Homeಮುಖಪುಟಕೊಲ್ಕತ್ತಾ ಮುನ್ಸಿಪಲ್‌‌ನಲ್ಲಿ ಟಿಎಂಸಿ ಅಭೂತಪೂರ್ವ ಜಯ; BJP ಹೀನಾಯ ಸೋಲು

ಕೊಲ್ಕತ್ತಾ ಮುನ್ಸಿಪಲ್‌‌ನಲ್ಲಿ ಟಿಎಂಸಿ ಅಭೂತಪೂರ್ವ ಜಯ; BJP ಹೀನಾಯ ಸೋಲು

- Advertisement -
- Advertisement -

ಪಶ್ಚಿಮ ಬಂಗಾಳದ ಕೊಲ್ಕತ್ತಾ ಮುನ್ಸಿಪಲ್‌‌ ಕಾರ್ಪೊರೇಶನ್‌‌ ಚುನಾವಣೆಯಲ್ಲಿ ಪಾಲಿಕೆಯ ಆಡಳಿತರೂಢ ಪಕ್ಷ ಟಿಎಂಸಿ ಅಭೂತ ಪೂರ್ವ ಗೆಲುವು ಸಾಧಿಸಿದೆ. 144 ವಾರ್ಡ್‌ಗಳಲ್ಲಿ ಟಿಎಂಸಿ ಬರೋಬ್ಬರಿ 134 ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ. ಎಣಿಕೆ ಆರಂಭವಾದಾಗಿನಿಂದಲೂ ಟಿಎಂಸಿ ಬಹುತೇಕ ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸುತ್ತಲೇ ಬಂದಿತ್ತು.

ಬಿಜೆಪಿ ಹೀನಾಯ ಸೋಲನುಭವಿಸಿದ್ದು, ಕೇವಲ 3 ವಾರ್ಡ್‌‌ಗಳಲ್ಲಷ್ಟೇ ಗೆಲುವು ಪಡೆದುಕೊಂಡಿದೆ. ಉಳಿದಂತೆ ಸಿಪಿಐಎಂ 1 ವಾರ್ಡ್‌, ಸಿಪಿಐ ಒಂದು ವಾರ್ಡ್‌, ಕಾಂಗ್ರೆಸ್‌ 2 ಮತ್ತು ಪಕ್ಷೇತರ ಅಭ್ಯರ್ಥಿಗಳು ಮೂರು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:ನಾರದಾ ಪ್ರಕರಣ: ನಾಲ್ವರು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿದ ಕೊಲ್ಕತ್ತಾ ಹೈಕೋರ್ಟ್

ಡಿಸೆಂಬರ್ 19 ರಂದು ಪಾಲಿಕೆಯ 144 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. 144 ಕಾರ್ಪೊರೇಟರ್‌ಗಳ ಸ್ಥಾನಕ್ಕೆ ಒಟ್ಟು 950 ಅಭ್ಯರ್ಥಿಗಳು ಕಣದಲ್ಲಿದ್ದರು. ಪಾಲಿಕೆಯ ಈ ಹಿಂದಿನ ಚುನಾವಣೆಗಳು 2015 ರಲ್ಲಿ ನಡೆದಿದ್ದವು.

2015 ರ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ 114 ವಾರ್ಡ್‌ಗಳಲ್ಲಿ, ಸಿಪಿಎಂ 10, ಬಿಜೆಪಿ 7, ಕಾಂಗ್ರೆಸ್‌ 5, ಸಿಪಿಐ 2, ಐಎನ್‌ಡಿ 3, ಆರ್‌ಎಸ್‌ಪಿ 2 ಮತ್ತು ಎಐಎಫ್‌ಬಿ 1 ಗೆದ್ದಿದ್ದವು. ಆದರೆ ಈ ಬಾರಿ ಟಿಎಂಸಿ ಬಹುತೇಕ ಏಕಮೇವ ಪಕ್ಷವಾಗಿ ಹೊರಹೊಮ್ಮಿದೆ.

ಸುಮಾರು 40.5 ಲಕ್ಷ ಮತದಾರರಲ್ಲಿ ಶೇಕಡಾ 63 ರಷ್ಟು ಮತದಾರರು ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಸಹ, ಎರಡು ಬೂತ್‌ಗಳಲ್ಲಿ ಬಾಂಬ್‌ಗಳನ್ನು ಎಸೆಯುವುದು ಸೇರಿದಂತೆ ಹಿಂಸಾಚಾರದ ಘಟನೆಗಳು ನಡೆದಿದ್ದವು.

ಇದನ್ನೂ ಓದಿ:ಕೊಲ್ಕತ್ತಾ: ದುರ್ಗಾ ಪೂಜೆ ಮಂಟಪಗಳಲ್ಲಿ ಹೊರಹೊಮ್ಮಿದ ರೈತ ಹೋರಾಟದ ಚಿತ್ರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...