚಾರದಲ್ಲಿ 437.40 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಕಂಪನಿ ಹೇಳಿಕೊಂಡಿತ್ತಾದರೂ, ಕಾರ್ಮಿಕ ಸಂಘಟನೆಗಳ ಒಕ್ಕೂಟ ಇದನ್ನು ಅಲ್ಲಗೆಳೆದಿದೆ. ಅಲ್ಲದೆ ಪೊಲೀಸರು 700 ಎಫ್‌ಐಆರ್ ದಾಖಲಿಸಿದ್ದು ಇದುವರೆಗೂ 160 ಜನರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ವಿಸ್ಟ್ರಾನ್‌ ದುರ್ಘಟನೆಗೆ ಕಂಪನಿಯೆ ಕಾರಣ: AICCTU ಸತ್ಯಶೋಧನಾ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...