Homeಕರ್ನಾಟಕಟಿಪ್ಪು ನಂತರ ಬ್ರಿಟಿಷರ ವಿರುದ್ಧ ಹೋರಾಡಿದವರ ಪಟ್ಟಿಯಲ್ಲಿ ಉರಿಗೌಡ, ನಂಜೇಗೌಡ ಹೆಸರು: ಹೊಸ ಲಾವಣಿ ಪತ್ತೆ!

ಟಿಪ್ಪು ನಂತರ ಬ್ರಿಟಿಷರ ವಿರುದ್ಧ ಹೋರಾಡಿದವರ ಪಟ್ಟಿಯಲ್ಲಿ ಉರಿಗೌಡ, ನಂಜೇಗೌಡ ಹೆಸರು: ಹೊಸ ಲಾವಣಿ ಪತ್ತೆ!

- Advertisement -
- Advertisement -

ಮಂಡ್ಯದ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರೆಂದು ಸಂಘಪರಿವಾರ ಆಧಾರ ರಹಿತವಾಗಿ ವಾದಿಸುತ್ತಿದೆ ಎಂಬ ಆರೋಪಗಳು ಬಂದಿರುವ ಬೆನ್ನಲ್ಲೇ ಹೊಸ ಹೊಸ ವಿಷಯಗಳು ಹೊರಬರಲಾರಂಭಿಸಿವೆ.

2006ರಲ್ಲಿ ಪರಿಷ್ಕರಣೆಗೊಂಡಿರುವ ‘ಸುವರ್ಣ ಮಂಡ್ಯ’ (ಸಂಪಾದನೆ: ದೇಜಗೌ) ಎಂಬ ಕೃತಿಯಲ್ಲಿ ಹ.ಕ.ರಾಜೇಗೌಡ ಅವರು ಬರೆದಿರುವ ಲೇಖನದಲ್ಲಿ ‘ಉರಿಗೌಡ, ನಂಜೇಗೌಡ’ ಎಂಬ ಹೆಸರುಗಳ ಉಲ್ಲೇಖವಿದೆ ಎಂಬುದನ್ನು ಮುಂದೆ ಇಟ್ಟುಕೊಂಡು ಚರ್ಚೆ ಬೆಳೆಸಲಾಗುತ್ತಿದೆ. “ದೊಡ್ಡನಂಜೇಗೌಡ, ಉರಿಗೌಡ ಎಂಬವರು ಟಿಪ್ಪು ಮತ್ತು ಹೈದರಾಲಿ ವಿರುದ್ಧ ಸೆಟೆದುನಿಂತವರು” ಎಂದು ಕೃತಿಯಲ್ಲಿ ಉಲ್ಲೇಖಿಸಿರುವುದನ್ನೇ ಇತಿಹಾಸ ಎಂದು ಪ್ರತಿಪಾದಿಸು ಯತ್ನಗಳಾಗುತ್ತಿವೆ.

“ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪುವನ್ನು ಕೊಂದವರು ಉರಿಗೌಡ, ನಂಜೇಗೌಡ ಎಂದು ನಕಲಿ ಇತಿಹಾಸ ಸೃಷ್ಟಿಸಿ, ಒಕ್ಕಲಿಗ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ಆಗುತ್ತಿವೆ” ಎಂಬ ಟೀಕೆಗಳು ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಮತ್ತೊಂದು ‘ಲಾವಣಿ’ ಮುನ್ನಲೆಗೆ ಬಂದಿದೆ. “ಟಿಪ್ಪುವಿನ ನಂತರದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಉರಿಗೌಡ, ನಂಜೇಗೌಡ ಅವರೂ ಸೇರಿದ್ದಾರೆ” ಎಂಬ ವಾದವನ್ನು ಈ ಲಾವಣಿ ಮೂಲಕ ಮಂಡಿಸಲಾಗುತ್ತಿದೆ.

2005ರಲ್ಲಿ ಪ್ರಕಟವಾಗಿರುವ ‘ಅಮರ ಸುಳ್ಯದ ಸ್ವಾತಂತ್ರ್ಯ’ದ ಸಮರ ಕೃತಿಯಲ್ಲಿ ಉರಿಗೌಡ ಮತ್ತು ನಂಜೇಗೌಡರ ಉಲ್ಲೇಖಗಳನ್ನು ಮಾಡಲಾಗಿದೆ ಎಂದು ಯುವ ಬರಹಗಾರ ಸುನಿಲ್ ಜೆ. ಅವರು ಲಾವಣಿಯೊಂದನ್ನು ಫೇಸ್‌ಬುಕ್‌‌ನಲ್ಲಿ ಹಂಚಿಕೊಂಡಿದ್ದಾರೆ.

“ಉರಿಗೌಡ, ನಂಜೇಗೌಡರು ಯಾರೆಂಬ ನಿಜಮಾಹಿತಿ ಎನ್.ಎಸ್ ದೇವಿಪ್ರಸಾದ್ ಸಂಪಾಜೆಯವರು ಸಂಪಾದಿಸಿಕೊಟ್ಟ ‘ಅಮರ ಸುಳ್ಯದ ಸ್ವಾತಂತ್ರ್ಯ ಸಮರ’ ಪುಸ್ತಕದಲ್ಲಿದೆ. ಈ ಪುಸ್ತಕವನ್ನು ಸುವರ್ಣ ಮಂಡ್ಯ ಪುಸ್ತಕ ಬಿಡುಗಡೆಯಾಗುವ ಒಂದು ವರ್ಷಕ್ಕೂ ಮೊದಲೇ ಎಂದರೆ 2005ರಲ್ಲಿಯೇ ಪ್ರಕಟಿಸಲಾಗಿದೆ. ಇದರ ನಾಲ್ಕನೇ ಅನುಬಂಧ ಸ್ವಾತಂತ್ರ್ಯ ಹೋರಾಟಗಾರ ಐಗೂರು ವೆಂಕಟಾದ್ರಿ ನಾಯಕನ ಲಾವಣಿಗೆ ಮೀಸಲಾಗಿದೆ” ಎಂದು ಸುನಿಲ್‌ ವಿವರಿಸಿದ್ದಾರೆ.

ಮುಂದುವರಿದು, “ಟಿಪ್ಪು ಸುಲ್ತಾನ್ ಹಾಗೂ ಧೋಂಡಿಯ ವಾಘರ ಸಾವಿನ ನಂತರ ಕರ್ನಾಟಕದ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿದ್ದು ಐಗೂರಿನ ಪಾಳೇಗಾರ ವೆಂಕಟಾದ್ರಿ ನಾಯಕ. ಆತನಿಗೆ ಜೊತೆಯಾಗಿ ನಿಂತು ಬ್ರಿಟೀಷರ ವಿರುದ್ಧ ಹೋರಾಡಿದವರೇ ಹಾಸನ ಜಿಲ್ಲೆಯ ಹೆನ್ನಲಿ ಗ್ರಾಮದ ಉರಿಗೌಡ ಮತ್ತು ಕುಮತಳ್ಳಿಯ ನಂಜೇಗೌಡರು. ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಡಿದ ಕನ್ನಡ ನಾಡಿನ ಹೆಮ್ಮೆಯ ಸ್ವಾತಂತ್ಯ್ರ ಹೋರಾಟಗಾರರನ್ನು ದೇಶದ್ರೋಹಿಗಳಂತೆ ಬಿಂಬಿಸಲು ಹೊರಟಿರುವ ಸಂಘಿಗಳಿಗೆ ನಾಚಿಕೆ ಆಗಬೇಕು” ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಪುಸ್ತಕದ ಪುಟಗಳನ್ನು ಲಗತ್ತಿಸಿದ್ದಾರೆ. ಅನೇಕರು ಈ ಬರಹವನ್ನು ಹಂಚಿಕೊಂಡಿದ್ದಾರೆ. (‘ಅಮರ ಸುಳ್ಯದ ಸ್ವಾತಂತ್ರ್ಯ ಸಮರ’ ಕೃತಿಯ ಪಿಡಿಎಫ್‌ ‘ಇಲ್ಲಿ’ ಲಭ್ಯವಿದೆ.)

“ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರು ಸ್ಥಳೀಯ ರಾಜರುಗಳ ಅನೈಕ್ಯ, ವೈಷಮ್ಯಗಳ ಪ್ರಯೋಜನ ಪಡೆದು ನಿಧಾನವಾಗಿ ಇಡೀ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ನಮ್ಮನ್ನು ಎರಡು ಶತಮಾನಗಳಿಗೂ ಅಧಿಕ ಕಾಲ ಆಳಿದ್ದು ಈಗ ಇತಿಹಾಸ. ದಕ್ಷಿಣ ಭಾರತದಲ್ಲಿ ಅವರಿಗೆ ಪ್ರಬಲ ಎದುರಾಳಿಗಳಾಗಿದ್ದ ಟಿಪ್ಪು ಸುಲ್ತಾನ ಮತ್ತು ಐಗೂರಿನ ವೆಂಕಟಾದ್ರಿ ನಾಯಕರನ್ನು ಕೊಂದ ಬಳಿಕ ಬ್ರಿಟಿಷರು ಕರ್ನಾಟಕದಿಂದ ನಮಗೇನೂ ಪ್ರತಿರೋಧ ಬಾರದು ಎಂದೇ ತಿಳಿದುಕೊಂಡಿದ್ದರು. ಅವರ ತಿಳಿವಳಿಕೆ ತಪ್ಪು ಎಂದು ಅವರ ಸುಳ್ಯದ ಸ್ವಾತಂತ್ರ್ಯ ಸಮರ ತೋರಿಸಿಕೊಟ್ಟಿದೆ” ಎಂಬ ಸಾಲುಗಳನ್ನು ಪುಸ್ತಕದ ನಾಲ್ಕನೇ ಅನುಬಂಧದಲ್ಲಿ ಉಲ್ಲೇಖಿಸಲಾಗಿದೆ.

ಲಾವಣಿಗಳನ್ನೇ ಇತಿಹಾಸ ಎಂದು ಪ್ರತಿಪಾದಿಸಲು ಹೊರಟಿರುವ ಸಂಘಪರಿವಾರವನ್ನು ಟೀಕಿಸಿರುವ ಲೇಖಕ ನಾಗೇಗೌಡ ಕೀಲಾರ ಅವರು, “ಇತಿಹಾಸ ರೂಪಿಸಲು ಒಂದು ಮೆಥೆಡ್ ಇರುತ್ತದೆ. ಆ ಮೆಥೆಡ್‌ಗೆ ಸಂಘಪರಿವಾರದವರು ತಿಲಾಂಜಲಿ ಹಾಡಿರುತ್ತಾರೆ. ಇತಿಹಾಸದ ಮೆತೆಡ್‌ಗೆ ಪೂರಕವಾಗಿರದ ಒಂದಷ್ಟು ಲಾವಣಿ, ಪುರಾಣಗಳನ್ನು ಜನಮಾನಸದಲ್ಲಿ ಹರಿಯಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, “ಟಿಪ್ಪು ಸತ್ತ ಹಲವಾರು ವರ್ಷಗಳ ನಂತರ ಉರಿಗೌಡ ಮತ್ತು ನಂಜೇಗೌಡ ಅನ್ನುವವರು ಬ್ರಿಟೀಷರ ವಿರುದ್ದ ಹೋರಾಟ ಮಾಡಿದವರು ಅನ್ನುವ ಲಾವಣಿಯನ್ನು ಸುನಿಲ್ ಜೆರವರು ತಮ್ಮ ಪೋಸ್ಟ್‌ನಲ್ಲಿ ಹಾಕಿದ್ದಾರೆ. ಇದಕ್ಕೆ ಸಂಘಪರಿವಾರದವರ ಉತ್ತರ ಏನು? ಇಂತಹ ಲಾವಣಿ, ಕಾಗಕ್ಕ ಗುಬಕ್ಕನ ಕತೆಯನ್ನೇ ಇತಿಹಾಸ ಎಂದು ಸಂಘಪರಿವಾರದವರು ಸುಳ್ಳು ಹೇಳುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...