- Advertisement -
- Advertisement -
ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು.

ಗೌರಿ ಅವರ ಸಹೋದರಿ ಕವಿತಾ ಲಂಕೇಶ್, ನೂರ್ ಶ್ರೀಧರ್, ವಿ.ಎಸ್ ಶ್ರೀಧರ್, ಕೆ.ಎಲ್ ಅಶೋಕ್, ಶಿವಸುಂಧರ್, ಮಲ್ಲಿಗೆ ಸಿರಿಮನೆ, ಸುನಿಲ್ ಶಿರಸಂಗಿ, ರಾಜಲಕ್ಷ್ಮಿ ಅಂಕಲಗಿ, ಸಿರಿಗೌರಿ, ಕುಮಾರ್ ಸಮತಳ, ಹರ್ಷಕುಮಾರ್ ಕುಗ್ವೆ, ವಿಜಯ್, ಸರೋವರ್ ಬೆಂಕಿಕೆರೆ, ಚಂದ್ರು ತರಹುಣಸೆ, ಲಕ್ಷ್ಮಣ್ ಮಂಡಲಗೇರಾ, ಮನೋಜ್ ಆಝಾದ್, ಮಮತಾ ಸೇರಿದಂತೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಗೌರಿ ಲಂಕೇಶ್ ಅವರ ಒಡನಾಡಿಗಳು ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರ ಸಮಾಧಿಗೆ ಪುಷ್ಪನಮನ ಅರ್ಪಿಸಿ, ಅವರ ಹೋರಾಟವನ್ನು ಮೆಲುಕು ಹಾಕಿದರು.



