HomeUncategorizedಈ ಪತ್ರಗಳು ಹೆಚ್ಚಿಸುತ್ತಿರುವುದು ನಮ್ಮ ಸಂತಸವನ್ನಷ್ಟೇ ಅಲ್ಲ

ಈ ಪತ್ರಗಳು ಹೆಚ್ಚಿಸುತ್ತಿರುವುದು ನಮ್ಮ ಸಂತಸವನ್ನಷ್ಟೇ ಅಲ್ಲ

- Advertisement -
- Advertisement -

“ನಮ್ಮ ಗೌರಿ ಪತ್ರಿಕೆಯು ‘ನ್ಯಾಯಪಥ’ ಹೆಸರಿನಲ್ಲಿ ಮತ್ತೆ ಪ್ರಾರಂಭವಾಗಿರುವುದನ್ನು ಓದಿ ಬಹಳ ಸಂತೋಷವಾಗುತ್ತಿದೆ. ತಪ್ಪದೇ ನನ್ನ ವಿಳಾಸಕ್ಕೆ ಪತ್ರಿಕೆ ಕಳಿಸಿರಿ. ಅದರ ಚಂದಾ ಹಣ ಕಳಿಸುವೆನು. ತಾವು ನನ್ನ ವಿಳಾಸಕ್ಕೆ ಪತ್ರಿಕೆ ಕಳಿಸಿದ್ದಕ್ಕೆ ಧನ್ಯವಾದಗಳು. ಉಳಿದ ವಿಷ್ಯ ಆಮೇಲೆ ಪತ್ರಮುಖೇನ ಬರೆಯುವೆನು. ಮೊದಲು ಒಂದು ವರ್ಷದ ಚಂದಾ ಹಣ ಚೆಕ್ ಮೂಲಕ ಕಳಿಸಿ ನಂತರ ಉಳಿದೆಲ್ಲ ವ್ಯವಹರಿಸುತ್ತೇನೆ. ರೈತ ಗೆಳೆಯರಿಗೆ, ನನ್ನ ಮಕ್ಕಳಿಗೂ ಪತ್ರಿಕೆ ತರಿಸಿಕೊಳ್ಳಲು ಹೇಳುವೆನು.

46ನೇ ಸಂಚಿಕೆ ಬಂದಾಗಲಾದರೂ ವಿಷಯ ತಿಳಿಯಿತಲ್ಲ. ನನಗೆ ಆರೋಗ್ಯ ಸರಿಯಿಲ್ಲದೇ ಮೊದಲಿನಂತೆ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೂ ಈ ಪತ್ರಿಕೆ ಓದಲು ಇಷ್ಟು ತಡವಾಯಿತು. ಕ್ಷಮೆ ಇರಲಿ. ನನ್ನ ವಿಳಾಸ ತಿಳಿದು ಪತ್ರಿಕೆ ಕಳಿಸಿದ್ದಕ್ಕಾಗಿ ನೂರಲ್ಲ, ಸಾವಿರ ನಮಸ್ಕಾರಗಳು.’ – ಕಡಿದಾಳು ಶಾಮಣ್ಣ ರೈತ.

ಪೋಸ್ಟ್ ಕಾರ್ಡ್‍ನಲ್ಲಿ ನಮಗೆ ಈ ಪತ್ರ ಬಂದಿತು. ರೈತಸಂಘದ ಹಿರಿಯರಲ್ಲಿ ಹಲವರು ರೂಢಿಸಿಕೊಂಡಿರುವಂತೆ ಹಸಿರು ಇಂಕಿನಲ್ಲಿ ಬರೆದ ಪತ್ರವದು. ಶಾಮಣ್ಣನವರಂತಹ ಹಿರಿಯರಿಗೆ ಇಷ್ಟು ಕಾಲ ಪತ್ರಿಕೆ ತಲುಪಿಸದಿದ್ದಕ್ಕೆ ನಾವು ನಾಚಿಕೆ ಪಟ್ಟುಕೊಳ್ಳಬೇಕು. ಆದರೆ, ಅವರು ತಾನು ಹೆಚ್ಚು ತಿರುಗಾಡದೇ ಇರುವುದರಿಂದ ಪತ್ರಿಕೆಯ ಬಗ್ಗೆ ತಾನೇ ತಿಳಿಯದಿದ್ದುದು ತಪ್ಪು ಎಂದು ಭಾವಿಸುವ ದೊಡ್ಡ ಮನಸ್ಸಿನವರು.
ಇದೇ ರೀತಿಯಲ್ಲಿ ಹೆಚ್ಚು ಓಡಾಡಲು ಆಗದ ಹೇಮಕ್ಕನವರು ನಮ್ಮ ಪತ್ರಿಕೆಯ ಓದನ್ನು ಒಂದು ವಾರವೂ ತಪ್ಪಿಸಿಲ್ಲ. ಪತ್ರಿಕೆಯ ಅಖಂಡ ಅಭಿಮಾನಿಯಾದ ಅವರು ಕಳೆದ ವಾರದ ಸಂಚಿಕೆಯಲ್ಲಿದ್ದ ಪ್ರೂಫ್ ತಪ್ಪುಗಳ ಪಟ್ಟಿ ಮಾಡಿ ಕಳಿಸಿದ್ದಾರೆ.

ನಮ್ಮ ಕನ್ಸಲ್ಟಿಂಗ್ ಎಡಿಟರ್ ಉಮಾಪತಿಯವರು, ಪತ್ರಿಕೆಯನ್ನು ನೋಡಿದಕೂಡಲೇ ಸಗಟಾಗಿ ಸಾಕಷ್ಟು ಹೊಗಳಿ ನಮ್ಮ ಸ್ಫೂರ್ತಿ ಹೆಚ್ಚಿಸುತ್ತಾರೆ. ನಂತರ ನಾವು ಮಾಡಿರುವ ತಪ್ಪುಗಳನ್ನು ಒಂದಾದಮೇಲೆ ಒಂದು ಹೇಳುತ್ತಾರೆ. ಮೂಲೆಯಲ್ಲಿದ್ದ ಕವನದಲ್ಲಿ ಬಚ್ಚಿಟ್ಟುಕೊಂಡಿರುವ ಒಂದು ಪ್ರೂಫ್ ತಪ್ಪು ಸಹ ಅವರಿಗೆ ಕಾಣಿಸಿರುತ್ತದೆ. ಆಯಾ ವಾರದ ಸಂಚಿಕೆ ರೂಪಿಸುವಾಗ ತಾನು ತಲೆ ಮೇಲೆ ಕೂರಬಾರದು ಎಂಬ ಬಗ್ಗೆ ಅವರು ಬಹಳ ಪ್ರಜ್ಞಾಪೂರ್ವಕವಾಗಿರುತ್ತಾರೆ. ಆದರೆ, ಹಿಂದಿನ ಸಂಚಿಕೆಗಳ ಅವರ ರಿವ್ಯೂ ಮುಂದಿನ ಸಂಚಿಕೆಗಳನ್ನೂ ರೂಪಿಸುತ್ತಿರುತ್ತದೆ. ಈ ವಾರ ಉದ್ಯಮಿ ಸಿದ್ದಾರ್ಥ ಹೆಗಡೆಯ ಮಿಸ್ಸಿಂಗ್ ಕುರಿತು ಬರೆಯುವಾಗ ಆತನ ಬದುಕಿನ ಮಾನವೀಯ ಅಂಶಗಳು ಮತ್ತು ರಾಜಕೀಯ ಬಲದ ಮೂಲಕ ಮಾಡಿರಬಹುದಾದ ಹಗರಣಗಳನ್ನು ಎರಡನ್ನೂ ಯಾವ ಬ್ಯಾಲೆನ್ಸ್‍ನಲ್ಲಿ ಬರೆಯಬೇಕೆಂಬ ಕುರಿತು ವಿಶೇಷ ಕಿವಿಮಾತು ಹೇಳಿದರು.

ಶನಿವಾರ, ಭಾನುವಾರ ಮಂಡ್ಯದಲ್ಲಿ ನಡೆದ ಮನುಜಮತ ಸಿನಿಯಾನ ಸಿನೆಮಾ ಹಬ್ಬದಲ್ಲಿ ಮೈಸೂರಿನ ಗೆಳೆಯರೊಬ್ಬರು ಸಿಕ್ಕರು. ಸಿನೆಮಾ ಕ್ಷೇತ್ರದ ಕುರಿತು ಅಪಾರ ಆಸಕ್ತಿ ಮತ್ತು ವಿಶೇಷ ಒಳನೋಟಗಳಿರುವ ಅವರು ‘ನಾನು ಇತ್ತೀಚೆಗೆ ನ್ಯೂಸ್ ಫಾಲೋ ಮಾಡಲು ಬೇರೆ ಯಾವುದನ್ನೂ ನೋಡುತ್ತಿಲ್ಲ ಸರ್. ನಾನುಗೌರಿ.ಕಾಂ ಮಾತ್ರ ನೋಡುತ್ತೇನೆ’ ಎಂದರು. ಅದರಲ್ಲಿ ನಮ್ಮ ಬಗೆಗಿನ ಮೆಚ್ಚುಗೆಗಿಂತ ನ್ಯೂಸ್ ಚಾನೆಲ್‍ಗಳ ಕುರಿತ ಸಿಟ್ಟೇ ಹೆಚ್ಚಿರಬಹುದು ಎನಿಸಿತು.

ಚಿತ್ರದುರ್ಗ ಮತ್ತು ದಾವಣಗೆರೆಗಳಲ್ಲಿ ನಡೆದ ಪತ್ರಿಕಾ ಬಳಗದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಗಿರೀಶ್ ತಾಳಿಕಟ್ಟೆಯವರಿಗೆ ಆಶ್ಚರ್ಯವಾಗಿತ್ತು. ಅಷ್ಟೂ ವಾರಗಳಲ್ಲಿ ನಮ್ಮಲ್ಲಿ ಯಾವ ಇಶ್ಯೂ ಕುರಿತು ಹೆಚ್ಚು ಲೇಖನಗಳು ಬಂದಿಲ್ಲ ಎಂದು ಕೆಲವು ಓದುಗರು ಗುರುತಿಸಿ ಹೇಳಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈಗಲೂ ಅವರೆಲ್ಲರಿಗೆ ಲಂಕೇಶರು ಸಂಪಾದಿಸುತ್ತಿದ್ದ ‘ಲಂಕೇಶ್ ಪತ್ರಿಕೆ’ಯೇ ಗುಣಮಟ್ಟದ ಟ್ಯಾಬ್ಲಾಯ್ಡ್ ಹೇಗಿರಬೇಕು ಎಂಬುದಕ್ಕೆ ಅಳತೆಗೋಲು! ಈ ಎರಡು ಜಿಲ್ಲೆಗಳ ಸಭೆಗಳ ಅನುಭವದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಮಾಲೋಚನಾ ಸಭೆಗಳು ನಿಗದಿಯಾಗಿವೆ. ಬಿಜಾಪುರದ ಸಭೆಯಲ್ಲಿ ಭಾಗವಹಿಸಲು ಬಸ್ ಹತ್ತುವ ಮುನ್ನ ಇದನ್ನು ಬರೆಯುತ್ತಿದ್ದೇನೆ.

ಇದನ್ನು ಓದಿ: ಮನ ಮುಟ್ಟುವ ಪತ್ರಿಕೋದ್ಯಮದ ಹಾದಿಯಲ್ಲಿ ಇನ್ನೊಂದು ಹೆಜ್ಜೆ

ಮೇಲಿನವೆಲ್ಲವೂ ನಮ್ಮ ಮೇಲಿರುವ ಜವಾಬ್ದಾರಿಯ ಪ್ರಮಾಣವನ್ನು ತೋರುತ್ತಿವೆ. ಇದನ್ನು ಪ್ರೀತಿಯಿಂದ ಸ್ವೀಕರಿಸಲು ಬಹಳಷ್ಟು ಜನರಿದ್ದಾರೆ. ಅದಕ್ಕೆ ಅನುಗುಣವಾಗಿ ರಂಜನೆ, ಬೋಧನೆ, ಪ್ರಚೋದನೆಗಳ ಸರಿಯಾದ ಮಿಶ್ರಣದ ಎರಕ ಹೊಯ್ದು ಪ್ರತೀವಾರವೂ ಪತ್ರಿಕೆ ಸಿದ್ಧಪಡಿಸಬೇಕು. 20 ವರ್ಷಗಳಲ್ಲಿ ಬದಲಾಗಿರುವ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಪರಿಸ್ಥಿತಿ ಮತ್ತು ಅಭಿರುಚಿಗಳನ್ನು ಅರ್ಥಮಾಡಿಕೊಂಡು, ಈ ಹೊತ್ತಿನ ಜಾಣ ಜಾಣೆಯರಿಗೂ ಇದನ್ನು ತಲುಪಿಸಬೇಕು.

ಸಾಕಷ್ಟು ಸವಾಲುಗಳನ್ನು ಎದುರಿಸುತ್ತಲೇ ಅದನ್ನು ಮಾಡಬೇಕಿದೆ. ಉದಾಹರಣೆಗೆ ಪ್ರೂಫ್ ತಪ್ಪುಗಳ ಬಗ್ಗೆ ನಮಗೂ ಅರಿವಿದೆ. ನಮ್ಮ ಕಚೇರಿಯಲ್ಲಿ ಎ 3 ಸೈಜಿನ ಪ್ರಿಂಟರ್ ಸಹ ಇಲ್ಲ. ಹಾಗಾಗಿ ಕಿರಿದಾದ ಅಕ್ಷರಗಳ ನಡುವೆ ತಪ್ಪುಗಳು ನುಸುಳುತ್ತಲೇ ಇವೆ. ಈ ಸಂಚಿಕೆಯಿಂದ ಮೂರು ಬಾರಿ ಪ್ರೂಫ್ ತಿದ್ದುವ ಮೂಲಕ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಪ್ರತೀ ವಾರವೂ ಹೊಸಬರು ಬರೆಯಲಿದ್ದಾರೆ. ಬರಹಗಳ ವೈವಿಧ್ಯ, ನಮ್ಮ ಪ್ರಸಾರ ವ್ಯಾಪ್ತಿ ಮತ್ತು ಆರ್ಥಿಕ ಬಲ ಹೆಚ್ಚಾಗಲು ನೀವೆಲ್ಲರೂ ಇನ್ನಷ್ಟು ಕೈ ಜೋಡಿಸುವ ಅಗತ್ಯವಿದೆ.

ನಿಮ್ಮೆಲ್ಲರ ಪ್ರೀತಿ ಹೆಚ್ಚಾದಂತೆ ಕೆಲವರ ಅಸೂಯೆ ಮತ್ತು ದಾಳಿಯೂ ಹೆಚ್ಚಾಗುತ್ತಾ ಹೋಗುತ್ತದೆ. ಅದನ್ನೂ ಸಮತೋಲನದಿಂದ ಎದುರಿಸುತ್ತಾ ನಮ್ಮ ಕರ್ತವ್ಯವನ್ನು ಮುಂದುವರೆಸುತ್ತೇವೆಂಬ ಭರವಸೆಯನ್ನು ನಮ್ಮ ತಂಡದ ಪರವಾಗಿ ನೀಡುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...