Homeಮುಖಪುಟಕರ್ನಾಟಕ ಚುನಾವಣೆ: ಬಿಜೆಪಿ ಇದುವರೆಗೂ ಒಮ್ಮೆಯೂ ಗೆಲ್ಲಲಾಗದ ಕ್ಷೇತ್ರಗಳಿವು

ಕರ್ನಾಟಕ ಚುನಾವಣೆ: ಬಿಜೆಪಿ ಇದುವರೆಗೂ ಒಮ್ಮೆಯೂ ಗೆಲ್ಲಲಾಗದ ಕ್ಷೇತ್ರಗಳಿವು

- Advertisement -
- Advertisement -

ಬಿಜೆಪಿ ಪಕ್ಷವು ಪ್ರಪಂಚದ ಅತ್ಯಂತ ದೊಡ್ಡ ಪಕ್ಷ ಎಂದು ಹೇಳಿಕೊಂಡಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಆದರೂ ದಕ್ಷಿಣದ ರಾಜ್ಯಗಳಲ್ಲಿ ಅದು ಪೂರ್ಣ ಬಹುಮತದಿಂದ ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಗೋವಾ ಮತ್ತು ಕರ್ನಾಟಕದಲ್ಲಿ ಅಲ್ಪ ಸ್ವಲ್ಪ ಅಧಿಕಾರ ನಡೆಸಿದರೂ ಕೂಡ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅದು ಅಧಿಕಾರದ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿಲ್ಲ. ಏಕೆಂದರೆ ದಕ್ಷಿಣದ ಜನ ಅಷ್ಟು ಸುಲಭಕ್ಕೆ ಬಿಜೆಪಿಯ ರಾಷ್ಟ್ರೀಯತೆ ಮತ್ತು ಹಿಂದುತ್ವ ಸಿದ್ದಾಂತಗಳನ್ನು ಒಪ್ಪುವುದಿಲ್ಲ ಎಂಬುದು ಸಾಬೀತಾಗಿದೆ.

ಇನ್ನೂ ಕರ್ನಾಟಕದಲ್ಲಿ ಬಿಜೆಪಿ 1983ರಲ್ಲಿ 18 ಸೀಟು ಗೆದ್ದು ಜನತಾಪಕ್ಷಕ್ಕೆ ಬೆಂಬಲ ನೀಡಿತ್ತು. ಆದರೆ ಅದು ಪದೇ ಪದೇ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿ 1985ರಲ್ಲಿ ಸರ್ಕಾರ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಿ ಸ್ವತಂತ್ರವಾಗಿ ಜನತಾಪಕ್ಷ ಅಧಿಕಾರ ಹಿಡಿದಿತ್ತು. ಆ ನಂತರ 2004ರಲ್ಲಿ 79 ಸ್ಥಾನ ಗೆದ್ದರೂ ಪ್ರತಿಪಕ್ಷದಲ್ಲಿ ಕೂರಬೇಕಾಗಿತ್ತು. 2006ರಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಅಧಿಕಾರದಲ್ಲಿತ್ತು. ಆದರೆ ಕುಮಾರಸ್ವಾಮಿಯವರು ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರಿಸದೇ ಸರ್ಕಾರ ವಿಸರ್ಜಿಸಿದರು. ಇದರಿಂದ ಯಡಿಯೂರಪ್ಪನವರ ಮೇಲಿನ ಅನುಕಂಪದಿಂದ 2008ರಲ್ಲಿ ಬಿಜೆಪಿ 110 ಸ್ಥಾನ ಗೆದ್ದಿತ್ತು. ಆದರೂ ಬಹುಮತಕ್ಕೆ 03 ಸೀಟುಗಳ ಕೊರತೆಯಿತ್ತು. ಆಗ ಯಡಿಯೂರಪ್ಪನವರು ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು.

ಇನ್ನು 2013ರಲ್ಲಿ ಬಿಜೆಪಿ 40 ಸ್ಥಾನಗಳಿಗೆ ಕುಸಿದಿತ್ತು. 2018ರಲ್ಲಿ 104 ಸ್ಥಾನ ಗೆದ್ದರೂ ಸರಳ ಬಹುಮತ ಸಿಗದೇ ವಿರೋಧ ಪಕ್ಷವಾಗಿತ್ತು. ಆದರೆ 2019ರಲ್ಲಿ ಮತ್ತೆ ಆಪರೇ‍ಷನ್ ಕಮಲ ನಡೆಸಿ ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂತು. ಆದರೆ ಇತ್ತೀಚಿನ ಕರ್ನಾಟಕ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಕೇವಲ 66 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಇಷ್ಟೆಲ್ಲ ಆದರೂ ಬಿಜೆಪಿ ಕರ್ನಾಟಕ ಸುಮಾರು 43 ಕ್ಷೇತ್ರಗಳಲ್ಲಿ ಒಮ್ಮೆಯೂ ಗೆದ್ದು ಖಾತೆ ತೆರೆಯಲು ಸಾಧ್ಯವಾಗಿಲ್ಲ. ಅಲ್ಲದೆ 41 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಒಮ್ಮೆ ಮಾತ್ರ ಖಾತೆ ತೆರೆದಿದೆ. ಅಂತಹ ಕ್ಷೇತ್ರಗಳ ಪಟ್ಟಿ ಇಲ್ಲಿದೆ.

ಬಿಜೆಪಿ ಒಮ್ಮೆಯೂ ಗೆಲ್ಲಲಾಗದ ಕ್ಷೇತ್ರಗಳು

ಮಂಡ್ಯ
ಮದ್ದೂರು
ಮೇಲುಕೋಟೆ
ಶ್ರೀರಂಗಪಟ್ಟಣ
ನಾಗಮಂಗಲ
ಮಳವಳ್ಳಿ
ಕುಣಿಗಲ್
ಗುಬ್ಬಿ
ಮಧುಗಿರಿ
ಕೊರಟಗೆರೆ
ಪಾವಗಡ
ಚಿಂತಾಮಣಿ
ಶಿಡ್ಲಘಟ್ಟ
ಬಾಗೇಪಲ್ಲಿ
ಗೌರಿಬಿದನೂರು
ಮುಳಬಾಗಿಲು
ಶ್ರೀನಿವಾಸಪುರ
ಕೋಲಾರ
ದೇವನಹಳ್ಳಿ
ಹೆಚ್.ಡಿ ಕೋಟೆ
ಹನೂರು
ವರುಣ
ಚಾಮುಂಡೇಶ್ವರಿ
ಹೊಳೆನರಸೀಪುರ
ಶ್ರವಣಬೆಳಗೊಳ
ಅಫ್ಜಲಪುರ
ಗುರುಮಠಕಲ್
ಹಳಿಯಾಳ
ದಾವಣಗೆರೆ ದಕ್ಷಿಣ
ಶಹಾಪುರ
ಮಾನ್ವಿ
ಸಿಂಧನೂರು
ಯಮಕನಮರಡಿ
ಸಂಡೂರು
ಭದ್ರಾವತಿ
ಬ್ಯಾಟರಾಯಪುರ
ಪುಲಿಕೇಶಿನಗರ
ವಿಜಯನಗರ
ಸರ್ವಜ್ಞನಗರ
ಬಿಟಿಎಂ ಲೇಔಟ್
ಗಾಂಧಿನಗರ
ರಾಮನಗರ
ಕನಕಪುರ
ಇಷ್ಟು ಕ್ಷೇತ್ರಗಳಲ್ಲಿ ಒಮ್ಮೆಯೂ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇವುಗಳಲ್ಲಿ ಬಹುತೇಕ ಹಳೇ ಮೈಸೂರು ಪ್ರಾಂತ್ಯದ ಕ್ಷೇತ್ರಗಳಾಗಿವೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಇದೆ ಹೊರತು ಬಿಜೆಪಿಗೆ ಮೂರನೇ ಸ್ಥಾನ. ಬಿಜೆಪಿಗೆ ಲಿಂಗಾಯತ ಸಮುದಾಯ ಕೆಲವೊಮ್ಮೆ ಹೆಚ್ಚಿನ ಬೆಂಬಲ ನೀಡಿದೆ. ಆದರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತರ ಪ್ರಾಬಲ್ಯವಿಲ್ಲ. ಅದು ಕೂಡ ಬಿಜೆಪಿ ಸೋಲಿಗೆ ಒಂದು ಕಾರಣವಾಗಿದೆ.

ಬಿಜೆಪಿ ಒಮ್ಮೆ ಮಾತ್ರ ಗೆಲುವು ಕಂಡ ಕ್ಷೇತ್ರಗಳಿವು

ಕೆ.ಆರ್ ಪೇಟೆ (2019 ಉಪ)
ನರಸಿಂಹರಾಜ (1994)
ಚನ್ನಪಟ್ಟಣ (2011 ಉಪ)
ಮಾಗಡಿ (1994)
ಶಾಂತಿನಗರ (2004)
ಚಾಮರಾಜ ಪೇಟೆ (1994)
ಗೋವಿಂದರಾಜನಗರ (2018)
ಅರಕಲಗೂಡು (1999)
ಅರಸೀಕೆರೆ (2004)
ಗದಗ (2008)
ಮುದ್ದೇಬಿಹಾಳ (2018)
ಬಬಲೇಶ್ವರ (1999)
ನಾಗಠಾಣ (2008)
ಇಂಡಿ (2008)
ಯಾದಗಿರಿ (2018)
ಬೆಳಗಾವಿ ಉತ್ತರ (2018)
ಆಳಂದ (2018)
ಕಂಪ್ಲಿ (2008)
ಹಗರಿಬೊಮ್ಮನಹಳ್ಳಿ (2008)
ಮಂಗಳೂರು ನಗರ (1994)
ಶಿರಾ (2020 ಉಪಚುನಾವಣೆ)
ಮೊಳಕಾಲ್ಮೂರು (2018)
ಹಿರಿಯೂರು (2018)
ಹೊಸದುರ್ಗ (2018)
ಚಿಕ್ಕೋಡಿ (2004)
ಕುಡಚಿ (2018)
ಚಿಕ್ಕಬಳ್ಳಾಪುರ (2019 ಉಪ)
ನೆಲಮಂಗಲ (2008)
ಹೊಸಕೋಟೆ (2008)
ಚಾಮರಾಜನಗರ (1999)
ನಂಜನಗೂಡು (2018)
ಕೊಳ್ಳೇಗಾಲ (2009 ಉಪ)
ಟಿ.ನರಸೀಪುರ (1999)
ಗುಂಡ್ಲುಪೇಟೆ (2018)
ಬಂಗಾರಪೇಟೆ (2011 ಉಪ)
ಕೊಪ್ಪಳ (2011 ಉಪ)
ಮಸ್ಕಿ (2008)
ಪಿರಿಯಾಪಟ್ಟಣ (1999)
ಚಿತ್ತಾಪುರ (2008)
ಜೇವರ್ಗಿ (2008)
ಕಲಬುರಗಿ ಉತ್ತರ (2004)

ಈ 41 ಕ್ಷೇತ್ರಗಳಲ್ಲಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಆಪರೇಷನ್ ಕಮಲ ಕಾರಣಕ್ಕಾಗಿ ನಡೆದ ಚುನಾವಣೆಗಳೇ ಹೆಚ್ಚಾಗಿವೆ. ಇನ್ನು 2008ರಲ್ಲಿ ಯಡಿಯೂರಪ್ಪನವರಿಗೆ ಸಿಎಂ ಸ್ಥಾನ ಕೊಡದೇ ಮೋಸ ಮಾಡಲಾಯಿತು ಎಂಬ ಅನುಕಂಪದಿಂದ ಬಹಳಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬಂದಿತ್ತು.

ಇದನ್ನೂ ಓದಿ: ಬಿಜೆಪಿ ಖಾತೆ ತೆರೆಯಲು ವಿಫಲವಾದ 9 ಜಿಲ್ಲೆಗಳಿವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಎಂಸಿ ವಿರುದ್ಧ ಅವಹೇಳನಕಾರಿ ಜಾಹೀರಾತು; ಬಿಜೆಪಿ ನಡೆಯನ್ನು ಟೀಕಿಸಿದ ಸುಪ್ರೀಂಕೋರ್ಟ್‌

0
ಪಶ್ಚಿಮ ಬಂಗಾಳದ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ "ಅವಹೇಳನಕಾರಿ" ಎಂದು ಪರಿಗಣಿಸುವ ಜಾಹೀರಾತುಗಳನ್ನು ನೀಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಮವಾರ ಕಟುವಾಗಿ ಟೀಕಿಸಿದ ಸುಪ್ರೀಂ ಕೋರ್ಟ್, ಜಾಹೀರಾತುಗಳನ್ನು ಪ್ರಕಟಿಸದಂತೆ...