Homeಮುಖಪುಟಯುಪಿ: ಪಾಕ್ ಧ್ವಜ ಹಾರಿಸಿದ್ದಾರೆಂದು ನಾಲ್ವರು ಮುಸ್ಲಿಮರ ಮೇಲೆ ದೇಶದ್ರೋಹ ಪ್ರಕರಣ; ಅದು ಪಾಕ್‌ ಧ್ವಜ...

ಯುಪಿ: ಪಾಕ್ ಧ್ವಜ ಹಾರಿಸಿದ್ದಾರೆಂದು ನಾಲ್ವರು ಮುಸ್ಲಿಮರ ಮೇಲೆ ದೇಶದ್ರೋಹ ಪ್ರಕರಣ; ಅದು ಪಾಕ್‌ ಧ್ವಜ ಅಲ್ಲ ಎಂದ ಪೊಲೀಸರು

- Advertisement -
- Advertisement -

ತಮ್ಮ ಮನೆಯ ಮೇಲೆ ಪಾಕಿಸ್ತಾನದ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಗೋರಖ್‌ಪುರ ಪೊಲೀಸರು ನಾಲ್ವರು ಮುಸ್ಲಿಮರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಇದೀಗ ಪೊಲೀಸರು ನಡೆಸಿದ ಪ್ರಕರಣದ ಪ್ರಾಥಮಿಕ ತನಿಖೆಯು, “ಮುಸ್ಲಿಮರ ಮನೆಯ ಮೇಲೆ ಹಾರಿಸಿರುವುದು ಧಾರ್ಮಿಕ ಧ್ವಜಗಳು” ಎಂದು ಕಂಡುಹಿಡಿದು ಅಂತಿಮ ವರದಿಯನ್ನು ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಧ್ವಜಗಳ ಮೇಲೆ ಯಾವುದೇ ಆಕ್ಷೇಪಾರ್ಹ ಪದಗಳನ್ನು ಬರೆದಿರಲಿಲ್ಲ ಎಂದು ಪ್ರತಿಪಾದಿಸಿ ಪೊಲೀಸರು ಯಾರನ್ನೂ ಬಂಧಿಸಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಮನೆಯ ಮೇಲೆ ಪಾಕಿಸ್ತಾನ ಧ್ವಜ ಹಾರಿಸಲಾಗಿದೆ ಎಂದು ಪ್ರತಿಪಾದಿಸಿ ಚಿತ್ರವೂಂದು ವೈರಲ್‌ ಆದ ನಂತರ, ಕೆಲವು ಜನರ ಗುಂಪು ಮನೆಯ ಹೊರಗೆ ಪ್ರತಿಭಟನೆ ನಡೆಸಿತ್ತು. ಇದರ ನಂತರ ನಾಲ್ವರ ವಿರುದ್ದ ದೇಶದ್ರೋಹದ ಪ್ರಕರಣದ ದಾಖಲಾಗಿತ್ತು.

ನಾಲ್ವರು ಉದ್ಯಮಿಗಳಾದ ತಾಲೀಮ್, ಪಪ್ಪು, ಆಶಿಕ್ ಮತ್ತು ಅವರ ಸಹೋದರ ಆಸಿಫ್ ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ನಾಲ್ವರು ಎರಡು ಕುಟುಂಬಗಳಿಗೆ ಸೇರಿದವರಾಗಿದ್ದು ಗೋರಖ್‌ಪುರದ ಚೌರಿ ಚೌರಾ ಪ್ರದೇಶದ ನಿವಾಸಿಗಳಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತಿಭಟನಾಕಾರರು ಎರಡು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು ಮತ್ತು ಕಾರಳಿಗೆ ಹಾನಿಗೊಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಎರಡು ಕುಟುಂಬಗಳ ಸದಸ್ಯರು ತಮ್ಮ ಮನೆಗೆ ಬೀಗ ಹಾಕಿದ್ದರು. ಪೊಲೀಸರ ವಿಚಾರಣೆ ವೇಳೆ ಕುಟುಂಬವು ಆರೋಪಗಳನ್ನು ನಿರಾಕರಿಸಿ, ನಾಲ್ಕು ಧ್ವಜಗಳನ್ನು ಹಸ್ತಾಂತರಿಸಿತ್ತು.

ಪ್ರಸ್ತುತ ಧ್ವಜಗಳನ್ನು ತಮ್ಮ ಕುಟುಂಬದ ಮಹಿಳಾ ಸದಸ್ಯರು ಹೊಲಿದಿದ್ದಾರೆ ಎಂದು ಅವರು ಹೇಳಿದ್ದಾರೆ. ಒಂದು ಧ್ವಜದ ಮೇಲೆ ಉರ್ದು ಪಠ್ಯವಿತ್ತು. ‘ಬರವಾಫತ್’ ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ಧ್ವಜಗಳನ್ನು ಹಾರಿಸಿದ್ದೇವೆ ಎಂದು ಕುಟುಂಬಗಳು ಪೊಲೀಸರಿಗೆ ತಿಳಿಸಿದ್ದಾರೆ.

ಹಬ್ಬ ಮುಗಿದ ನಂತರ ಅವರು ಧ್ವಜಗಳನ್ನು ತೆಗೆದುಹಾಕಿರಲಿಲ್ಲ ಎಂದು ಅವರು ಹೇಳಿದ್ದಾರೆ. ಬ್ರಾಹ್ಮಣ ಜನ ಕಲ್ಯಾಣ ಸಮಿತಿಯ ಅಧ್ಯಕ್ಷ ಕಲ್ಯಾಣ್ ಪಾಂಡೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರಯ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿರಿ: ಆಂಧ್ರದಲ್ಲಿ ಪರಿಸ್ಥಿತಿ ಗಂಭೀರ: ಮಹಾಮಳೆಗೆ 17 ಮಂದಿ ಮರಣ, ನೂರು ಮಂದಿ ನಾಪತ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...