Homeಕರ್ನಾಟಕಗೊಂದಲಗಳ ನಡುವೆ ‘5 ವರ್ಷ LLB’ಯ 2ನೇ & 4ನೇ ಸೆಮಿಸ್ಟರ್‌ ಪರೀಕ್ಷೆ ಪ್ರಾರಂಭ!

ಗೊಂದಲಗಳ ನಡುವೆ ‘5 ವರ್ಷ LLB’ಯ 2ನೇ & 4ನೇ ಸೆಮಿಸ್ಟರ್‌ ಪರೀಕ್ಷೆ ಪ್ರಾರಂಭ!

ಗೊಂದಲದಿಂದಾಗಿ ಹಲವಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಿಲ್ಲ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

- Advertisement -
- Advertisement -

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಮೂರು ವರ್ಷದ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ 2 ನೇ ಮತ್ತು 4 ಸೆಮಿಸ್ಟರ್‌ ಪರೀಕ್ಷೆಯನ್ನು ಮಂಗಳವಾರ ಹೈಕೋರ್ಟ್‌ ವಜಾಮಾಡಿದೆ. ಆದರೆ ಐದು ವರ್ಷ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪರೀಕ್ಷೆ ಇಂದು ಪ್ರಾರಂಭವಾಗಿದೆ. ಆದರೆ ಈ ಪರೀಕ್ಷೆಯ ಬಗ್ಗೆ ಇಂದು ಹೈಕೋರ್ಟ್‌ ತೀರ್ಪು ನೀಡಲಿದೆ!.

ಈ ನಡುವೆ, ಮೂರು ವರ್ಷ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪರೀಕ್ಷೆಗಳು ರದ್ದಾಗಿರುವ ಬಗ್ಗೆ ಕೆಲವು ಪತ್ರಿಕೆಗಳು ಗೊಂದಲಕಾರಿಯಾಗಿ ವರದಿ ಮಾಡಿವೆ. ಇದು ವಿದ್ಯಾರ್ಥಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದು, ಐದು ವರ್ಷ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ತಯಾರಾಗುವುದೇ ಅಥವಾ ಬೇಡವೇ ಎಂಬ ಗೊಂದಲಲ್ಲಿ ಬಿದ್ದಿದ್ದರು.

ಇದನ್ನೂ ಓದಿ:ಪ್ರಶ್ನೆ ಪತ್ರಿಕೆ ಸೋರಿಕೆ: 20 ಲಕ್ಷ ಜನರು ಬರೆಯಬೇಕಿದ್ದ ‘ಉತ್ತರ ಪ್ರದೇಶ TET’ ಪರೀಕ್ಷೆ ರದ್ದು!

ವಿಶ್ವವಿದ್ಯಾಲಯವು ಇಂದು ಮಧ್ಯಾಹ್ನ 2 ಗಂಟೆಗೆ ಐದು ವರ್ಷ ಕಾನೂನು ವ್ಯಾಸಂಗ ಮಾಡುವ 2ನೇ ಮತ್ತು 4 ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಿದೆ ಎಂದು ಈ ಹಿಂದೆಯೆ ಹೇಳಿತ್ತು. ಅದರಂತೆ ಇಂದು ಈ ಪರೀಕ್ಷೆ ನಡೆಯಲಿದೆ. ಆದರೆ ಗೊಂದಲದಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿಲ್ಲ ಎಂದು ವಿದ್ಯಾರ್ಥಿಯೊಬ್ಬರು ನಾನುಗೌರಿ.ಕಾಂ ಹೇಳಿದ್ದಾರೆ.

ಐದು ವರ್ಷ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪರೀಕ್ಷೆ ಇಂದು ನಡೆಯಲಿದೆ ಎಂದು ವಿದ್ಯಾರ್ಥಿ ಕಾರ್ಯಕರ್ತ ಚಿಕ್ಕಮಾರನಹಳ್ಳಿ ಅನಂತ್ ಅವರು ಹೇಳಿದ್ದಾರೆ. ಆದರೆ ಈ ಪರೀಕ್ಷೆಯ ಬಗ್ಗೆ ಹೈಕೋರ್ಟ್ ಇಂದು ತೀರ್ಪು ನೀಡಲಿದೆ ಎಂದು ಅವರು ಹೇಳಿದ್ದಾರೆ. ಆದರೆ ಹೈಕೋರ್ಟ್‌ನಲ್ಲಿ ವಿಚಾರಣೆ ಇನ್ನೂ ನಡೆಯುತ್ತಿದ್ದು, ಪರೀಕ್ಷೆ ಸ್ವಲ್ಪಹೊತ್ತಿನಲ್ಲೇ ಪ್ರಾರಂಭವಾಗುತ್ತದೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅನಂತ್‌, “ಮೂರು ವರ್ಷಗಳ ಕಾನೂನು ವ್ಯಾಸಂಗ ಮಾಡುವ 2 ನೇ ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆಯನ್ನು ಹೈಕೋರ್ಟ್‌ ರದ್ದು ಮಾಡಿದೆ. ಆದರೆ, ಐದು ವರ್ಷ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪರೀಕ್ಷೆ ಇಂದು ನಡೆಯಲಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಶಾಲಾ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಪೂರಕ ಪರೀಕ್ಷೆಯಲ್ಲಿ ಟಾಪರ್‌‌

“ಆದರೆ ವಿಶ್ವವಿದ್ಯಾಲಯವು ಸರಿಯಾಗಿ ಸಂವಹನ ನಡೆಸುತ್ತಿಲ್ಲ. ಐದು ವರ್ಷ ಮತ್ತು ಮೂರು ವರ್ಷ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳದ್ದು ಸಾಮಾನ್ಯವಾಗಿ ಒಂದೇ ರೀತಿಯ ಪಠ್ಯಕ್ರಮವಿರುತ್ತದೆ. ಆದರೆ ಮೂರು ವರ್ಷಗಳ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಇರುವಾಗ, ಐದು ವರ್ಷಗಳ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದರೆ ಅನ್ಯಾಯವಲ್ಲವೆ” ಎಂದು ಕೇಳಿದ್ದಾರೆ.

ಇದನ್ನೂ ಓದಿ:ಲಖಿಂಪುರ್‌ ಖೇರಿ ಹತ್ಯಾಕಾಂಡ: ಮರಣೋತ್ತರ ಪರೀಕ್ಷೆ ವರದಿ ಬರುವವರೆಗೂ ಅಂತ್ಯಸಂಸ್ಕಾರಕ್ಕೆ ಒಪ್ಪದ ಕುಟುಂಬ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...