Homeಕರ್ನಾಟಕದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ: ಮುಸ್ಲಿಂ ಬಾಲಕಿಯರನ್ನು ಬೆದರಿಸಿದ ಯುವಕರಿಗೆ ಬಿಜೆಪಿ ಮುಖಂಡನ ಶ್ಲಾಘನೆ

ದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ: ಮುಸ್ಲಿಂ ಬಾಲಕಿಯರನ್ನು ಬೆದರಿಸಿದ ಯುವಕರಿಗೆ ಬಿಜೆಪಿ ಮುಖಂಡನ ಶ್ಲಾಘನೆ

ಸಂಘ ಪರಿವಾರ ತೊರೆದ ಮುಖಂಡರ ಅಭಿಪ್ರಾಯಗಳು ಬಿಜೆಪಿ ನಾಯಕರ ಇಂತಹ ಹೇಳಿಕೆಗಳಿಗೆ ತದ್ವಿರುದ್ಧವಾಗಿವೆ.

- Advertisement -
- Advertisement -

ಇಬ್ಬರು ಮುಸ್ಲಿಂ ಯುವತಿಯರಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಿ ಎರಡು ವಾರ ಜೈಲುವಾಸ ಅನುಭವಿಸಿದ ಬಳಿಕ ಡಿಸೆಂಬರ್ 4ರ ಸಂಜೆ ಇಬ್ಬರು ಕೈದಿಗಳು ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲಾ ಕಾರಾಗೃಹದಿಂದ ಹೊರ ಬಂದರು.

ಅವರನ್ನು ಭೇಟಿಯಾಗಲು ಜೈಲಿನ ಹೊರಗೆ ಒಂದು ಸಣ್ಣ ಗುಂಪು ಜಮಾಯಿಸಿತ್ತು. ಜೈಲಿನಿಂದ ಬಿಡುಗಡೆಯಾದ ಯುವಕರನ್ನು ಶನಿವಾರಸಂತೆಗೆ ಕರೆದೊಯ್ಯಲಾಯಿತು. ಅವರಿಗೆ ಕೇಸರಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಿಜೆಪಿ ಮುಖಂಡ ಎಸ್‌.ಎನ್.ರಘು ಅವರು ಈ ಯುವಕರೊಂದಿಗೆ ಫೋಟೋ ತೆಗೆಸಿಕೊಂಡರು.

“ಯುವಕರು ಧರ್ಮದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರದ ಆಶೀರ್ವಾದ ಅವರಿಗಿದೆ. ಈ ಯುವಕರ ಏಳಿಗೆಗೆ ದೇಶ ಸಹಾಯ ಮಾಡುತ್ತದೆ” ಎಂದ ರಘು ಅವರು, ಜೈಲಿನಿಂದ ಬಿಡುಗಡೆಯಾಗಿ ಬಂದ ಯುವಕರನ್ನು ಬೆಂಬಲಿಸಿದರು.

ಒಂದು ವಾರದ ಹಿಂದೆ ರಘು ಅವರು ಈ ಯುವಕರ ಕುಟುಂಬವನ್ನು ಭೇಟಿ ಮಾಡಿ ಭರವಸೆ ನೀಡಿದ್ದರು. “ನಾವು ನಿಮ್ಮ ಮಗನನ್ನು ಮನೆಗೆ ಕರೆತರುತ್ತೇವೆ. ಅವರು ರಾಷ್ಟ್ರಕ್ಕಾಗಿ ಇದನ್ನು ಮಾಡಿದ್ದಾರೆ. ಅವರು ತಮ್ಮ ಧರ್ಮಕ್ಕಾಗಿ ಈ ಕೆಲಸವನ್ನು ಮಾಡಿದ್ದಾರೆ. ನೀವು ಏನನ್ನೂ ಖರ್ಚು ಮಾಡಬೇಕಾಗಿಲ್ಲ, ನಾವು ಅದನ್ನು ನೋಡಿಕೊಳ್ಳುತ್ತೇವೆ” ಎಂದಿದ್ದರು ರಘು.

ನವೆಂಬರ್ 18ರಂದು ಶನಿವಾರಸಂತೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕಿಯರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪ್ರಜ್ವಲ್ ಮತ್ತು ಕೌಶಿಕ್ ಎಂಬ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಈ ಮುಸ್ಲಿಂ ಬಾಲಕಿಯರು ಬುರ್ಖಾವನ್ನು ಹಸ್ತಾಂತರಿಸಿದ ಆರೋಪ ಮಾಡಿಈ ಬಾಲಕಿಯರ ಮೇಲೆ ದಾಳಿ ಮಾಡಲು ಯತ್ನಿಸಿದ 30 ಯುವಕರ ಗುಂಪಿನ ಭಾಗವಾಗಿದ್ದರು ಪ್ರಜ್ವಲ್‌ ಮತ್ತು ಕೌಶಿಕ್‌.

ಒಂದು ತಿಂಗಳಿನಿಂದ ಕೊಡಗಿನಲ್ಲಿ ವರದಿಯಾದ ಕೋಮು ದ್ವೇಷದ ಅಪರಾಧಗಳ ಸರಣಿಯಲ್ಲಿ ಈ ಘಟನೆ ಇತ್ತೀಚಿನದು. ಶಾಲೆಗೆ ಹೋಗುವ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ವ್ಯಕ್ತಿಗಳಿಗೆ ಸಿಕ್ಕಿರುವ ಬೆಂಬಲ ಕೊಡಗು ಜಿಲ್ಲೆಯ ಪ್ರಜ್ಞಾವಂತರಲ್ಲಿ ಆತಂಕ ತಂದಿದೆ.

ಇದನ್ನೂ ಓದಿರಿ: ಶನಿವಾರಪೇಟೆ: ಬುರ್ಖಾ ಧರಿಸಿದಕ್ಕೆ ಅಮಾಯಕ ಬಾಲಕಿಯರ ಮೇಲೆ ಮತೀಯ ಗೂಂಡಾಗಿರಿ

PC: thenewsminute.com

ಕೊಡಗು ಜಿಲ್ಲೆಯಲ್ಲಿ ಮತೀಯ ಗಲಭೆಗಳು ಇನ್ನಿಲ್ಲದಂತೆ ಹಚ್ಚಾಗುತ್ತಿವೆ. ಯುವಕರು ಹಿಂದುತ್ವದ ರಾಜಕೀಯ ದಾಳವಾಗುತ್ತಿದ್ದಾರೆ. ಗಲಭೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಿಂದುತ್ವದಂತೆಯೇ ಮುಸ್ಲಿಂ ಹೆಸರಲ್ಲಿನ ಮತೀಯವಾಗಿ ಸಂಘಟನೆಗಳೂ ಬಲವಾಗುತ್ತಿವೆ. ಆದರೆ ಹಿಂದುತ್ವ ಶಕ್ತಿಗಳು ಅಧಿಕಾರದಲ್ಲಿ ಇರುವುದರಿಂದ ಹಿಂದುತ್ವ ಸಂಘಟನೆಗಳಿಗೆ ಹೆಚ್ಚಿನ ಬಲ ಬಂದಂತೆ ಕಾಣುತ್ತಿದೆ.

ಆದರೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಪ್ರಕರಣಗಳನ್ನು ಮೈಮೇಲೆ ಎಳೆದುಕೊಳ್ಳುವ ಯುವಕರ ಕುರಿತು ವಿಷಾದ ವ್ಯಕ್ತಪಡಿಸುತ್ತಾರೆ ಹಿಂದುತ್ವಕ್ಕಾಗಿ ದಶಕಗಳ ಕಾಲ ಕೆಲಸ ಮಾಡಿ, ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡ ಅನೇಕ ನಾಯಕರು.

‘ನ್ಯಾಯಪಥ’ ಪತ್ರಿಕೆ ಹಾಗೂ ‘ನಾನುಗೌರಿ.ಕಾಂ’ನಲ್ಲಿ ಪ್ರಕಟವಾಗುತ್ತಿರುವ “ನಾನೇಕೆ ಸಂಘ ಪರಿವಾರ ತೊರೆದೆ” ಲೇಖನ ಸರಣಿಯಲ್ಲಿ ಮಾತನಾಡುವ ಅನೇಕರು ಈ ಕುರಿತು ವಿಸ್ತೃತವಾಗಿ ಮಾತನಾಡುತ್ತಿದ್ದಾರೆ. ಶೂದ್ರ ಸಮುದಾಯಗಳ ಯುವಕರಿಗೆ ಬುದ್ಧಿ ಹೇಳುತ್ತಾ, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಕೋಮುವಾದದ ಪ್ರಯೋಗಶಾಲೆ ಎಂದೇ ಖ್ಯಾತವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಶಕಗಳ ಕಾಲ ಸಂಘ ಪರಿವಾರದೊಂದಿಗೆ ಇದ್ದವರು ಸುನಿಲ್ ಬಜಿಲಕೇರಿ ಹಾಗೂ ಪ್ರವೀಣ್‌ ವಾಲ್ಕೆ. ಇತ್ತೀಚೆಗೆ ’ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದ ಅವರುಈ ನಾಯಕರು ಹೇಗೆ ಸಂಘಪರಿವಾರದ ನಾಯಕರು ಬಡ ಹುಡುಗರನ್ನು ಬಳಸಿಕೊಳ್ಳುತ್ತಾರೆ ಎಂದು ವಿವರಿಸಿದ್ದರು.

“ಹಿಂದೂ ಧರ್ಮದ ಉಳಿವಿಗೆ ಸಂಘಟನೆಯ ಅಗತ್ಯವಿಲ್ಲ. ನಮ್ಮ ನಮ್ಮ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ, ಹಿಂದೂ ಧರ್ಮ ಸುಧಾರಿಸಿ ಉಳಿಯುತ್ತದೆ. ಯಾವುದೇ ರಾಜಕೀಯ ನಾಯಕರ ಮಕ್ಕಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇಲ್ಲ. ಇಲ್ಲಿನ ಕಾರ್ಯಕರ್ತರು, ಕೆಳವರ್ಗದ ಹುಡುಗರು ಮಾತ್ರ ಕೋರ್ಟ್ ಮೆಟ್ಟಿಲೇರುತ್ತಾರೆ. ಮೇಲ್ವರ್ಗದ ಹುಡುಗರಿಗೆ ಸಜೆಯಾಗಿದ್ದನ್ನಾಗಲೀ, ಪ್ರಕರಣ ದಾಖಲಾಗಿದ್ದಾಗಲೀ ನಾವು ನೋಡಲಿಲ್ಲ. ಪೂಜಾರಿಗಳು, ಶೆಟ್ಟಿಗಳು ಈ ಥರದ ಸಮುದಾಯಗಳೇ ಬಲಿಪಶುಗಳಾಗಿರುತ್ತವೆ. ಈ ಜನಾಂಗಗಳ ಜೀವನವನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರಿಂದ ದೇಶ ಉದ್ಧಾರವಾಗುವುದಿಲ್ಲ. ದೇಶ ಉದ್ಧಾರದ ಬ್ಯಾನರ್ ಹಾಕಿಕೊಂಡು ದೇಶವನ್ನು ’ಲಗಾಡಿ’ ತೆಗೆಯುತ್ತಿದ್ದಾರೆ” ಎಂದಿದ್ದರು ಬಜರಂಗದಳ ಮಾಜಿ ನಾಯಕ ಪ್ರವೀಣ್ ವಾಲ್ಕೆ.

“ಒಬ್ಬ ಹುಡುಗ ಮೊದಲ ಬಾರಿಗೆ ಜೈಲಿಗೆ ಹೋದಾಗ ಸಂಘ ಪರಿವಾರದಲ್ಲಿ ಬಹಳ ಮುರ್ಯಾದೆ ಕೊಡಲಾಗುತ್ತದೆ. ಮತ್ತೆಮತ್ತೆ ಇದೇ ರೀತಿ ಗಲಾಟೆಯಾಯಿತೆಂದರೆ ಅವನನ್ನು ಸಂಘಟನೆಯವರು ಹಿಂದಕ್ಕೆ ಹಾಕುತ್ತಾರೆ. ಹಿಂದೂ ಆಗಲಿ, ಮುಸ್ಲಿಂ ಆಗಲೀ- ದಕ್ಷಿಣ ಕನ್ನಡ ಜಿಲ್ಲೆ ಗ್ಯಾಂಗ್ ಕಟ್ಟಿ ಎದುರುಬದುರಾಗಿಸಲು ಒಂದು ಕಾರ್ಖಾನೆಯಂತಾಗಿದೆ. ಯುವಕರನ್ನು ರೌಡಿಸಂ ಕಾರ್ಖಾನೆಗೆ ಹಿಂದೂ ಮುಸ್ಲಿಂ ಧರ್ಮಗಳ ಕಟ್ಟರ್ ಸಂಘಟನೆಗಳು ದೂಡುತ್ತಿವೆ” ಎಂಬುದು ವಾಲ್ಕೆಯವರ ಅಭಿಪ್ರಾಯ. (ಪ್ರವೀಣ್ ವಾಲ್ಕೆ ಅವರ ಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ)

ಸುನಿಲ್‌ ಬಜಿಲಕೇರಿಯವರ ಅನುಭವಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ. ಹಿಂದುತ್ವದಿಂದ ಬಂಧುತ್ವದ ಕಡೆಗೆ ಹೊರಟಿರುವ ಅವರು, “ಕೇರಳದಿಂದ ಬರುವ ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಮದುವೆಯಾದಾಗ ಹಿಂದುತ್ವ, ಸಂಘಟನೆ, ಧರ್ಮ ಎನ್ನುತ್ತಾ ಆರ್‌ಎಸ್‌ಎಸ್, ಭಜರಂಗದಳಗಳ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ನಾಯಕರು ಮಾತ್ರ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದು ತಿಳಿಯುತ್ತಾ ಹೋಯಿತು. ಚುನಾವಣಾ ಸಮಯದಲ್ಲಿ ಕಾರ್ಯಕರ್ತರ ಕೊಲೆಯನ್ನು ಮಾಡೋದೋ, ಮಾಡಿಸುವಂತಹದ್ದೋ ಆಗುತ್ತದೆ. ಚುನಾವಣೆ ನಡೆದ ಬಳಿಕ ಎಲ್ಲರೂ ಒಟ್ಟಿಗೆ ಬಾಳೋಣ ಎನ್ನುತ್ತಾರೆ. ಚುನಾವಣೆ ಪ್ರಾರಂಭವಾದ ಕೂಡಲೇ ಕೊಲೆಗಳು ಇಲ್ಲಿ ಅನಿವಾರ್ಯವಾಗುತ್ತಿತ್ತು. ಇದನ್ನೆಲ್ಲ ನೋಡಿನೋಡಿ ಬೇಸರವಾಯಿತು. ಹಿಂದೂ ಸಂಘಟನೆಗಳಲ್ಲಿ ದುಡಿದು ಏನೂ ಪ್ರಯೋಜನವಿಲ್ಲ. ಅವರು ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ನಮಗೆ ರಾಜಕೀಯ ಬೇಡ. ನಾವ್ಯಾಕೆ ಒಂದಾಗಿ ಬದುಕಬಾರದು? ನಮ್ಮ ಮಂಗಳೂರಿನಲ್ಲಿ ಶಾಂತಿ ಏಕೆ ನೆಲೆಸಬಾರದು? ಎಂದು ಯೋಚಿಸಿ ’ಹಿಂದುತ್ವದಿಂದ ಬಂಧುತ್ವ’ ಪರಿಕಲ್ಪನೆಯಲ್ಲಿ ಸಮಾನ ಮನಸ್ಕರು ಸೇರಿ ಜಾಗೃತಿ ಮೂಡಿಸಲು ಮುಂದಾದೆವು. ’ಹಿಂದುತ್ವದೊಂದಿಗೆ ಬಂಧುತ್ವ’ ನಮ್ಮ ಮುಂದಿನ ಹೆಜ್ಜೆಯಾಯಿತು” ಎನ್ನುತ್ತಾರೆ ಸುನಿಲ್.

“ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಹಿಂದುತ್ವದ ಪ್ರಯೋಗಶಾಲೆ. ಈ ಜಿಲ್ಲೆಯಲ್ಲಿ ಬಹುಸಂಖ್ಯಾತರೆಂದರೆ ಬಿಲ್ಲವರು. ಆದರೆ ಈ ಸಮುದಾಯದ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದನ್ನೇ ಬಿಜೆಪಿಯ ಸಂಘಪರಿವಾರದ ನಾಯಕರು ಬಳಸಿಕೊಂಡರು. ಪೇಂಟರ್ ಆಗಿರಬಹುದು, ವೆಲ್ಡರ್ ಆಗಿರಬಹುದು, ಸಣ್ಣ ಸಣ್ಣ ಕೆಲಸ ಮಾಡುವವರನ್ನೆಲ್ಲ ಹಿಂದುತ್ವದ ಬಲೆಯೊಳಗೆ ಹಾಕಿ ಗಲಾಟೆ ಮಾಡಿಸುತ್ತಾರೆ. ಜೈಲಿನಲ್ಲಿ ಇರುವ ಶೇ.90 ಜನರು ಬಿಲ್ಲವರು. ಇದೇನೂ ಈ ರೀತಿ ಮಾಡುತ್ತಿದ್ದಾರೆ? ರಾಜಕೀಯದಲ್ಲಿ ಒಳ್ಳೆಯ ಹುದ್ದೆಗಳಲ್ಲಿ ಇರುವವರೆಲ್ಲ ಮೇಲ್ವರ್ಗದವರಿಗೆ ಮೀಸಲು, ಗಲಾಟೆ ಮಾಡಿ ಜೈಲಿನಲ್ಲಿ ಇರುವವರು ಮಾತ್ರ ಹಿಂದುಳಿದ ವರ್ಗದ ಯುವಕರು! ಇದೆಲ್ಲ ನೋವು ನೀಡಿತು” ಎನ್ನುತ್ತಾರೆ ಸುನಿಲ್‌ ಬಜಿಲಕೇರಿ. (ಇವರ ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ)

ಚುನಾವಣೆ ಹತ್ತಿರವಾಗುತ್ತಿವೆ. ಎಲ್ಲೆಡೆ ಕೋಮುದ್ವೇಷ ಹೆಚ್ಚುತ್ತಿವೆ. ಯುವಕರನ್ನು ಜೈಲಿಗೆ ತಳ್ಳುವ ಕೆಲಸಗಳು ನಡೆಯುತ್ತಿವೆ. ರಾಜಕಾರಣಿಗಳ ದಾಳಕ್ಕೆ ಬಡ ಸಮುದಾಯಗಳ ಯುವಕರು ಬಲಿಪಶುಗಳಾಗುವುದು ತಪ್ಪಬೇಕಿದೆ ಎಂಬುದು ಪ್ರಜ್ಞಾವಂತರ ಆಶಯ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌‌: ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿನಿಯರ ಪದವಿ ರದ್ದು ಮಾಡಲಾಗಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....