Homeಕರ್ನಾಟಕಅನ್‌‌ಲಾಕ್‌ 4.0 - ಪದವಿ ಕಾಲೇಜ್‌ ಜು.26 ರಿಂದ ಆಫ್‌ಲೈನ್‌ ಕ್ಲಾಸ್‌, ಥಿಯೇಟರ್‌‌ 50% ಸಾಮರ್ಥ್ಯದೊಂದಿಗೆ...

ಅನ್‌‌ಲಾಕ್‌ 4.0 – ಪದವಿ ಕಾಲೇಜ್‌ ಜು.26 ರಿಂದ ಆಫ್‌ಲೈನ್‌ ಕ್ಲಾಸ್‌, ಥಿಯೇಟರ್‌‌ 50% ಸಾಮರ್ಥ್ಯದೊಂದಿಗೆ ಅನುಮತಿ

- Advertisement -
- Advertisement -

ರಾಜ್ಯದಲ್ಲಿ ಈಗಾಗಲೆ ಅನ್‌ಲಾಕ್‌ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಭಾಗಶಃ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗಿದೆ. ಇದೀಗ ರಾಜ್ಯದಲ್ಲಿ ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಮತ್ತಷ್ಟು ಸಡಿಲಿಕೆಯಾಗುತ್ತಿದ್ದು, 50% ಸಾಮರ್ಥ್ಯದೊಂದಿಗೆ ಸಿನೆಮಾ ಹಾಲ್‌ಗಳು ಮತ್ತು ಸಭಾಂಗಣಗಳಿಗೆ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜುಲೈ 26 ರಿಂದ ಪದವಿ ಕಾಲೇಜುಗಳ ಭೌತಿಕವಾಗಿ ತರಗತಿ ನಡೆಸಲು ನಿರ್ಧರಿಸಲಾಯಿತು.

ಕೊರೊನಾ ಲಸಿಕೆಯ ಕನಿಷ್ಠ ಒಂದು ಡೋಸ್ ತೆಗೆದುಕೊಂಡ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತ್ರ ಆಫ್‌ಲೈನ್ ತರಗತಿಗಳಿಗೆ ಹಾಜರಾಗಬಹುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿತು.

ಇದನ್ನೂ ಓದಿ: ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ನಿರ್ಮಾಣ: ಬಸವರಾಜ ಬೊಮ್ಮಾಯಿ

ರಾತ್ರಿ ಕರ್ಫ್ಯೂ ಸಮಯವನ್ನು ಸುಲಭಗೊಳಿಸಲು ನಿರ್ಧರಿಸಲಾಗಿದ್ದು, ಪ್ರಸ್ತುತ ರಾತ್ರಿ 9 ಗಂಟೆಯ ಬದಲು, 10 ಗಂಟೆಯಿಂದ ಪ್ರಾರಂಭವಾಗಿ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಸಭೆಯ ನಿರ್ಧಾರವು ಸೋಮವಾರದಿಂದ ಜಾರಿಗೆ ಬರಲಿದೆ ಎನ್ನಲಾಗಿದ್ದು, ಅಧಿಕೃತ ಅಧಿಸೂಚನೆಯನ್ನು ಇಂದು ಹೊರಬರಲಿದೆ.

ನಿನ್ನೆ ರಾಜ್ಯದಲ್ಲಿ ಹೊಸದಾಗಿ 1,869 ಕೊರೊನಾ ಪ್ರಕರಣ ವರದಿಯಾದ್ದು, ಬೆಂಗಳೂರಿನಲ್ಲಿ 432 ಪ್ರಕರಣಗಳು ಪತ್ತೆಯಾಗಿದೆ. ಕಳೆದ ಒಂದು ದಿನ ರಾಜ್ಯದಲ್ಲಿ 3,144 ಜನರು ಚೇತರಿಸಿಕೊಂಡಿದ್ದು, ಬೆಂಗಳೂರಿನಲ್ಲಿ 635 ಜನರು ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದಾಗಿ ರಾಜ್ಯದಲ್ಲಿ 42 ಜನರು ಮೃತಪಟ್ಟಿದ್ದು, ಬೆಂಗಳೂರಿನಲ್ಲಿ 06 ಜನರು ಮೃತರಾಗಿದ್ದಾರೆ. ರಾಜ್ಯದಲ್ಲಿ 30,082 ಸಕ್ರಿಯ ಕೊರೊನಾ ಸೋಂಕಿರಿದ್ದಾರೆ.

ಇದನ್ನೂ ಓದಿ: ಕೆಲವೇ ಜನರ ಹಿತಾಸಕ್ತಿಯ ಇ-ಬೈಕ್‌‌‌‌ ಯೋಜನೆಯಿಂದ ಲಕ್ಷಾಂತರ ಚಾಲಕರ ಜೀವನಕ್ಕೆ ಧಕ್ಕೆ: NCTU ಆಕ್ರೋಶ

ವಿಡಿಯೊ ನೋಡಿ➤➤ ಬಟ್ಟೆ ಕೊಳೆ ತೊಳೆಯುವವರ ಬದುಕಲ್ಲಿ ಹೊಳಪಿಲ್ಲ: ಸಂಕಷ್ಟದಲ್ಲಿ ಮಡಿವಾಳ ಸಮುದಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...