Homeಮುಖಪುಟಆಪರೇಷನ್ ಕಮಲಕ್ಕೆ ಹಣ ಇದೆ. ಪ್ರವಾಹ ಸಂತ್ರಸ್ತರಿಗೆ ಗಂಜಿ ನೀಡಲು ಹಣವಿಲ್ಲವೇ? ಸಿಎಂ ವಿರುದ್ಧ ಟ್ರೋಲ್...

ಆಪರೇಷನ್ ಕಮಲಕ್ಕೆ ಹಣ ಇದೆ. ಪ್ರವಾಹ ಸಂತ್ರಸ್ತರಿಗೆ ಗಂಜಿ ನೀಡಲು ಹಣವಿಲ್ಲವೇ? ಸಿಎಂ ವಿರುದ್ಧ ಟ್ರೋಲ್ ಗಳ ಸುರಿಮಳೆ

- Advertisement -
- Advertisement -

ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ಯಡಿಯೂರಪ್ಪನವರಿಗೆ ಸಿಹಿ-ಕಹಿ ಅನುಭವಗಳಾಗುತ್ತಿವೆ. ಪರಿಹಾರಕ್ಕೆ 5000 ಕೋಟಿ ನೆರವು ಬೇಕಿದೆ, ದಾನಿಗಳು ಸಹಕರಿಸಿ ಎಂಬ ಯಡಿಯೂರಪ್ಪನವರ ಮನವಿಗೆ ಬಹಳಷ್ಟು ಜನ ಮಿಡಿದು ಸಹಾಯ ಮಾಡುತ್ತಿದ್ದಾರೆ. ಇನ್ನು ಮತ್ತಷ್ಟು ಜನ ಖಂಡಿ ಸಹಾಯ ಮಾಡುತ್ತೇವೆ ಆದರೆ ಮೊದಲು ಕೇಂದ್ರ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ನಂತರ ರಾಜ್ಯಸರ್ಕಾರ ಘೋಷಿಸಬೇಕು. ಆಗಲು ಸಾಲದಿದ್ದರೆ ನಾಡಿನ ಜನತೆ ಖಂಡಿತ ಶಕ್ತಿ ಮೀರಿ ಸಹಾಯ ಮಾಡುತ್ತಾರೆ. ಮೊದಲು ನಿಮ್ಮ ಕೆಲಸ ಮಾಡಿ ಎಂದು ಸಿಎಂಗೆ ತಾಕೀತು ಮಾಡಿದ್ದಾರೆ.

ಇನ್ನೊಂದಷ್ಟು ಜನ ಜಡಿಮಳೆಯಲ್ಲಿಯೇ ಈ ಸರ್ಕಾರವನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡು ಆಪರೇಷನ್ ಕಮಲಕ್ಕೆ ಹಣ ಇದೆ. ಪ್ರವಾಹ ಸಂತ್ರಸ್ತರಿಗೆ ಗಂಜಿ ನೀಡಲು ಹಣವಿಲ್ಲವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ವಿರುದ್ಧ ಟ್ರೋಲ್ ಗಳ ಸುರಿಮಳೆ ಸುರಿಸಿದ್ದಾರೆ.

‘ಅತೃಪ್ತರಿಗೆ ಖಾಸಗಿ ವಿಮಾನ ತರಿಸಲು ಯೋಗ್ಯತೆ ಇದೆ, ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ವಿಮಾನ ತರಸಲು ಯೋಗ್ಯತೆ ಇಲ್ಲವೇ? ಶೇಮ್ ಶೇಮ್’ ಎಂದು ಅರುಣ್ ಕುಮಾರ್ ರವರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

ಪವನ್ ಕುಮಾರ್ ಎಂಬುವವರು “ಖಂಡಿತ ಕನ್ನಡಿಗರು ಈ ಪ್ರವಾಹಕ್ಕೆ ಸ್ಪಂದಿಸುತ್ತಾರೆ, ಇದರಲ್ಲಿ ಎರಡು ಮಾತಿಲ್ಲ. ಆದರೆ ನೀವು ಶಾಸಕರನ್ನು ಖರೀದಿಸಲು, ರೆಸಾರ್ಟ್ ಬುಕ್ ಮಾಡಲು ಬಳಸುವ ಹಣವನ್ನು ಈ ಸಂತ್ರಸ್ತರಿಗಾಗಿ ಬಳಸಿ.. ನಿಮ್ಮದೇ ಕೇಂದ್ರ ಸರ್ಕಾರದಿಂದಲೂ ನಿಧಿಗಳನ್ನು ತನ್ನಿ” ಎಂದು ಬರೆದಿದ್ದಾರೆ.

ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು ಇಂದು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಸರಿಯಾಗಿ ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ! ಅತೃಪ್ತ ಶಾಸಕರಿಗೆ ಮುಂಬೈನಲ್ಲಿ ಉಳಿಯಲು ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಿದವರು ಇಂದು ಬಡ ಜನರಿಗೆ ಸರಿಯಾದ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ!
#KarnatakaFloods #ಯಡಿಯುರಪ್ಪಎಲ್ಲಿದ್ದಿಯಪ್ಪl ಎಂಬ ಬರಹ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.

ನಿರಂತರವಾಗಿ ಬಿಜೆಪಿಗರನ್ನು ಚುನಾಯಿಸುತ್ತಿರುವ ಕೊಡಗು ಕುಸಿದಾಗ ಬರಲು ಮೋದಿಯವರಿಗೆ ಬಿಡುವಾಗಲಿಲ್ಲ.
25 ಬಿಜೆಪಿ ಸಂಸದರನ್ನು ಸಂಸತ್ತಿಗೆ ಕಳುಹಿಸಿರುವ ಕರ್ನಾಟಕ ಈಗ ಮುಳುಗಿದೆ;
ಮೋದಿಯವರಿಗೆ ಬಿಡುವಾಗುತ್ತದೋ ನೋಡಬೇಕು. #ಕರ್ನಾಟಕ_ಪ್ರವಾಹ ಎಂದು ಶ್ರೀನಿವಾಸ ಕಾರ್ಕಳರವರು ಬರೆದುಕೊಂಡಿದ್ದಾರೆ.

ಪ್ರಹ್ಲಾದ್ ಜೋಷಿಗೆ ಪ್ರವಾಹದ ಬಗ್ಗೆ ಮಾಹಿತೀನೆ ಇಲ್ವಂತೆ
ಇಂತವರನ್ನು ಸಂಸದರಾಗಿ ಪಡೆದ ಧಾರವಾಡ ಜಿಲ್ಲೆಯ ಜನತೆಯೇ ಧನ್ಯರು ಎಂದು ಶೃತಿ ಶಂಕರ್ ರವರು ವ್ಯಂಗ್ಯವಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...