Homeಅಂತರಾಷ್ಟ್ರೀಯಅಫ್ಘಾನ್: ಕಾಬೂಲ್​ನಿಂದ ಉಕ್ರೇನ್​ ವಿಮಾನ ಅಪಹರಣ ಆರೋಪ

ಅಫ್ಘಾನ್: ಕಾಬೂಲ್​ನಿಂದ ಉಕ್ರೇನ್​ ವಿಮಾನ ಅಪಹರಣ ಆರೋಪ

- Advertisement -
- Advertisement -

ಅಫ್ಘಾನಿಸ್ತಾನದಲ್ಲಿನ ಉಕ್ರೇನಿಯನ್ನರನ್ನು ಕರೆ ತರಲು ಆಗಮಿಸಿದ್ದ ವಿಮಾನವನ್ನು ಅಪರಿಚಿತರು ಅಪಹರಿಸಿದ್ದಾರೆ. ಕಾಬೂಲ್​ನಿಂದ  ಹೊರಟ ಈ ವಿಮಾನವನ್ನು ಇರಾನ್​ ಕಡೆಗೆ ಸಂಚರಿಸುವಂತೆ ಮಾಡಲಾಗಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್​ ಆರೋಪಿಸಿದ್ದಾರೆ.

ಉಕ್ರೇನ್​ ಸಚಿವರು ಕೂಡ ಉಕ್ರೇನ್​ಗೆ ಬರಬೇಕಿದ್ದ ವಿಮಾನವನ್ನು ಇರಾನ್​ನಲ್ಲಿ ಇಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕಳೆದ ಭಾನುವಾರ ವಿಮಾನವನ್ನು ಹೈಜಾಕ್​ ಮಾಡಲಾಗಿದೆ.

ಅಫ್ಘಾನಿಸ್ತಾನದಲ್ಲಿದ್ದ ಉಕ್ರೇನ್‍ನ ಪ್ರಜೆಗಳನ್ನು ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ವಿಮಾನ ನಮ್ಮ ದೇಶಕ್ಕೆ ಬರುವ ಬದಲು ಇರಾನ್​ಗೆ ಹಾರಿಸಲಾಗಿದೆ. ಶಸ್ತ್ರಸಜ್ಜಿತರಾಗಿದ್ದ ಅಪರಿಚಿತ ಅಪಹರಣಕಾರ ಗುಂಪು ವಿಮಾನ ಹೈಜಾಕ್ ಮಾಡಿದ್ದಾರೆ ಎಂದು ಉಪ ವಿದೇಶಾಂಗ ಸಚಿವರು ರಷ್ಯಾನ್​ ನ್ಯೂಸ್​ ಎಜೆನ್ಸಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್: ಇದು ಅಫ್ಘಾನ್‌‌ ನಾಗರಿಕನ ವಿಡಿಯೊವಲ್ಲ; ಎಡಿಟೆಡ್‌!

ಇನನ್ನೊಂದು​ ನ್ಯೂಸ್​ ಏಜೆನ್ಸಿ ಐಎಎನ್​ಎಸ್ ವರದಿ ಪ್ರಕಾರ, ವಿಮಾನವು ಉಕ್ರೇನ್‍ನ ಕೀವ್ ವಿಮಾನ ನಿಲ್ದಾಣಕ್ಕೆ 12ಕ್ಕೆ ಬಂದು ಇಳಿದಿದೆ. ಯಾವುದೇ ಅಪಹರಣಗಳು ನಡೆದಿಲ್ಲ. ಇದರ ಜೊತೆಗೆ 100 ಉಕ್ರೇನಿಯರು ಇನ್ನು ಸ್ಥಳಾಂತರಕ್ಕಾಗಿ ಆಫ್ಘಾನಿಸ್ತಾನದಲ್ಲಿ ಕಾಯುತ್ತಿದ್ದಾರೆ ಎಂದಿದೆ.

ಅಪಹರಣಕ್ಕೊಳಗಾದ ವಿಮಾನದಲ್ಲಿ 31 ಉಕ್ರೇನ್ ಪ್ರಜೆಗಳು ಸೇರಿದಂತೆ 83 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಆದರೆ, ಈ ಆರೋಪವನ್ನು ಇರಾನ್‍ನ ನಾಗರಿಕ ವಿಮಾನ ಯಾನ ಸಂಸ್ಥೆ ತಳ್ಳಿಹಾಕಿದೆ. ಇರಾನ್‌ನ ವಾಯುಯಾನ ವಕ್ತಾರರು ಕೂಡ ಉಕ್ರೇನಿಯನ್ ವಿಮಾನವನ್ನು ಅಪಹರಿಸಿ ಇರಾನ್‌ಗೆ ಹಾರಿಸಲಾಗಿದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ.

’ಉಕ್ರೇನಿಯನ್ ವಿಮಾನವು ನಿನ್ನೆ ರಾತ್ರಿ ಮಶ್ಹಾದ್‌ನಲ್ಲಿ ಇಂಧನ ತುಂಬುವುದಕ್ಕಾಗಿ ನಿಲ್ಲಿಸಲಾಗಿತ್ತು. ಬಳಿಕ ಉಕ್ರೇನ್‌ಗೆ ಹೊರಟಿತು. ವಿಮಾನ ಈಗಾಗಲೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಇಳಿದಿದೆ ಎಂದಿದ್ದಾರೆ.


ಇದನ್ನೂ ಓದಿ: ‘ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ’ ಎಂದರೆ ಅಫ್ಘಾನ್‌ಗೆ ಹೋಗಿ ಎಂದ ಬಿಜೆಪಿ ನಾಯಕ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡಿನ ಬಗ್ಗೆ ಸುಳ್ಳು ಸುದ್ದಿ ಹರಡಿ ಬಂಧಿಸಲ್ಪಟ್ಟಿದ್ದ ಯೂಟ್ಯೂಬರ್ ಕಶ್ಯಪ್ ಬಿಜೆಪಿಗೆ ಸೇರ್ಪಡೆ

0
ಯೂಟ್ಯೂಬರ್ ಮನೀಶ್ ಕಶ್ಯಪ್ ಇಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಹಾರ ಮೂಲದ ಯೂಟ್ಯೂಬರ್ ಕಶ್ಯಪ್ ಕಳೆದ ವರ್ಷ ನಕಲಿ ಮಾಹಿತಿ ಹರಡಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ...