HomeಮನರಂಜನೆBCCI ಕಾರ್ಯದರ್ಶಿ 'ಜೇ ಷಾ' ಅಮಿತ್‌ ಷಾರವರ ಮಗನಲ್ಲ.. ಏಕೆಂದರೆ ಬಿಜೆಪಿ ವಂಶಾಡಳಿತ ಒಪ್ಪುವುದಿಲ್ಲ ಅಲ್ಲವೇ?

BCCI ಕಾರ್ಯದರ್ಶಿ ‘ಜೇ ಷಾ’ ಅಮಿತ್‌ ಷಾರವರ ಮಗನಲ್ಲ.. ಏಕೆಂದರೆ ಬಿಜೆಪಿ ವಂಶಾಡಳಿತ ಒಪ್ಪುವುದಿಲ್ಲ ಅಲ್ಲವೇ?

ಸದಾ ವಂಶಾಡಳಿತದ ವಿರುದ್ಧ ಮಾತಾಡುತ್ತಿದ್ದ ಬಿಜೆಪಿ ಹೀಗೆನು ಮಾಡುತ್ತಿದೆ ಎಂದು ಜನ ಪ್ರಶ್ನಿಸಿದ್ದಾರೆ. ಜೇ ಷಾ ಮತ್ತು ಅಮಿತ್‌ ಷಾ ವಿರುದ್ಧದ ಟ್ರೋಲ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆಗಿದೆ

- Advertisement -
- Advertisement -

ಅಮಿತ್ ಷಾ ಅವರ ಮಗ ಈಗ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ. ಆದರೆ ಇದು ಸ್ವಜನಪಕ್ಷಪಾತವಲ್ಲ ಏಕೆಂದರೆ ಅವರ ಉಪನಾಮ ಗಾಂಧಿ ಅಲ್ಲವಲ್ಲ ಎಂದು ಟ್ವಿಟ್ಟರ್‌ನಲ್ಲಿ ಟ್ರೋಲ್‌ ಮಾಡಲಾಗಿದೆ.

ಇಂದು ಬಿಸಿಸಿಐ ಕಾರ್ಯದರ್ಶಿಯಾಗಿ ಅಮಿತ್‌ ಷಾರವರ ಮಗ ಜೇ ಷಾ ಆಯ್ಕೆಯಾಗುತ್ತಲೇ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸದಾ ವಂಶಾಡಳಿತದ ವಿರುದ್ಧ ಮಾತಾಡುತ್ತಿದ್ದ ಬಿಜೆಪಿ ಹೀಗೆನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಜೇ ಷಾ ಮತ್ತು ಅಮಿತ್‌ ಷಾ ವಿರುದ್ಧದ ಟ್ರೋಲ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆಗಿದೆ.

ಪ್ರತಿ ಚುನಾವಣಾ ರ್‍ಯಾಲಿಯಲ್ಲಿ ಅಮಿತ್ ಶಾ “ವಂಶಾಡಳಿತ ರಾಜಕೀಯವನ್ನು ನಾಶಮಾಡಲು ನಾವು ಇಲ್ಲಿದ್ದೇವೆ” ಎಂದು ಭಾಷಣ ಬಿಗಿಯುತ್ತಾರೆ. ಚುನಾವಣೆಯ ನಂತರ ಅವರ ಮಗ ’ಜೇ ಷ” ಅವರನ್ನು ಬಿಸಿಸಿಐ ಕಾರ್ಯದರ್ಶಿಯಾಗಿ ನೇಮಿಸುತ್ತದೆ ಎಂದು ನೆಹ್ರು ಹೂ ಅವರು ಟ್ವೀಟ್‌ ಮಾಡಿದ್ದಾರೆ.

ಬಿಎಸ್ಎನ್ಎಲ್- ದಿವಾಳಿ
ಎಂಟಿಎನ್ಎಲ್- ದಿವಾಳಿ
ಪಾರ್ಲೆ-ಜಿ- ದಿವಾಳಿ
ಭಾರತೀಯ ರೈಲ್ವೆ- ದಿವಾಳಿ
ಆರ್‌ಬಿಐ- ದಿವಾಳಿ
ಹಣಕಾಸು ಸಚಿವಾಲಯ- ದಿವಾಳಿ
ಏರ್ ಇಂಡಿಯಾ- ದಿವಾಳಿ
ಭಾರತೀಯ ಆರ್ಥಿಕತೆ- ದಿವಾಳಿ

ಬಿಸಿಸಿಐಗೆ ಮಾತ್ರ ಸ್ವಲ್ಪ ಹಣವಿತ್ತು, ಈಗ “ಗ್ರೇಟ್ ಜೇ ಶಾ” ಕೂಡ ಅಲ್ಲಿಗೆ ಪ್ರವೇಶಿಸಿದ್ದಾರೆ ….. ಈಗ ಬಿಸಿಸಿಐ ಶೀಘ್ರದಲ್ಲೇ ದಿವಾಳಿಯಾಗಲಿದೆ. ಎಂದು ಮಣಿಶಂಕರ್‌ ಅಯ್ಯರ್‌ ಟ್ವೀಟ್‌ ಮಾಡಿದ್ದಾರೆ.

ಮಹಿಳೆಯರನ್ನು ಗೌರವಿಸುತ್ತೇವೆ ಎಂದು ಬಿಜೆಪಿ ಹೇಳುತ್ತದೆ ಮತ್ತು
– ಕುಲ್‌ದೀಪ್‌ ಸೆಂಗಾರ್ ಮತ್ತು ಚಿನ್ಮಯಾನಂದ್ ಅವರನ್ನು ಬೆಂಬಲಿಸುತ್ತದೆ..

ಭಯೋತ್ಪಾದನೆಗೆ ವಿರುದ್ಧವೆಂದು ಬಿಜೆಪಿ ಹೇಳುತ್ತದೆ ಮತ್ತು
-ಪ್ರಗ್ಯಾಳನ್ನು ಸಂಸದಳನ್ನಾಗಿ ಮಾಡುತ್ತದೆ..

ಭ್ರಷ್ಟಾಚಾರದ ವಿರುದ್ಧ ಎಂದು ಬಿಜೆಪಿ ಹೇಳುತ್ತದೆ ಮತ್ತು
-ಯಡಿಯೂರಪ್ಪರವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುತ್ತದೆ..

ವಂಶಾಡಳಿತದ ವಿರುದ್ಧ ಎಂದು ಬಿಜೆಪಿ ಹೇಳುತ್ತದೆ ಮತ್ತು
-ಜೇ ಷಾ ಅವರನ್ನು ಬಿಸಿಸಿಐ ಕಾರ್ಯದರ್ಶಿ ಮಾಡುತ್ತದೆ..

ಇದು ಭಾರತೀಯ ಕಪಟ ಪಕ್ಷ ಎಂದು ನೆಹ್ರು ಹೂ ರವರು ಇನ್ನೊಂದು ಟ್ವೀಟ್‌ ಮಾಡಿದ್ದಾರೆ.

BCCI ಕಾರ್ಯದರ್ಶಿ ‘ಜೇ ಷಾ’ ಅಮಿತ್‌ ಷಾರವರ ಮಗನಲ್ಲ.. ಏಕೆಂದರೆ ಬಿಜೆಪಿ ವಂಶಾಡಳಿತ ಒಪ್ಪುವುದಿಲ್ಲ ಅಲ್ಲವೇ? ಎಂದು ನೆಟ್ಟಿಗರು ಕಟುಕಿದ್ದಾರೆ…

ಜೇ ಷಾ ಅವರು ಚೆಪಾಕ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಫೀಲ್ಡರ್‌ಗಳನ್ನು ಮರೀನಾ ಬೀಚ್ ಮತ್ತು ಮೌಂಟ್ ರಸ್ತೆಯಲ್ಲಿ ಕೆಲವೇ ಕಿ.ಮೀ ದೂರದಲ್ಲಿ ನಿಯೋಜಿಸಲಾಗುತ್ತಿತ್ತು. ಅವರು ಆ ರೀತಿಯ ಶಕ್ತಿಶಾಲಿ ಆಟಗಾರ. ಅವರು ಖಂಡಿತವಾಗಿಯೂ #BCCI ಮುಖ್ಯಸ್ಥರಾಗಲು ಅರ್ಹರು ಎಂಬ ಟ್ರೋಲ್ ಸಹ ಕಂಡುಬಂದಿದೆ..

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...