ದೇಶದಾದ್ಯಂತ ಕ್ರಿಶ್ಚಿಯನ್ನರ ವಿರುದ್ಧ 50 ದಾಳಿಗಳು ಇತ್ತೀಚಿನ ದಿನಗಳಲ್ಲಿ ನಡೆದಿದೆ: ವರದಿ | Naanu gauri

ಇತ್ತೀಚೆಗಿನ ದಿನಗಳಲ್ಲಿ, ದೇಶದಾದ್ಯಂತ ಕ್ರೈಸ್ತರನ್ನು ಬಲಿಪಶುಗಳನ್ನಾಗಿ ಮಾಡಿ ಅವರ ಮೇಲೆ ದಾಳಿ ನಡೆಸಿರುವ 50 ಘಟನೆಗಳು ನಡೆದಿದೆ ಎಂದು ಎಪಿಸಿಆರ್(ಅಸೋಸಿಯೇಷನ್ ಫಾರ್ ದಿ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್), ಯುನೈಟೆಡ್ ಅಗೆನ್ಸ್ಟ್ ಹೇಟ್ ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ನಡೆಸಿದ ಜಂಟಿ ಸತ್ಯ ಶೋಧನಾ ತಂಡವು ಹೇಳಿದೆ.

ಉತ್ತರ ಪ್ರದೇಶದಲ್ಲಿ ಕ್ರಿಶ್ಚಿಯನ್ನರು ಮತ್ತು ಚರ್ಚುಗಳ ವಿರುದ್ಧ ಸರಣಿ ದಾಳಿಗಳು ವರದಿಯಾದ ನಂತರ ಜಂಟಿ ಸತ್ಯ ಶೋಧನಾ ತಂಡವು ವರದಿಯೊಂದನ್ನು ಸಿದ್ದಪಡಿಸಿದೆ. ಈ ವರದಿಯಲ್ಲಿ, ದೇಶದಾದ್ಯಂತ ಇತ್ತೀಚೆಗೆ ಕ್ರಿಶ್ಚಿಯನ್ನರ ವಿರುದ್ದ ನಡೆದ 50 ದಾಳಿಗಳನ್ನು ದಾಖಲಿಸಿದೆ ಎಂದು ತಂಡ ತಿಳಿಸಿದೆ.

ಇದನ್ನೂ ಓದಿ: ‘ಶುದ್ಧ ಕನ್ನಡ’ ವಿವಾದ: ಪೋಸ್ಟರ್‌ ಡಿಲೀಟ್ ಮಾಡಿದ ಕನ್ನಡ-ಸಂಸ್ಕೃತಿ ಇಲಾಖೆ

2021 ಅಕ್ಟೋಬರ್ 3 ರಂದು ಉತ್ತರಾಖಂಡದ ರೂರ್ಕಿಯಲ್ಲಿರುವ ಚರ್ಚ್ ಮೇಲೆ 200 ಕ್ಕೂ ಅಧಿಕ ಸದಸ್ಯರ ಬಿಜೆಪಿ ಬೆಂಬಲಿತ ಸಂಘಟನೆಗಳ ಗುಂಪು ದಾಳಿ ಮಾಡಿತ್ತು. ಸತ್ಯ ಶೋಧನ ತಂಡವು ಧ್ವಂಸಗೊಳಿಸಿದ ಚರ್ಚ್‌ಗೆ ಭೇಟಿ ನೀಡಿ ಸಂತ್ರಸ್ತರ ಸಾಕ್ಷ್ಯಗಳನ್ನು ದಾಖಲಿಸಿದೆ ಎಂದು ಮಾಧ್ಯಮಂ.ಕಾಂ ವರದಿ ಮಾಡಿದೆ.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ವೃಂದಾ ಗ್ರೋವರ್, ಯುನೈಟೆಡ್ ಕ್ರಿಶ್ಚಿಯನ್ ಫೋರಂನ ಅಧ್ಯಕ್ಷರಾದ ಡಾ ಮೈಕೆಲ್ ವಿಲಿಯಮ್ಸ್ ಮತ್ತು ಫೋರಂನ ರಾಷ್ಟ್ರೀಯ ಸಂಯೋಜಕರಾದ ಎಸಿ ಮೈಕೆಲ್ ಅವರ ಸಮ್ಮುಖದಲ್ಲಿ ಈ ಸತ್ಯ ಶೋಧನಾ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗುತ್ತದೆ.

ಈ ವೇಳೆ ರೂರ್ಕಿಗೆ ಭೇಟಿ ನೀಡಿದ ತಂಡದ ಸದಸ್ಯರು ಕೂಡ ಹಾಜರಿರುತ್ತಾರೆ ಎಂದು ತಂಡ ತಿಳಿಸಿದೆ.

ಇದನ್ನೂ ಓದಿ: ಚೀನಾ ಮತ್ತು ತಾಲಿಬಾನ್‌ಗೆ ಹೆದರಿದ್ದಾಯಿತು, ಮುಂದೆ ಮಾಲ್ಡೀವ್‌?: BJP ಸಂಸದ ಸುಬ್ರಮಣಿಯನ್‌ ಸ್ವಾಮಿ

1 COMMENT

  1. ದೇಶದಲ್ಲಿ ,ಹೊರದೇಶದಲ್ಲಿ ಲಕ್ಷಾಂತರ ಹಿಂದೂಗಳ ಮೇಲೆ ದೌರ್ಜನ್ಯ ಆಗ್ತಿದೆ ಅದರ ಮಾತಾಡ್ರೋ ,ಸೋ ಕಾಲ್ಡ್ ನಗರ ನಕ್ಸಲರ ,ಅಯೋಗ್ಯರ ಮೊದಲು .

LEAVE A REPLY

Please enter your comment!
Please enter your name here