Homeಚಳವಳಿನಾವು ಮರೆತಿರುವ ಮಹಿಳೆಯರಿವರು.. ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರ ಪಾತ್ರ. ಭಾಗ 1

ನಾವು ಮರೆತಿರುವ ಮಹಿಳೆಯರಿವರು.. ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರ ಪಾತ್ರ. ಭಾಗ 1

- Advertisement -
- Advertisement -

ಭಾರತದ ಸಂವಿಧಾನವನ್ನು 1949ರ ನವಂಬರ್ 26ರಂದು ಚುನಾಯಿತ ಸಂವಿಧಾನ ಸಭೆಯು ಅಂಗೀಕರಿಸಿತು. ಅದು ಜನವರಿ 26, 1950ರಲ್ಲಿ ಜಾರಿಗೆ ಬಂತು. ಸಂವಿಧಾನ ಸಭೆಯಲ್ಲಿ ಒಟ್ಟು 389 ಸದಸ್ಯರಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿ ಎಂದು ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಸಂವಿಧಾನ ಸಭೆಯಲ್ಲಿದ್ದ 15 ಮಹಿಳೆಯರನ್ನು ನಾವು ಸಂಪೂರ್ಣ ಮರೆತುಬಿಟ್ಟಿದ್ದೇವೆ. ಅವರಲ್ಲಿ ಐವರ ಕಿರುಪರಿಚಯವನ್ನು ಈ ಮೊದಲ ಭಾಗದಲ್ಲಿ ನೀಡಲಾಗಿದೆ. 

ಕೃಪೆ: ಫೆಮಿನಿಸಂ ಇನ್‌ ಇಂಡಿಯಾ

ಅನುವಾದ: ನಿಖಿಲ್ ಕೋಲ್ಪೆ

1. ಅಮ್ಮು ಸ್ವಾಮಿನಾಥನ್

ಅಮ್ಮು ಸ್ವಾಮಿನಾಥನ್ ಅವರು ಕೇರಳದ ಪಾಲಕ್ಕಾಡ್ ಜಿಲ್ಲೆಯ ಆನಕ್ಕರ ಎಂಬಲ್ಲಿ ಮೇಲ್ಜಾತಿಯ ಹಿಂದೂ ಕುಟುಂಬವೊಂದರಲ್ಲಿ ಜನಿಸಿದರು. ಅವರು 1917ರಲ್ಲಿ ಅನ್ನಿ ಬೆಸೆಂಟ್, ಮಾರ್ಗರೆಟ್ ಕಸಿನ್ಸ್, ಮಾಲತಿ ಪಟವರ್ಧನ್, ದಾದಾಭೋಯ್ ಮತ್ತು ಅಂಬುಜಮ್ಮಾಳ್ ಅವರ ಜೊತೆ ಸೇರಿ ವುಮನ್ಸ್ ಇಂಡಿಯಾ ಅಸೋಸಿಯೇಷನ್ ಎಂಬ ಸಂಘಟನೆಯನ್ನು ಕಟ್ಟಿದರು.

ಚಿತ್ರಕೃಪೆ: ದಿಇಂಡಿಯನ್‌ ಎಕ್ಸ್‌ಪ್ರೆಸ್‌

ಡಾ. ಬಿ.ಆರ್. ಅಂಬೇಡ್ಕರ್ ಅವರು 24 ನವೆಂಬರ್ 1949ರಲ್ಲಿ ಕರಡು ಸಂವಿಧಾನವನ್ನು ಅಂಗೀಕರಿಸುವ ಗೊತ್ತುವಳಿಯನ್ನು ಮಂಡಿಸಿದಾಗ ಆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅಮ್ಮು ಸ್ವಾಮಿನಾಥನ್ ಅವರು, “ಭಾರತವು ತನ್ನ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕೊಟ್ಟಿಲ್ಲ ಎಂದು ಹೊರಗಿನವರು ಹೇಳುತ್ತಿದ್ದರು. ಆದರೆ, ಭಾರತೀಯ ಜನರು ತಮ್ಮ ಸ್ವಂತ ಸಂವಿಧಾನವನ್ನು ರೂಪಿಸಿದಾಗ ಮಹಿಳೆಯರಿಗೆ ದೇಶದ ಯಾವುದೇ ನಾಗರಿಕನಿಗೆ ಇರುವಷ್ಟೇ ಸ್ವಾತಂತ್ರ್ಯವನ್ನು ನೀಡಿದ್ದಾರೆ ಎಂದು ನಾವೀಗ ಹೇಳಬಹುದು” ಎಂದು ಹೇಳಿದ್ದರು.

ಅವರು 1952ರಲ್ಲಿ ಲೋಕಸಭೆಗೆ ಮತ್ತು 1954ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಚಲನಚಿತ್ರ ಚಿತ್ರಗಳಲ್ಲಿ ಅತ್ಯಂತ ಆಸಕ್ತಿಯಿದ್ದ ಅವರು 1959ರಲ್ಲಿ  ಫೆಡರೇಷನ್ ಆಫ್ ಫಿಲ್ಮ್ ಸೊಸೈಟೀಸ್‌ನ ಉಪಾಧ್ಯಕ್ಷರಾದರು. ಆಗ ಸತ್ಯಜಿತ್ ರಾಯ್ ಅಧ್ಯಕ್ಷರಾಗಿದ್ದರು. ಅವರು ಸೆನ್ಸಾರ್ ಮಂಡಳಿ ಮತ್ತು ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ (1960-65) ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.

2. ದಾಕ್ಷಾಯಣಿ ವೇಲಾಯುಧನ್

ದಾಕ್ಷಾಯಣಿ ವೇಲಾಯುಧನ್ ಅವರು 1912ರ ಜುಲೈ 4ರಂದು ಕೊಚ್ಚಿಯ ಬೋಲ್ಗಟ್ಟಿ ದ್ವೀಪದಲ್ಲಿ ಜನಿಸಿದರು. ಅತ್ಯಂತ ಅವಗಣಿತ ಪುಲಯ ಸಮುದಾಯದ ನಾಯಕಿಯಾಗಿದ್ದ ಅವರು ಈ ಸಮುದಾಯದ ಮೊದಲ ತಲೆಮಾರಿನ ವಿದ್ಯಾವಂತೆಯಾಗಿದ್ದು, ಈ ಸಮುದಾಯದಲ್ಲಿ ರವಕೆ ಧರಿಸಿದ ಮೊದಲ ಮಹಿಳೆ.

1945ರಲ್ಲಿ ದಾಕ್ಷಾಯಣಿ ಅವರನ್ನು ರಾಜ್ಯ ಸರಕಾರ ಕೊಚ್ಚಿ ವಿಧಾನ ಮಂಡಳಿಗೆ ನಾಮಕರಣ ಮಾಡಿತು. 1946ರಲ್ಲಿ ಅವರು ಸಂವಿಧಾನ ಸಭೆಗೆ ಆಯ್ಕೆಯಾದ ಮೊದಲ ಮತ್ತು ಏಕೈಕ ದಲಿತ ಮಹಿಳೆ ಎನಿಸಿದರು. ಸಂವಿಧಾನ ಸಭೆಯ ಚರ್ಚೆಗಳ ವೇಳೆ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವರು ಅಂಬೇಡ್ಕರ್ ಪರವಾಗಿ ನಿಂತಿದ್ದರು.

3. ಬೇಗಂ ಐಝಾಝ್ ರಸೂಲ್

ಮಾಲೇರ್ ಕೋಟ್ಲಾದ ರಾಜಮನೆತನದಲ್ಲಿ ಹುಟ್ಟಿದ ಅವರು ಯುವ ಜಮೀನ್ದಾರ ನವಾಬ್ ಐಝಾಝ್ ರಸೂಲ್ ಅವರನ್ನು ಮದುವೆಯಾದರು. ಅವರು ಸಂವಿಧಾನ ಸಭೆಯಲ್ಲಿದ್ದ ಏಕೈಕ ಮುಸ್ಲಿಂ ಮಹಿಳೆ. 1935ರ ಭಾರತ ಸರಕಾರ ಕಾಯಿದೆ ಜಾರಿಗೆ ಬಂದಾಗ ಬೇಗಂ ಹಾಗೂ ಅವರ ಗಂಡ ಮುಸ್ಲಿಂ ಲೀಗ್ ಸೇರಿ ಚುನಾವಣಾ ರಾಜಕೀಯಕ್ಕೆ ಧುಮುಕಿದರು. 1937ರ ಚುನಾವಣೆಯಲ್ಲಿ ಅವರು ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರು.

ಚಿತ್ರಕೃಪೆ: ಎನ್‌ಡಿಟಿವಿ

1950ರಲ್ಲಿ ಭಾರತದಲ್ಲಿ ಮುಸ್ಲಿಂ ಲೀಗ್ ವಿಸರ್ಜನೆಗೊಂಡಾಗ ಬೇಗಂ ಐಝಾಝ್ ರಸೂಲ್ ಕಾಂಗ್ರೆಸ್ ಸೇರಿದರು. 1952ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾದರು. ಅವರು 1969ರಿಂದ 1990ರ ತನಕವೂ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯೆಯಾಗಿದ್ದರು. 1971ರಿಂದ 1971ರ ತನಕ ಅವರು ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವೆಯಾಗಿದ್ದರು. 2000ದಲ್ಲಿ ಸಮಾಜಸೇವೆಗಾಗಿ ಅವರಿಗೆ ಪದ್ಮಭೂಷಣದ ಗೌರವ ಸಿಕ್ಕಿತು.

4. ದುರ್ಗಾಬಾಯಿ ದೇಶ್‌ಮುಖ್

ದುರ್ಗಾಬಾಯಿಯವರು 15 ಜುಲೈ 1909ರಲ್ಲಿ ರಾಜಮುಂದ್ರಿಯಲ್ಲಿ ಹುಟ್ಟಿದರು. 12ರ ಹರೆಯದಲ್ಲಿಯೇ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಆಂಧ್ರ ಕೇಸರಿ ಟಿ. ಪ್ರಕಾಶಂ ಅವರ ಜೊತೆ 1930ರ ಮೇಯಲ್ಲಿ ಮದ್ರಾಸ್ ನಗರದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. 1936ರಲ್ಲಿ ಅವರು ಆಂಧ್ರ ಮಹಿಳಾ ಸಭಾವನ್ನು ಸ್ಥಾಪಿದರು. ಅದು ಒಂದೇ ದಶಕದ ಅವಧಿಯಲ್ಲಿ ಮದ್ರಾಸಿನಲ್ಲಿ  ಮಹಾನ್ ಶೈಕ್ಷಣಿಕ ಮತ್ತು ಸಮಾಜಸೇವಾ ಸಂಸ್ಥೆ ಎನಿಸಿಕೊಂಡಿತು.

ಚಿತ್ರಕೃಪೆ: ವಿಮೆನ್ಸ್‌ ವೆಬ್‌

ಅವರು ಕೇಂದ್ರೀಯ ಸಮಾಜ ಕಲ್ಯಾಣ ಮಂಡಳಿ, ರಾಷ್ಟ್ರೀಯ ಮಹಿಳಾ ಶಿಕ್ಷಣ ಮಂಡಳಿ, ಹೆಣ್ಣು ಮಕ್ಕಳು ಮತ್ತು ಮಹಿಳಾ ಶಿಕ್ಷಣ ರಾಷ್ಟ್ರೀಯ ಸಮಿತಿ ಮುಂತಾದ ಸಂಸ್ಥೆಗಳ ಅಧ್ಯಕ್ಷೆಯಾಗಿದ್ದರು. ಅವರು ಸಂಸದೆಯೂ, ಯೋಜನಾ ಆಯೋಗದ ಸದಸ್ಯೆಯೂ ಆಗಿದ್ದರು.

ಅವರು ದಿಲ್ಲಿಯ ಆಂಧ್ರ ಎಜುಕೇಶನಲ್ ಸೊಸೈಟಿಯೊಂದಿಗೆ ಸಂಬಂಧ ಹೊಂದಿದ್ದರು. ಭಾರತದಲ್ಲಿ ಸಾಕ್ಷರತೆಗೆ ಅವರ ಅಮೋಘ ಕೊಡುಗೆಗಾಗಿ 1971ರಲ್ಲಿ ಅವರಿಗೆ ನಾಲ್ಕನೇ ನೆಹರೂ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. 1975ರಲ್ಲಿ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

5. ಹಂಸಾ ಜೀವರಾಜ್ ಮೆಹ್ತಾ

ಬರೋಡದ ದಿವಾನ ಮನುಭಾಯ್ ನಂದಶಂಕರ ಮೆಹ್ತಾ ಅವರ ಮಗಳಾಗಿ ಜೂನ್ 3, 1879ರಲ್ಲಿ ಹುಟ್ಟಿದ ಹಂಸಾ ಅವರು ಇಂಗ್ಲೆಂಡ್‌ನಲ್ಲಿ ಪತ್ರಿಕೋದ್ಯಮ ಮತ್ತು ಸಮಾಜಶಾಸ್ತ್ರ ಕಲಿತಿದ್ದರು. ಸಮಾಜ ಸುಧಾರಕಿ, ಕಾರ್ಯಕರ್ತೆ, ಶಿಕ್ಷಣ ತಜ್ಞೆ ಹಾಗೂ ಲೇಖಕಿಯಾಗಿಯೂ ಹೆಸರು ಪಡೆದಿದ್ದರು.

ಚಿತ್ರಕೃಪೆ: ದಿಇಂಡಿಯನ್‌ ಎಕ್ಸ್‌ಪ್ರೆಸ್‌

ಅವರು ಗುಜರಾತಿಯಲ್ಲಿ ಮಕ್ಕಳಿಗಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದು, ‘ಗಲಿವರ್‌ನ ಯಾತ್ರೆಗಳು’ ಸೇರಿದಂತೆ ಹಲವು ಇಂಗ್ಲಿಷ್ ಕತೆಗಳನ್ನು ಅನುವಾದಿಸಿದ್ದಾರೆ. ಅವರು 1926ರಲ್ಲಿ ಬಾಂಬೆ ಸ್ಕೂಲ್ ಕಮಿಟಿಗೆ ಆಯ್ಕೆಯಾದರು. 1945-46ರಲ್ಲಿ ಆಲ್ ಇಂಡಿಯಾ ವುಮನ್ಸ್ ಕಾನ್ಫರೆನ್ಸ್‌ನ ಅಧ್ಯಕ್ಷೆಯಾದರು. ಹೈದರಾಬಾದ್‌ನಲ್ಲಿ ನಡೆದ ಅದರ ಸಮಾವೇಶದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿ ಮಹಿಳಾ ಹಕ್ಕುಗಳ ಕುರಿತು ಕಾರ್ಯಕ್ರಮಪಟ್ಟಿಯನ್ನು ಮಂಡಿಸಿದ್ದರು.

ಅವರು 1945ರಿಂದ 1960ರ ತನಕ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ, ಅಖಿಲ ಭಾರತ ಮಾಧ್ಯಮಿಕ ಶಿಕ್ಷಣ ಮಂಡಳಿಯ ಸದಸ್ಯೆ, ಭಾರತೀಯ ಅಂತರವಿಶ್ವವಿದ್ಯಾಲಯ ಮಂಡಳಿಯ ಅಧ್ಯಕ್ಷೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಉಪಕುಲಪತಿ ಇತ್ಯಾದಿಯಾಗಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸಾಧಕಿಯರಿವರು… : ಭಾಗ -2

ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಮಹಿಳಾ ಸಾಧಕಿಯರಿವರು… : ಭಾಗ -2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...