HomeಅಂಕಣಗಳುSIRಯುಪಿ ಎಸ್‌ಐಆರ್: 16.18 ಲಕ್ಷ ಹೊಸ ಮತದಾರರ ವಿವರಗಳು ನಿಗೂಢ

ಯುಪಿ ಎಸ್‌ಐಆರ್: 16.18 ಲಕ್ಷ ಹೊಸ ಮತದಾರರ ವಿವರಗಳು ನಿಗೂಢ

- Advertisement -
- Advertisement -

ಉತ್ತರ ಪ್ರದೇಶದ ಪರಿಷ್ಕೃತ ಮತದಾರರ ಪಟ್ಟಿಯ ಸ್ವತಂತ್ರ ವಿಶ್ಲೇಷಣೆಯಲ್ಲಿ ಮಹತ್ವದ ಪಾರದರ್ಶಕತೆ ಕೊರತೆ ಬೆಳಕಿಗೆ ಬಂದಿದೆ. ರಾಜ್ಯದ ಸಾರ್ವಜನಿಕ ಚುನಾವಣಾ ಪೋರ್ಟಲ್‌ನಲ್ಲಿ 16.18 ಲಕ್ಷ ಮತದಾರರ ಅರ್ಜಿ ವಿವರಗಳು ಲಭ್ಯವಿಲ್ಲ ಎಂದು ‘ದಿ ರಿಪೋರ್ಟರ್ಸ್‌ ಕಲೆಕ್ಟಿವ್’ ನಡೆಸಿದ ತನಿಖಾ ವರದಿ ತಿಳಿಸಿದೆ.

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಹೊಸ ಮತದಾರರ ಸೇರ್ಪಡೆಗಾಗಿ 88 ಲಕ್ಷ ಫಾರ್ಮ್-6 ಅರ್ಜಿಗಳು ಬಂದಿದ್ದವು. ಆದರೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ವೆಬ್‌ಸೈಟ್‌ನಲ್ಲಿ 71.38 ಲಕ್ಷ ಅರ್ಜಿಗಳ ವಿವರಗಳು ಮಾತ್ರ ಲಭ್ಯವಿವೆ ಎಂದು ವರದಿ ಹೇಳಿದೆ.

ಅಕ್ಟೋಬರ್ 6ರಂದು ಪ್ರಕಟವಾದ ವರದಿಯ ಪ್ರಕಾರ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ದೇಶದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯವಾದ ಉತ್ತರ ಪ್ರದೇಶದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಈ ಕಾನೂನು ಸಂಬಂಧಿತ ಪ್ರಶ್ನೆ ಬೆಳಕಿಗೆ ಬಂದಿದೆ.

ಅಂತಿಮ ಸಂಖ್ಯೆಯಲ್ಲಿ ಗೊಂದಲ

ಮೊದಲು ಮತದಾರರ ಪಟ್ಟಿಗೆ ಮರು ಸೇರ್ಪಡೆಗಾಗಿ ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಪರಿಶೀಲಿಸಿ, ಬಳಿಕ ಅಂತಿಮ ಪಟ್ಟಿಗೆ ಎಷ್ಟು ಮಂದಿಯನ್ನು ಸೇರಿಸಲಾಗಿದೆ ಎಂಬುದನ್ನು ಹೋಲಿಕೆ ಮಾಡಲಾಯಿತು. ಈ ವೇಳೆ ಅಂಕಿಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ವರದಿ ಹೇಳಿದೆ.

ತಾಂತ್ರಿಕ ನೆರವಿನೊಂದಿಗೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಮತದಾರರ ಪಟ್ಟಿಗೆ ಸೇರ್ಪಡೆಗಾಗಿ 71.38 ಲಕ್ಷ ಅರ್ಜಿಗಳ ವಿವರಗಳನ್ನು ಇಸಿಐ ಸಾರ್ವಜನಿಕಗೊಳಿಸಿತ್ತು. ಈ ಅರ್ಜಿಗಳಲ್ಲಿ ಬಹುತೇಕವು ಕರಡು ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದವರು ಸಲ್ಲಿಸಿದ ಅರ್ಜಿಗಳಾಗಿದ್ದವು.

ಆದರೆ, ಅಂತಿಮ ಮತದಾರರ ಪಟ್ಟಿಯಲ್ಲಿ 84.3 ಲಕ್ಷ ಮತದಾರರನ್ನು ಸೇರಿಸಲಾಗಿದೆ. ಅಂದರೆ ಸಾರ್ವಜನಿಕಗೊಳಿಸಲಾದ ಅರ್ಜಿಗಳಿಗಿಂತ 12.92 ಲಕ್ಷ ಹೆಚ್ಚು ಮತದಾರರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ.

ವರದಿ ಪ್ರಕಾರ, ಈ ಬೆಳವಣಿಗೆ ಅನುಮಾನಗಳನ್ನು ಹುಟ್ಟಿಸುತ್ತದೆ. ಏಕೆಂದರೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದವರ ಸಂಖ್ಯೆಯನ್ನು ಮೀರಿಸಿ ಹೊಸ ಮತದಾರರನ್ನು ಸೇರಿಸಲು ಸಾಧ್ಯವಿಲ್ಲ.

ಈ ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಉತ್ತರ ಪ್ರದೇಶ ಇಸಿಒ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿ ಮತ್ತು ಪತ್ರಿಕಾ ಹೇಳಿಕೆಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಮಾರ್ಚ್ 7ರಂದು ಪ್ರಕಟವಾದ ಪತ್ರಿಕಾ ಹೇಳಿಕೆಯೊಂದರಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸುವುದಕ್ಕೂ ಮುನ್ನವೇ 16.18 ಲಕ್ಷ ಮಂದಿ ಫಾರ್ಮ್-6 ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿರುವುದು ಕಂಡುಬಂದಿದೆ.

16.18 ಲಕ್ಷ ಮತದಾರರು ಯಾರು?

ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕವೇ ತಮ್ಮ ಹೆಸರು ಸೇರ್ಪಡೆಯಾಗಿದೆಯೇ, ತೆಗೆದುಹಾಕಲಾಗಿದೆಯೇ ಅಥವಾ ಕಾಣೆಯಾಗಿದೆಯೇ ಎಂಬುದು ಮತದಾರರಿಗೆ ತಿಳಿಯುತ್ತದೆ. ಆದರೆ ಇಸಿಐ ಪ್ರಕಾರ, ಕರಡು ಪಟ್ಟಿ ಪ್ರಕಟವಾಗುವ ಮೊದಲೇ 16.18 ಲಕ್ಷ ಮಂದಿ ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಿದ್ದರು.

ಈ ಹಂತದಲ್ಲಿ ಹೊಸದಾಗಿ ಮತದಾನದ ವಯಸ್ಸಿಗೆ ಬಂದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆದರೆ ಕಾನೂನಿನ ಪ್ರಕಾರ ಇಂತಹ ಅರ್ಜಿದಾರರ ವಿವರಗಳನ್ನು ಸಾರ್ವಜನಿಕಗೊಳಿಸಬೇಕಾಗುತ್ತದೆ. ಈ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲದ ಕಾರಣ, ಈ 16.18 ಲಕ್ಷ ಮಂದಿ ಯಾರು, ಅವರು ಯಾವ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರು ಅಥವಾ ಅವರ ಅರ್ಜಿಗಳನ್ನು ನಿಜವಾಗಿಯೂ ಪರಿಶೀಲಿಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಹೇಳಿದೆ.

ಈ 16.18 ಲಕ್ಷ ಮತದಾರರ ಕುರಿತು ಉತ್ತರ ಪ್ರದೇಶದ ಸಿಇಒ ನವದೀಪ್ ರಿನ್ವಾ ಅವರನ್ನು ‘ದಿ ರಿಪೋರ್ಟರ್ಸ್‌ ಕಲೆಕ್ಟಿವ್’ ಸಂಪರ್ಕಿಸಿತ್ತು. ಆದರೆ ಅವರು, “ನಿಮ್ಮ ಅನುಮಾನಗಳು ಅಥವಾ ಪ್ರಶ್ನೆಗಳನ್ನು ಪರಿಹರಿಸಲು ನಾವು ಸಲಹಾ ಸೇವೆಗಳನ್ನು ನೀಡುವುದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸಿಇಒ ಕಚೇರಿಯ ವೆಬ್‌ಸೈಟ್‌ನಲ್ಲಿಯೂ ಈ ಮತದಾರರ ವಿವರಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಯುಪಿಯಲ್ಲಿನ ಅಂಕಿಅಂಶ ಭಿನ್ನವೇ?

ಎಸ್‌ಐಆರ್‌ನ ವಿವಿಧ ಹಂತಗಳಲ್ಲಿನ ಅಂಕಿಅಂಶಗಳನ್ನು ಅಂತಿಮ ಮತದಾರರ ಪಟ್ಟಿಯೊಂದಿಗೆ ಹೊಂದಿಸಲು, ಕರಡು ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಬಳಿಕ ಮರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದವರು ಹಾಗೂ ಮತದಾನದ ವಯಸ್ಸಿಗೆ ಬಂದು ಅರ್ಜಿ ಸಲ್ಲಿಸಿದವರ ಪೈಕಿ ಶೇ.96.27 ಮಂದಿಯನ್ನು ಅರ್ಹ ಮತದಾರರೆಂದು ಪರಿಗಣಿಸಬೇಕಾಗುತ್ತದೆ ಎಂದು ವರದಿ ಹೇಳಿದೆ.

ಇತರ ರಾಜ್ಯಗಳ ಅಂಕಿಅಂಶಗಳೊಂದಿಗೆ ಹೋಲಿಸಿದಾಗಲೂ ವ್ಯತ್ಯಾಸ ಕಂಡುಬರುತ್ತದೆ ಎಂದು ವರದಿ ಹೇಳಿದೆ. ಪರಿಷ್ಕರಣಾ ಪ್ರಕ್ರಿಯೆಗಳಲ್ಲಿ ಫಾರ್ಮ್-6 ಅರ್ಜಿಗಳ ಅನುಮೋದನೆ ಪ್ರಮಾಣ ಸಾಮಾನ್ಯವಾಗಿ ಶೇ.60–70 ರಷ್ಟಿರುತ್ತದೆ ಎಂದು ಹಿರಿಯ ಇಸಿಐ ಅಧಿಕಾರಿಯೊಬ್ಬರು ‘ದಿ ರಿಪೋರ್ಟರ್ಸ್‌ ಕಲೆಕ್ಟಿವ್’ಗೆ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ಆದರೆ ಉತ್ತರ ಪ್ರದೇಶದೊಂದಿಗೆ ಏಕಕಾಲದಲ್ಲಿ ಎಸ್‌ಐಆರ್ ನಡೆದ ಪಶ್ಚಿಮ ಬಂಗಾಳದಲ್ಲಿ ಇದೇ ಅವಧಿಯಲ್ಲಿ ಸಲ್ಲಿಕೆಯಾದ ಫಾರ್ಮ್-6 ಅರ್ಜಿಗಳಲ್ಲಿ ಸುಮಾರು ಶೇ.18.5 ಮಾತ್ರ ಅಂಗೀಕರಿಸಲಾಗಿದೆ ಎಂದು ವರದಿ ಹೇಳಿದೆ.

ಉತ್ತರ ಪ್ರದೇಶದ ಎಸ್ಐಆರ್ ಅಂಕಿಅಂಶಗಳು

ಎಸ್ಐಆರ್ ಆರಂಭವಾಗುವ ಮೊದಲು, ಅಕ್ಟೋಬರ್ 2025ರಲ್ಲಿ ಉತ್ತರ ಪ್ರದೇಶದಲ್ಲಿ 15.44 ಕೋಟಿ ಮತದಾರರು ಇದ್ದರು.

ಜನವರಿ 6ರಂದು ಕರಡು ಮತದಾರರ ಪಟ್ಟಿ ಪ್ರಕಟವಾದಾಗ 2.89 ಕೋಟಿ ಮತದಾರರ ಹೆಸರುಗಳನ್ನು ಗೈರುಹಾಜರು, ಸ್ಥಳಾಂತರ, ಮರಣ ಅಥವಾ ದ್ವಂದ್ವ ನೋಂದಣಿ ಸೇರಿದಂತೆ ವಿವಿಧ ಕಾರಣಗಳಿಂದ ಕೈಬಿಡಲಾಗಿತ್ತು. ಇದು ಕರಡು ಪಟ್ಟಿಯ ಒಟ್ಟು ಮತದಾರರ ಸುಮಾರು ಶೇ.18.7 ಆಗಿತ್ತು.

ಪ್ರತಿ ಬೂತ್‌ಗೆ ಕನಿಷ್ಠ 200 ಮತದಾರರನ್ನು ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಇತರ ಹಿರಿಯ ನಾಯಕರು ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದೇ ವೇಳೆ, ಫಾರ್ಮ್-6 ಮೂಲಕ ಬಂದ ಅರ್ಜಿಗಳಲ್ಲಿ ಗಣನೀಯ ಪ್ರಮಾಣದವು ಮತದಾರರ ಪಟ್ಟಿಯಿಂದ ತಪ್ಪಾಗಿ ಕೈಬಿಡಲ್ಪಟ್ಟವರದ್ದಾಗಿವೆ ಎಂದು ಸಿಇಒ ರಿನ್ವಾ ಒಪ್ಪಿಕೊಂಡಿದ್ದರು ಎಂದು ವರದಿ ಹೇಳಿದೆ.

ಒಂದೇ ದಿನ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಫಾರ್ಮ್-6 ಅರ್ಜಿಗಳು ಸಲ್ಲಿಕೆಯಾದ ಬಳಿಕ ರಿನ್ವಾ, “ಕರಡು ಪಟ್ಟಿಯಿಂದ ತೆಗೆದುಹಾಕಲ್ಪಟ್ಟವರೇ ಫಾರ್ಮ್-6 ತುಂಬುತ್ತಿದ್ದಾರೆ” ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.

ಪ್ರತಿ ಫಾರ್ಮ್-6 ಅರ್ಜಿಯನ್ನು ಮೊದಲು ಬೂತ್ ಮಟ್ಟದ ಅಧಿಕಾರಿಯ ಕ್ಷೇತ್ರ ಪರಿಶೀಲನೆಗೆ ಒಳಪಡಿಸಿ, ಬಳಿಕ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ಅನುಮೋದಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಹ ಸೇರ್ಪಡೆಗಾಗಿ ಅರ್ಜಿಗಳನ್ನು ಸಲ್ಲಿಸುವುದರಿಂದ, ಸಾಮಾನ್ಯವಾಗಿ ಇದರ ಅನುಮೋದನೆ ಪ್ರಮಾಣ ಶೇ.60–70 ರಷ್ಟಿರುತ್ತದೆ ಎಂದು ವರದಿ ಹೇಳಿದೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಸಿಇಒ ಕಚೇರಿ ಸಾರ್ವಜನಿಕಗೊಳಿಸಿದ್ದ 71.38 ಲಕ್ಷ ಫಾರ್ಮ್-6 ಅರ್ಜಿಗಳ ಮಾಹಿತಿಯನ್ನು ತಾಂತ್ರಿಕ ತಜ್ಞರ ನೆರವಿನಿಂದ ಸಂಗ್ರಹಿಸಲಾಗಿದೆ ಎಂದು ‘ದಿ ರಿಪೋರ್ಟರ್ಸ್‌ ಕಲೆಕ್ಟಿವ್’ ತಿಳಿಸಿದೆ.

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜನವರಿ 6ಕ್ಕೂ ಮುನ್ನ ಸಲ್ಲಿಸಲಾದ ಫಾರ್ಮ್-6 ಅರ್ಜಿಗಳ ವಿವರಗಳು ಕಾಣೆಯಾಗಿದ್ದವು ಎಂದು ವರದಿ ಹೇಳಿದೆ.

ಉತ್ತರ ಪ್ರದೇಶ ಸಿಇಒ ಅವರ ಎಕ್ಸ್ ಖಾತೆಯಲ್ಲಿದ್ದ ಮಾಹಿತಿಯನ್ನು ಪರಿಶೀಲಿಸುವಾಗ 16 ಲಕ್ಷಕ್ಕೂ ಅಧಿಕ ಅರ್ಜಿಗಳ ಉಲ್ಲೇಖವೂ ಪತ್ತೆಯಾಯಿತು. ಆದರೆ ಆ ಅರ್ಜಿದಾರರ ವಿವರಗಳು ಇನ್ನೂ ನಿಗೂಢವಾಗಿಯೇ ಉಳಿದಿವೆ ಎಂದು ವರದಿ ಹೇಳಿದೆ.

ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದೇ?

ಎಸ್ಐಆರ್ ಬಳಿಕ ಉತ್ತರ ಪ್ರದೇಶದ ಮತದಾರರ ಸಂಖ್ಯೆ 13.39 ಕೋಟಿಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಉಲ್ಲೇಖಿಸಲಾದ 16 ಲಕ್ಷ ಮತದಾರರ ಸಂಖ್ಯೆ ಒಟ್ಟಾರೆ ಮತದಾರರ ಸಂಖ್ಯೆಗೆ ಹೋಲಿಸಿದರೆ ಕಡಿಮೆ.

ಆದರೆ ಈ ಮತದಾರರು ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಅಥವಾ ಯಾವ ಮತಗಟ್ಟೆಗಳಲ್ಲಿ ಹಂಚಿಕೆಯಾಗಿದ್ದಾರೆ ಎಂಬುದರ ಮೇಲೆ ಅವಲಂಬಿಸಿ, ನಿರ್ದಿಷ್ಟ ಕ್ಷೇತ್ರಗಳು ಅಥವಾ ಮತಗಟ್ಟೆಗಳಲ್ಲಿ ಈ ಸಂಖ್ಯೆಯು ಗಮನಾರ್ಹ ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ.

ಈ ಕುರಿತು ಸಿಇಒ ರಿನ್ವಾ ಅವರನ್ನು ಪ್ರಶ್ನಿಸಿದಾಗ, ಮತದಾರರ ಪಟ್ಟಿಯಿಂದ ತೆಗೆದುಹಾಕಲಾದವರ ಸಂಖ್ಯೆಯ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಅಂಕಿಅಂಶಗಳಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರಶ್ನೆಗೆ ಅವರು, “ನಮ್ಮ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವ್ಯತ್ಯಾಸ ಇರುವುದು ನಿಮ್ಮ ವ್ಯಾಖ್ಯಾನದಲ್ಲಿ” ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ ‘ದಿ ರಿಪೋರ್ಟರ್ಸ್‌ ಕಲೆಕ್ಟಿವ್’ ಪ್ರಕಾರ, 16.18 ಲಕ್ಷ ಮತದಾರರ ವಿವರಗಳನ್ನು ಉತ್ತರ ಪ್ರದೇಶ ಸಿಇಒ ಕಚೇರಿಯ ವೆಬ್‌ಸೈಟ್ ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಯಾವುದೇ ಮೂಲದಲ್ಲಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ವಿವಾಹೇತರ ಸಂಬಂಧ ಆರೋಪ: ‘ಶುದ್ಧೀಕರಣ’ದ ಹೆಸರಿನಲ್ಲಿ ಮಹಿಳೆ ಮೇಲೆ ಹಲ್ಲೆ, ಸಾಮೂಹಿಕ ಅತ್ಯಾಚಾರ; ಇಬ್ಬರು ಮಹಿಳೆಯರು ಸೇರಿ 9 ಜನರ ಬಂಧನ

ಅಹಮದಾಬಾದ್: ಗುಜರಾತ್‌ನಲ್ಲಿ ಮಹಿಳೆಯೊಬ್ಬರ ಮೇಲೆ ‘ಶುದ್ಧೀಕರಣ’ದ ಹೆಸರಿನಲ್ಲಿ ನಡೆದಿರುವ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಹೊರಿಸಿ ಮಹಿಳೆಯನ್ನು ಅವಮಾನಿಸಿ, ಕಟ್ಟಿಹಾಕಿ ಲೈಂಗಿಕ ದೌರ್ಜನ್ಯಕ್ಕೆ...

ಚುನಾವಣಾ ಆಯುಕ್ತರ ಆಯ್ಕೆ ವಿವಾದ: ಪರಿಶೀಲಿಸುವುದಾಗಿ ತಿಳಿಸಿದ ಸಿಜೆಐ ಸೂರ್ಯಕಾಂತ್

ಮುಖ್ಯ ಚುನಾವಣಾ ಆಯುಕ್ತ (CEC) ಹಾಗೂ ಚುನಾವಣಾ ಆಯುಕ್ತರ (EC) ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ 2023ರ ವಿವಾದಾತ್ಮಕ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣವನ್ನು ವಿಸ್ತೃತ...

“ನೀವು ಜನರ ಜೀವನದ ಜೊತೆ ಆಟವಾಡುತ್ತಿದ್ದೀರಿ”: ಬಂಧಿತ ನಾಲ್ವರು ಬಂಗಾಳಿ ಮುಸ್ಲಿಮರ ವಿರುದ್ಧದ ಪೌರತ್ವ ಪ್ರಕ್ರಿಯೆಯನ್ನು ಪ್ರಶ್ನಿಸಿದ ಕಲ್ಕತ್ತಾ ಹೈಕೋರ್ಟ್

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದರ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೇಲ್ಮನವಿ ನ್ಯಾಯಾಧೀಕರಣದ ಮುಂದೆ ಬಾಕಿ ಇರುವಾಗಲೇ, ಅವರ ಪೌರತ್ವವನ್ನು...

ಎಸ್‌ಐಆರ್ ವಿರುದ್ಧ ಇಂಡಿಯಾ ಒಕ್ಕೂಟ ಪ್ರತಿಭಟನೆ: ಆಕಾಶವಾಣಿ ಭವನ ಪ್ರವೇಶಿಸಿದ ಆರೋಪದಲ್ಲಿ ಪ್ರಿಯಾಂಕ- ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್

ನವದೆಹಲಿ: ಚುನಾವಣಾ ಆಯೋಗದ ಎಸ್‌ಐಆರ್‌ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆ ಮತ್ತು ಮತದಾರರ ಹಕ್ಕುಗಳ ಕುರಿತಾಗಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನಡೆಸುತ್ತಿರುವ...

SIR ನಿಂದ ಬಾಧಿತರಾದ 13.3 ಕೋಟಿ ಮತದಾರರ ಮರುನೋಂದಣಿಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ಪಡೆ

ರಾಜ್ಯ ಮತ್ತು ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಶೋಷಿತ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಕೈಬಿಡಲಾಗಿದೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕಾಂಗ್ರೆಸ್...

ಉತ್ತರ ಪ್ರದೇಶ: ಅತ್ಯಾಚಾರ ಪ್ರಕರಣ ದಾಖಲಿಸಿದ ಕೆಲವೇ ದಿನಗಳಲ್ಲಿ ದಲಿತ ಮಹಿಳೆ – ಆಕೆಯ ಪತಿ ಮೇಲೆ ಹಲ್ಲೆ

ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ದಲಿತ ಮಹಿಳೆ ಮತ್ತು ಆಕೆಯ ಪತಿ ಮೇಲೆ ದುಷ್ಕರ್ಮಿಗಳು ಲಾಠಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಸ್ಥಳೀಯ ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರ ಪ್ರಕರಣ...

ಗ್ಯಾನೇಶ್ ಕುಮಾರ್‌ಗೆ ಸಂಕಷ್ಟ ತಂದಿಟ್ಟ 2006ರ ಲಂಚದ ಕೇಸ್: ಏನಿದು ಪ್ರಕರಣ?

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಲ್ಲಿ ಬೃಹತ್ ಅಕ್ರಮ ಎಸಗಲಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೇಸ್ ನಾಯಕರು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟಿಸಿ,...

ಫ್ರೀಡಂ ಪಾರ್ಕ್‌ಗೆ ಬರುತ್ತಿದೆ ಸಿಜೆಪಿ ದಂಡು; ಜನತಾ ನ್ಯಾಯಾಲಯದ ಮುಂದೆ ಎಸ್‌ಐಆರ್ ಅನ್ಯಾಯಗಳ ಅನಾವರಣ

ಇದೇ ತಿಂಗಳ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ 'ಜನತಾ ನ್ಯಾಯಾಲಯ' ವಿನೂತನ ಹೋರಾಟಕ್ಕೆ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಯ ದಂಡು ಬರುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್‌ನಿಂದ ಆಗಿರುವ ಅನ್ಯಾಯಗಳ ಈ...

“ನಮ್ಮ ದೇಶಕ್ಕೆ ಮಾಡಿರುವುದು ದೇಶದ್ರೋಹ, ಯಾರನ್ನೂ ಬಿಡುವುದಿಲ್ಲ”: ಮೋದಿ, ಶಾ, ಮೋಹನ್‌ ಭಾಗವತ್ ಹಾಗೂ ಗ್ಯಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಗುಡುಗು!

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ 'ವೋಟ್ ಚೋರಿ' ವಿವಾದದ ವಿರುದ್ಧ ಇಂಡಿಯಾ ಒಕ್ಕೂಟ ನಡೆಸಿದ ಐತಿಹಾಸಿಕ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯತ್ತ...

ಚುನಾವಣಾ ಆಯೋಗಕ್ಕೆ ‘ಇಂಡಿಯಾ’ ಮೈತ್ರಿಕೂಟ ಮೆರವಣಿಗೆ; ಬ್ಯಾರಿಕೇಡ್ ಹತ್ತಿದ ರಾಹುಲ್ ಗಾಂಧಿ

ಸಂಸತ್ ಭವನದಿಂದ ಚುನಾವಣಾ ಆಯೋಗದ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ 'ಇಂಡಿಯಾ' ಮೈತ್ರಿಕೂಟದ ಸಂಸತ್ತಿನ ಸದಸ್ಯರನ್ನು ಮಾರ್ಗ ಮಧ್ಯದಲ್ಲೇ ತಡೆಯಲಾಗಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೃಣಮೂಲ ಕಾಂಗ್ರೆಸ್...