Homeಅಂತರಾಷ್ಟ್ರೀಯಕಾಶ್ಮೀರ: ಮಧ್ಯಪ್ರವೇಶಿಸುವಂತೆ ಪಾಕ್ ಮಾಡಿದ ಮನವಿಗೆ ವಿಶ್ವಸಂಸ್ಥೆ ನಕಾರ

ಕಾಶ್ಮೀರ: ಮಧ್ಯಪ್ರವೇಶಿಸುವಂತೆ ಪಾಕ್ ಮಾಡಿದ ಮನವಿಗೆ ವಿಶ್ವಸಂಸ್ಥೆ ನಕಾರ

- Advertisement -
- Advertisement -

1972 ರ ಶಿಮ್ಲಾ ಒಪ್ಪಂದಕ್ಕೆ ಅನುಗುಣವಾಗಿ ಮತ್ತು ಯುಎನ್ ಚಾರ್ಟ್ ಗೆ ಅನುಗುಣವಾಗಿ ಶಾಂತಿಯುತ ವಿಧಾನಗಳಿಂದ ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕಾಗಿದೆ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟ್ಟೆರೆಸ್ ಗುರುವಾರ ಹೇಳಿದ್ದು, ಎರಡೂ ಕಡೆಯಿಂದಲೂ “ಗರಿಷ್ಠ ಸಂಯಮ” ಕಾಯ್ದುಕೊಳ್ಳುವಂತೆ ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಿಮ್ಲಾ ಒಪ್ಪಂದದ ಉಲ್ಲೇಖವು ಅಪರೂಪ ಮತ್ತು ಮಹತ್ವದ್ದಾಗಿದೆ, ಈ ಚರ್ಚೆಗಳ ಪರಿಚಯವಿರುವ ಜನರ ಪ್ರಕಾರ, ಇದು ವಿವಾದವನ್ನು ದ್ವಿಪಕ್ಷೀಯವಾಗಿ ಪರಿಹರಿಸುವ ಚೌಕಟ್ಟನ್ನು ಒದಗಿಸುತ್ತದೆ ಹಾಗಾಗಿ ವಿಶ್ವಸಂಸ್ಥೆ ಹಸ್ತಕ್ಷೇಪವನ್ನು ಮಾಡಲಾಗುವುದಿಲ್ಲ ಎಂದಿದ್ದಾರೆ. ಹಾಗಾಗಿ ವಿಶ್ವಸಂಸ್ಥೆಯ ನೆರವು ಪಡೆಯಲು ಪಾಕಿಸ್ತಾನ ಮಾಡಿದ ಪ್ರಯತ್ನಗಳಿಗೆ ಹಿನ್ನೆಡೆಯಾಗಿದೆ.

“ಕಾಶ್ಮೀರದ ಮೇಲೆ ಭಾರತದ ಕಡೆಯಿಂದಾಗುತ್ತಿರುವ ನಿರ್ಬಂಧಗಳ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾರ್ಯದರ್ಶಿಗಳು, ಇದು ಈ ಪ್ರದೇಶದ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದು” ಎಂದು ಅವರ ವಕ್ತಾರರು ತಿಳಿಸಿದ್ದಾರೆ. ಮಾನವ ಹಕ್ಕುಗಳನ್ನು ಕಾಪಾಡಲು ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ತಿಳಿಸಿದ್ದಾರೆ.

ವಿಶ್ವಸಂಸ್ಥೆಯು ಕಾಶ್ಮೀರ ವಿವಾದದಲ್ಲಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಪಾಕಿಸ್ತಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ವಿಶ್ವಸಂಸ್ಥೆಯ ಕಾಯಂ ಸದಸ್ಯ ಮಲೀಹಾ ಅದನ್ನು ಟ್ವಿಟ್ಟರ್ ನಲ್ಲಿಯೂ ಸಹ ಪ್ರಕಟಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...